ಹಣಕಾಸು ಸಚಿವಾಲಯ

ಆರ್ಥಿಕ ಸಮೀಕ್ಷೆ 2020-21 ರ ಮುಖ್ಯಾಂಶಗಳು

Posted On: 29 JAN 2021 3:47PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು 2020-21 ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಿದರು. ಕೋವಿಡ್ ಯೋಧರಿಗೆ ಸಮರ್ಪಿಸಲಾಗಿರುವ ಆರ್ಥಿಕ ಸಮೀಕ್ಷೆ 2020-21 ಮುಖ್ಯಾಂಶಗಳು ಹೀಗಿವೆ:

ಶತಮಾನಕ್ಕೊಮ್ಮೆ ಕಾಣಿಸಿಕೊಂಡ ಬಿಕ್ಕಟ್ಟಿನ ನಡುವೆಯೂ ಜೀವನ ಮತ್ತು ಜೀವನೋಪಾಯವನ್ನು ಉಳಿಸಲಾಗುತ್ತಿದೆ

  • ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಭಾರತವು ದೀರ್ಘಕಾಲೀನ ಲಾಭಕ್ಕಾಗಿ ಅಲ್ಪಾವಧಿಯ ನೋವನ್ನು ತಡೆದುಕೊಳ್ಳುವ ಮೂಲಕ ಜೀವ ಮತ್ತು ಜೀವನೋಪಾಯವನ್ನು ಉಳಿಸುವತ್ತ ಗಮನಹರಿಸಿತು.
  • ಸ್ಪಂದನೆಯು ಮಾನವೀಯ ತತ್ವಗಳಿಂದ ಕೂಡಿತ್ತು, ಅದೆಂದರೆ:
  • ಕಳೆದುಕೊಂಡ ಮನುಷ್ಯ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ
  • ಸಾಂಕ್ರಾಮಿಕ ರೋಗದಿಂದ ಉಂಟಾಗುವ ತಾತ್ಕಾಲಿಕ ಆಘಾತದಿಂದ ಜಿಡಿಪಿ ಚೇತರಿಸಿಕೊಳ್ಳುತ್ತದೆ
  • ತ್ವರಿತ ಹಾಗೂ ತೀವ್ರವಾದ ಲಾಕ್ಡೌನ್ ಜೀವಗಳನ್ನು ಉಳಿಸುವ ಮತ್ತು ಮಧ್ಯಮದಿಂದ ದೀರ್ಘಾವಧಿಯವರೆಗೆ ಆರ್ಥಿಕ ಚೇತರಿಕೆಯ ಮೂಲಕ ಜೀವನೋಪಾಯವನ್ನು ರಕ್ಷಿಸುವ ಕಾರ್ಯತಂತ್ರವಾಯಿತು.
  • ಹ್ಯಾನ್ಸೆನ್ ಮತ್ತು ಸಾರ್ಜೆಂಟ್ (2001) ಅವರ ನೊಬೆಲ್-ಪ್ರಶಸ್ತಿ ವಿಜೇತ ಸಂಶೋಧನೆ - ಅನಿಶ್ಚಿತತೆ ಹೆಚ್ಚಿರುವಾಗ ಕೆಟ್ಟ ಪರಿಸ್ಥಿತಿಯಲ್ಲಿ ನಷ್ಟವನ್ನು ಕಡಿಮೆ ಮಾಡುವ ಬಗ್ಗೆ ಕೇಂದ್ರೀಕರಿಸಿದ ನೀತಿ- ಯಿಂದ ಕಾರ್ಯತಂತ್ರವು ಪ್ರೇರೇಪಣೆ ಪಡೆದಿದೆ.
  • ಭಾರತದ ತಂತ್ರವು ಕೋವಿಡ್ ಗೆರೆಯನ್ನು ಸಮತಟ್ಟಾಗಿಸಿತು ಹಾಗೂ ಸಾಂಕ್ರಾಮಿಕದ ಗರಿಷ್ಠ ಪರಿಣಾಮವನ್ನು ಸೆಪ್ಟೆಂಬರ್, 2020 ಕ್ಕೆ ಮುಂದೂಡಿತು.
  • ಸೆಪ್ಟೆಂಬರ್ ಗರಿಷ್ಠ ಪರಿಣಾಮದ ನಂತರ, ಹೆಚ್ಚುತ್ತಿರುವ ಸಂಚಾರಗಳ ಹೊರತಾಗಿಯೂ ಭಾರತದಲ್ಲಿ ದಿನನಿತ್ಯದ ಪ್ರಕರಣಗಳು ಕ್ಷೀಣಿಸುತ್ತಿರುವುದುವಿಶಿಷ್ಟವಾಗಿದೆ
  • ಎಲ್ಲಾ ಪ್ರಮುಖ ಆರ್ಥಿಕ ಸೂಚಕಗಳಲ್ಲಿ ಚೇತರಿಕೆಯ ಪರಿಣಾಮ ವಿ-ಆಕಾರದ ಚೇತರಿಕೆ ಕಂಡುಬಂದಿದ್ದು, ಮೊದಲ ತ್ರೈಮಾಸಿಕದಲ್ಲಿ ದಾಖಲಾದ 23.9% ಜಿಡಿಪಿ ಕುಸಿತಕ್ಕೆ ಹೋಲಿಸಿದರೆ 2 ನೇ ತ್ರೈಮಾಸಿಕದ ಜಿಡಿಪಿಯು 7.5% ಕುಸಿತ ದಾಖಲಾಯಿತು.
  • ಕೋವಿಡ್ ಸಾಂಕ್ರಾಮಿಕವು ಬೇಡಿಕೆ ಮತ್ತು ಪೂರೈಕೆ ಎರಡರ ಮೇಲೂ ಪರಿಣಾಮ ಬೀರಿತು.
  • ಮಧ್ಯಮ-ದೀರ್ಘಾವಧಿಯಲ್ಲಿ ಪೂರೈಕೆಯನ್ನು ವಿಸ್ತರಿಸಲು ಮತ್ತು ಉತ್ಪಾದಕ ಸಾಮರ್ಥ್ಯಗಳಿಗೆ ದೀರ್ಘಕಾಲೀನ ಹಾನಿಯನ್ನು ತಪ್ಪಿಸಲು ರಚನಾತ್ಮಕ ಸುಧಾರಣೆಗಳನ್ನು ಘೋಷಿಸಿದ ಏಕೈಕ ದೇಶ ಭಾರತ.
  • ಬೇಡಿಕೆಯ ನೀತಿಗಳನ್ನು ಸರಿಹೊಂದಿಸುವಾಗ ಆರ್ಥಿಕ ಚಟುವಟಿಕೆಗಳ ಮೇಲಿನ ಬ್ರೇಕ್ತೆಗೆದಾಗ ಮಾತ್ರ ವೇಗವರ್ಧಕವನ್ನು (ಆಕ್ಸಿಲರೇಟರ್) ನಿಧಾನವಾಗಿ ಒತ್ತಲಾಯಿತು.
  • ಬೇಡಿಕೆಯನ್ನು ಹೆಚ್ಚಿಸಲು ಮತ್ತು ಚೇತರಿಕೆಗೆ ಒತ್ತು ನೀಡಲು ರಾಷ್ಟ್ರೀಯ ಮೂಲಸೌಕರ್ಯಗಳ  ಸುತ್ತ ಕೇಂದ್ರೀಕೃತವಾದ ಮತ್ತಷ್ಟು ಸಾರ್ವಜನಿಕ ಹೂಡಿಕೆ ಕಾರ್ಯಕ್ರಮ
  • ಆರ್ಥಿಕತೆಯಲ್ಲಿ ಚೇತರಿಕೆ, ಎರಡನೆಯ ಅಲೆಯ ಸೋಂಕನ್ನು ತಪ್ಪಿಸುವುದು - ಒಂದು ಶತಮಾನಕ್ಕೊಮ್ಮೆ ಕಾಣಿಸಿಕೊಂಡ ಸಾಂಕ್ರಾಮಿಕ ರೋಗದ ಮಧ್ಯೆ ಕಾರ್ಯತಂತ್ರದ ನೀತಿ ನಿರೂಪಣೆಯಲ್ಲಿ ವಿಭಿನ್ನ ಕ್ರಮ.

