ಹಣಕಾಸು ಸಚಿವಾಲಯ
2021-22 ನೇ ಸಾಲಿನ ಕೇಂದ್ರ ಬಜೆಟ್ ನ ಮುಖ್ಯಾಂಶಗಳು
Posted On:
01 FEB 2021 2:07PM by PIB Bengaluru
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮೊದಲ ಡಿಜಿಟಲ್ ರೂಪದ ಬಜೆಟ್ ಮಂಡಿಸಿದರು. ಕೋವಿಡ್-19 ವಿರುದ್ಧ ಭಾರತ 2021 ರಲ್ಲೂ ತನ್ನ ಹೋರಾಟ ಮುಂದುವರೆಸಿದೆ ಮತ್ತು ಈ ಪರಿಸ್ಥಿತಿಯಲ್ಲಿ ರಾಜಕೀಯ, ಆರ್ಥಿಕ ಮತ್ತು ರಾಜತಾಂತ್ರಿಕ ಬಾಂಧವ್ಯದಲ್ಲಿ ಕೋವಿಡ್ ನಂತರ ಜಗತ್ತು ಬದಲಾಗುತ್ತಿದೆ. ಇದು ಹೊಸ ಯುಗದ ಉದಯವಾಗಿದ್ದು, ಭಾರತ ನಿಜವಾಗಿಯೂ ಭರವಸೆಯ ಮತ್ತು ವಿಶ್ವಾಸದ ಭೂಮಿಯಾಗಲು ಸಿದ್ಧವಾಗಿದೆ ಎಂದು ಹೇಳಿದರು.
2021 – 22 ನೇ ಸಾಲಿನ ಬಜೆಟ್ ನ ಪ್ರಮುಖ ಅಂಶಗಳು ಈ ಕೆಳಕಂಡಂತೆ ಇವೆ
2021-22 ರ ಸಾಲಿನ ಕೇಂದ್ರ ಬಜೆಟ್ ನಲ್ಲಿ 6 ಸ್ಥಂಭಗಳು
1. ಆರೋಗ್ಯ ಮತ್ತು ಯೋಗಕ್ಷೇಮ
2. ಭೌತಿಕ ಮತ್ತು ಹಣಕಾಸು ಬಂಡವಾಳ, ಮತ್ತು ಮೂಲಭೂತ ಸೌಕರ್ಯ
3. ಮಹತ್ವಾಕಾಂಕ್ಷೆಯ ಭಾರತಕ್ಕಾಗಿ ಅಂತರ್ಗತ ಅಭಿವೃಧ‍್ಧಿ
4. ಮಾನವ ಬಂಡವಾಳದ ಪುನರುಜ್ಜೀವನ
5. ನಾವೀನ್ಯತೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ
6. ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ
1. ಆರೋಗ್ಯ ಮತ್ತು ಯೋಗಕ್ಷೇಮ
- ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ 2021-22 ಸ ಬಜೆಟ್ ನಲ್ಲಿ 2,23,846 ಕೋಟಿ ರೂ, 2020-21 ರಲ್ಲಿ 94,452 ಕೋಟಿ ರೂ, ಶೇ 137 ರಷ್ಟು ವೃದ್ಧಿ
- ಮೂರು ಹಂತಗಳಲ್ಲಿ ಬಲಪಡಿಸಲು ಕ್ರಮ: ನಿಯಂತ್ರಣ, ರೋಗನಿರೋಧಕತೆ ಮತ್ತು ಯೋಗ ಕ್ಷೇಮ
- ಆರೋಗ್ಯ ಮತ್ತು ಯೋಗಕ್ಷೇಮ ವ್ಯವಸ್ಥೆ ಬಲಪಡಿಸಲು ಹೆಜ್ಜೆ
v. ಲಸಿಕೆ
- 2021-22 ರ ಸಾಲಿನಲ್ಲಿ ಕೋವಿಡ್-19 ಲಸಿಕೆಗೆ 35 ಸಾವಿರ ಕೋಟಿ ರೂ.
- ಭಾರತದಲ್ಲಿ ತಯಾರಿಸಿ ನ್ಯುಮೋಕೊಕಲ್ ಸಲಿಕೆಯನ್ನು 5 ರಾಜ್ಯಗಳಿಂದ ಹೊರಡಿಸಲು ಕ್ರಮ: – ವಾರ್ಷಿಕ 50 ಸಾವಿರ ಮಕ್ಕಳ ಸಾವುಗಳನ್ನು ತಪ್ಪಿಸಲು ಕ್ರಮ
v. ಆರೋಗ್ಯ ವ್ಯವಸ್ಥೆಗಳು
- ಪ್ರಧಾನಮಂತ್ರಿ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ 64,180 ಕೋಟಿ ರೂ : ರಾಷ್ಟ್ರೀಯ ಆರೋಗ್ಯ ಅಭಿಯಾನ – ಎನ್.ಎಚ್.ಎಂ ಜತೆಗೆ ಕೇಂದ್ರ ಪ್ರಾಯೋಜಕತ್ವದ ಹೊಸ ಯೋಜನೆ ಜಾರಿ.
- ಆತ್ಮನಿರ್ಭರ್ ಭಾರತ್ ಮಧ್ಯಸ್ಥಿಕೆಯಲ್ಲಿ ಸ್ವಾಸ್ತ್ಯಭಾರತ ಯೋಜನೆ
ಏಕ ಆರೋಗ್ಯಕ್ಕಾಗಿ ರಾಷ್ಟ್ರೀಯ ಸಂಸ್ಥೆ
- 17,788 ಗ್ರಾಮೀಣ ಮತ್ತು 11,024 ನಗರ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು
- ವೈರಾಣು ವಲಯಕ್ಕಾಗಿ 4 ಪ್ರಾದೇಶಿಕ ಸಂಸ್ಥೆಗಳು
- 15 ತುರ್ತು ಆರೋಗ್ಯ ಶಸ್ತ್ರ ಚಿಕತ್ಸಾ ಕೇಂದ್ರ ಮತ್ತು 2 ಮೊಬೈಲ್ ಆಸ್ಪತ್ರೆಗಳು
- ಎಲ್ಲಾ ಜಿಲ್ಲೆಗಳಲ್ಲಿ ಸಮಗ್ರ ಆರೋಗ್ಯ ಪ್ರಯೋಗಾಲಯ: 11 ರಾಜ್ಯಗಳಲ್ಲಿ 3382 ಬ್ಲಾಕ್ ಹಂತದ ಸಾರ್ವಜನಿಕ ಆರೋಗ್ಯ ಘಟಕಗಳು
- 602 ಜಿಲ್ಲೆಗಳಲ್ಲಿ ತುರ್ತು ಸೇವಾ (ಕ್ರಿಟಿಕಲ್ ಕೇರ್) ಆಸ್ಪತ್ರೆ ವಿಭಾಗಗಳು ಮತ್ತು 12 ಕೇಂದ್ರೀಯ ಸಂಸ್ಥೆಗಳು
- ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಬಲಪಡಿಸಲು ಕ್ರಮ: 5 ಪ್ರಾದೇಶಿಕ ಶಾಖೆಗಳು ಮತ್ತು 20 ಮೆಟ್ರೊಪಾಲಿಟಿನ್ ಆರೋಗ್ಯ ಕಣ್ಗಾವಲು ಘಟಕಗಳು
- ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮಗ್ರ ಆರೋಗ್ಯ ಮಾಹಿತಿ ಶಿಷ್ಟಾಚಾರದ ವಿಸ್ತರಣೆ, 17 ಹೊಸ ಸಾರ್ವಜನಿಕ ಆರೋಗ್ಯ ಘಟಕಗಳ ಸಂಪರ್ಕ, ಹಾಲಿ 33 ಸಾರ್ವಜನಿಕ ಆರೋಗ್ಯ ಘಟಕಗಳ ಬಲವರ್ಧನೆ
- ದಕ್ಷಿಣ ಏಷ್ಯಾ ವಲಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಒ) ಪ್ರಾದೇಶಿಕ ಸಂಶೋಧನಾ ವೇದಿಕೆ
- ಜೈವಿಕ ಸುರಕ್ಷತಾ ಹಂತದ ಮೂರು ಪ್ರಯೋಗಾಲಯಗಳು
ಪೌಷ್ಠಿಕತೆ
ಪೋಷಣ್ ಅಭಿಯಾನ 2.0 ಜಾರಿ
· ಪೌಷ್ಠಿಕತೆ, ವಿತರಣೆ, ದೂರಗಾಮಿ ಮತ್ತು ಫಲಿತಾಂಶ ಬಲವರ್ಧನೆಗೆ ಕ್ರಮ
· ಪೂರಕ ಪೌಷ್ಠಿಕ ಕಾರ್ಯಕ್ರಮ ಮತ್ತು ಪೋಷಣ್ ಅಭಿಯಾನ ಕಾರ್ಯಕ್ರಮಗಳ ವಿಲೀನ
· 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಪೌಷ್ಠಿಕಾಂಶದ ಫಲಿತಾಂಶಗಳನ್ನು ಸುಧಾರಿಸಲು ತೀವ್ರತೆರನಾದ ಕಾರ್ಯತಂತ್ರ ಅಳವಡಿಕೆ.