2020-21ರಲ್ಲಿ ಆರ್ಥಿಕತೆಯ ಸ್ಥಿತಿಗತಿ: ಒಂದು ಒಳನೋಟ

  • ಕೋವಿಡ್-19  ಸಾಂಕ್ರಾಮಿಕವು ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಯಿತು, ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಅತ್ಯಂತ ತೀವ್ರ ಕುಸಿತವಾಗಿದೆ.
  • ಲಾಕ್ಡೌನ್ಗಳು ಮತ್ತು ಸಾಮಾಜಿಕ ಅಂತರದ ಮಾನದಂಡಗಳು ಆಗಲೇ ನಿಧಾನಗತಿಯಲ್ಲಿದ್ದ  ಜಾಗತಿಕ ಆರ್ಥಿಕತೆಯನ್ನು ಸ್ಥಗಿತಗೊಳಿಸಿದವು
  • ಜಾಗತಿಕ ಆರ್ಥಿಕ ಉತ್ಪಾದನೆಯು 2020 ರಲ್ಲಿ 3.5% ರಷ್ಟು ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ (ಐಎಂಎಫ್ ಜನವರಿ 2021 ಅಂದಾಜುಗಳು)
  • ಬಡ್ಡಿ ದರಗಳನ್ನು ಕಡಿಮೆ ಮಾಡುವುದು ಹಾಗೂ ಪರಿಮಾಣಾತ್ಮಕ ಕ್ರಮಗಳು ಮೂಲಕ ಆರ್ಥಿಕತೆಗಳನ್ನು ಬೆಂಬಲಿಸಲು ಜಗತ್ತಿನಾದ್ಯಂತದ ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕುಗಳು ವಿವಿಧ ನೀತಿಗಳನ್ನು ರೂಪಿಸಿವೆ.
  •  ಭಾರತವು ನಿಯಂತ್ರಣ, ವಿತ್ತೀಯ, ಹಣಕಾಸು ಮತ್ತು ದೀರ್ಘಕಾಲೀನ ರಚನಾತ್ಮಕ ಸುಧಾರಣೆಗಳು ಎಂಬ ನಾಲ್ಕು ಸ್ತಂಭಗಳ ತಂತ್ರವನ್ನು ಅಳವಡಿಸಿಕೊಂಡಿದೆ:
  • ಸರಿಹೊಂದಿಸಿದ ಹಣಕಾಸಿನ ಮತ್ತು ವಿತ್ತೀಯ ಬೆಂಬಲವನ್ನು ಒದಗಿಸಲಾಯಿತು, ಲಾಕ್ಡೌನ್ ಸಮಯದಲ್ಲಿ ದುರ್ಬಲರಿಗೆ ನೆರವು ನೀಡುವುದು ಮತ್ತು ಅನ್ಲಾಕ್ ಸಂದರ್ಭದಲ್ಲಿ  ಬಳಕೆ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು..
  • ಅನುಕೂಲಕರ ವಿತ್ತೀಯ ನೀತಿಯು ಹೇರಳವಾದ ದ್ರವ್ಯತೆ ಮತ್ತು ಸಾಲಗಾರರಿಗೆ ತಕ್ಷಣದ ಪರಿಹಾರವನ್ನು ಖಾತ್ರಿಗೊಳಿಸಿತು.
  • ಎನ್ಎಸ್ಒನ ಅಂದಾಜಿನ ಪ್ರಕಾರ, ಭಾರತದ ಜಿಡಿಪಿ 2021 ನೇ ಹಣಕಾಸು ವರ್ಷದಲ್ಲಿ (-) 7.7% ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿದೆ - 2021 ನೇ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕಕ್ಕೆ ಹೋಲಿಸಿದರೆ 2021 ನೇ ಹಣಕಾಸು ವರ್ಷದ ಎರಡನೇ ಅರ್ಧವಾರ್ಷಿಕದಲ್ಲಿ 23.9% ರಷ್ಟು ದೃಢವಾದ ಬೆಳವಣಿಗೆ.
  • 2021-22 ನೇ ಹಣಕಾಸು ವರ್ಷದಲ್ಲಿ ಭಾರತದ ನಿಜವಾದ ಜಿಡಿಪಿ 11.0% ಬೆಳವಣಿಗೆಯನ್ನು ದಾಖಲಿಸಲಿದೆ ಮತ್ತು ನಾಮಮಾತ್ರ (ಹಣದುಬ್ಬರ ಹೊಂದಿಸದ) ಜಿಡಿಪಿ 15.4% ರಷ್ಟು ಏರಿಕೆಯಾಗಲಿದೆ-ಇದು ಸ್ವಾತಂತ್ರ್ಯದ ನಂತರದ ಗರಿಷ್ಠ ಜಿಡಿಪಿ ಬೆಳವಣಿಯಾಗಿದೆ.
  • ಕೋವಿಡ್-19 ಲಸಿಕೆಗಳ ಚಾಲನೆಯೊಂದಿಗೆ ಆರ್ಥಿಕ ಚಟುವಟಿಕೆಗಳು  ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ.
  • ಸರ್ಕಾರಿ ಬಳಕೆ ಮತ್ತು ನಿವ್ವಳ ರಫ್ತುಗಳು  ಬೆಳವಣಿಗೆಯು  ಮತ್ತಷ್ಟು ಕುಸಿಯುವುದನ್ನು ತಡೆದವು. ಆದರೆ ಹೂಡಿಕೆ ಮತ್ತು ಖಾಸಗಿ ಬಳಕೆಯು ಬೆಳವಣಿಗೆ  ಕೆಳಕ್ಕಿಳಿಯಲು ಕಾರಣವಾದವು.
  • 2020-21ನೇ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸರ್ಕಾರಿ ಬಳಕೆಯಿಂದ ಚೇತರಿಕೆಯು ಶಕ್ತಿಯನ್ನು ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17 ರಷ್ಟು ಬೆಳೆವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ
  • 2021ನೇ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ರಫ್ತು 5.8% ಮತ್ತು ಆಮದು 11.3% ರಷ್ಟು ಕುಸಿಯುವ ನಿರೀಕ್ಷೆಯಿದೆ
  • ಭಾರತವು 2021ನೇ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ.2ರಷ್ಟು ಚಾಲ್ತಿ ಖಾತೆ ಹೆಚ್ಚುವರಿ ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ, ಇದು 17 ವರ್ಷಗಳ ನಂತರ ಐತಿಹಾಸಿಕ ಗರಿಷ್ಠವಾಗಿದೆ.
  • ಪೂರೈಕೆ ವಲಯದಲ್ಲಿ, ಒಟ್ಟು ಮೌಲ್ಯವರ್ಧಿತ (ಜಿವಿಎ) ಬೆಳವಣಿಗೆಯು 2020-21ನೇ ಹಣಕಾಸು ವರ್ಷದಲ್ಲಿ -7.2% ರಷ್ಟಿರಲಿದೆ ಮತ್ತು 2020ನೇ ಹಣಕಾಸು ವರ್ಷದಲ್ಲಿ 3.9% ರಷ್ಟಿತ್ತು
  • 2021ನೇ ಹಣಕಾಸು ವರ್ಷದಲ್ಲಿ 3.4% ರಷ್ಟು ಬೆಳವಣಿಗೆಯೊಂದಿಗೆ ಕೃಷಿ ಕ್ಷೇತ್ರವು ಭಾರತದ ಆರ್ಥಿಕತೆಯ ಮೇಲೆ ಕೋವಿಡ್ -19 ಸಾಂಕ್ರಾಮಿಕ ರೋಗದ ಆಘಾತವನ್ನು ಕಡಿಮೆ ಮಾಡಿದೆ.
  • ಕೈಗಾರಿಕೆ ಮತ್ತು ಸೇವೆಗಳು 2021ನೇ ಹಣಕಾಸು ವರ್ಷದ ಅವಧಿಯಲ್ಲಿ ಕ್ರಮವಾಗಿ 9.6% ಮತ್ತು 8.8% ರಷ್ಟು ಕುಸಿತ ಕಾಣಲಿವೆ ಎಂದು ಅಂದಾಜಿಸಲಾಗಿದೆ.
  • ಸಂಪರ್ಕ ಆಧಾರಿತ ಸೇವೆಗಳು, ಉತ್ಪಾದನೆ, ನಿರ್ಮಾಣ ಕ್ಷೇತ್ರಗಳು ತೀವ್ರ ಪರಿಣಾಮ ಎದುರಿಸಿ ಮತ್ತು ಸ್ಥಿರವಾಗಿ ಚೇತರಿಸಿಕೊಳ್ಳುತ್ತಿರುವಾಗ ಕೃಷಿ ಕ್ಷೇತ್ರವು ಬೆಳ್ಳಿಗೆರೆಯಂತೆ ಭರವಸೆದಾಯಕವಾಗಿದೆ.
  • 2020-21 ಆರ್ಥಿಕ ವರ್ಷದಲ್ಲಿ ಭಾರತವು ಆದ್ಯತೆಯ ಹೂಡಿಕೆ ತಾಣವಾಗಿ ಉಳಿದಿದೆ, ಜಾಗತಿಕವಾದ ಆಸ್ತಿ ಬದಲಾವಣೆಗಳ ಮಧ್ಯೆಯೂ ಈಕ್ವಿಟಿಗಳು ಮತ್ತು ಉದಯೋನ್ಮುಖ ಆರ್ಥಿಕತೆಗಳಲ್ಲಿ ಎಫ್ಡಿಐ ಹರಿವಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಗಳಿವೆ:
  • 2020 ನವೆಂಬರ್ನಲ್ಲಿ ನಿವ್ವಳ ಎಫ್ಪಿಐ ಒಳಹರಿವು ಸಾರ್ವಕಾಲಿಕ ಮಾಸಿಕ ದಾಖಲೆಯಾದ 9.8 ಶತಕೋಟಿ ಡಾಲರ್ ದಾಖಲಿಸಿದೆ.
  • 2020 ರಲ್ಲಿ ಈಕ್ವಿಟಿ ಎಫ್ಐಐ ಒಳಹರಿವು ಪಡೆದ ಏಕೈಕ ದೇಶ ಭಾರತ
  • ಉತ್ಸಾಹದ ಸೆನ್ಸೆಕ್ಸ್ ಮತ್ತು ನಿಫ್ಟಿ 2010 ಅಕ್ಟೋಬರ್ ನಂತರ ಮೊದಲ ಬಾರಿಗೆ ಭಾರತದ ಮಾರ್ಕೆಟ್-ಕ್ಯಾಪ್ ಟು ಜಿಡಿಪಿ ಅನುಪಾತ ಶೇ.100 ದಾಟಲು ಕಾರಣವಾಯಿತು
  • ಸಿಪಿಐ ಹಣದುಬ್ಬರದ ಇಳಿಕೆಯು ಇತ್ತೀಚೆಗೆ ಆಹಾರ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಪೂರೈಕೆ ನಿರ್ಬಂಧಗಳನ್ನು ಸರಾಗಗೊಳಿಸಿದ್ದನ್ನು ಪ್ರತಿಬಿಂಬಿಸುತ್ತದೆ.
  • 2021ನೇ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಹೂಡಿಕೆಯಲ್ಲಿ 0.8% ರಷ್ಟು ಕುಸಿತ (ಒಟ್ಟು ಸ್ಥಿರ ಬಂಡವಾಳ ರಚನೆಯಿಂದ ಅಳೆಯಲಾಗುತ್ತದೆ). ಇದು 2021ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 29% ಕುಸಿತ ಕಂಡಿತ್ತು.
  • ಅಂತರ್ ಮತ್ತು ಅಂತರ ರಾಜ್ಯ ಸಂಚಾರಗಳ ಮರು ಆರಂಭ ಮತ್ತು ದಾಖಲೆಯ ಮಾಸಿಕ ಜಿಎಸ್ಟಿ ಸಂಗ್ರಹಗಳು ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಯ ಅನ್ಲಾಕ್ ಅನ್ನು ಗುರುತಿಸಿವೆ
  • 2021ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಭಾರತವು ಜಿಡಿಪಿಯ ಚಾಲ್ತಿ ಖಾತೆ ಹೆಚ್ಚುವರಿ 3.1% ರಷ್ಟನ್ನು ದಾಖಲಿಸುವುದರೊಂದಿಗೆ ಬಾಹ್ಯ ವಲಯವು ಬೆಳವಣಿಗೆಗೆ ಪರಿಣಾಮಕಾರಿ ಬೆಂಬಲ  ಒದಗಿಸಿದೆ:
  • ಸೇವೆಗಳ ರಫ್ತು ಮತ್ತು ದುರ್ಬಲ ಬೇಡಿಕೆಯು ರಫ್ತುಗಿಂತ ಆಮದುಗಳಲ್ಲಿ (ಸರಕು ಆಮದು 39.7% ರಷ್ಟು ಕುಸಿತ ಕಂಡಿದೆ. ಸರಕು ರಫ್ತು 21.2% ರಷ್ಟು ಸಂಕುಚಿತಗೊಂಡಿದೆ) ಕುಸಿತಕ್ಕೆ ಕಾರಣವಾಗಿದೆ.
  • 2020 ಡಿಸೆಂಬರ್ನಲ್ಲಿ 18 ತಿಂಗಳ ಮೌಲ್ಯದ ಆಮದನ್ನು ಸರಿದೂಗಿಸಿದ್ದರಿಂದ ವಿದೇಶೀ ವಿನಿಮಯ ಸಂಗ್ರಹವು ಒಂದು ಮಟ್ಟಕ್ಕೆ ಏರಿತು.
  • ಜಿಡಿಪಿಗೆ ಅನುಪಾತವಾಗಿ ಬಾಹ್ಯ ಸಾಲವು 2020 ಸೆಪ್ಟೆಂಬರ್ ಅಂತ್ಯದ ವೇಳೆಗೆ 21.6% ಕ್ಕೆ ಏರಿತು, ಇದು 2020 ಮಾರ್ಚ್ ಅಂತ್ಯದ ವೇಳೆಗೆ 20.6% ಇತ್ತು.
  • ಮೀಸಲುಗಳಲ್ಲಿನ ಗಣನೀಯ ಪ್ರಮಾಣದ ಹೆಚ್ಚಳದಿಂದಾಗಿ ಒಟ್ಟು ಮತ್ತು ಅಲ್ಪಾವಧಿಯ ಸಾಲಕ್ಕೆ ವಿದೇಶೀ ವಿನಿಮಯ ಸಂಗ್ರಹ ಅನುಪಾತವು ಸುಧಾರಣೆ ಕಂಡಿದೆ.
  • ವಿ-ಆಕಾರದ ಚೇತರಿಕೆ ಆಗುತ್ತಿದೆ. ವಿದ್ಯುತ್ ಬೇಡಿಕೆ, -ವೇ ಬಿಲ್ಗಳು, ಜಿಎಸ್ಟಿ ಸಂಗ್ರಹ, ಉಕ್ಕಿನ ಬಳಕೆ ಇತ್ಯಾದಿಗಳಲ್ಲಿ ನಿರಂತರ ಏರಿಕೆಯಿಂದ  ಇದು ನಿರೂಪಿತವಾಗುತ್ತಿದೆ.
  • ಭಾರತವು 6 ದಿನಗಳಲ್ಲಿ 10 ಲಕ್ಷ ಲಸಿಕೆಗಳನ್ನು ನೀಡಿದ ಮೊದಲ ದೇಶವಾಯಿತು ಮತ್ತು ನೆರೆಯ ರಾಷ್ಟ್ರಗಳು ಮತ್ತು ಬ್ರೆಜಿಲ್ಗೆ ಲಸಿಕೆ ನೀಡುವ ಪ್ರಮುಖ ಪೂರೈಕೆದಾರನಾಗಿ ಹೊರಹೊಮ್ಮಿದೆ
  • ಬೃಹತ್ ಲಸಿಕಾ ಅಭಿಯಾನದ ಪ್ರಾರಂಭದಿಂದ ಆರ್ಥಿಕತೆಯ ಸಾಮಾನ್ಯ ಸ್ಥಿತಿಗೆ ಮರಳುತ್ತದೆ:
  • ಸೇವಾ ವಲಯ, ಬಳಕೆ ಮತ್ತು ಹೂಡಿಕೆಯಲ್ಲಿ ದೃಢವಾದ ಚೇತರಿಕೆ ಕಾಣುತ್ತಿದೆ.
  • ಭಾರತವು ತನ್ನ ಸಂಭಾವ್ಯ ಬೆಳವಣಿಗೆಯನ್ನು ಸಾಧಿಸಲು ಮತ್ತು ಸಾಂಕ್ರಾಮಿಕದ ದುಷ್ಪರಿಣಾಮವನ್ನು ಅಳಿಸಿ ಹಾಕಲು ಸುಧಾರಣೆಗಳು ಮುಂದುವರಿಯಬೇಕು
  • ಶತಮಾನದಲ್ಲಿ ಒಮ್ಮೆಕಾಣಿಸಿಕೊಂಡ ಬಿಕ್ಕಟ್ಟಿಗೆ ಭಾರತ ರೂಪಿಸಿದ ಪ್ರಬುದ್ಧ ನೀತಿ ಸ್ಪಂದನೆಯು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಸದ್ಯದ ಲಾಭವನ್ನು ನೋಡದೆ ದೀರ್ಘಕಾಲೀನ ಲಾಭಗಳ ಮೇಲೆ ಗಮನ ಕೇಂದ್ರೀಕರಿಸುವ ಪಾಠಗಳನ್ನು ಕಲಿಸಿದೆ.

ಬೆಳವಣಿಗೆಯು ಸಾಲ ಸುಸ್ಥಿರತೆಗೆ ಕಾರಣವಾಗುತ್ತದೆಯೇ? ಹೌದು. ಆದರೆ ಇದು ವಿರುದ್ಧವಾಗುವುದಿಲ್ಲ.

  • ಭಾರತದ ಪರಿಸ್ಥಿತಿಯಲ್ಲಿ ಬೆಳವಣಿಗೆಯು ಸಾಲ ಸುಸ್ಥಿರತೆಗೆ ಕಾರಣವಾಗುತ್ತದೆ. ಆದರೆ ಇದು ವಿರುದ್ಧವಾಗಿಯೂ ಆಗಬೇಕೆಂದೇನೂ ಇಲ್ಲ:
  • ಸಾಲದ ಸುಸ್ಥಿರತೆಯುಬಡ್ಡಿದರದ ಬೆಳವಣಿಗೆಯ ದರ ವ್ಯತ್ಯಾಸ’ (ಐಆರ್ಜಿಡಿ) ಅಂದರೆ, ಬಡ್ಡಿದರ ಮತ್ತು ಬೆಳವಣಿಗೆಯ ದರದ ನಡುವಿನ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ.
  • ಭಾರತದಲ್ಲಿ, ಸಾಲದ ಮೇಲಿನ ಬಡ್ಡಿದರವು ಬೆಳವಣಿಗೆಯ ದರಕ್ಕಿಂತ ಕಡಿಮೆಯಾಗಿದೆ.
  • ಭಾರತದಲ್ಲಿ ನಕಾರಾತ್ಮಕ ಐಆರ್ಜಿಡಿಯು ಕಡಿಮೆ ಬಡ್ಡಿದರಗಳಿಂದಲ್ಲ. ಬದಲಿಗೆ ಹೆಚ್ಚಿನ ಬೆಳವಣಿಗೆಯ ದರಗಳಿಂದಾಗಿದೆ. ಇದು ಹಣಕಾಸಿನ ನೀತಿಯ ಬಗ್ಗೆ ವಿಶೇಷವಾಗಿ ಬೆಳವಣಿಗೆಯ ಕುಸಿತ ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಮಯದಲ್ಲಿ ಚರ್ಚೆಗೆ ಹಾದಿ ಮಾಡಿಕೊಡುತ್ತದೆ.
  • ಹೆಚ್ಚಿನ ಬೆಳವಣಿಗೆಯ ದರವನ್ನು ಹೊಂದಿರುವ ದೇಶಗಳಲ್ಲಿ ಬೆಳವಣಿಗೆಯು ಸಾಲವು ಸುಸ್ಥಿರವಾಗಿಡಲು ಕಾರಣವಾಗುತ್ತದೆ; ಕಡಿಮೆ ಬೆಳವಣಿಗೆಯ ದರವನ್ನು ಹೊಂದಿರುವ ದೇಶಗಳಲ್ಲಿ ಅಂತಹ ಸ್ಪಷ್ಟತೆ ಕಂಡುಬರುವುದಿಲ್ಲ.
  • ಆರ್ಥಿಕ ಬಿಕ್ಕಟ್ಟುಗಳ ಸಮಯದ ವಿತ್ತೀಯ ಗುಣಕಾಂಕಗಳು ಆರ್ಥಿಕ ಏರಿಕೆಯ ಸಂದರ್ಭಕ್ಕಿಂತ ಹೆಚ್ಚಿರುತ್ತವೆ
  • ಸಂಭವನೀಯ ಹಾನಿಯನ್ನು ಉತ್ಪಾದನಾ ಸಾಮರ್ಥ್ಯಕ್ಕೆ ಸೀಮಿತಗೊಳಿಸುವ ಮೂಲಕ ಸುಧಾರಣೆಗಳ ಸಂಪೂರ್ಣ ಲಾಭವನ್ನು ಪಡೆಯುವುದನ್ನು ಸಕ್ರಿಯ ವಿತ್ತೀಯ ನೀತಿಯು ಖಚಿತಪಡಿಸುತ್ತದೆ
  • ಬೆಳವಣಿಗೆಗೆ ಉತ್ತೇಜನ ನೀಡುವ ವಿತ್ತೀಯ ನೀತಿಯು ಸಾಲ- ಜಿಡಿಪಿ ಅನುಪಾತವನ್ನು ಕಡಿಮೆ ಮಾಡುತ್ತದೆ
  • ಭಾರತದ ಬೆಳವಣಿಗೆಯ ಸಾಮರ್ಥ್ಯವನ್ನು ಗಮನಿಸಿದರೆ, ಕೆಟ್ಟ ಸನ್ನಿವೇಶಗಳಲ್ಲಿಯೂ ಸಾಲ ಸುಸ್ಥಿರತೆಯು ಸಮಸ್ಯೆಯಾಗುವ ಸಾಧ್ಯತೆಗಳೀಲ್ಲ.
  • ಆರ್ಥಿಕ ಕುಸಿತದ ಸಮಯದಲ್ಲಿ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಪ್ರತಿ-ಆವರ್ತಕ ವಿತ್ತೀಯ ನೀತಿಯನ್ನು ಬಳಸುವುದು ಅಪೇಕ್ಷಣೀಯವಾಗಿದೆ
  • ಸಕ್ರಿಯ, ಪ್ರತಿ-ಆವರ್ತಕ ವಿತ್ತೀಯ ನೀತಿವಿತ್ತೀಯ ಬೇಜವಾಬ್ದಾರಿತನವಲ್ಲ. ಬದಲಿಗೆ ವಿತ್ತೀಯ ನೀತಿಯ ವಿರುದ್ಧ ಅಸಮ್ಮತವಾದ ಬೌದ್ಧಿಕ ಪಕ್ಷಪಾತವನ್ನು ಮುರಿಯುವುದು.

ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್  ಅದರ ಮೂಲಭೂತ ಅಂಶಗಳನ್ನು ಪ್ರತಿಬಿಂಬಿಸುತ್ತದೆಯೇ? ಇಲ್ಲ!

  • ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಎಂದೂ ಸಹ ಸಾರ್ವಭೌಮ ಕ್ರೆಡಿಟ್ ರೇಟಿಂಗ್ಗಳ ಹೂಡಿಕೆ ದರ್ಜೆಯಲ್ಲಿ (ಬಿಬಿಬಿ- / ಬಿಎಎ 3) ಅತ್ಯಂತ ಕಡಿಮೆ ರೇಟಿಂಗ್ ಮಾಡಿರಲಿಲ್ಲ.:
  • ಆರ್ಥಿಕತೆಯ ಗಾತ್ರ ಮತ್ತು ಮೂಲಕ ಸಾಲವನ್ನು ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿರುವ, ಐದನೇ ಅತಿದೊಡ್ಡ ಆರ್ಥಿಕತೆಯನ್ನು ಪ್ರಧಾನವಾಗಿ ಎಎಎ ಎಂದು ರೇಟ್ ಮಾಡಲಾಗಿದೆ
  • ಇದಕ್ಕೆ ಚೀನಾ ಮತ್ತು ಭಾರತ ಮಾತ್ರ ಅಪವಾದಗಳಾಗಿವೆ - ಚೀನಾವನ್ನು 2005 ರಲ್ಲಿ - / 2 ಎಂದು ರೇಟ್ ಮಾಡಲಾಯಿತು ಮತ್ತು ಈಗ ಭಾರತವನ್ನು ಬಿಬಿಬಿ- / ಬಿಎಎ 3 ಎಂದು ರೇಟ್ ಮಾಡಲಾಗಿದೆ
  • ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಅದರ ಮೂಲಭೂತ ಅಂಶಗಳನ್ನು ಪ್ರತಿಬಿಂಬಿಸುವುದಿಲ್ಲ:
  • ಹಲವಾರು ನಿಯತಾಂಕಗಳಲ್ಲಿ ಎಸ್ & ಪಿ / ಮೂಡಿಗಳಿಗಾಗಿ + / 1 ಮತ್ತು ಬಿಬಿಬಿ- / ಬಿಎಎ 3 ನಡುವೆ ರೇಟ್ ಮಾಡಲಾದ ದೇಶಗಳ ನಡುವೆ ಸ್ಪಷ್ಟವಾದ ವ್ಯತ್ಯಾಸಗಳಿವೆ.
  • ನಿಯತಾಂಕದ ಸಾರ್ವಭೌಮ ರೇಟಿಂಗ್ ಮೇಲಿನ ಪರಿಣಾಮಕ್ಕಿಂತ ಗಮನಾರ್ಹವಾಗಿ ಕಡಿಮೆ ರೇಟ್ ಮಾಡಲಾಗಿದೆ
  • ಕ್ರೆಡಿಟ್ ರೇಟಿಂಗ್ಗಳು ಡೀಫಾಲ್ಟ್ ಸಂಭವನೀಯತೆಯನ್ನು ಗುರುತಿಸುತ್ತವೆ. ಆದ್ದರಿಂದ ಸಾಲಗಾರನು ತನ್ನ ಜವಾಬ್ದಾರಿಗಳನ್ನು ಪೂರೈಸುವ ಇಚ್ಛೆ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ:
  • ಭಾರತದ ಪಾವತಿಯ ಇಚ್ಛೆಯು ನಿಸ್ಸಂದೇಹವಾಗಿ ಅದರ ಶೂನ್ಯ ಸಾರ್ವಭೌಮ ಡೀಫಾಲ್ಟ್ ಇತಿಹಾಸದ ಮೂಲಕ ತಿಳಿಯುತ್ತದೆ.
  • ಕಡಿಮೆ ವಿದೇಶಿ ಕರೆನ್ಸಿ ಮೌಲ್ಯದ ಸಾಲ ಮತ್ತು ವಿದೇಶೀ ವಿನಿಮಯ ಸಂಗ್ರಹಗಳಿಂದ ಭಾರತದ ಪಾವತಿಸುವ ಸಾಮರ್ಥ್ಯವನ್ನು ಅಳೆಯಬಹುದು
  • ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಬದಲಾವಣೆಗಳು ಸ್ಥೂಲ ಆರ್ಥಿಕ ಸೂಚಕಗಳೊಂದಿಗೆ ಯಾವುದೇ ಅಥವಾ ದುರ್ಬಲ ಸಂಬಂಧವನ್ನು ಹೊಂದಿಲ್ಲ
  • ಭಾರತದ ವಿತ್ತೀಯ ನೀತಿಯು ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರಭಯಮುಕ್ತ ಮನಸ್ಸುಎಂಬ ಭಾವನೆಯನ್ನು ಪ್ರತಿಬಿಂಬಿಸುತ್ತದೆ
  • ಸಾರ್ವಭೌಮ ಕ್ರೆಡಿಟ್ ರೇಟಿಂಗ್ ವಿಧಾನವನ್ನು ಹೆಚ್ಚು ಪಾರದರ್ಶಕವಾಗಿಸಬೇಕು, ಕಡಿಮೆ ವ್ಯಕ್ತಿನಿಷ್ಠವಾಗಿರಬೇಕು ಮತ್ತು ಆರ್ಥಿಕತೆಯ ಮೂಲಭೂತ ಅಂಶಗಳನ್ನು ಪ್ರತಿಬಿಂಬಿಸಲು ಉತ್ತಮವಾಗಿ ಹೊಂದಿಕೊಳ್ಳಬೇಕು.

ಅಸಮಾನತೆ ಮತ್ತು ಬೆಳವಣಿಗೆ: ಸಂಘರ್ಷ ಅಥವಾ ಸಮನ್ವಯ?

  • ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ-ಆರ್ಥಿಕ ಫಲಿತಾಂಶಗಳ ಅಸಮಾನತೆ ಮತ್ತು ಸಾಮಾಜಿಕ-ಆರ್ಥಿಕ ಫಲಿತಾಂಶಗಳ ನಡುವಿನ ಸಂಬಂಧವು ಭಾರತದಲ್ಲಿ ಮುಂದುವರಿದ ಆರ್ಥಿಕತೆಗಳಿಗಿಂತ ಭಿನ್ನವಾಗಿದೆ.
  • ಮುಂದುವರಿದ ಆರ್ಥಿಕತೆಗಳಿಗಿಂತ ಭಿನ್ನವಾಗಿ ಅಸಮಾನತೆ ಮತ್ತು ತಲಾ ಆದಾಯ (ಬೆಳವಣಿಗೆ) ಎರಡೂ ಭಾರತದಲ್ಲಿನ ಸಾಮಾಜಿಕ-ಆರ್ಥಿಕ ಸೂಚಕಗಳೊಂದಿಗೆ ಒಂದೇ ರೀತಿಯ ಸಂಬಂಧವನ್ನು ಹೊಂದಿವೆ.
  • ಆರ್ಥಿಕ ಬೆಳವಣಿಗೆಯು ಅಸಮಾನತೆಗಿಂತ ಬಡತನ ನಿವಾರಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ
  • ಭಾರತವು ಬಡವರನ್ನು ಬಡತನದಿಂದ ಮೇಲಕ್ಕೆತ್ತಲು ಆರ್ಥಿಕ ಬೆಳವಣಿಗೆಯತ್ತ ಗಮನ ಹರಿಸಬೇಕು
  • ಒಟ್ಟಾರೆಯಾಗಿ ಹಣಕಾಸು ವಿಸ್ತರಣೆ - ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಗಾತ್ರವು ಬೆಳೆದರೆ ಮಾತ್ರ ಆರ್ಥಿಕತೆಯಲ್ಲಿ ಮರುಹಂಚಿಕೆ ಸಾಧ್ಯ