ನೀರು ಸರಬರಾಜಿನ ಸಾರ್ವತ್ರಿಕ ವ್ಯಾಪ್ತಿ
· ಮುಂದಿನ ಐದು ವರ್ಷಗಳಲ್ಲಿ 2,87,000 ಕೋಟಿ ರೂ ವೆಚ್ಚದಲ್ಲಿ ಜಲಜೀವನ್ ಅಭಿಯಾನ [ನಗರ] ಯೋಜನೆ ಜಾರಿ
· 2.86 ಕೋಟಿ ಮನೆಗಳಿಗೆ ಕೊಳಾಯಿ (ನಲ್ಲಿ) ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ
· 4,378 ನಗರ ಸ್ಥಳೀಯ ಸಂಸ್ಥೆಗಳಿಗೆ ಏಕರೂಪದ ನೀರು ಪೂರೈಕೆ
· 500 ಅಮೃತ ನಗರಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆ
ಸ್ವಚ್ಛ ಭಾರತ್, ಸ್ವಾಸ್ತ್ಯ ಭಾರತ್
· ಮುಂದಿನ ಐದು ವರ್ಷಗಳಲ್ಲಿ 1,41,678 ಕೋಟಿ ರೂ ವೆಚ್ಚದಲ್ಲಿ ಸ್ವಚ್ಛ ಭಾರತ್ ಅಭಿಯಾನ – 2.0 ಜಾರಿ
· ಸ್ವಚ್ಛ ಭಾರತ್ ಅಭಿಯಾನ 2.0ದ ಮುಖ್ಯ ಮಧ್ಯಸ್ಥಿಕೆಗಳು
· ಸಂಪೂರ್ಣ ಮಲತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯ ನೀರು ಸಂಸ್ಕರಣೆಗೆ ಕ್ರಮ
· ಮೂಲದಲ್ಲೇ ತ್ಯಾಜ್ಯ ಬೇರ್ಪಡಿಸಲು ಕ್ರಮ
· ಏಕ ಬಳಕೆಯ ಪ್ಲಾಸ್ಟಿಕ್ ತಗ್ಗಿಸಲು ಕ್ರಮ
· ನಿರ್ಮಾಣ ಮತ್ತು ಕಟ್ಟಡ ಕೆಡವುವ ಸ್ಥಳಗಳಲ್ಲಿ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಮತ್ತು ವಾಯು ಮಾಲಿನ್ಯ ತಗ್ಗಿಸಲು ಆದ್ಯತೆ
· ತ್ಯಾಜ್ಯ ಸುರಿಯುವ ಸ್ಥಳಗಳಲ್ಲಿ ಜೈವಿಕ ಪರಿಹಾರ
ಶುದ್ಧ ವಾಯು
· ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ 42 ನಗರ ಕೇಂದ್ರಗಳಲ್ಲಿ 2,217 ಕೋಟಿ ರೂಪಾಯಿ ವೆಚ್ಚದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ
· ನಿರುಪಯುಕ್ತ, ಹಳೆಯ ಮತ್ತು ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ಸ್ವಯಂ ಆಗಿ ನಾಶಪಡಿಸಲು ನೀತಿ
· ಸ್ವಯಂ ಚಾಲಿತ ಕೇಂದ್ರಗಳಲ್ಲಿ ವಾಹನಗಳ ಸಾಮರ್ಥ್ಯ ಪರೀಕ್ಷೆ
· ವೈಯಕ್ತಿಯ ವಾಹನಗಳಾಗಿದ್ದರೆ 20 ವರ್ಷಗಳ ನಂತರ
· ವಾಣಿಜ್ಯ ವಾಹನಗಳಾಗಿದ್ದರೆ 15 ವರ್ಷಗಳ ಸಮಯ ನಿಗದಿ
ಭೌತಿಕ ಮತ್ತು ಹಣಕಾಸು ಬಂಡವಾಳ ಹಾಗೂ ಮೂಲಭೂತ ಸೌಕರ್ಯ
ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ [ಪಿ.ಎಲ್.ಐ]
· ಮುಂದಿನ ಐದು ವರ್ಷಗಳಲ್ಲಿ 13 ವಲಯಗಳಲ್ಲಿ 1.97 ಲಕ್ಷ ಕೋಟಿ ರೂ ವೆಚ್ಚದಲ್ಲಿ ಪಿ.ಎಲ್.ಐ ಯೋಜನೆ
· ಆತ್ಮನಿರ್ಭರ್ ಭಾರತ ಅಡಿ ಉತ್ಪಾದನಾ ವಲಯದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸೂಕ್ತ ಪರಿಸರ ನಿರ್ಮಾಣ
· ಉತ್ಪಾದನಾ ಕಂಪನಿಗಳನ್ನು ಜಾಗತಿಕ ಪೂರೈಕೆ ಸರಣಿಯ ಅವಿಭಾಜ್ಯ ಅಂಗವಾಗಿಸಲು, ಪ್ರಮುಖ ಸಾಮರ್ಥ್ಯದ ಮತ್ತು ಆಧುನಿಕ ತಂತ್ರಜ್ಞಾನ ಒದಗಿಸಲು ಕ್ರಮ
· ಪ್ರಮುಖ ವಲಯಗಳಲ್ಲಿ ಪ್ರಮಾಣ ಮತ್ತು ಗಾತ್ರವನ್ನು ತರಲು ಕ್ರಮ
ಜವಳಿ
· ಪಿ.ಎಲ್.ಐ ಜತೆ ಹೆಚ್ಚುವರಿಯಾಗಿ ಬೃಹತ್ ಹೂಡಿಕೆಯ ಜವಳಿ ಪಾರ್ಕ್ ಗಳು [ಎಂ.ಐ.ಟಿ.ಆರ್.ಎ] ಯೋಜನೆ
· ಮುಂದಿನ ಮೂರು ವರ್ಷಗಳಲ್ಲಿ 7 ಜವಳಿ ಪಾರ್ಕ್ ಗಳ ಸ್ಥಾಪನೆ
· ಜವಳಿ ಕೈಗಾರಿಕೆ ಜಾಗತಿಕವಾಗಿ ಸ್ಪರ್ಧಾತ್ಮಕವಾಗಬೇಕು. ಹೆಚ್ಚು ಹೂಡಿಕೆ ಆಕರ್ಷಿಸಿ ಉದ್ಯೋಗ ಸೃಷ್ಟಿಸಬೇಕು ಮತ್ತು ರಫ್ತು ಚಟುವಟಿಕೆ ಹೆಚ್ಚಿಸಬೇಕು.
ಮೂಲಭೂತ ಸೌಕರ್ಯ
· 7,400 ಯೋಜನೆಗಳಿಗೆ ರಾಷ್ಟ್ರೀಯ ಮೂಲಭೂತ ಸೌಕರ್ಯ ಪೈಪ್ ಲೈನ್ [ಎನ್.ಐ.ಪಿ] ವಿಸ್ತರಣೆ
· 1.10 ಲಕ್ಷ ಕೋಟಿ ರೂ ಮೊತ್ತದ 217 ಯೋಜನೆಗಳು ಪೂರ್ಣ
· ಮೂರು ಪ್ರಮುಖ ವಲಯದಲ್ಲಿ ಎನ್.ಐ.ಪಿ ಹೂಡಿಕೆ ಹೆಚ್ಚಳ
i. ಸಾಂಸ್ಥಿಕ ಚೌಕಟ್ಟು ನಿರ್ಮಾಣ
ii. ಸ್ವತ್ತುಗಳ ಮೂಲಕ ಆರ್ಥಿಕ ಸಂಪನ್ಮೂಲ ಸಂಗ್ರಹ
iii. ಹೂಡಿಕೆ ವೆಚ್ಚ ಹಂಚಿಕೆಯ ಉತ್ತೇಜನ
ಸಾಂಸ್ಥಿಕ ಚೌಕಟ್ಟು ನಿರ್ಮಾಣ: ಮೂಲಭೂತ ಸೌಕರ್ಯ ವಲಯಕ್ಕೆ ಹಣಕಾಸು
o 20 ಸಾವಿರ ಕೋಟಿ ರೂ ವೆಚ್ಚದಲ್ಲಿ ಹಣಕಾಸು ಸಂಸ್ಥೆಗಳ ಅಭಿವೃದ್ಧಿ ಸಂಸ್ಥೆ ಸ್ಥಾಪನೆ – ಮೂಲಭೂತ ಸೌಕರ್ಯ ಹಣಕಾಸು ವ್ಯವಸ್ಥೆಯನ್ನು ಒದಗಿಸುವ, ಚುರುಕುಗೊಳಿಸಲು ಕ್ರಮ
o ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 5 ಲಕ್ಷ ಕೋಟಿ ರೂ ಸಾಲ ನೀಡುವ ಡಿ.ಎಫ್.ಐ ಸ್ಥಾಪನೆ
o ಐ.ಎನ್.ವಿ.ಐ.ಟಿ ಮತ್ತು ಆರ್.ಇ.ಐ.ಟಿ ಕಾನೂನುಗಳಿಗೆ ತಿದ್ದುಪಡಿ ತಂದು ವಿದೇಶಿ ಹೂಡಿಕೆದಾರರಿಂದ ಸಾಲ ವ್ಯವಸ್ಥೆ ಕಲ್ಪಿಸಲು ಕ್ರಮ
ಆಸ್ತಿಗಳಿಂದ ಸಂಪನ್ಮೂಲ ಕ್ರೋಢೀಕರಣ
ii. ಸ್ವತ್ತುಗಳ ಮೂಲಕ ಸಂಪನ್ಮೂಲ ಕ್ರೋಢೀಕರಣ
iii. ರಾಷ್ಟ್ರೀಯ ಹಣಗಳಿಕೆ ಪೈಪ್ ಲೈನ್ ಪ್ರಾರಂಭ
a. 5 ಸಾವಿರ ಕೋಟಿ ರೂ ಮೊತ್ತದ 5 ಕಾರ್ಯಾಚರಣೆಯಲ್ಲಿರುವ ಟೋಲ್ ಗಳನ್ನು ಎನ್.ಎಚ್.ಎ.11 ಎನ್.ವಿ.ಐ.ಟಿಗೆ ವರ್ಗಾವಣೆ
b. 7 ಸಾವಿರ ಕೋಟಿ ರೂ ವೆಚ್ಚದ ಪಿ.ಜಿ.ಸಿ..ಎಲ್.ಐ ಎನ್.ವಿ. ಐ.ಟಿಗೆ ಆಸ್ತಿಗಳ ವರ್ಗಾವಣೆ
c. ಸರಕು ಸಾಗಾಣಿಕೆ ಕಾರಿಡಾರ್ ಗಳು ಕಾರ್ಯಾಚರಣೆ ಮತ್ತು ಕಾರ್ಯಾರಂಭ ಮಾಡಿದ ನಂತರ ಆಸ್ತಿಗಳನ್ನು ಹಣಗಳಿಕೆಗಾಗಿ ರೈಲ್ವೆಗೆ ಹಸ್ತಾಂತರ
d. ಮುಂದಿನ ಹಂತದಲ್ಲಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆ
e. ಹಣಗಳಿಕೆ ಕಾರ್ಯಕ್ರಮದಡಿ ಇತರೆ ಮೂಲಭೂತ ಸೌಕರ್ಯ ಸ್ವತ್ತುಗಳನ್ನು ಹೊರ ತರಲಾಗುವುದು.