ಆರೋಗ್ಯ ರಕ್ಷಣೆಗೆ ಪ್ರಾಮುಖ್ಯತೆ

  • ಕೋವಿಡ್-19 ಸಾಂಕ್ರಾಮಿಕವು ಆರೋಗ್ಯ ಕ್ಷೇತ್ರದ ಪ್ರಾಮುಖ್ಯತೆಯನ್ನು ಮತ್ತು ಇತರ ವಲಯಗಳೊಂದಿಗಿನ ಅದರ ಅಂತರ-ಸಂಬಂಧಗಳನ್ನು ಒತ್ತಿಹೇಳಿದೆ - ಆರೋಗ್ಯ ಬಿಕ್ಕಟ್ಟು ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಾಗಿ ಹೇಗೆ ರೂಪಾಂತರಗೊಂಡಿದೆ ಎಂಬುದನ್ನು ಇದು ತೋರಿಸುತ್ತದೆ
  • ಸಾಂಕ್ರಾಮಿಕ ರೋಗಗಳಿಗೆ ಪ್ರತಿಕ್ರಿಯಿಸಲು ಭಾರತದ ಆರೋಗ್ಯ ಮೂಲಸೌಕರ್ಯವು ಚುರುಕಾಗಿರಬೇಕು - ಆರೋಗ್ಯ ನೀತಿಯುನಿರ್ದಿಷ್ಟ ಪಕ್ಷಪಾತದಿಂದ ಕೂಡಿರಬಾರದು.
  • ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಸಮಾನತೆಯನ್ನು ತಗ್ಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ, ಏಕೆಂದರೆ ಬಡವರಿಗೆ ಪ್ರಸವಪೂರ್ವ/ಪ್ರಸವ ನಂತರದ ಆರೈಕೆ ಮತ್ತು ಆಸ್ಪತ್ರೆ ಹೆರಿಗೆಗಳಿಗೆ ಹೆಚ್ಚು ಗಮನ ಹರಿಸಿದೆ.
  • ಆಯುಷ್ಮಾನ್ ಭಾರತದ  ಜೊತೆಯಲ್ಲಿ ಎನ್ಎಚ್ಎಂಗೆ ಒತ್ತು ನೀಡಬೇಕು
  • ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಜಿಡಿಪಿಯ 1% ರಿಂದ 2.5-3% ಕ್ಕೆ ಹೆಚ್ಚಿಸುವುದರಿಂದ ಒಟ್ಟಾರೆ ಆರೋಗ್ಯ ವೆಚ್ಚವನ್ನು 65% ರಿಂದ 35% ಕ್ಕೆ ಇಳಿಸಬಹುದು
  • ಅಸಮರ್ಪಕ ಮಾಹಿತಿಯಿಂದ ಉಂಟಾಗುವ ಮಾರುಕಟ್ಟೆ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕ್ಷೇತ್ರಕ್ಕೆ ನಿಯಂತ್ರಕವನ್ನು ಪರಿಗಣಿಸಬೇಕು
  • ಅಸಮರ್ಪಕ ಮಾಹಿತಿಯನ್ನು ತಗ್ಗಿಸುವುದು, ವಿಮಾ ಕಂತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಉತ್ತಮ ಉತ್ಪನ್ನಗಳ ಕೊಡುಗೆಯನ್ನು ಶಕ್ತಗೊಳಿಸುತ್ತದೆ ಮತ್ತು ವಿಮೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ
  • ಆರೋಗ್ಯ ಕ್ಷೇತ್ರದಲ್ಲಿ ಅಸಮರ್ಪಕ ಮಾಹಿತಿಯನ್ನು ತಗ್ಗಿಸಲು ಸಹಾಯ ಮಾಡುವ ಮಾಹಿತಿ ಉಪಯುಕ್ತತೆಗಳು ಒಟ್ಟಾರೆ ಕಲ್ಯಾಣವನ್ನು ಹೆಚ್ಚಿಸಲು ಉಪಯುಕ್ತವಾಗುತ್ತವೆ
  • ಇಂಟರ್ನೆಟ್ ಸಂಪರ್ಕ ಮತ್ತು ಆರೋಗ್ಯ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಟೆಲಿಮೆಡಿಸಿನ್ ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು.

ಪ್ರಕ್ರಿಯೆ ಸುಧಾರಣೆಗಳು

  • ಭಾರತವು ಆರ್ಥಿಕತೆಯನ್ನು ಅತಿಯಾಗಿ ನಿಯಂತ್ರಿಸುತ್ತದೆ, ಇದರ ಪರಿಣಾಮವಾಗಿ ನಿಯಮಗಳು ನಿಷ್ಪರಿಣಾಮಕಾರಿಯಾಗುತ್ತವೆ.
  • ಅತಿನಿಯಂತ್ರಣ ಸಮಸ್ಯೆಯ ಮೂಲ ಕಾರಣವೆಂದರೆ ಸಾಧ್ಯವಿರುವ ಪ್ರತಿಯೊಂದು ಫಲಿತಾಂಶಕ್ಕೂ ಪ್ರಯತ್ನಿಸುವುದು
  • ವಿವೇಚನೆಯನ್ನು ಕಡಿಮೆ ಮಾಡಲು ಉದ್ದೇಶಿಸಿರುವ ನಿಯಮಗಳ ಸಂಕೀರ್ಣತೆಯ ಹೆಚ್ಚಳ, ಅಪಾರದರ್ಶಕತೆಗೆ ಕಾರಣವಾಗುತ್ತದೆ
  • ನಿಯಮಗಳನ್ನು ಸರಳೀಕರಿಸುವುದು ಮತ್ತು ಹೆಚ್ಚಿನ ಮೇಲ್ವಿಚಾರಣೆಯಲ್ಲಿ ಹೂಡಿಕೆ ಮಾಡುವುದು ಪರಿಹಾರವಾಗಿದೆ.
  • ಆದಾಗ್ಯೂ, ವಿವೇಚನೆಯು ಪಾರದರ್ಶಕತೆಯೊಂದಿಗೆ ಸಮತೋಲನ ಹೊಂದಬೇಕು.
  • ಮೇಲಿನ ಬೌದ್ಧಿಕ ಚೌಕಟ್ಟು ಕಾರ್ಮಿಕ ಸಂಹಿತೆಗಳಿಂದ, ಬಿಪಿಓ ವಲಯದ ಮೇಲೆ ಕಠಿಣವಾದ ನಿಯಮಗಳನ್ನು ತೆಗೆದುಹಾಕುವವರೆಗಿನ ಸುಧಾರಣೆಗಳನ್ನು ಈಗಾಗಲೇ ತಿಳಿಸಿದೆ.

ನಿಯಂತ್ರಕ ಸಡಿಲಿಕೆ ತುರ್ತು ಔಷಧಿಯೇ ಹೊರತು, ಅದೇ ಪ್ರಧಾನ ಆಹಾರವಲ್ಲ!

  • ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ, ನಿಯಂತ್ರಕ ಸಡಿಲಿಕೆಯು ಸಾಲಗಾರರಿಗೆ ತಾತ್ಕಾಲಿಕ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಿತು
  • ಆರ್ಥಿಕ ಚೇತರಿಕೆಯ ನಂತರವೂ ಸಡಿಲಿಕೆ ಮುಂದುವರೆದರೆ, ಆರ್ಥಿಕತೆಯ ಮೇಲೆ ಅನಪೇಕ್ಷಿತ ಪರಿಣಾಮಗಳು ಉಂಟಾಗುತ್ತವೆ.
  • ಬ್ಯಾಂಕುಗಳು ಎಲ್ಲವೂ ಸರಿಯಾಗಿದೆ ಎಂದು ತೋರಿಸಲು ಹಾಗೂ ಸಾಲದ ತಪ್ಪು ಹಂಚಿಕೆಯನ್ನು ಮುಚ್ಚಿಡಲು ಸಡಿಲಿಕೆಯ ಅವಕಾಶವನ್ನು ಬಳಸಿಕೊಳ್ಳುತ್ತವೆ. ಇದರಿಂದಾಗಿ ಆರ್ಥಿಕತೆಯ ಹೂಡಿಕೆಯ ಗುಣಮಟ್ಟಕ್ಕೆ ಹಾನಿಯಾಗುತ್ತದೆ
  • ಸಡಿಲಿಕೆಯು ತುರ್ತು ಔಷಧಿಯನ್ನು ಪ್ರತಿನಿಧಿಸುತ್ತದೆ, ಅದನ್ನು ಆರ್ಥಿಕತೆ ಚೇತರಿಕೆಯ ಮೊದಲ ಸೂಚನೆಯಲ್ಲಿಯೇ ನಿಲ್ಲಿಸಬೇಕು, ಆದರೆ ಇದು ಹಲವು ವರ್ಷಗಳವರೆಗೆ ಮುಂದುವರೆಯುವ ಪ್ರಮುಖ ಆಹಾರವಾಗಬಾರದು.
  • ಸಡಿಲಿಕೆಯನ್ನು ಹಿಂತೆಗೆದುಕೊಂಡ ತಕ್ಷಣ ಆಸ್ತಿ ಗುಣಮಟ್ಟ ಪರಿಶೀಲನೆ ನಡೆಸಬೇಕು
  • ಸಾಲ ಮರುಪಾವತಿಯ ಕಾನೂನು ಮೂಲಸೌಕರ್ಯವನ್ನು ಬಲಪಡಿಸಬೇಕು.

ನಾವೀನ್ಯತೆ: ಏರುಗತಿಯಲ್ಲಿದೆ, ಆದರೂ ಇನ್ನೂ ಹೆಚ್ಚಿನ ಗಮನದ ಅವಶ್ಯಕತೆ ಇದೆ

  • 2007 ರಲ್ಲಿ ಜಾಗತಿಕ ನಾವೀನ್ಯತೆ ಸೂಚ್ಯಂಕವನ್ನು ಪ್ರಾರಂಭಿಸಿದ ನಂತರ ಭಾರತವು 2020 ರಲ್ಲಿ ಮೊದಲ ಬಾರಿಗೆ ಅಗ್ರ-50 ದೇಶಗಳಲ್ಲಿ ಸ್ಥಾನ ಪಡೆದಿದೆ. ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಪ್ರಥಮ ಸ್ಥಾನ ಮತ್ತು ಮಧ್ಯಮ-ಆದಾಯದ ಆರ್ಥಿಕತೆಗಳಲ್ಲಿ ಮೂರನೇ ಸ್ಥಾನ ಪಡೆದಿದೆ.
  • ಸಂಶೋಧನೆ ಮತ್ತು ಅಭಿವೃದ್ಧಿ  (ಜಿಇಆರ್ಡಿ) ಮೇಲಿನ ಭಾರತದ ಒಟ್ಟು ದೇಶೀಯ ವೆಚ್ಚ  ಅಗ್ರ ಹತ್ತು ಆರ್ಥಿಕತೆಗಳಲ್ಲಿ ಕಡಿಮೆ ಇದೆ.
  • ನಾವೀನ್ಯತೆಯಲ್ಲಿ ಅಗ್ರ ಹತ್ತು ಆರ್ಥಿಕತೆಗಳೊಂದಿಗೆ ಸ್ಪರ್ಧಿಸುವುದು ಭಾರತದ ಆಕಾಂಕ್ಷೆಯಾಗಬೇಕು
  • ಸರ್ಕಾರಿ ವಲಯವು ಒಟ್ಟು ಜಿಇಆರ್ಡಿಯಲ್ಲಿ ಅಗ್ರ ಹತ್ತು ಆರ್ಥಿಕತೆಗಳ ಸರಾಸರಿಗಿಂತ ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತದೆ
  • ಹತ್ತು ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ, ಒಟ್ಟು ಆರ್ & ಡಿ ಸಿಬ್ಬಂದಿ ಮತ್ತು ಸಂಶೋಧಕರಿಗೆ ವ್ಯಾಪಾರ ಕ್ಷೇತ್ರದ ಜಿಇಆರ್ಡಿ ಕೊಡುಗೆ ಅತ್ಯಂತ ಕಡಿಮೆ
  • ನಾವೀನ್ಯತೆ ಮತ್ತು ಈಕ್ವಿಟಿ ಕ್ಯಾಪಿಟಲ್ಗೆ ಹೆಚ್ಚಿನ ತೆರಿಗೆ ಪ್ರೋತ್ಸಾಹದ ಹೊರತಾಗಿಯೂ ಪರಿಸ್ಥಿತಿ ಇದೆ.
  • ಭಾರತದ ವ್ಯಾಪಾರ ಕ್ಷೇತ್ರವು ಆರ್ & ಡಿ ಹೂಡಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ಅಗತ್ಯವಿದೆ.
  • ದೇಶದಲ್ಲಿ ಸಲ್ಲಿಸಲಾದ ಒಟ್ಟು ಪೇಟೆಂಟ್ಗಳಲ್ಲಿ ಭಾರತೀಯ ನಿವಾಸಿಗಳ ಪಾಲು ಪ್ರಸ್ತುತ ಶೇ.36 ಆಗಿದ್ದು, ಇದು ಹತ್ತು ಪ್ರಮುಖ ಆರ್ಥಿಕತೆಗಳಲ್ಲಿ ಸರಾಸರಿ 62% ಕ್ಕಿಂತ ಕಡಿಮೆಯಾಗಿದೆ ಹಾಗೂ ಇದು ಹೆಚ್ಚಾಗಬೇಕು.  
  • ನಾವೀನ್ಯತೆ ಉತ್ಪಾದನೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ಸಾಧಿಸಲು, ಸಂಸ್ಥೆಗಳು ಮತ್ತು ವ್ಯವಹಾರ ಅತ್ಯಾಧುನಿಕ ನಾವೀನ್ಯತೆ ಒಳಹರಿವುಗಳ ಕಾರ್ಯಕ್ಷಮತೆಯನ್ನು ಸುಧಾರಿಸುವತ್ತ ಗಮನ ಹರಿಸಬೇಕು.