o ತೈಲ ಮತ್ತು ಅನಿಲ ಪೈಪ್ ಲೈನ್ – ಜಿ.ಎ.ಐ.ಎಲ್, ಐ.ಒ.ಸಿ.ಎಲ್ ಮತ್ತು ಎಚ್.ಪಿ.ಸಿ.ಎಲ್
o ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಎಎಐ ವಿಮಾನ ನಿಲ್ದಾಣಗಳು,
o ಇತರೆ ರೈಲ್ವೆ ಮೂಲ ಸೌಕರ್ಯ ಆಸ್ತಿಗಳು
o ಕೇಂದ್ರೀಯ ಗೋದಾಮು ನಿಗಮ ಮತ್ತು ನಫೆಡ್ ನ ಸಿ.ಪಿ.ಎಸ್.ಇ ಗಳ ಗೋದಾಮು ಆಸ್ತಿಗಳು
o ಕ್ರೀಡಾಂಗಣಳು
ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆ
o 2021-22 ರಲ್ಲಿ 5.54 ಲಕ್ಷ ಕೋಟಿ ರೂ ಬಂಡವಾಳ ವೆಚ್ಚಕ್ಕೆ ನಿಗದಿ: 2020-21 ರಲ್ಲಿ 4.12 ಲಕ್ಷ ಕೋಟಿ ರೂ ನಿಗದಿ – ಶೇ 34.5 ರಷ್ಟು ಗಣನೀಯ ಏರಿಕೆ
o ರಾಜ್ಯಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ 2 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ
o ಬಂಡವಾಳ ವೆಚ್ಚ ವಲಯದಲ್ಲಿನ ಯೋಜನೆಗಳು, ಕಾರ್ಯಕ್ರಮಗಳು, ಇಲಾಖೆಗಳ ಉತ್ತಮ ಪ್ರಗತಿಗಾಗಿ 44 ಸಾವಿರ ಕೋಟಿ ರೂ ಹಣವನ್ನು ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ನೀಡಿಕೆ
ರಸ್ತೆ ಮತ್ತು ಹೆದ್ದಾರಿ ಮೂಲಭೂತ ಸೌಕರ್ಯ
o ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯಕ್ಕೆ 1,18,101 ಲಕ್ಷ ಕೋಟಿ ರೂ ನಿಗದಿ, 1,08,230 ಕೋಟಿ ರೂ ಮಂಜೂರು
o ಭಾರತ್ ಮಾಲ ಪರಿಯೋಜನೆಯಡಿ 13 ಸಾವಿರ ಕ್ಕೂ ಹೆಚ್ಚು ಕಿಲೋಮೀಟರ್ ರಸ್ತೆ ನಿರ್ಮಿಸಲು 5.35 ಲಕ್ಷ ಕೋಟಿ ರೂ ನಿಗದಿ, ಹಿಂದೆ 3.3 ಲಕ್ಷ ಕೋಟಿ ರೂ ರಸ್ತೆ ನಿರ್ಮಾಣಕ್ಕಾಗಿ ಬಿಡುಗಡೆ
o 3,800 ಕಿಲೋಮೀಟರ್ ರಸ್ತೆ ಈಗಾಗಲೇ ನಿರ್ಮಾಣ
o ಮತ್ತೆ 8,500 ಕಿಲೋಮೀಟರ್ ರಸ್ತೆಯನ್ನು ಬರುವ 2022ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಕ್ರಮ
o ಬರುವ 2022ರ ಮಾರ್ಚ್ ಅಂತ್ಯದ ವೇಳೆಗೆ ಹೆಚ್ಚುವರಿಯಾಗಿ 11,000 ಕಿಲೋಮೀಟರ್ ಹೆದ್ದಾರಿ ನಿರ್ಮಾಣ
ಆರ್ಥಿಕ ಕಾರಿಡಾರ್ ಗಳ ಯೋಜನೆ
o ತಮಿಳುನಾಡಿನಲ್ಲಿ 1.03 ಲಕ್ಷ ಕೋಟಿ ರೂ ವೆಚ್ಚದಲ್ಲಿ 3,500 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಕ್ರಮ
o ಕೇರಳದಲ್ಲಿ 1,100 ಕಿಲೋಮೀಟರ್ ಹೆದ್ದಾರಿಯನ್ನು 65,000 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ.
o ಪಶ್ಚಿಮ ಬಂಗಾಳದಲ್ಲಿ 625 ಕಿಲೋಮೀಟರ್ ಹೆದ್ದಾರಿಯನ್ನು 25,000 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ
o ಅಸ್ಸಾಂನಲ್ಲಿ 1,300 ಕಿಲೋಮೀಟರ್ ಹೆದ್ದಾರಿ ನಿರ್ಮಾಣಕ್ಕಾಗಿ 34,000 ಕೋಟಿ ರೂ ಮಂಜೂರು, ಹೆಚ್ಚುವರಿಯಾಗಿ 19,000 ಕೋಟಿ ರೂ ವೆಚ್ಚದ ವಿವಿಧ ಹೆದ್ದಾರಿ ಯೋಜನೆ ಪ್ರಗತಿಯಲ್ಲಿ.
ಮಹತ್ವಾಕಾಂಕ್ಷೆಯ ಕಾರಿಡಾರ್/ ಎಕ್ಸ್ ಪ್ರೆಸ್ ಹೆದ್ದಾರಿಗಳು
o ದೆಹಲಿ – ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿ – 31.3.2021 ರ ವೇಳೆಗೆ ಬಾಕಿ ಉಳಿದಿರುವ 260 ಕಿಲೋಮೀಟರ್ ಹೆದ್ದಾರಿ ಕಾಮಗಾರಿ ಪೂರ್ಣ
o ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಂಗಳೂರು – ಚೆನ್ನೈ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಕ್ಕೆ ಕ್ರಮ: ನಿರ್ಮಾಣ ಕಾಮಗಾರಿ 2021 – 22 ರಲ್ಲಿ ಪ್ರಾರಂಭ
o ಕಾನ್ಪುರ – ಲಖನೌ ಎಕ್ಸ್ ಪ್ರೆಸ್ ಹೆದ್ದಾರಿ – 63 ಕಿಲೋಮೀಟರ್ ಎಕ್ಸ್ ಪ್ರೆಸ್ ಹೆದ್ದಾಗಿ ಕಾಮಗಾರಿ, ಎನ್.ಎಚ್. 27 ಕಾಮಗಾರಿ 2021 – 22 ರಲ್ಲಿ ಆರಂಭಿಸಲು ಕ್ರಮ
o ದೆಹಲಿ – ಡೆಹ್ರಾಡೂನ್ ಆರ್ಥಿಕ ಕಾರಿಡಾರ್ – 201 ಕಿ.ಲೋ ಮೀಟರ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಾರಂಭ: 2021-22 ರಲ್ಲಿ ನಿರ್ಮಾಣ ಪ್ರಾರಂಭ
o ರಾಯ್ ಪುರ ವಿಶಾಖಪಟ್ಟಂ – 464 ಕಿಲೋಮೀಟರ್ ಉದ್ದದ, ಚತ್ತೀಸ್ ಘಡ, ಒಡಿಶಾ ಮತ್ತು ಉತ್ತರ ಆಂಧ್ರ್ರದೇಶವನ್ನು ಹಾದು ಹೋಗುವ ಕಾಮಗಾರಿ ಪ್ರಸ್ತಕ ವರ್ಷ ಆರಂಭಿಸಲು ಅನುಮತಿ: 2021- 22 ರಲ್ಲಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಕ್ರಮ
o ಚೆನ್ನೈ – ಸೇಲಂ ಕಾರಿಡಾರ್ – 277 ಕಿಲೋಮೀಟರ್ ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿ 2021-22 ರಲ್ಲಿ ಪ್ರಾರಂಭ
o ಅಮೃತಸರ – ಜಾಮ್ ನಗರ್ ನಿರ್ಮಾಣ ಕಾಮಗಾರಿ 2021-22 ರಲ್ಲಿ ಪ್ರಾರಂಭ
o ದೆಹಲಿ – ಕತ್ರಾ: 2021-22 ರಲ್ಲಿ ನಿರ್ಮಾಣ ಕಾಮಗಾರಿ ಪ್ರಾರಂಭ
o ಹೊಸ ನಾಲ್ಕು ಮತ್ತು ಆರು ಮಾರ್ಗದ ಹೆದ್ದಾರಿಗಳಲ್ಲಿ ಅತ್ಯಾಧುನಿಕ ಸಂಚಾರಿ ನಿರ್ವಹಣಾ ವ್ಯವಸ್ಥೆ
o ಸ್ಪೀಡ್ ರಾಡರ್ ಗಳ ಸ್ಥಾಪನೆ
o ಸಂಚಾರಿ ಸಂದೇಶ ನೀಡುವ ಸಂಕೇತ ಬೋರ್ಡ್ ಗಳು
o ಜಿ.ಪಿ.ಎಸ್. ಆಧಾರಿತ ವಾಹನಗಳ ಅಳವಡಿಕೆ
ರೈಲ್ವೆ ಮೂಲಭೂತ ಸೌಕರ್ಯ
o 1,10,055 ಕೋಟಿ ರೂ ರೈಲ್ವೆಯಲ್ಲಿ 1,07,100 ಕೋಟಿ ರೂ ಬಂಡವಾಳ ವೆಚ್ಚ
o ರಾಷ್ಟ್ರೀಯ ರೈಲ್ವೆಯಿಂದ [2030] ಭವಿಷ್ಯದ 2030ರ ರೈಲ್ವೆ ವ್ಯವಸ್ಥೆ ಸ್ಥಾಪನೆ
o ಶೇ 100 ರಷ್ಟು ವಿದ್ಯುದೀಕರಣ, ಬ್ರಾಡ್ ಗೇಜ್ ಮಾರ್ಗಗಳು ಬರುವ 2023 ರ ವೇಳೆಗೆ ಪೂರ್ಣ
o ಬ್ರಾಡ್ ಗೇಜ್ ಮಾರ್ಗದ 46,000 ಕಿಲೋಮೀಟರ್ ವಿದ್ಯುದೀಕರಣವಾಗಿದ್ದು, 2021 ರ ವೇಳೆಗೆ ಶೇ 72 ರಷ್ಟು ಪ್ರಗತಿ
o ಪಶ್ಚಿಮ ವಿಭಾಗಕ್ಕೆ ಮೀಸಲಾದ ಸರಕು ಸಾಗಾಣೆ ಕಾರಿಡಾರ್ [ಡಿ.ಎಫ್.ಸಿ.] ಮತ್ತು ಪೂರ್ವ ಡಿ.ಎಫ್.ಸಿ. 2022 ರ ಜೂನ್ ವೇಳೆಗೆ ಕಾರ್ಯಾರಂಭ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒತ್ತು
o ಹೆಚ್ಚುವರಿ ಕ್ರಮಗಳಿಗೆ ಪ್ರಸ್ತಾಪಿಸಲಾಗಿದೆ.
o ಸೋಮ್ ನಗರ್ – ಗೋಮೋಹ್ ವಿಭಾಗದ [263.7 ಕಿಲೋಮೀಟರ್] ಪೂರ್ವ ಡಿ.ಎಫ್.ಸಿ ಯೋಜನೆ ಪಿಪಿಪಿ ಮಾದರಿಯಲ್ಲಿ 2021-22 ರಲ್ಲಿ ಕೈಗೊಳ್ಳಲು ಕ್ರಮ
ಭವಿಷ್ಯದ ಸರಕು ಸಾಗಾಣೆ ಕಾರಿಡಾರ್ ಯೋಜನೆಗಳು
o ಖರಗ್ ಪುರ್ ದಿಂದ ವಿಜಯವಾಡದ ನಡುವಿನ ಪೂರ್ವ ಕರಾವಳಿ ಕಾರಿಡಾರ್.
o ಖರಗ್ ಪುರ್ ದಿಂದ ದಂಕುಣಿ ವರೆಗಿನ ಪೂರ್ವ – ಪಶ್ಚಿಮ ಕಾರಿಡಾರ್
o ಈಟಾರ್ಸಿ ದಿಂದ ವಿಜಯವಾಡ ಕಾರಿಡಾರ್
ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷಿತ ಕ್ರಮಗಳು
o ಉತ್ತಮ ಪ್ರಯಾಣಕ್ಕಾಗಿ ಪ್ರವಾಸಿ ಮಾರ್ಗಗಳಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ವಿಸ್ಟಾಡಾಮ್ ಎಲ್.ಎಚ್.ಬಿ. ತಂತ್ರಜ್ಞಾನ
o ಹೆಚ್ಚು ಪ್ರಯಾಣಿಕರಿರುವ ಮತ್ತು ಹೆಚ್ಚು ಬಳಕೆಯಲ್ಲಿರುವ ಮಾರ್ಗಗಳಲ್ಲಿ ರೈಲ್ವೆ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮಾನವ ಕಾರಣದಿಂದ ಉಂಟಾಗುವ ರೈಲ್ವೆ ಅಪಘಾತ ತಪ್ಪಿಸುವುದು ಇದರ ಉದ್ದೇಶ.
ನಗರ ಮೂಲಭೂತ ಸೌಕರ್ಯ
o ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಲು ಮೆಟ್ರೋ ರೈಲು ಸಂಪರ್ಕ ಜಾಲ ಮತ್ತು ನಗರ ಬಸ್ ಸೇವೆ ಹೆಚ್ಚಳಕ್ಕೆ ಕ್ರಮ
o ಸಾರ್ವಜನಿಕ ಬಸ್ ಸೇವೆ ಒದಗಿಸಲು 18 ಸಾವಿರ ಕೋಟಿ ರೂ ಯೋಜನೆ
o 20. 000 ಹೆಚ್ಚು ಬಸ್ ಗಳನ್ನು ಪಿಪಿಪಿ ಮಾದರಿಯಲ್ಲಿ ಕಾರ್ಯಾಚರಣೆ ಮಾಡಲು ವಿನೂತನ ಕ್ರಮ
o ಆಟೋ ಮೊಬೈಲ್ ವಲಯಕ್ಕೆ ಪುಷ್ಠಿ, ಆರ್ಥಿಕ ಪ್ರಗತಿಗೆ ಒತ್ತು, ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಗೆ ಆದ್ಯತೆ
o ಒಟ್ಟು 702 ಸಾಂಪ್ರದಾಯಕ ಮೆಟ್ರೋ ರೈಲು ಸೇವೆ ಕಾರ್ಯಾಚರಣೆ ಮತ್ತು 1,06 ಕಿಲೋಮೀಟರ್ ಮೆಟ್ರೋ ಮತ್ತು 27 ನಗರಗಳಲ್ಲಿ ಆರ್.ಆರ್.ಟಿ.ಎಸ್. ನಿರ್ಮಿಸಲು ಕ್ರಮ
o ಎರಡನೇ ಹಂತದ ನಗರಗಳು ಮತ್ತು ಬಾಹ್ಯ ನಗರ ಪ್ರದೇಶಗಳಲ್ಲಿ ಮೆಟ್ರೋ ರೈಲು ಗಳಲ್ಲಿ ಮೆಟ್ರೋಲೈಟ್ ಮತ್ತು ಮೆಟ್ರೋನಿಯೋ ತಂತ್ರಜ್ಞಾನ ಅಳವಡಿಕೆ.
4. ಕೌಶಲ್ಯ
ü ಯುವಜನರಿಗೆ ಅವಕಾಶಗಳನ್ನು ಹೆಚ್ಚಿಸಲು ಅಪ್ರೆಂಟಿಸ್ಶಿಪ್ ಕಾಯ್ದೆಗೆ ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ
ü 3,000 ಕೋಟಿ ರೂಪಾಯಿ ಶಿಕ್ಷಣದ ನಂತರದ ಅಪ್ರೆಂಟಿಸ್‌ಶಿಪ್, ಎಂಜಿನಿಯರಿಂಗ್‌ನಲ್ಲಿ ಪದವೀಧರರು ಮತ್ತು ಡಿಪ್ಲೊಮಾ ಪಡೆದಿರುವವರಿಗೆ ತರಬೇತಿ ನೀಡಲು ಈಗಿರುವ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ (ನ್ಯಾಟ್ಸ್) ಪರಿಷ್ಕರಣೆ
ü ಪಾಲುದಾರಿಕೆಯಂತೆ ಕೌಶಲ್ಯವನ್ನು ಹಂಚಿಕೊಳ್ಳಲು ಇತರ ದೇಶಗಳೊಂದಿಗೆ ಸಹಭಾಗಿತ್ವಕ್ಕೆ ಉಪಕ್ರಮಗಳು:
o ಯುಎಇಯೊಂದಿಗೆ ಕೌಶಲ್ಯ ಅರ್ಹತೆಗಳು, ಮೌಲ್ಯಮಾಪನ, ಪ್ರಮಾಣೀಕರಣ ಮತ್ತು ಪ್ರಮಾಣೀಕೃತ ಕಾರ್ಯಪಡೆಯ ನಿಯೋಜನೆ
o ಕೌಶಲ್ಯ, ತಂತ್ರ ಮತ್ತು ಜ್ಞಾನದ ವರ್ಗಾವಣೆಗೆ ಸಹಕಾರಿ ತರಬೇತಿ ಅಂತರ ತರಬೇತಿ ಕಾರ್ಯಕ್ರಮ (ಟಿಐಟಿಪಿ) ಗಾಗಿ ಜಪಾನ್ನೊಂದಿಗೆ ಸಹಯೋಗ.
5. ಆವಿಷ್ಕಾರ ಮತ್ತು ಸಂಶೋಧನೆ & ಅಭಿವೃದ್ಧಿ (ಆರ್ & ಡಿ)
ü ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ವಿಧಾನಗಳನ್ನು ಜುಲೈ 2019 ರಲ್ಲಿ ಘೋಷಿಸಲಾಯಿತು-
o 5 ವರ್ಷಗಳಲ್ಲಿ 50,000 ಕೋಟಿ ರೂಪಾಯಿಗಳ ಹಂಚಿಕೆ.
o ರಾಷ್ಟ್ರೀಯ ಆದ್ಯತೆಯ ಪ್ರದೇಶಗಳ ಮೇಲೆ ಕೇಂದ್ರೀಕರಿಸುವ ಮೂಲಕ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು
o ಡಿಜಿಟಲ್ ಪಾವತಿ ವಿಧಾನಗಳನ್ನು ಉತ್ತೇಜಿಸಲು ಉದ್ದೇಶಿತ ಯೋಜನೆಗೆ 1,500 ಕೋಟಿ ರೂಪಾಯಿಗಳು.
o ಪ್ರಮುಖ ಭಾರತೀಯ ಭಾಷೆಗಳಲ್ಲಿ ಆಡಳಿತ ಮತ್ತು ನೀತಿ ಸಂಬಂಧಿತ ಜ್ಞಾನವನ್ನು ಲಭ್ಯವಾಗುವಂತೆ ಮಾಡಲು ರಾಷ್ಟ್ರೀಯ ಭಾಷಾ ಅನುವಾದ ಮಿಷನ್ (ಎನ್ಟಿಎಲ್ಎಂ)
o ಪಿಎಸ್ಎಲ್ವಿ-ಸಿಎಸ್ 51 ಅನ್ನು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಬ್ರೆಜಿಲ್ನ ಅಮೆಜೋನಿಯಾ ಉಪಗ್ರಹ ಮತ್ತು ಕೆಲವು ಭಾರತೀಯ ಉಪಗ್ರಹಗಳನ್ನು ಕಕ್ಷೆಗೆ ಹಾರಿಸಲಿದೆ.
· ಗಗನ್ ಯಾನ್ ಮಿಷನ್ ಚಟುವಟಿಕೆಗಳ ಭಾಗವಾಗಿ:
o 4 ಭಾರತೀಯ ಗಗನಯಾತ್ರಿಗಳಿಗೆ ರಷ್ಯಾದಲ್ಲಿ ಜೆನೆರಿಕ್ ಸ್ಪೇಸ್ ಫ್ಲೈಟ್ ಬಗ್ಗೆ ತರಬೇತಿ ನೀಡಲಾಗುತ್ತಿದೆ.
o ಮೊದಲ ಮಾನವರಹಿತ ಉಡಾವಣೆಯನ್ನು ಡಿಸೆಂಬರ್ 2021 ಕ್ಕೆ ನಿಗದಿಪಡಿಸಲಾಗಿದೆ.
o ಡೀಪ್ ಓಷನ್ ಮಿಷನ್ ಸಮೀಕ್ಷೆ ಮತ್ತು ಆಳ ಸಮುದ್ರದ ಜೀವವೈವಿಧ್ಯತೆಯ ಸಂರಕ್ಷಣೆಗಾಗಿ ಐದು ವರ್ಷಗಳಲ್ಲಿ 4,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುವುದು
6. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ
· ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನ್ಯಾಯಮಂಡಳಿಗಳಲ್ಲಿ ಸುಧಾರಣೆಗಳನ್ನು ತರಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
- 56 ಅಲೈಡ್ ಹೆಲ್ತ್ಕೇರ್ ವೃತ್ತಿಪರರ ರಾಷ್ಟ್ರೀಯ ಆಯೋಗವು ಈಗಾಗಲೇ 56 ಅಲೈಡ್ ಹೆಲ್ತ್ಕೇರ್ ವೃತ್ತಿಗಳ (ಆರೋಗ್ಯ ಸೇವೆ ಸಂಬಂಧಿತ) ಪಾರದರ್ಶಕ ಮತ್ತು ಪರಿಣಾಮಕಾರಿ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಪರಿಚಯಿಸಲಾಗಿದೆ. ರಾಷ್ಟ್ರೀಯ ನರ್ಸಿಂಗ್ ಮತ್ತು ಮಿಡ್ವೈಫರಿ ಆಯೋಗದ ಮಸೂದೆ ಶುಶ್ರೂಷಾ ವೃತ್ತಿಯಲ್ಲಿ ಇದನ್ನು ಪರಿಚಯಿಸಿತು.