ಜೈ ಹೋ! ಪಿ ಎಂ- ಜೆಎವೈ ಅನುಷ್ಠಾನ ಮತ್ತು ಆರೋಗ್ಯದ ಫಲಿತಾಂಶಗಳು

  • ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) - ಅತ್ಯಂತ ದುರ್ಬಲ ವರ್ಗಗಳಿಗೆ ಆರೋಗ್ಯ ಸೇವೆ ಒದಗಿಸಲು ಭಾರತ ಸರ್ಕಾರ 2018 ರಲ್ಲಿ ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇದು ಅಲ್ಪಾವಧಿಯಲ್ಲಿ ಆರೋಗ್ಯ ಫಲಿತಾಂಶಗಳ ಮೇಲೆ ಬಲವಾದ ಸಕಾರಾತ್ಮಕ ಪರಿಣಾಮಗಳನ್ನು ತೋರಿಸಿದೆ
  • ಪಿಎಂ-ಜೆಎವೈ ಅನ್ನು ಹೆಚ್ಚು ಬಾರಿ ಡಯಾಲಿಸಿಸ್ನಂತಹ ಕಡಿಮೆ ವೆಚ್ಚದ ಆರೈಕೆಗಾಗಿ ಗಮನಾರ್ಹವಾಗಿ ಬಳಸಲಾಗುತ್ತಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ಡೌನ್ ಸಮಯದಲ್ಲಿ ಹೆಚ್ಚು ಬಳಸಲಾಗಿದೆ.
  • ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಹೆಚ್ಎಸ್) -4 (2015-16) ಮತ್ತು ಎನ್ಎಫ್ಹೆಚ್ಎಸ್ -5 (2019-20) ಆಧಾರಿತ ವ್ಯತ್ಯಾಸದ ವಿಶ್ಲೇಷಣೆಯಲ್ಲಿ ಆರೋಗ್ಯ ಫಲಿತಾಂಶಗಳ ಮೇಲೆ ಪಿಎಂ-ಜೆಎವೈ ಪರಿಣಾಮಗಳು ಹೀಗಿವೆ:
  • ಆರೋಗ್ಯ ವಿಮೆ ವ್ಯಾಪ್ತಿಯ ಹೆಚ್ಚಳ: ಬಿಹಾರ, ಅಸ್ಸಾಂ ಮತ್ತು ಸಿಕ್ಕಿಂನಲ್ಲಿ 2015-16 ರಿಂದ 2019-20ರವರೆಗೆ ಆರೋಗ್ಯ ವಿಮೆಯನ್ನು ಹೊಂದಿರುವ ಕುಟುಂಬಗಳ ಪ್ರಮಾಣವು 89% ರಷ್ಟು ಹೆಚ್ಚಾಗಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ ಇದೇ ಅವಧಿಯಲ್ಲಿ 12% ರಷ್ಟು ಕಡಿಮೆಯಾಗಿದೆ
  • ಶಿಶು ಮರಣ ಪ್ರಮಾಣದಲ್ಲಿನ ಕುಸಿತ: 2015-16 ರಿಂದ 2019-20ರವರೆಗೆ, ಶಿಶು ಮರಣ ಪ್ರಮಾಣ ಪಶ್ಚಿಮ ಬಂಗಾಳದಲ್ಲಿ 20% ಮತ್ತು ಮೂರು ನೆರೆಯ ರಾಜ್ಯಗಳಲ್ಲಿ 28% ರಷ್ಟು ಕಡಿಮೆಯಾಗಿದೆ
  • 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಕುಸಿತ: ಪಶ್ಚಿಮ ಬಂಗಾಳದಲ್ಲಿ 20% ನಷ್ಟು ಕುಸಿತ ಕಂಡರೆ, ನೆರೆಹೊರೆಯ ರಾಜ್ಯಗಳಲ್ಲಿ 27% ರಷ್ಟು ಇಳಿಕೆ ಕಂಡಿದೆ
  • ಗರ್ಭನಿರೋಧಕ, ಸ್ತ್ರೀಯರ ಸಂತಾನಹರಣ ಕ್ರಮಗಳು ಮತ್ತು ಮಾತ್ರೆ ಬಳಕೆಯ ಆಧುನಿಕ ವಿಧಾನಗಳು ಮೂರು ನೆರೆಯ ರಾಜ್ಯಗಳಲ್ಲಿ ಕ್ರಮವಾಗಿ 36%, 22% ಮತ್ತು 28% ರಷ್ಟು ಏರಿಕೆಯಾಗಿದೆ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ ಬದಲಾವಣೆಗಳು ತೀರಾ ಕಡಿಮೆ ಇವೆ
  • ಪಶ್ಚಿಮ ಬಂಗಾಳವು ಮಕ್ಕಳ ನಡುವಿನ ಅಂತರದ ಅಗತ್ಯತೆಯ ಗಮನಾರ್ಹ ಕುಸಿತವನ್ನು ಕಂಡಿಲ್ಲವಾದರೂ, ನೆರೆಯ ಮೂರು ರಾಜ್ಯಗಳು 37% ಕುಸಿತವನ್ನು ದಾಖಲಿಸಿವೆ
  • ಪಶ್ಚಿಮ ಬಂಗಾಳಕ್ಕಿಂತ ಮೂರು ನೆರೆಯ ರಾಜ್ಯಗಳಲ್ಲಿ ತಾಯಿ ಮತ್ತು ಮಕ್ಕಳ ಆರೈಕೆಗಾಗಿ ವಿವಿಧ ಮಾಪನಗಳು ಹೆಚ್ಚು ಸುಧಾರಿಸಿದೆ.
  • ಪಿಎಂ-ಜೆಎವೈ ಅನ್ನು ಜಾರಿಗೆ ತಂದ ಎಲ್ಲಾ ರಾಜ್ಯಗಳು ಹಾಗೂ ಅನುಷ್ಠಾನ ಮಾಡದ ರಾಜ್ಯಗಳಿಗೆ ಹೋಲಿಸಿದಾಗ ಪ್ರತಿಯೊಂದು ಆರೋಗ್ಯ ಪರಿಣಾಮಗಳಲ್ಲಿ ವ್ಯತ್ಯಾಸಗಳು ಇದೇ ರೀತಿ ವ್ಯಕ್ತವಾಗುತ್ತವೆ
  • ಒಟ್ಟಾರೆಯಾಗಿ, ಹೋಲಿಕೆಯು ಪಿಎಂ-ಜೆಎವೈ ಅನ್ನು ಜಾರಿಗೆ ತಂದ ರಾಜ್ಯಗಳಲ್ಲಿ ಹಲವಾರು ಆರೋಗ್ಯ ಫಲಿತಾಂಶಗಳಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ.

ಅತ್ಯಗತ್ಯ ಅವಶ್ಯಕತೆಗಳು

  • 2012 ಕ್ಕೆ ಹೋಲಿಸಿದರೆ 2018 ರಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿಅತ್ಯಗತ್ಯ ಅವಶ್ಯಕತೆಗಳಲಭ್ಯತೆ ಸುಧಾರಿಸಿದೆ
  • ಕೇರಳ, ಪಂಜಾಬ್, ಹರಿಯಾಣ ಮತ್ತು ಗುಜರಾತ್ನಂತಹ ರಾಜ್ಯಗಳಲ್ಲಿ ಇದು ಅತಿ ಹೆಚ್ಚು ಮತ್ತು ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ಅತಿ ಕಡಿಮೆ ಇದೆ
  • ನೀರಿನ ಲಭ್ಯತೆ, ವಸತಿ, ನೈರ್ಮಲ್ಯ, ಸೂಕ್ಷ್ಮ ಪರಿಸರ ಮತ್ತು ಇತರ ಸೌಲಭ್ಯಗಳ ಐದು ಆಯಾಮಗಳಲ್ಲಿ ಸುಧಾರಣೆಯಾಗಿದೆ
  • ಹಿಂದುಳಿದ ರಾಜ್ಯಗಳು 2012 ಮತ್ತು 2018 ನಡುವೆ ತುಲನಾತ್ಮಕವಾಗಿ ಹೆಚ್ಚು ಗಳಿಸಿದ್ದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಂತರ-ರಾಜ್ಯ ಅಸಮಾನತೆಗಳು ಕಡಿಮೆಯಾಗಿದೆ
  • ಗ್ರಾಮೀಣ ಮತ್ತು ನಗರ ಪ್ರದೇಶಗಳ ಶ್ರೀಮಂತ ಕುಟುಂಬಗಳಿಗೆ ಹೋಲಿಸಿದರೆ ಬಡ ಕುಟುಂಬಗಳಲ್ಲಿ ಹೆಚ್ಚು ಸುಧಾರಣೆ ಕಂಡಿದೆ
  •  ‘ಅತ್ಯಗತ್ಯ ಅವಶ್ಯಕತೆಗಳಿಗೆಸುಧಾರಿತ ಲಭ್ಯತೆಯು ಶಿಶು ಮರಣ ಮತ್ತು 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣಗಳಂತಹ ಆರೋಗ್ಯ ಸೂಚಕಗಳ ಸುಧಾರಣೆಗೆ ಕಾರಣವಾಗಿದೆ ಮತ್ತು ಶಿಕ್ಷಣ ಸೂಚಕಗಳಲ್ಲಿನ ಭವಿಷ್ಯದ ಸುಧಾರಣೆಗಳೊಂದಿಗೆ ಸಹ ಸಂಬಂಧ ಹೊಂದಿದೆ
  • ರಾಜ್ಯಗಳಾದ್ಯಂತ, ಗ್ರಾಮೀಣ ಮತ್ತು ನಗರಗಳ ನಡುವೆ ಮತ್ತು ಆದಾಯ ಗುಂಪುಗಳ ನಡುವೆ ಅತ್ಯಗತ್ಯ ಅವಶ್ಯಕತೆಗಳ ಲಭ್ಯತೆಯಲ್ಲಿನ ವ್ಯತ್ಯಾಸವನ್ನು ಕಡಿಮೆ ಮಾಡಲು ಹೆಚ್ಚು ಒತ್ತು ನೀಡಬೇಕು
  • ಜಲ ಜೀವನ್ ಮಿಷನ್, ಎಸ್ಬಿಎಂ-ಜಿ, ಪಿಎಂಎವೈ-ಜಿ ಮುಂತಾದ ಯೋಜನೆಗಳು ಅಂತರವನ್ನು ಕಡಿಮೆ ಮಾಡಲು ಸೂಕ್ತ ತಂತ್ರವನ್ನು ರೂಪಿಸಬಹುದು
  • ಅತ್ಯಗತ್ಯ ಅವಶ್ಯಕತೆಗಳ ಲಭ್ಯತೆಯ ಪ್ರಗತಿಯನ್ನು ನಿರ್ಣಯಿಸಲು ಎಲ್ಲಾ / ಉದ್ದೇಶಿತ ಜಿಲ್ಲೆಗಳಿಗೆ ಜಿಲ್ಲಾ ಮಟ್ಟದಲ್ಲಿ ಸೂಕ್ತವಾದ ಸೂಚಕಗಳು ಮತ್ತು ವಿಧಾನವನ್ನು ಬಳಸಿಕೊಂಡು ಬೃಹತ್ ವಾರ್ಷಿಕ ಮನೆ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿದ ಅತ್ಯಗತ್ಯ ಅವಶ್ಯಕತೆಗಳ  ಸೂಚ್ಯಂಕವನ್ನು (ಬಿಎನ್) ನಿರ್ಮಿಸಬಹುದು.

ವಿತ್ತೀಯ ಬೆಳವಣಿಗೆಗಳು

  • ಭಾರತವು ಕೋವಿಡ್-19 ಸಾಂಕ್ರಾಮಿಕದ ಪರಿಣಾಮದಿಂದ ತನ್ನ ಆರ್ಥಿಕತೆಯು  ಚೇತರಿಸಿಕೊಳ್ಳಲು ಸೂಕ್ತವಾದ ಸಮತೂಕದ ವಿಧಾನವನ್ನು ಅಳವಡಿಸಿಕೊಂಡಿದೆ, ಇದಕ್ಕೆ ವಿರುದ್ಧವಾಗಿ ಅನೇಕ ದೇಶಗಳು ದಿಢೀರ್ ಉತ್ತೇಜನಾ ಪ್ಯಾಕೇಜ್ ಗಳನ್ನು ಅಳವಡಿಸಿಕೊಂಡವು
  • 2020-21 ವೆಚ್ಚ ನೀತಿಯು ಆರಂಭದಲ್ಲಿ ದುರ್ಬಲ ವರ್ಗಗಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿತ್ತು. ಆದರೆ ಲಾಕ್ಡೌನ್ ತೆರವಿನ ನಂತರ ಒಟ್ಟಾರೆ ಬೇಡಿಕೆ ಮತ್ತು ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಮರು-ಹೊಂದಿಸಲಾಯಿತು
  • ಮಾಸಿಕ ಜಿಎಸ್ಟಿ ಸಂಗ್ರಹವು ಕಳೆದ 3 ತಿಂಗಳುಗಳಿಂದ ಸತತವಾಗಿ 1 ಲಕ್ಷ ಕೋಟಿ ರೂ. ದಾಟುತ್ತಿದೆ. ಜಿಎಸ್ಟಿ ಜಾರಿಗೆ ಬಂದಾಗಿನಿಂದ 2020 ಡಿಸೆಂಬರ್ನಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ
  • ತೆರಿಗೆ ವ್ಯಸವ್ಥೆಯ ಸುಧಾರಣೆಗಳು ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ ಮತ್ತು ಪ್ರಾಮಾಣಿಕವಾಗಿ ತೆರಿಗೆ-ಪಾವತಿಸುವವರನ್ನು ಪ್ರೋತ್ಸಾಹಿಸುವ ಮೂಲಕ ತೆರಿಗೆ ಅನುಸರಣೆಯನ್ನು ಉತ್ತೇಜಿಸಿವೆ.
  • ಸಾಂಕ್ರಾಮಿಕ ರೋಗದ ಸವಾಲಿನ ಸಂದರ್ಭದಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಸತತ ಕ್ರಮಗಳನ್ನು ಕೈಗೊಂಡಿದೆ