· ಸಿಪಿಎಸ್ಇಗಳೊಂದಿಗಿನ ಒಪ್ಪಂದದ ವಿವಾದಗಳನ್ನು ತ್ವರಿತವಾಗಿ ಪರಿಹರಿಸಲು ಆದೇಶದೊಂದಿಗೆ ಸಂಧಾನ ಕಾರ್ಯವಿಧಾನವನ್ನು ಪ್ರಸ್ತಾಪಿಸಲಾಗಿದೆ.
· ಭಾರತದ ಇತಿಹಾಸದಲ್ಲಿ ಮೊದಲ ಡಿಜಿಟಲ್ ಜನಗಣತಿಗಾಗಿ 3,768 ಕೋಟಿ ರೂಪಾಯಿಗಳನ್ನು ಇಡಲಾಗಿದೆ.
· ಪೋರ್ಚುಗೀಸ್ನಿಂದ ರಾಜ್ಯದ ವಿಮೋಚನೆಯ ವಜ್ರ ಮಹೋತ್ಸವ ಆಚರಣೆಗಳಿಗಾಗಿ ಗೋವಾ ಸರ್ಕಾರಕ್ಕೆ 300 ಕೋಟಿ ಅನುದಾನ
· ವಿಶೇಷ ಯೋಜನೆಯ ಮೂಲಕ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಚಹಾ ಕಾರ್ಮಿಕರ ವಿಶೇಷವಾಗಿ ಮಹಿಳೆಯರು ಮತ್ತು ಅವರ ಮಕ್ಕಳ ಕಲ್ಯಾಣಕ್ಕಾಗಿ 1,000 ಕೋಟಿ ರೂಪಾಯಿಗಳು
ಹಣಕಾಸಿನ ಸ್ಥಾನ
ವಿವರ
|
ಮೂಲ
ಬಜೆಟ್ ಅಂದಾಜು
(ಬಿ.ಇ.)
2020-21
|
ಪರಿಷ್ಕೃತ ಅಂದಾಜು
(ಆರ್ಇ)
2020-21
|
ಬಜೆಟ್ ಅಂದಾಜು (ಬಿ.ಇ.)
2021-22
|
ವೆಚ್ಚ
|
30..42 ಲಕ್ಷ ಕೋಟಿ
|
34.50 ಲಕ್ಷ ಕೋಟಿ
|
34.83 ಮೂಲ ಬಿ.ಇ. 2020-21
|
ಬಂಡವಾಳ ವೆಚ್ಚ
|
4.12 ಲಕ್ಷ ಕೋಟಿ
|
4.39 ಲಕ್ಷ ಕೋಟಿ
|
5.5 ಲಕ್ಷ ಕೋಟಿ
|
ಹಣಕಾಸಿನ ಕೊರತೆ (ಜಿಡಿಪಿಯ% ನಂತೆ)
|
-
|
9.5%
|
6.8%
|
· ಖರ್ಚಿನ ಪರಿಷ್ಕೃತ ಅಂದಾಜು (ಆರ್ಇ )ರೂ. 34.50 ಲಕ್ಷ ಕೋಟಿ ರೂ. ಮೂಲ ಬಜೆಟ್ ಅಂದಾಜಿನ ವೆಚ್ಚರೂ. 30.42 ಲಕ್ಷ ಕೋಟಿಗೆ ಹೋಲಿಸಿದಾಗ.
o 2020-2021ರಲ್ಲಿ ಆರ್ಇ ಪ್ರಕಾರ ಅಂದಾಜು ಮಾಡಲಾದ ಬಂಡವಾಳ ವೆಚ್ಚವು ರೂ. 4.39 ಲಕ್ಷ ಕೋಟಿ 2020-21ರ 4.12 ಲಕ್ಷ ಕೋಟಿಗೆ ಹೋಲಿಸಿದಾಗ.
o ಅಂದಾಜು ರೂ. 34.83 ಲಕ್ಷ ಕೋಟಿ ಬಿಇ 2021-2022ರಲ್ಲಿ ಬಂಡವಾಳ ವೆಚ್ಚ 5.5 ಲಕ್ಷ ಕೋಟಿ ಒಳಗೊಂಡು, ಇದು ಆರ್ಥಿಕತೆಗೆ ಅಗತ್ಯವಾದ ಉತ್ತೇಜನವನ್ನು ನೀಡಲು 34.5% ಹೆಚ್ಚಳವಾಗಿದೆ
o ಬಿಇ 2021-2022ರಲ್ಲಿ ಹಣಕಾಸಿನ ಕೊರತೆ ಜಿಡಿಪಿಯ 6.8% ಎಂದು ಅಂದಾಜಿಸಲಾಗಿದೆ. ಆರ್ಇ 2020-21ರಲ್ಲಿನ ಹಣಕಾಸಿನ ಕೊರತೆಯನ್ನು ಜಿಡಿಪಿಯ 9.5% ಎಂದು ನಿಗದಿಪಡಿಸಲಾಗಿದೆ - ಸರ್ಕಾರದ ಸಾಲಗಳು, ಬಹುಪಕ್ಷೀಯ ಸಾಲಗಳು, ಸಣ್ಣ ಉಳಿತಾಯ ನಿಧಿಗಳು ಮತ್ತು ಅಲ್ಪಾವಧಿಯ ಸಾಲಗಳ ಮೂಲಕ ಹಣವನ್ನು ಪಡೆಯಲಾಗುತ್ತದೆ
o ಮುಂದಿನ ವರ್ಷ ಮಾರುಕಟ್ಟೆಯಿಂದ ಒಟ್ಟು ಸಾಲ ರೂ.12 ಲಕ್ಷ ಕೋಟಿ ಆಗಿರುತ್ತದೆ.
o 2025-2026ರ ವೇಳೆಗೆ ಜಿಡಿಪಿಯ 4.5% ಕ್ಕಿಂತ ಕಡಿಮೆ ಹಣಕಾಸಿನ ಕೊರತೆಯನ್ನು ಸಾಧಿಸುವ ಮೂಲಕ ಹಣಕಾಸಿನ ಬಲವರ್ಧನೆಯ ಹಾದಿಯಲ್ಲಿ ಮುಂದುವರಿಯುವ ಯೋಜನೆ.
o ಸುಧಾರಿತ ಅನುಸರಣೆಯ ಮೂಲಕ ತೆರಿಗೆ ಆದಾಯದ ಹರಿವನ್ನು ಹೆಚ್ಚಿಸುವ ಮೂಲಕ ಮತ್ತು ಎರಡನೆಯದಾಗಿ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಭೂಮಿ ಸೇರಿದಂತೆ ಸ್ವತ್ತುಗಳ ವಾಣಿಜ್ಯೀಕರಣದಿಂದ ಹೆಚ್ಚುವ ಆದಾಯಗಳ ಮೂಲಕ ಇದನ್ನು ಸಾಧಿಸಬಹುದು.
o ಈ ವರ್ಷದ ಅನಿರೀಕ್ಷಿತ ಸನ್ನಿವೇಶಗಳಿಂದ ಅಗತ್ಯವಾಗಿ ಮಂಡಿಸಲಾದ ಎಫ್ಆರ್ಬಿಎಂ ಕಾಯ್ದೆಯ 4 (5) ಮತ್ತು 7 (3) (ಬಿ) ವಿಭಾಗಗಳ ಅಡಿಯಲ್ಲಿ ವಿಚಲನ ಹೇಳಿಕೆ
o ಉದ್ದೇಶಿತ ಹಣಕಾಸಿನ ಕೊರತೆಯ ಮಟ್ಟವನ್ನು ಮುಟ್ಟಲು ಎಫ್ಆರ್ಬಿಎಂ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ
o ಭಾರತದ ತುರ್ತು ನಿಧಿಯನ್ನು. ಹಣಕಾಸು ಮಸೂದೆ ಮೂಲಕ ರೂ. 500 ಕೋಟಿಯಿಂದ ರೂ 30,000 ಕೋಟಿಗೆ ಏರಿಕೆ.
ರಾಜ್ಯಗಳ ನಿವ್ವಳ ಸಾಲ:
· 15 ನೇ ಎಫ್ಸಿಯ ಶಿಫಾರಸ್ಸಿನ ಪ್ರಕಾರ 2021-2022ನೇ ಸಾಲಿಗೆ ಜಿಎಸ್ಡಿಪಿಯ 4% ರಷ್ಟು ರಾಜ್ಯಗಳಿಗೆ ನಿವ್ವಳ ಸಾಲ ಪಡೆಯಲು ಅವಕಾಶವಿದೆ
· ಇದರ ಒಂದು ಭಾಗವನ್ನು ಹೆಚ್ಚುತ್ತಿರುವ ಬಂಡವಾಳ ವೆಚ್ಚಕ್ಕಾಗಿ ಮೀಸಲಿಡಲಾಗಿದೆ
· ಜಿಎಸ್ ಡಿಪಿಯ 0.5% ಹೆಚ್ಚುವರಿ ಸಾಲ ಪಡೆಯುವ ಸೀಲಿಂಗ್ ಅನ್ನು ಷರತ್ತುಗಳಿಗೆ ಒಳಪಟ್ಟಿರುತ್ತದೆ
· 15 ನೇ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ 2023-24ರ ವೇಳೆಗೆ ರಾಜ್ಯಗಳು ಜಿಎಸ್ಡಿಪಿಯ 3% ನಷ್ಟು ಹಣಕಾಸಿನ ಕೊರತೆಯನ್ನು ತಲುಪಲಿವೆ
ಹದಿನೈದನೇ ಹಣಕಾಸು ಆಯೋಗ:
· ರಾಜ್ಯಗಳ 41% ಪಾಲನ್ನು ಉಳಿಸಿಕೊಂಡು, 2021-26ರ ಅಂತಿಮ ವರದಿಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಲಾಯಿತು,
· ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಯುಟಿಗಳಿಗೆ ಹಣವನ್ನು ಕೇಂದ್ರದಿಂದ ಒದಗಿಸಲಾಗುವುದು
· ಆಯೋಗದ ಶಿಫಾರಸ್ಸಿನ ಮೇರೆಗೆ ರೂ. 1,18,452 ಕೋಟಿಗಳನ್ನು 2021-22ರಲ್ಲಿ 17 ರಾಜ್ಯಗಳಿಗೆ ಆದಾಯದ ಕೊರತೆ ಯ ಅನುದಾನವಾಗಿ ನೀಡಲಾಗಿದೆ, 2020-21ರಲ್ಲಿ 14 ರಾಜ್ಯಗಳಿಗೆ ನೀಡಿದ ಅನುದಾಯ ರೂ .74,340 ಕೋಟಿಗಳಿಗೆ ಹೋಲಿಸಿದಾಗ.