ಬಾಹ್ಯ ವಲಯ

  • ಕೋವಿಡ್-19 ಸಾಂಕ್ರಾಮಿಕವು ಜಾಗತಿಕ ವ್ಯಾಪಾರದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಯಿತು, ಸರಕುಗಳ ಕಡಿಮೆ ಬೆಲೆಗಳು ಮತ್ತು ಕಠಿಣವಾದ ಬಾಹ್ಯ ಹಣಕಾಸು ಪರಿಸ್ಥಿತಿಗಳು ಚಾಲ್ತಿ ಖಾತೆ ಬಾಕಿ ಮತ್ತು ವಿವಿಧ ದೇಶಗಳ ಕರೆನ್ಸಿಗಳ ಮೇಲೆ ಪರಿಣಾಮ ಬೀರಿತು
  • ಭಾರತದ ವಿದೇಶೀ ವಿನಿಮಯ ಸಂಗ್ರಹವು ಜನವರಿ 21, 2021 ರಂತೆ ಸಾರ್ವಕಾಲಿಕ ಗರಿಷ್ಠ 586.1 ಬಿಲಿಯನ್ ಡಾಲರ್ಗಳಷ್ಟಿದ್ದು, ಸುಮಾರು 18 ತಿಂಗಳ ಮೌಲ್ಯದ ಆಮದುಗಳನ್ನು ಒಳಗೊಂಡಿದೆ
  • ಭಾರತವು ಚಾಲ್ತಿ ಖಾತೆ ಹೆಚ್ಚುವರಿ ಹೊಂದಿದೆ ಮತ್ತು ದೃಢವಾದ ಬಂಡವಾಳದ ಒಳಹರಿವು 2019-20 ನೇ ಆರ್ಥಿಕ ವರ್ಷದ 4 ನೇ ತ್ರೈಮಾಸಿಕದಿಂದ BoP ಹೆಚ್ಚುವರಿಗೆ ಕಾರಣವಾಗಿದೆ
  • ದೃಢವಾದ ಎಫ್ಡಿಐ ಮತ್ತು ಎಫ್ಪಿಐ ಒಳಹರಿವಿನಿಂದ ಬಂಡವಾಳ ಖಾತೆಗೆ ಬಲ ಬಂದಿದೆ
  • 2020 ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ನಿವ್ವಳ ಎಫ್ಪಿಐ 27.5 ಬಿಲಿಯನ್ ಡಾಲರ್ ಒಳಹರಿವು: 2019-20ನೇ ಆರ್ಥಿಕ ವರ್ಷದ ಮೊದಲ ಏಳು ತಿಂಗಳುಗಳಿಗೆ ಹೋಲಿಸಿದರೆ 14.8% ಹೆಚ್ಚಾಗಿದೆ
  • 2020 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ನಿವ್ವಳ ಎಫ್ಪಿಐ 28.5 ಬಿಲಿಯನ್ ಡಾಲರ್ ಒಳಹರಿವು ಕಳೆದ ವರ್ಷದ ಇದೇ ಅವಧಿಯಲ್ಲಿ 12.3 ಬಿಲಿಯನ್ ಡಾಲರ್ ಆಗಿತ್ತು
  • 2021ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ, ಸರಕುಗಳ ಆಮದುಗಳಲ್ಲಿ ತೀ್ರ ಕುಸಿತ ಮತ್ತು ಹೊರಹೋಗುವ ಪ್ರಯಾಣ ಸೇವೆಗಳಲ್ಲಿ ಕುಸಿತದಿಂದಾಗಿ:
  • ಕರೆಂಟ್ ಪೇಮೆಂಟ್ ಗಳಿಗಿಂತ (15.1%) ಕರೆಂಟ್ ರಿಸೀಪ್ಟ್ ಗಳಲ್ಲಿ (30.8% ರಷ್ಟು) ತೀವ್ರ ಕುಸಿತ
  • ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ 34.7 ಬಿಲಿಯನ್ ಡಾಲರ್ (ಜಿಡಿಪಿಯ 3.1%) 
  • ಭಾರತವು 17 ವರ್ಷಗಳ ನಂತರ ವಾರ್ಷಿಕ ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ಹೊಂದಿದೆ.
  • ಭಾರತದ ಸರಕುಗಳ ವ್ಯಾಪಾರ ಕೊರತೆ 2020 ಏಪ್ರಿಲ್-ಡಿಸೆಂಬರ್ ತಿಂಗಳಲ್ಲಿ 57.5 ಬಿಲಿಯನ್ ಡಾಲರ್ಗೆ ಕುಸಿಯಿತು, ಕಳೆದ ವರ್ಷ ಇದೇ ಅವಧಿಯಲ್ಲಿ 125.9 ಬಿಲಿಯನ್ ಡಾಲರ್ ಇತ್ತು
  • 2020 ಏಪ್ರಿಲ್-ಡಿಸೆಂಬರ್ ನಲ್ಲಿ, ಸರಕು ರಫ್ತು 15.7% ಇಳಿಕೆಯೊಂದಿಗೆ 200.8 ಬಿಲಿಯನ್ ಡಾಲರ್ಗೆ ಕುಸಿಯಿತು. ಇದು 2019 ಏಪ್ರಿಲ್-ಡಿಸೆಂಬರ್ನಲ್ಲಿ 238.3 ಬಿಲಿಯನ್ಡಾಲರ್ ಇತ್ತು
  • ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕಂಟ್ಸ್ (ಪಿಒಎಲ್) ರಫ್ತುಗಳು ರಫ್ತು ಕಾರ್ಯಕ್ಷಮತೆಗೆ ನಕಾರಾತ್ಮಕ ಕೊಡುಗೆ ನೀಡಿವೆ
  • ಪಿಒಎಲ್ ಅಲ್ಲದ ರಫ್ತು ಸಕಾರಾತ್ಮಕವಾಗಿತ್ತು ಮತ್ತು 2020-21 3 ನೇ ತ್ರೈಮಾಸಿಕದಲ್ಲಿ ರಫ್ತು ಕಾರ್ಯಕ್ಷಮತೆ ಸುಧಾರಿಸಲು ಸಹಾಯ ಮಾಡಿತು
  • ಪಿಒಎಲ್ ಅಲ್ಲದ ರಫ್ತುಗಳಲ್ಲಿ, ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳು, ಔಷಧಗಳು ಮತ್ತು ಅದಿರು ಮತ್ತು ಖನಿಜಗಳು ಹೆಚ್ಚಳವನ್ನು ದಾಖಲಿಸಿವೆ
  • 2020 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಒಟ್ಟು ಸರಕುಗಳ ಆಮದು (-) 29.1% ರಷ್ಟು ಇಳಿದು 258.3 ಬಿಲಿಯನ್ ಡಾಲರ್ಗಳಿಗೆ ಇಳಿದಿದೆ: ಕಳೆದ ವರ್ಷದ ಇದೇ ಅವಧಿಯಲ್ಲಿ ಆಮದು 364.2 ಬಿಲಿಯನ್ ಡಾಲರ್ಇತ್ತು.
  • ಪಿಒಎಲ್ ಆಮದಿನ ತೀವ್ರ ಕುಸಿತದಿಂದಾಗಿ ಒಟ್ಟಾರೆ ಆಮದು ಬೆಳವಣಿಗೆಯು ಕುಸಿಯಿತು
  • 2020-21 ಮೊದಲ ತ್ರೈಮಾಸಿಕದಲ್ಲಿ ಆಮದು ತೀವ್ರವಾಗಿ ಇಳಿಕೆಯಾಯಿತು; ಚಿನ್ನ ಮತ್ತು ಬೆಳ್ಳಿ ಆಮದಿನ ಸಕಾರಾತ್ಮಕ ಬೆಳವಣಿಗೆ ಮತ್ತು ಪಿಒಎಲ್ ಅಲ್ಲದ, ಚಿನ್ನವಲ್ಲದ ಮತ್ತು ಬೆಳ್ಳಿಯಲ್ಲದ ಆಮದುಗಳಲ್ಲಿನ ಕುಸಿತವು ಕಡಿಮೆಯಾಗಿದ್ದರಿಂದ ನಂತರದ ತ್ರೈಮಾಸಿಕಗಳಲ್ಲಿ ಕುಸಿತದವೇಗ ಕಡಿಮೆಯಾಗಿದೆ.
  • ರಸಗೊಬ್ಬರಗಳು, ಸಸ್ಯಜನ್ಯ ಎಣ್ಣೆ, ಔಷಧಗಳು ಮತ್ತು ಕಂಪ್ಯೂಟರ್ ಯಂತ್ರಾಂಶ ಮತ್ತು ಪೆರಿಫೆರಲ್ಗಳು ಪಿಒಎಲ್ ಅಲ್ಲದ, ಚಿನ್ನವಲ್ಲದ ಮತ್ತು ಬೆಳ್ಳಿಯಲ್ಲದ ಆಮದಿನ ಬೆಳವಣಿಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಿವೆ
  • ಆಮದು ನಿಧಾನವಾಗುತ್ತಿದ್ದಂತೆ ಚೀನಾ ಮತ್ತು ಅಮೆರಿಕಾ ಜೊತೆಗಿನ ವ್ಯಾಪಾರ ಸಮತೋಲನ ಸುಧಾರಿಸಿತು
  • ಏಪ್ರಿಲ್-ಸೆಪ್ಟೆಂಬರ್ 2020 ರಲ್ಲಿ ನಿವ್ವಳ ಸೇವೆಗಳ ರಶೀದಿಗಳು ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿದ್ದ 40.5 ಬಿಲಿಯನ್ ಯುಎಸ್ ಡಾಲರ್ಗಳಿಗೆ ಹೋಲಿಸಿದರೆ, 41.7 ಬಿಲಿಯನ್ ಡಾಲರ್ಗಳಷ್ಟು ಸ್ಥಿರವಾಗಿ ಉಳಿದಿವೆ.
  • ಸೇವಾ ವಲಯವು ಮುಖ್ಯವಾಗಿ ಸಾಫ್ಟ್ವೇರ್ ಸೇವೆಗಳನ್ನು ಅವಲಂಬಿಸಿದೆ. ಇದು ಒಟ್ಟು ಸೇವೆಗಳ ರಫ್ತಿನ 49% ನಷ್ಟಿದೆ
  • ನಿವ್ವಳ ಖಾಸಗಿ ವರ್ಗಾವಣೆ ರಶೀದಿಗಳು, ಮುಖ್ಯವಾಗಿ ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯರ ಹಣ ರವಾನೆ, 2021ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಒಟ್ಟು 35.8 ಬಿಲಿಯನ್ ಡಾಲರ್. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 6.7% ರಷ್ಟು ಕಡಿಮೆಯಾಗಿದೆ
  • 2020 ಸೆಪ್ಟೆಂಬರ್ ಅಂತ್ಯದ ವೇಳೆಗೆ, ಭಾರತದ ಬಾಹ್ಯ ಸಾಲ 556.2 ಬಿಲಿಯನ್ ಡಾಲರ್ ಆಗಿದೆ. ಇದು ಮಾರ್ಚ್ 2020 ಅಂತ್ಯಕ್ಕೆ ಹೋಲಿಸಿದರೆ 2.0 ಬಿಲಿಯನ್ ಡಾಲರ್ (0.4%) ನಷ್ಟು ಕಡಿಮೆಯಾಗಿದೆ.
  • ಸಾಲ ಅಪಾಯದ ಸೂಚಕಗಳಲ್ಲಿ ಸುಧಾರಣೆ:
  • ವಿದೇಶೀ ವಿನಿಮಯ ಸಂಗ್ರಹ ಅನುಪಾತ ಒಟ್ಟು ಮತ್ತು ಅಲ್ಪಾವಧಿಯ ಸಾಲಕ್ಕೆ (ಮೂಲ ಮತ್ತು ಉಳಿಕೆ)
  • ಅಲ್ಪಾವಧಿಯ ಸಾಲದ ಅನುಪಾತ (ಮೂಲ ಮುಕ್ತಾಯ) ಒಟ್ಟು ಬಾಹ್ಯ ಸಾಲಕ್ಕೆ.
  • ಸಾಲ ಸೇವಾ ಅನುಪಾತ (ಪ್ರಧಾನ ಮರುಪಾವತಿ ಮತ್ತು ಬಡ್ಡಿ ಪಾವತಿ) 2020 ಸೆಪ್ಟೆಂಬರ್ ಅಂತ್ಯದ ವೇಳೆಗೆ 9.7% ಗೆ ಏರಿದೆ, ಇದು 2020 ಮಾರ್ಚ್ ಅಂತ್ಯದ ವೇಳೆಗೆ 6.5% ಇತ್ತು.
  • ರೂಪಾಯಿ ಮೌಲ್ಯ ಹೆಚ್ಚಳ/ಕುಸಿತ:
  • 6-ಕರೆನ್ಸಿ ಪರಿಣಾಮಕಾರಿ ವಿನಿಮಯ ದರ (ಎನ್ಇಇಆರ್) ಪ್ರಕಾರ, 2020 ಡಿಸೆಂಬರ್ನಲ್ಲಿ ರೂಪಾಯಿ ಮೌಲ್ಯವು ಮಾರ್ಚ್ 2020 ಕ್ಕೆ ಹೋಲಿಸಿದರೆ 4.1% ರಷ್ಟು ಕುಸಿದಿದೆ; ನೈಜ ಪರಿಣಾಮಕಾರಿ ವಿನಿಮಯ ದರವು 2.9% ರಷ್ಟು ಹೆಚ್ಚಳ ಕಂಡಿದೆ
  • 36-ಕರೆನ್ಸಿ ಪರಿಣಾಮಕಾರಿ ವಿನಿಮಯ ದರ (ವ್ಯಾಪಾರ ಆಧಾರಿತ) ಪ್ರಕಾರ, 2020 ಡಿಸೆಂಬರ್ನಲ್ಲಿ ರೂಪಾಯಿ ಮೌಲ್ಯವು ಮಾರ್ಚ್ 2020 ಕ್ಕೆ ಹೋಲಿಸಿದರೆ 2.9% ರಷ್ಟು ಕುಸಿದಿದೆ; ನೈಜ ಪರಿಣಾಮಕಾರಿ ವಿನಿಮಯ ದರವು 2.2% ರಷ್ಟು ಹೆಚ್ಚಳ ಕಂಡಿದೆ
  • ವಿದೇಶೀ ವಿನಿಮಯ ಮಾರುಕಟ್ಟೆಗಳಲ್ಲಿ ಆರ್ಬಿಐ ಕೈಗೊಂಡ ಕ್ರಮಗಳು ಹಣಕಾಸಿನ ಸ್ಥಿರತೆ ಮತ್ತು ಕ್ರಮಬದ್ಧವಾದ ಪರಿಸ್ಥಿತಿಗಳನ್ನು ಖಾತ್ರಿಪಡಿಸಿದವು ಹಾಗೂ ರೂಪಾಯಿ ಮೌಲ್ಯದ ಚಂಚಲತೆ ಮತ್ತು ಏಕಪಕ್ಷೀಯ ಹೆಚ್ಚಳವನ್ನು ನಿಯಂತ್ರಿಸುತ್ತವೆ.
  • ರಫ್ತು ಉತ್ತೇಜನಕ್ಕೆ ಕೈಗೊಂಡ ಉಪಕ್ರಮಗಳು:
  • ಉತ್ಪಾದನೆ ಆಧಾರಿತ  ಪ್ರೋತ್ಸಾಹಕ (ಪಿಎಲ್ಐ) ಯೋಜನೆ
  • ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ಪರಿಹಾರ (RoDTEP)
  • ಲಾಜಿಸ್ಟಿಕ್ಸ್ ಮೂಲಸೌಕರ್ಯ ಮತ್ತು ಡಿಜಿಟಲ್ ಉಪಕ್ರಮಗಳಲ್ಲಿ ಸುಧಾರಣೆ