ತೆರಿಗೆ ಪ್ರಸ್ತಾಪಗಳು
ತೆರಿಗೆ ಪಾವತಿದಾರರ ಮೇಲೆ ಕನಿಷ್ಠ ಹೊರೆಯೊಂದಿಗೆ ದೇಶದಲ್ಲಿ ಹೂಡಿಕೆ ಮತ್ತು ಉದ್ಯೋಗವನ್ನು ಉತ್ತೇಜಿಸಲು ಪಾರದರ್ಶಕ, ಪರಿಣಾಮಕಾರಿ ತೆರಿಗೆ ವ್ಯವಸ್ಥೆಯ ಗುರಿ.
1. ನೇರ ತೆರಿಗೆಗಳು
ಸಾಧನೆಗಳು:
· ವಿಶ್ವದ ಅತ್ಯಂತ ಕಡಿಮೆ ದರವಾಗಿಸಲು ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸಲಾಗಿದೆ.
· ಸಣ್ಣ ತೆರಿಗೆದಾರರ ಮೇಲಿನ ತೆರಿಗೆಯ ಭಾರವನ್ನು ಪರಿಹಾರ ಹೆಚ್ಚಿಸುವ ಮೂಲಕ ಸರಾಗಗೊಳಿಸಲಾಗಿದೆ.
· ರಿಟರ್ನ್ ಫೈಲ್ ಮಾಡುವವರು 2014 ರಲ್ಲಿ 3.31 ಕೋಟಿಯಿಂದ ಬಹುತೇಕ ದ್ವಿಗುಣವಾಗಿ 2020 ರಲ್ಲಿ 6.48 ಕೋಟಿಯಾಗಿದ್ದಾರೆ
· ಮುಖರಹಿತ ಮೌಲ್ಯಮಾಪನ ಮತ್ತು ಮುಖರಹಿತ ಮೇಲ್ಮನವಿಯನ್ನು ಪರಿಚಯಿಸಲಾಗಿದೆ
ಹಿರಿಯ ನಾಗರಿಕರಿಗೆ ಪರಿಹಾರ:
· 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಕೇವಲ ಪಿಂಚಣಿ ಮತ್ತು ಬಡ್ಡಿಸಹಿತ ಆದಾಯವನ್ನು ಹೊಂದಿರುವವರಿಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ. ತೆರಿಗೆಯನ್ನು ಪಾವತಿಸುವ ಬ್ಯಾಂಕುಗಳು ಕಡಿತಗೊಳಿಸುವುದು
ವಿವಾದಗಳನ್ನು ಕಡಿಮೆ ಮಾಡುವುದು, ಇತ್ಯರ್ಥವನ್ನು ಸರಳಗೊಳಿಸುವುದು:
· ಮತ್ತೆ ತೆರೆಯುವ ಪ್ರಕರಣಗಳ ಸಮಯ ಮಿತಿಯನ್ನು 6 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿದೆ
· ಗಂಭೀರ ತೆರಿಗೆ ವಂಚನೆ ಪ್ರಕರಣಗಳನ್ನು, ಒಂದು ವರ್ಷದಲ್ಲಿ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನದನ್ನು, ಮುಖ್ಯ ಆಯುಕ್ತರ ಅನುಮೋದನೆಯೊಂದಿಗೆ 10 ವರ್ಷಗಳವರೆಗೆ ಮಾತ್ರ ಪುನಃ ತೆರೆಯಲಾಗುವುದು
· ತೆರಿಗೆ ಪಾವತಿದಾರರಿಗೆ ರೂ. 50 ಲಕ್ಷ ಮತ್ತು ವಿವಾದಿತ ಆದಾಯ ರೂ. 10 ಲಕ್ಷ ದ ಪ್ರಕರಣಗಳಿಗಾಗಿ ವಿವಾದ ಪರಿಹಾರ ಸಮಿತಿಯನ್ನು ಸ್ಥಾಪಿಸಲಾಗುವುದು.
· ರಾಷ್ಟ್ರೀಯ ಮುಖರಹಿತ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಕೇಂದ್ರವನ್ನು ಸ್ಥಾಪಿಸಲಾಗುವುದು.
· ವಿವಾದ್ ಸೆ ವಿಶ್ವಾಸ್ ಯೋಜನೆಯ ಮೂಲಕ ರೂ. 2021 ಜನವರಿ 30 ರವರೆಗೆ 1 ಲಕ್ಷಕ್ಕೂ ಹೆಚ್ಚು ತೆರಿಗೆದಾರರು ರೂ. 85,000 ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ಇತ್ಯರ್ಥಪಡಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿರುವರು.
ಅನಿವಾಸಿ ಭಾರತೀಯರಿಗೆ ಪರಿಹಾರ:
· ಅನಿವಾಸಿ ಭಾರತೀಯರು ತಮ್ಮ ವಿದೇಶಿ ನಿವೃತ್ತಿ ಖಾತೆಗಳಿಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸಮಸ್ಯೆಗಳನ್ನು ತೆಗೆದುಹಾಕಲು ನಿಯಮಗಳು ತಿಳಿಸಲಾಗುವುದು.
ಡಿಜಿಟಲ್ ಆರ್ಥಿಕತೆಯನ್ನು ಪ್ರೋತ್ಸಾಹಿಸುವುದು:
· ತೆರಿಗೆ ಲೆಕ್ಕಪರಿಶೋಧನೆಗೆ ವಹಿವಾಟಿನ ಮಿತಿ ರೂ 95% ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿ ನಡೆಸುವ ಘಟಕಗಳಿಗೆ ರೂ 5 ಕೋಟಿಯಿಂದ . 10 ಕೋಟಿಗೆ ಏರಿಸಲಾಗಿದೆ
ಲಾಭಾಂಶಕ್ಕಾಗಿ ಪರಿಹಾರ:
· ಟಿಐಡಿಎಸ್‌ನಿಂದ ವಿನಾಯಿತಿ ಪಡೆದ REIT / InvIT ಗೆ ಲಾಭಾಂಶ ಪಾವತಿ
· ಲಾಭಾಂಶದ ಘೋಷಣೆ / ಪಾವತಿಯ ನಂತರವೇ ಲಾಭಾಂಶದ ಆದಾಯದ ಮುಂಗಡ ತೆರಿಗೆ ಭಾದ್ಯತೆ
· ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕಡಿಮೆ ಒಪ್ಪಂದದ ದರದಲ್ಲಿ ಲಾಭಾಂಶ ಆದಾಯದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದು
ಮೂಲಸೌಕರ್ಯಕ್ಕಾಗಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದು:
· ಮೂಲಸೌಕರ್ಯ ಸಾಲ ನಿಧಿಗಳು ಶೂನ್ಯ ಕೂಪನ್ ಬಾಂಡ್ಗಳನ್ನು ನೀಡುವ ಮೂಲಕ ಹಣವನ್ನು ಸಂಗ್ರಹಿಸಲು ಅರ್ಹವಾಗಿಸಲ್ಪಟ್ಟಿವೆ
· ಖಾಸಗಿ ಧನಸಹಾಯ ನಿಷೇಧ, ವಾಣಿಜ್ಯ ಚಟುವಟಿಕೆಗಳ ಮೇಲಿನ ನಿರ್ಬಂಧ ಮತ್ತು ನೇರ ಹೂಡಿಕೆಗೆ ಸಂಬಂಧಿಸಿದ ಕೆಲವು ಷರತ್ತುಗಳ ಸಡಿಲಿಕೆ
‘ಎಲ್ಲರಿಗೂ ವಸತಿ’ ಬೆಂಬಲ:
· ಮಾರ್ಚ್ 2022 ರವರೆಗೆ ತೆಗೆದುಕೊಂಡ ಸಾಲಗಳಿಗೆ ಕೈಗೆಟುಕುವ ಮನೆ ಖರೀದಿಸಲು ತೆಗೆದುಕೊಂಡ ಸಾಲಕ್ಕೆ ಹೆಚ್ಚುವರಿ ಬಡ್ಡಿ ಕಡಿತ, ರೂ. 1.5 ಲಕ್ಷಗಳ ವರೆಗೆ.
· ಕೈಗೆಟುಕುವ ವಸತಿ ಯೋಜನೆಗಳಿಗೆ ತೆರಿಗೆ ರಜೆ ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ
· ಅಧಿಸೂಚಿತ ಕೈಗೆಟುಕುವ ಬಾಡಿಗೆ ವಸತಿ ಯೋಜನೆಗಳಿಗೆ ತೆರಿಗೆ ವಿನಾಯಿತಿ ಅನುಮತಿಸಲಾಗಿದೆ
ಗಿಐಎಫ್ ಟಿ ಸಿಟಿಯಲ್ಲಿ ಐಎಫ್‌ಎಸ್‌ಸಿಗೆ ತೆರಿಗೆ ಪ್ರೋತ್ಸಾಹ:
· ವಿಮಾನ ಗುತ್ತಿಗೆ ಕಂಪನಿಗಳ ಆದಾಯದಿಂದ ಬಂಡವಾಳ ಲಾಭಕ್ಕಾಗಿ ತೆರಿಗೆ ರಜೆ
· ವಿದೇಶಿ ಗುತ್ತಿಗೆದಾರರಿಗೆ ಪಾವತಿಸುವ ವಿಮಾನ ಗುತ್ತಿಗೆ ಬಾಡಿಗೆಗೆ ತೆರಿಗೆ ವಿನಾಯಿತಿ
· ಐಎಫ್ಎಸ್ಸಿಯಲ್ಲಿ ವಿದೇಶಿ ಹಣವನ್ನು ಸ್ಥಳಾಂತರಿಸಲು ತೆರಿಗೆ ಪ್ರೋತ್ಸಾಹ
· ಐಎಫ್ಎಸ್ಸಿಯಲ್ಲಿರುವ ವಿದೇಶಿ ಬ್ಯಾಂಕುಗಳ ಹೂಡಿಕೆ ವಿಭಾಗಕ್ಕೆ ತೆರಿಗೆ ವಿನಾಯಿತಿ
ಸುಲಭ ವಿಧಾನದಲ್ಲಿ ತೆರಿಗೆಗಳನ್ನು ಸಲ್ಲಿಸುವಿಕೆ :
· ಪಟ್ಟಿಮಾಡಿದ ಸೆಕ್ಯೂರಿಟಿಗಳು, ಲಾಭಾಂಶ ಆದಾಯ, ಬ್ಯಾಂಕುಗಳಿಂದ ಬಡ್ಡಿ ಇತ್ಯಾದಿಗಳಿಂದ ಬರುವ ಬಂಡವಾಳದ ಲಾಭದ ವಿವರಗಳು ಆದಾಯದಲ್ಲಿ ಮೊದಲೇ ಭರ್ತಿ ಮಾಡಬೇಕಾಗುತ್ತದೆ
ಸಣ್ಣ ಟ್ರಸ್ಟ್‌ಗಳಿಗೆ ಪರಿಹಾರ:
· ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿರುವ ಸಣ್ಣ ಚಾರಿಟಬಲ್ ಟ್ರಸ್ಟ್ಗಳಿಗೆ ವಾರ್ಷಿಕ ರಶೀದಿಯ ವಿನಾಯಿತಿ ಮಿತಿಯನ್ನು ₹ 1 ಕೋಟಿಯಿಂದ ₹ 5 ಕೋಟಿಗೆ ಪರಿಷ್ಕರಿಸಲಾಗಿದೆ
ಕಾರ್ಮಿಕ ಕಲ್ಯಾಣ:
· ಉದ್ಯೋಗದಾತರಿಂದ ನೌಕರರ ಭಾಗವನ್ನು ತಡವಾಗಿ ಠೇವಣಿ ಇಡುವುದನ್ನು ಉದ್ಯೋಗದಾತರಿಗೆ ಕಡಿತವಾಗಿ ಪರಿಗಣಿಸಿ ಅನುಮತಿಸಬಾರದು
· ಸ್ಟಾರ್ಟ್ ಅಪ್ಗಳಿಗೆ ತೆರಿಗೆ ರಜಾ ಹಕ್ಕು ಪಡೆಯುವ ಅರ್ಹತೆಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ
· ಸ್ಟಾರ್ಟ್ ಅಪ್ಗಳಲ್ಲಿನ ಹೂಡಿಕೆಗೆ ಬಂಡವಾಳ ಲಾಭದ ವಿನಾಯಿತಿಯನ್ನು 2022 ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ
2. ಪರೋಕ್ಷ ತೆರಿಗೆಗಳು
ಜಿ.ಎಸ್.ಟಿ
ಈವರೆಗೆ ಕೈಗೊಂಡ ಕ್ರಮಗಳು:
· SMS ಮೂಲಕ ನಿಲ್ ರಿಟರ್ನ್
· ಸಣ್ಣ ತೆರಿಗೆದಾರರಿಗೆ ತ್ರೈಮಾಸಿಕ ರಿಟರ್ನ್ ಮತ್ತು ಮಾಸಿಕ ಪಾವತಿ
· ಎಲೆಕ್ಟ್ರಾನಿಕ್ ಇನ್ ವಾಯ್ಸ್ ವ್ಯವಸ್ಥೆ
· ಮೌಲ್ಯೀಕರಿಸಿದ ಇನ್ಪುಟ್ ತೆರಿಗೆ ಪಟ್ಟಿ
· ಮೊದಲೇ ತುಂಬಿದ ಸಂಪಾದಿಸಬಹುದಾದ ಜಿಎಸ್ ಟಿ ರಿಟರ್ನ್
· ರಿಟರ್ನ್ಸ್ ಫೈಲಿಂಗುಗಳನ್ನು ಏಕ ಕಾಲದಲ್ಲಿ ಮಾಡುವಿಕೆ
· ಜಿಎಸ್ ಟಿ ಎನ್ ವ್ಯವಸ್ಥೆಯ ಸಾಮರ್ಥ್ಯದ ವರ್ಧನೆ
· ತೆರಿಗೆ ವಂಚಕರನ್ನು ಗುರುತಿಸಲು ಆಳವಾದ ವಿಶ್ಲೇಷಣೆ ಮತ್ತು ಕೃತಕ ಬುದ್ದಿಮತ್ತೆ ಬಳಕೆ
ಕಸ್ಟಮ್ ಡ್ಯೂಟಿ ತರ್ಕಬದ್ಧಗೊಳಿಸುವಿಕೆ:
· ಅವಳಿ ಉದ್ದೇಶಗಳು: ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ಜಾಗತಿಕ ಮೌಲ್ಯ ಸರಪಳಿಗೆ ಪ್ರವೇಶಿಸಲು ಮತ್ತು ರಫ್ತು ಮಾಡಲು ಭಾರತಕ್ಕೆ ಸಹಾಯ ಮಾಡುವುದು.
· 80 ಹಳೆಯ ವಿನಾಯಿತಿಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ
· 400 ಕ್ಕೂ ಹೆಚ್ಚು ಹಳೆಯ ವಿನಾಯಿತಿಗಳನ್ನು ಪರಿಶೀಲಿಸುವ ಮೂಲಕ ಪರಿಷ್ಕೃತ, ಸ್ಪಷ್ಟ ಕಸ್ಟಮ್ಸ್ ಸುಂಕ ರಚನೆಯನ್ನು 2021 ರ ಅಕ್ಟೋಬರ್ 1 ರಿಂದ ಜಾರಿಗೆ ತರಲಾಗುವುದು
· ಹೊಸ ಕಸ್ಟಮ್ಸ್ ಸುಂಕ ವಿನಾಯಿತಿಗಳು ಅದರ ವಿತರಣೆಯ ದಿನಾಂಕದಿಂದ ಎರಡು ವರ್ಷಗಳ ನಂತರ ಮಾರ್ಚ್ 31 ರವರೆಗೆ ಮಾನ್ಯತೆಯನ್ನು ಹೊಂದಿರುತ್ತವೆ
ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಫೋನ್ ಉದ್ಯಮ:
· ಚಾರ್ಜರ್ಗಳ ಭಾಗಗಳು ಮತ್ತು ಮೊಬೈಲ್ಗಳ ಬಿಡಿ ಭಾಗಗಳ ಮೇಲೆ ಕೆಲವು ವಿನಾಯಿತಿಗಳನ್ನು ಹಿಂಪಡೆಯಲಾಗಿದೆ
· ಮೊಬೈಲ್ಗಳ ಕೆಲವು ಭಾಗಗಳ ಸುಂಕವನ್ನು ‘ನಿಲ್’ ದರದಿಂದ 2.5% ಗೆ ಪರಿಷ್ಕರಿಸಲಾಗಿದೆ
ಕಬ್ಬಿಣ ಮತ್ತು ಉಕ್ಕು:
· ಮಿಶ್ರಲೋಹವಲ್ಲದ , ಮಿಶ್ರಲೋಹ ಮತ್ತು ಸ್ಟೇನ್ಲೆಸ್ ಸ್ಟೀಲ್ಗಳ ಸೆಮಿಸ್, ಫ್ಲಾಟ್ ಮತ್ತು ದೀರ್ಘ ಉತ್ಪನ್ನಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಏಕರೂಪವಾಗಿ 7.5% ಕ್ಕೆ ಇಳಿಸಲಾಗಿದೆ.
· ಸ್ಟೀಲ್ ಸ್ಕ್ರ್ಯಾಪ್ ಮೇಲಿನ ಸುಂಕಕ್ಕೆ 2022 ಮಾರ್ಚ್ 31 ರವರೆಗೆ ವಿನಾಯಿತಿ ನೀಡಲಾಗಿದೆ
· ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ಆಂಟಿ-ಡಂಪಿಂಗ್ ಡ್ಯೂಟಿ (ಎಡಿಡಿ) ಮತ್ತು ಕೌಂಟರ್-ವೈಲಿಂಗ್ ಡ್ಯೂಟಿ (ಸಿವಿಡಿ) ರದ್ದುಪಡಿಸಲಾಗಿದೆ
· ತಾಮ್ರದ ಸ್ಕ್ರ್ಯಾಪ್ ಮೇಲಿನ ಸುಂಕವನ್ನು 5% ರಿಂದ 2.5% ಕ್ಕೆ ಇಳಿಸಲಾಗಿದೆ
ಜವಳಿ:
· ಕ್ಯಾಪ್ರೊಲ್ಯಾಕ್ಟಮ್, ನೈಲಾನ್ ಚಿಪ್ಸ್ ಮತ್ತು ನೈಲಾನ್ ಫೈಬರ್ ಮತ್ತು ನೂಲಿನ ಮೇಲಿನ ಮೂಲ ಕಸ್ಟಮ್ಸ್ ಡ್ಯೂಟಿ (ಬಿಸಿಡಿ) ಅನ್ನು 5% ಕ್ಕೆ ಇಳಿಸಲಾಗಿದೆ
ರಾಸಾಯನಿಕಗಳು:
· ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸಲು ಮತ್ತು ವಿಲೋಮಗಳನ್ನು ತೆಗೆದುಹಾಕಲು ರಾಸಾಯನಿಕಗಳ ಮೇಲಿನ ಕಸ್ಟಮ್ಸ್ ಸುಂಕ ದರಗಳ ತಿದ್ದುಪಡಿ ಮಾಡಲಾಗಿದೆ
· ನಾಪ್ತಾ ಮೇಲಿನ ಸುಂಕವನ್ನು 2.5% ಕ್ಕೆ ಇಳಿಸಲಾಗಿದೆ
ಚಿನ್ನ ಮತ್ತು ಬೆಳ್ಳಿ:
ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕ ಗಳಲ್ಲಿ ಸುಧಾರಣೆ ತರಲಾಗುವುದು
ನವೀಕರಿಸಬಹುದಾದ ಶಕ್ತಿ:
· ಸೌರ ಕೋಶಗಳು ಮತ್ತು ಸೌರ ಫಲಕಗಳಿಗೆ ಹಂತ ಹಂತದ ಉತ್ಪಾದನಾ ಯೋಜನೆಯನ್ನು ತಿಳಿಸಲಾಗುವುದು
· ಸ್ವದೇಶದ ಉತ್ಪಾದನೆಯನ್ನು ಉತ್ತೇಜಿಸಲು ಸೌರ ಇನ್ವರ್ಟರ್ಗಳ ಮೇಲಿನ ಸುಂಕವನ್ನು 5% ರಿಂದ 20% ಕ್ಕೆ ಮತ್ತು ಸೌರ ಲ್ಯಾಂಟರ್ನ್ಗಳ ಮೇಲೆ 5% ರಿಂದ 15% ಕ್ಕೆ ಏರಿಸಲಾಗಿದೆ
ಬಂಡವಾಳ ಉಪಕರಣಗಳು :
· ಸುರಂಗ ಕೊರೆಯುವ ಯಂತ್ರಗಳಿಗೆ ಈಗ 7.5% ತೆರಿಗೆ ಮತ್ತು ಅದರ ಭಾಗಗಳಿಗೆ 2.5% ನಷ್ಟುತೆರಿಗೆ ವಿಧಿಸಲಾಗಿದೆ.
· ಕೆಲವು ವಾಹನ ಭಾಗಗಳ ಮೇಲಿನ ತೆರಿಗೆಯು 15% ಸಾಮಾನ್ಯ ದರಕ್ಕೆ ಏರಿದೆ
ಎಮ್ ಎಸ್ ಎಮ್ ಇ ಉತ್ಪನ್ನಗಳು:
· ಸ್ಟೀಲ್ ಸ್ಕ್ರೂಗಳು ಮತ್ತು ಪ್ಲಾಸ್ಟಿಕ್ ಬಿಲ್ಡರ್ ಸರಕುಗಳ ಮೇಲಿನ ಸುಂಕ 15% ಕ್ಕೆ ಏರಿಕೆ
· ಸೀಗಡಿ ಆಹಾರದ ಮೇಲಿನ ತೆರಿಗೆ 5% ರಿಂದ 15% ಕ್ಕೆ ಏರಿಕೆ
· ಉಡುಪುಗಳು, ಚರ್ಮ ಮತ್ತು ಕರಕುಶಲ ವಸ್ತುಗಳ ರಫ್ತುದಾರರನ್ನು ಉತ್ತೇಜಿಸಲು ಸುಂಕ ರಹಿತ ವಸ್ತುಗಳನ್ನು ಆಮದು ಮಾಡಿಕೊಳ್ಳುವ ವಿನಾಯತಿಯನ್ನು ಬದಲಾಯಿಸಲಾಗಿದೆ.
· ಕೆಲವು ರೀತಿಯ ಚರ್ಮಗಳ ಆಮದಿನ ಮೇಲಿನ ವಿನಾಯಿತಿ ಹಿಂಪಡೆಯಲಾಗಿದೆ
· ಸ್ವದೇಶೀ ಸಂಸ್ಕರಣೆಯನ್ನು ಉತ್ತೇಜಿಸಲು ಬೆಳೆದ ಸಿಂಥೆಟಿಕ್ ರತ್ನದ ಕಲ್ಲುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಏರಿಸಲಾಗಿದೆ.
ಕೃಷಿ ಉತ್ಪನ್ನಗಳು:
· ಹತ್ತಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಸೊನ್ನೆಯಿಂದ 10% ಕ್ಕೆ ಮತ್ತು ಕಚ್ಚಾ ರೇಷ್ಮೆ ಮತ್ತು ರೇಷ್ಮೆ ನೂಲಿನ ಮೇಲೆ 10% ರಿಂದ 15% ಕ್ಕೆ ಹೆಚ್ಚಿಸಲಾಗಿದೆ.
· ಡಿನೇಚರ್ಡ್ ಈಥೈಲ್ ಆಲ್ಕೋಹಾಲ್ ಮೇಲೆ ಅಂತಿಮ-ಬಳಕೆಯ ಆಧಾರಿತ ರಿಯಾಯತಿಯನ್ನು ಹಿಂತೆಗೆದುಕೊಳ್ಳಲಾಗಿದೆ.
· ಕೆಲವೇ ವಸ್ತುಗಳ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ವಿಧಿಸಲಾಗಿದೆ
ಕಾರ್ಯವಿಧಾನಗಳ ತಿದ್ದುಪಡಿ ಮತ್ತು ಅನುಸರಣೆಯನ್ನು ಸರಾಗಗೊಳಿಸುವಿಕೆ:
· ತುರಂತ್ ಕಸ್ಟಮ್ಸ್ ಉಪಕ್ರಮ, ಮುಖರಹಿತ, ಕಾಗದರಹಿತ ಮತ್ತು ಸಂಪರ್ಕವಿಲ್ಲದ ಕಸ್ಟಮ್ಸ್ ಕ್ರಮಗಳು
· ರೂಲ್ಸ್ ಆಫ್ ಆರಿಜಿನ್ ಆಡಳಿತಕ್ಕೆ ಹೊಸ ವಿಧಾನ
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿನ ಸಾಧನೆಗಳು ಮತ್ತು ಮೈಲಿಗಲ್ಲುಗಳು
ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ):
· ರೂ 2.76 ಲಕ್ಷ ಕೋಟಿಗಳ ಯೋಜನೆ
· 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ
· 8 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ
· 40 ಕೋಟಿಗೂ ಹೆಚ್ಚು ರೈತರು, ಮಹಿಳೆಯರು, ವೃದ್ಧರು, ಬಡವರು ಮತ್ತು ನಿರ್ಗತಿಕರಿಗೆ ನೇರ ನಗದು
ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ (ಎಎನ್‌ಬಿ 1.0):
· ಅಂದಾಜು ರೂ. 23 ಲಕ್ಷ ಕೋಟಿ - ಜಿಡಿಪಿಯ 10% ಕ್ಕಿಂತ ಹೆಚ್ಚು
· ಪಿಎಂಜಿಕೆವೈ, ಮೂರು ಎಎನ್ಬಿ ಪ್ಯಾಕೇಜ್ಗಳು (ಎಎನ್ಬಿ 1.0, 2.0, ಮತ್ತು 3.0), ಮತ್ತು ನಂತರ ಮಾಡಿದ ಪ್ರಕಟಣೆಗಳು 5 ಮಿನಿ-ಬಜೆಟ್ಗಳಂತೆ ಇದ್ದವು.
· ಆರ್ಬಿಐನ ಕ್ರಮಗಳು ಸೇರಿದಂತೆ ಎಲ್ಲಾ ಮೂರು ಎಎನ್ಬಿ ಪ್ಯಾಕೇಜ್ಗಳ 27.1 ಲಕ್ಷ ಕೋಟಿ ಮೌಲ್ಯದ ಆರ್ಥಿಕ ಪರಿಣಾಮ - ಇದು ಜಿಡಿಪಿಯ 13% ಕ್ಕಿಂತ ಹೆಚ್ಚು ಇದೆ.
ರಚನಾತ್ಮಕ ಸುಧಾರಣೆಗಳು:
· ಒನ್ ನೇಷನ್ ಒನ್ ರೇಷನ್ ಕಾರ್ಡ್ – ಒಂದು ದೇಶ ಒಂದೇ ಪಡಿತರ ಚೀಟಿ.
· ಕೃಷಿ ಮತ್ತು ಕಾರ್ಮಿಕ ಸುಧಾರಣೆಗಳು
· ಎಂಎಸ್ಎಂಇಗಳ ಮರು ವ್ಯಾಖ್ಯಾನ
· ಖನಿಜ ವಲಯದ ವಾಣಿಜ್ಯೀಕರಣ
· ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ
· ಉತ್ಪಾದನೆ ಅನುಸಾರ ಪ್ರೋತ್ಸಾಹಕ ಯೋಜನೆಗಳು
ಕೋವಿಡ್-19 ವಿರುದ್ಧ ಭಾರತದ ಹೋರಾಟದ ಸ್ಥಿತಿ:
· 2 ಮೇಡ್-ಇನ್-ಇಂಡಿಯಾ ಲಸಿಕೆಗಳು - ಕೋವಿಡ್-19 ವಿರುದ್ಧ ಭಾರತದ ನಾಗರಿಕರನ್ನು ಮತ್ತು 100 ಕ್ಕಿಂತ ಹೆಚ್ಚು ದೇಶಗಳನ್ನು ವೈದ್ಯಕೀಯವಾಗಿ ರಕ್ಷಿಸುತ್ತದೆ.
· ಇನ್ನೂ 2 ಅಥವಾ ಹೆಚ್ಚಿನ ಹೊಸ ಲಸಿಕೆಗಳನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ
· ಪ್ರತಿ ದಶಲಕ್ಷಕ್ಕೆ ಕಡಿಮೆ ಸಾವಿನ ಪ್ರಮಾಣ ಮತ್ತು ಕಡಿಮೆ ಸಕ್ರಿಯ ಪ್ರಕರಣಗಳು
2021 - ಭಾರತೀಯ ಇತಿಹಾಸದ ಮೈಲಿಗಲ್ಲುಗಳ ವರ್ಷ
· ಭಾರತದ ಸ್ವಾತಂತ್ರ್ಯದ 75 ನೇ ವರ್ಷ
· ಗೋವಾ ಭಾರತಕ್ಕೆ ಸೇರಿದ 60ನೇ ವರ್ಷ
· 1971 ರ ಭಾರತ-ಪಾಕಿಸ್ತಾನ ಯುದ್ಧ - 50 ವರ್ಷಗಳ
· ಸ್ವತಂತ್ರ ಭಾರತದ 8 ನೇ ಜನಗಣತಿಯ ವರ್ಷ
· ಬ್ರಿಕ್ಸ್ ಪ್ರೆಸಿಡೆನ್ಸಿಯಲ್ಲಿ ಭಾರತದ ಸರದಿ
· ಚಂದ್ರಯಾನ್ -3 ಮಿಷನ್ನಿನ ವರ್ಷ
· ಹರಿದ್ವಾರ ಮಹಾಕುಂಬ ಮೇಳ
ಆತ್ಮ ನಿರ್ಭರ್ ಭಾರತ್ ದ ಗುರಿ
ಆತ್ಮ ನಿರ್ಭರತೆ - ಇದು ಹೊಸ ಆಲೋಚನೆಯಲ್ಲ - ಪ್ರಾಚೀನ ಭಾರತವು ಮೊದಲು ಸ್ವಾವಲಂಬಿಯಾಗಿತ್ತು ಮತ್ತು ವಿಶ್ವದ ವ್ಯಾಪಾರ ಕೇಂದ್ರವಾಗಿತ್ತು
***
(Release ID: 1694447)
Visitor Counter : 5460
Read this release in:
Malayalam
,
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Telugu