ಹಣ ನಿರ್ವಹಣೆ ಮತ್ತು ವಿತ್ತೀಯ ಕ್ರಮಗಳು

  • 2020 ಸಮಯದಲ್ಲಿ ಹಣಕಾಸು ನೀತಿ: ಮಾರ್ಚ್ 2020 ರಿಂದ ರೆಪೊ ದರವನ್ನು 115 ಬಿಪಿಎಸ್ ನಷ್ಟು ಕಡಿತಗೊಳಿಸಲಾಗಿದೆ
  • 2020-21ನೇ ಆರ್ಥಿಕ ವರ್ಷರಲ್ಲಿ ವ್ಯವಸ್ಥಿತ ದ್ರವ್ಯತೆ ಇಲ್ಲಿಯವರೆಗೆ ಹೆಚ್ಚುವರಿ ಪ್ರಮಾಣದಲ್ಲಿ ಉಳಿದಿದೆ. ಆರ್ಬಿಐ ವಿವಿಧ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ:
  • ಮುಕ್ತ ಮಾರುಕಟ್ಟೆ ಕ್ರಮಗಳು
  • ದೀರ್ಘಾವಧಿಯ ರೆಪೊ ಕ್ರಮಗಳು
  • ಉದ್ದೇಶಿತ ದೀರ್ಘಕಾಲೀನ ರೆಪೊ ಕ್ರಮಗಳು
  • ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಒಟ್ಟು ಅನುತ್ಪಾದಕ ಸ್ವತ್ತುಗಳ ಅನುಪಾತವು 2020 ಮಾರ್ಚ್ ಅಂತ್ಯದ ವೇಳೆಗೆ ಶೇ.8.21 ರಿಂದ 2020 ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ.7.49 ಕ್ಕೆ ಇಳಿದಿದೆ
  • 2020-21ನೇ ಆರ್ಥಿಕ ವರ್ಷದ ಅವಧಿಯಲ್ಲಿ ಠೇವಣಿ ಮತ್ತು ಸಾಲಗಳಿಗೆ ಕಡಿಮೆ ದರಗಳು ವಿತ್ತೀಯ ಪ್ರಸರಣ ಸುಧಾರಿಸಿದೆ
  • 2021 ಜನವರಿ 20 ರಂದು, ನಿಫ್ಟಿ -50 ಮತ್ತು ಬಿಎಸ್ಇ ಸೆನ್ಸೆಕ್ಸ್ ಕ್ರಮವಾಗಿ 14,644.7 ಮತ್ತು 49,792.12 ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.
  • ಐಬಿಸಿ ಮೂಲಕ ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ವಸೂಲಾತಿ ದರ (ಅದು ಆರಂಭವಾದಾಗಿನಿಂದ) ಶೇ.45 ಕ್ಕಿಂತ ಹೆಚ್ಚಾಗಿದೆ.

ಬೆಲೆಗಳು ಮತ್ತು ಹಣದುಬ್ಬರ

  • ಸಿಪಿಐ ಹಣದುಬ್ಬರ:
  • 2020 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸರಾಸರಿ 6.6% ಮತ್ತು 2020 ಡಿಸೆಂಬರ್ನಲ್ಲಿ 4.6% ರಷ್ಟಿತ್ತು, ಇದು ಮುಖ್ಯವಾಗಿ ಆಹಾರ ಹಣದುಬ್ಬರದ ಏರಿಕೆಯಿಂದ ಪ್ರೇರಿತವಾಗಿದೆ (2019-20ರಲ್ಲಿ 6.7% ರಿಂದ 2020 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ತರಕಾರಿ ಬೆಲೆಗಳ ಏರಿಕೆಯಿಂದಾಗಿ 9.1% ಕ್ಕೆ ಏರಿಕೆಯಾಗಿದೆ.)
  • ಸಿಪಿಐ ಮತ್ತು ಅದರ ಉಪ ಗುಂಪುಗಳು 2020 ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಕೋವಿಡ್-19 ಲಾಕ್ಡೌನ್ನಿಂದ ಉಂಟಾದ ಆರಂಭಿಕ ಅಡೆತಡೆಗಳಿಂದಾಗಿ ಹಣದುಬ್ಬರವನ್ನು ಕಂಡವು.
  • ಧನಾತ್ಮಕ ಮೂಲ ಪರಿಣಾಮದೊಂದಿಗೆ ಹೆಚ್ಚಿನ ಉಪ ಗುಂಪುಗಳಿಗೆ ನವೆಂಬರ್ 2020 ವೇಳೆಗೆ ಮಧ್ಯಮ ಬೆಲೆ ಆವೇಗವು ಹಣದುಬ್ಬರವನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡಿತು
  • ಸಿಪಿಐ ಹಣದುಬ್ಬರದಲ್ಲಿ ಗ್ರಾಮೀಣ-ನಗರ ವ್ಯತ್ಯಾಸವು 2020 ರಲ್ಲಿ ಕುಸಿತ ಕಂಡಿದೆ:
  • ನವೆಂಬರ್ 2019 ರಿಂದ, ಸಿಪಿಐ-ನಗರ ಹಣದುಬ್ಬರವು ಸಿಪಿಐ-ಗ್ರಾಮೀಣ ಹಣದುಬ್ಬರದೊಂದಿಗೆ ಅಂತರ ಇಲ್ಲವಾಗಿದೆ
  • ಆಹಾರ ಹಣದುಬ್ಬರವು ಈಗ ಬಹುತೇಕ ಒಮ್ಮುಖವಾಗಿದೆ
  • ಸಿಪಿಐನ ಇತರ ಘಟಕಗಳಲ್ಲಿ ಇಂಧನ ಮತ್ತು ವಿದ್ಯುತ್, ಬಟ್ಟೆ ಮತ್ತು ಪಾದರಕ್ಷೆಗಳು ಇತ್ಯಾದಿಗಳಲ್ಲಿ ಕಂಡುಬರುವ ಗ್ರಾಮೀಣ-ನಗರ ಹಣದುಬ್ಬರದಲ್ಲಿ ವ್ಯತ್ಯಾಸ ಕಂಡುಬಂದಿದೆ.
  • ಏಪ್ರಿಲ್-ಡಿಸೆಂಬರ್, 2019 ಮತ್ತು ಏಪ್ರಿಲ್-ಡಿಸೆಂಬರ್, 2020-21 ಅವಧಿಯಲ್ಲಿ, ಸಿಪಿಐ-ಸಿ ಹಣದುಬ್ಬರಕ್ಕೆ ಪ್ರಮುಖವಾಗಿಆಹಾರ ಮತ್ತು ಪಾನೀಯಗಳ ಗುಂಪು ಕಾರಣವಾದವು:
  • 2020 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಕೊಡುಗೆ 59% ಕ್ಕೆ ಏರಿಕೆಯಾಗಿದ್ದು, 2019 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ 53.7% ರಷ್ಟಿತ್ತು
  • ಜೂನ್ 2020 ಮತ್ತು ನವೆಂಬರ್ 2020 ನಡುವೆ ಊಟದ ವೆಚ್ಚ ಹೆಚ್ಚಾಗಿದೆ, ಆದರೆ ಡಿಸೆಂಬರ್ ತಿಂಗಳಲ್ಲಿ ಅನೇಕ ಅಗತ್ಯ ಆಹಾರ ಪದಾರ್ಥಗಳ ಬೆಲೆಗಳ ಕುಸಿತದಿಂದಾಗಿ ತೀವ್ರ ಕುಸಿತ ಕಂಡಿತು.
  • ರಾಜ್ಯವಾರು ಪ್ರವೃತ್ತಿ:
  • ಸಿಪಿಐ-ಸಿ ಹಣದುಬ್ಬರವು ಪ್ರಸಕ್ತ ವರ್ಷದಲ್ಲಿ ಬಹುತೇಕ ರಾಜ್ಯಗಳಲ್ಲಿ ಹೆಚ್ಚಾಗಿದೆ
  • ಪ್ರಾದೇಶಿಕ ವ್ಯತ್ಯಾಸವು ಮುಂದುವರಿದಿದೆ
  • 2020 ಜೂನ್-ಡಿಸೆಂಬರ್ ಅವಧಿಯಲ್ಲಿ ಹಣದುಬ್ಬರವು ರಾಜ್ಯಗಳು / ಯುಟಿಗಳಲ್ಲಿ 3.2% ರಿಂದ 11% ವರೆಗೆ ಇತ್ತು - ಕಳೆದ ವರ್ಷದ ಇದೇ ಅವಧಿಯಲ್ಲಿ (-) 0.3% ರಿಂದ 7.6% ಇತ್ತು.
  • ಆಹಾರ ಪದಾರ್ಥಗಳ ಬೆಲೆಗಳ ಸ್ಥಿರತೆಗೆ ತೆಗೆದುಕೊಂಡ ಕ್ರಮಗಳು:
  • ಈರುಳ್ಳಿ ರಫ್ತು ನಿಷೇಧ
  • ಈರುಳ್ಳಿ ಸಂಗ್ರಹದ ಮೇಲೆ ಮಿತಿ
  • ದ್ವಿದಳ ಧಾನ್ಯಗಳ ಆಮದಿನ ಮೇಲಿನ ನಿರ್ಬಂಧವನ್ನು ಸಡಿಲ

ಚಿನ್ನದ ಬೆಲೆಗಳು:

  • ಕೋವಿಡ್-19 ರಿಂದ ಉಂಟಾದ  ಆರ್ಥಿಕ ಅನಿಶ್ಚಿತತೆಗಳ ಮಧ್ಯೆ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಿದ್ದರಿಂದ ಬೆಲೆಯಲ್ಲಿ ತೀಕ್ಷ್ಣವಾದ ಏರಿಕೆ
  • ಇತರ ಸ್ವತ್ತುಗಳಿಗೆ ಹೋಲಿಸಿದರೆ, ಎಫ್ವೈ 2020-21 ಅವಧಿಯಲ್ಲಿ ಚಿನ್ನವು ಹೆಚ್ಚಿನ ಆದಾಯವನ್ನು ನೀಡಿದೆ
  • ಆಮದು ನೀತಿಯಲ್ಲಿನ ಸ್ಥಿರತೆಗೆ ಗಮನ:
  • ಖಾದ್ಯ ತೈಲಗಳ ಆಮದಿನ ಮೇಲಿನ ಹೆಚ್ಚಿನ ಅವಲಂಬನೆಯು ಆಮದು ಬೆಲೆಯಲ್ಲಿ ಏರಿಳಿತದ ಅಪಾಯವನ್ನುಂಟುಮಾಡುತ್ತದೆ
  • ದೇಶೀಯ ಖಾದ್ಯ ತೈಲ ಮಾರುಕಟ್ಟೆಯ ಉತ್ಪಾದನೆ ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರುವ ಆಮದುಗಳು, ದ್ವಿದಳ ಧಾನ್ಯಗಳು ಮತ್ತು ಖಾದ್ಯ ತೈಲಗಳ ಆಮದು ನೀತಿಯಲ್ಲಿ ಆಗಾಗ್ಗೆ ಬದಲಾವಣೆಗಳಾಗುವುದರಿಂದ ರೈತರು / ಉತ್ಪಾದಕರಲ್ಲಿ ಗೊಂದಲ ಉಂಟಾಗುತ್ತದೆ ಮತ್ತು ಆಮದು ವಿಳಂಬವಾಗುತ್ತದೆ

ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ

  • ಎಸ್ಡಿಜಿಗಳನ್ನು ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಮುಖ್ಯವಾಹಿನಿಗೆ ತರಲು ಭಾರತ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ
  • ಸುಸ್ಥಿರ ಅಭಿವೃದ್ಧಿ ಕುರಿತು ವಿಶ್ವಸಂಸ್ಥೆಯ ಉನ್ನತ ಮಟ್ಟದ ರಾಜಕೀಯ ವೇದಿಕೆಗೆ (ಎಚ್ಎಲ್ಪಿಎಫ್) ಸ್ವಯಂಪ್ರೇರಿತ ರಾಷ್ಟ್ರೀಯ ಪರಿಶೀಲನೆಯನ್ನು (ವಿಎನ್ಆರ್) ಪ್ರಸ್ತುತಪಡಿಸಲಾಗಿದೆ
  • 2030 ಕಾರ್ಯಸೂಚಿಯಡಿಯ ಗುರಿಗಳನ್ನು ಸಾಧಿಸಲು ಕಾರ್ಯತಂತ್ರಕ್ಕೆ ಎಸ್ಡಿಜಿಗಳ ಸ್ಥಳೀಕರಣವು ನಿರ್ಣಾಯಕವಾಗಿದೆ
  • ಹಲವಾರು ರಾಜ್ಯಗಳು / ಯುಟಿಗಳು ಎಸ್ಡಿಜಿಗಳ ಅನುಷ್ಠಾನಕ್ಕಾಗಿ ಸಾಂಸ್ಥಿಕ ರಚನೆಗಳನ್ನು ನಿರ್ಮಿಸಿವೆ ಮತ್ತು ಪ್ರತಿ ಇಲಾಖೆಯೊಳಗೆ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಮನ್ವಯಕ್ಕಾಗಿ ನೋಡಲ್ ಕಾರ್ಯವಿಧಾನಗಳನ್ನು ರಚಿಸಿವೆ.
  • ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಹೊರತಾಗಿಯೂ ಸುಸ್ಥಿರ ಅಭಿವೃದ್ಧಿಯು ಅಭಿವೃದ್ಧಿ ಕಾರ್ಯತಂತ್ರಕ್ಕೆ ಮುಖ್ಯವಾಗಿದೆ
  • ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್ಎಪಿಸಿಸಿ) ಅಡಿಯಲ್ಲಿ ಹವಾಮಾನ ಅಪಾಯಗಳ ಅಳವಡಿಕೆ, ತಗ್ಗಿಸುವಿಕೆ ಮತ್ತು ಸನ್ನದ್ಧತೆಯ ಉದ್ದೇಶಗಳ ಮೇಲೆ ಎಂಟು ರಾಷ್ಟ್ರೀಯ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಲಾಗಿದೆ
  • ಹವಾಮಾನ ಬದಲಾವಣೆಯ ಕ್ರಿಯೆಯಲ್ಲಿ ಹಣಕಾಸು ನಿರ್ಣಾಯಕವಾಗಿದೆ ಎಂದು ಭಾರತದ ರಾಷ್ಟ್ರೀಯ ನಿರ್ಧಾರಿತ ಕೊಡುಗೆಗಳು (ಎನ್ಡಿಸಿ) ಹೇಳುತ್ತವೆ
  • ಆದ್ದರಿಂದ ದೇಶವು ಗುರಿಗಳನ್ನು ಗಣನೀಯವಾಗಿ ಹೆಚ್ಚಿಸುವುದರಿಂದ ಹಣಕಾಸಿನ ಪರಿಗಣನೆಗಳು ಮುಖ್ಯವಾಗಿರುತ್ತವೆ
  • 2020 ವೇಳೆಗೆ ಅಭಿವೃದ್ಧಿ ಹೊಂದಿದ ದೇಶಗಳ ಹವಾಮಾನ ಹಣಕಾಸುಗಾಗಿ ಜಂಟಿಯಾಗಿ ವರ್ಷಕ್ಕೆ 100 ಬಿಲಿಯನ್ ಡಾಲರ್ಗಳನ್ನು ಒಟ್ಟುಗೂಡಿಸುವ ಗುರಿ ಸಾದ್ಯವಾಗಿಲ್ಲ
  • ಸಿಒಪಿ 26 ಅನ್ನು 2021 ಕ್ಕೆ ಮುಂದೂಡಿರುವುದು 2025 ನಂತರದ ಗುರಿಯನ್ನು ತಿಳಿಸಲು ಮಾತುಕತೆ ಮತ್ತು ಇತರ ಸಾಕ್ಷಿಆಧಾರಿತ ಕೆಲಸಗಳಿಗೆ ಕಡಿಮೆ ಸಮಯವನ್ನು ನೀಡುತ್ತದೆ.
  • ಜಾಗತಿಕ ಬಾಂಡ್ ಮಾರುಕಟ್ಟೆಗಳಲ್ಲಿ ಒಟ್ಟಾರೆ ಬೆಳವಣಿಗೆಯ ಹೊರತಾಗಿಯೂ, 2019 ರಿಂದ 2020 ಮೊದಲಾರ್ಧದವರೆಗೂ ಬಹುಶಃ ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಹಸಿರು ಬಾಂಡ್ ವಿತರಣೆಯು ನಿಧಾನವಾಯಿತು.
  • ಅಂತಾರಾಷ್ಟ್ರೀಯ ಸೌರ ಒಕ್ಕೂಟ(ಐಎಸ್ಎ) ಎರಡು ಹೊಸ ಉಪಕ್ರಮಗಳನ್ನು ಪ್ರಾರಂಭಿಸಿದ್ದು -‘ವರ್ಲ್ಡ್ ಸೋಲಾರ್ ಬ್ಯಾಂಕ್ಮತ್ತುಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ ಇನಿಶಿಯೇಟಿವ್’- ಜಾಗತಿಕವಾಗಿ ಸೌರಶಕ್ತಿ ಕ್ರಾಂತಿಯನ್ನು ತರಲು ಸಿದ್ಧವಾಗಿದೆ.

ಕೃಷಿ ಮತ್ತು ಆಹಾರ ನಿರ್ವಹಣೆ

  • 2020-21 ಅವಧಿಯಲ್ಲಿ (ಮೊದಲ ಮುಂಗಡ ಅಂದಾಜು) ಸ್ಥಿರ ಬೆಲೆಯಲ್ಲಿ 3.4% ರಷ್ಟು ಬೆಳವಣಿಗೆಯೊಂದಿಗೆ ಕೋವಿಡ್-19 ಪ್ರೇರಿತ ಲಾಕ್ಡೌನ್ಗಳ ಪ್ರತಿಕೂಲತೆಗಳ ನಡುವೆಯೂ ಭಾರತದ ಕೃಷಿ (ಮತ್ತು ಸಂಬಂಧಿತ ಚಟುವಟಿಕೆಗಳು) ವಲಯವು ತನ್ನ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ.
  • ಪ್ರಸ್ತುತ ಬೆಲೆಗಳಲ್ಲಿ ದೇಶದ ಒಟ್ಟು ಮೌಲ್ಯವರ್ಧನೆಯಲ್ಲಿ (ಜಿವಿಎ) ಕೃಷಿ ಮತ್ತು ಸಂಬಂಧಿತ ವಲಯಗಳ ಪಾಲು 2019-20ನೇ ಸಾಲಿಗೆ 17.8% ಆಗಿದೆ (ರಾಷ್ಟ್ರೀಯ ಆದಾಯದ ಸಿಎಸ್-ತಾತ್ಕಾಲಿಕ ಅಂದಾಜು, 29 ಮೇ, 2020)
  • ಜಿವಿಎಗೆ ಹೋಲಿಸಿದರೆ ಒಟ್ಟು ಬಂಡವಾಳ ರಚನೆ (ಜಿಸಿಎಫ್) 2013-14ರಲ್ಲಿ 17.7% ರಿಂದ 2018-19ರಲ್ಲಿ 16.4% ವರೆಗೆ ಏರಿಳಿತದ ಪ್ರವೃತ್ತಿಯನ್ನು ತೋರಿಸಿದೆ, 2015-16ರಲ್ಲಿ 14.7% ಕ್ಕೆ ಇಳಿದಿತ್ತು
  • 2019-20 ಕೃಷಿ ವರ್ಷದಲ್ಲಿ ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆ (ನಾಲ್ಕನೇ ಮುಂಗಡ ಅಂದಾಜಿನ ಪ್ರಕಾರ), 2018-19 ಅವಧಿಗೆ ಹೋಲಿಸಿದರೆ 11.44 ದಶಲಕ್ಷ ಟನ್ ಹೆಚ್ಚಾಗಿದೆ
  • 2019-20ರಲ್ಲಿ ನಿಜವಾದ ಕೃಷಿ ಸಾಲದ ಹರಿವು, 3,50,000 ಕೋಟಿ ರೂ.ಗಳ ಗುರಿಗೆ ಬದಲಾಗಿ 13,92,469.81 ಕೋಟಿಗಳಷ್ಟಿತ್ತು. 2020-21 ಗುರಿ, 15,00,000 ಕೋಟಿ ಮತ್ತು 2020 ನವೆಂಬರ್ 30 ರವರೆಗೆ 9,73,517.80 ಕೋಟಿ ಮೊತ್ತವನ್ನು ವಿತರಿಸಲಾಗಿದೆ
  • ಫೆಬ್ರವರಿ 2020 ಬಜೆಟ್ ನಂತರ ಪ್ರಧಾನ ಮಂತ್ರಿ ಆತ್ಮನಿರ್ಭರ್ ಭಾರತ್ ಪ್ಯಾಕೇಜಿನ ಭಾಗವಾಗಿ ಹಾಲಿನ ಸಹಕಾರಿ ಮತ್ತು ಹಾಲು ಉತ್ಪಾದಕ ಸಂಸ್ಥೆಗಳ 1.5 ಕೋಟಿ ಡೈರಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು (ಕೆಸಿಸಿ) ಒದಗಿಸುವ ಗುರಿಯನ್ನು ಹೊಂದಲಾಗಿದೆ.
  • ಜನವರಿ 2021 ಹೊತ್ತಿಗೆ, ಮೀನುಗಾರರು ಮತ್ತು ಮೀನು ರೈತರಿಗೆ ಒಟ್ಟು 44,673 ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು (ಕೆಸಿಸಿ) ನೀಡಲಾಗಿದೆ ಮತ್ತು ಮೀನುಗಾರರು ಮತ್ತು ಮೀನು ರೈತರಿಂದ ಹೆಚ್ಚುವರಿ 4.04 ಲಕ್ಷ ಅರ್ಜಿಗಳು ಬ್ಯಾಂಕುಗಳ ವಿತರಣೆಯ ವಿವಿಧ ಹಂತಗಳಲ್ಲಿವೆ
  • ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ವರ್ಷದಲ್ಲಿ 5.5 ಕೋಟಿ ರೈತರ ಅರ್ಜಿಗಳನ್ನು ಒಳಗೊಂಡಿದೆ.
  • 2021 ಜನವರಿ 12 ವೇಳೆಗೆ 90,000 ಕೋಟಿ ರೂ. ಮೌಲ್ಯದ ಕ್ಲೈಮುಗಳನ್ನು ಪಾವತಿಸಲಾಗಿದೆ.
  • ಆಧಾರ್ ಜೋಡಣೆಯ ಮೂಲಕ ರೈತ ಖಾತೆಗಳಿಗೆ ನೇರವಾಗಿ ತ್ವರಿತವಾಗಿ ನಗದು ವರ್ಗಾವಣೆ
  • 70 ಲಕ್ಷ ರೈತರು ಪ್ರಯೋಜನ ಪಡೆದರು ಮತ್ತು ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ 8741.30 ಕೋಟಿ ರೂ.ಮೌಲ್ಯದ ಕ್ಲೈಮುಗಳನ್ನು ಪಾವತಿಸಲಾಗಿದೆ.
  • ಪಿಎಂ-ಕಿಸಾನ್ ಯೋಜನೆಯಡಿ ಆರ್ಥಿಕ ನೆರವಿನ 7 ನೇ ಕಂತಿನಲ್ಲಿ 2020 ಡಿಸೆಂಬರ್ನಲ್ಲಿ 18000 ಕೋಟಿ ರೂ.ಗಳನ್ನು ದೇಶದ 9 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ.
  • 2019-20ರಲ್ಲಿ ಮೀನು ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ 14.16 ಮಿಲಿಯನ್ ಮೆಟ್ರಿಕ್ ಟನ್ ತಲುಪಿದೆ:
  • ರಾಷ್ಟ್ರೀಯ ಆರ್ಥಿಕತೆಗೆ ಮೀನುಗಾರಿಕೆ ವಲಯದ ಜಿವಿಎ 2,12,915 ಕೋಟಿ ರೂ.ಗಳಷ್ಟಿದ್ದು, ಇದು ಒಟ್ಟು ರಾಷ್ಟ್ರೀಯ ಜಿವಿಎಯ 1.24% ಮತ್ತು ಕೃಷಿ ಜಿವಿಎಯ7.28% ಆಗಿದೆ
  • 2018-19ರಲ್ಲಿ ಕೊನೆಗೊಂಡ ಕಳೆದ 5 ವರ್ಷಗಳ ಅವಧಿಯಲ್ಲಿ ಕೃಷಿ ವಲಯದ ಸುಮಾರು 3.12%, ಉತ್ಪಾದನಾ ವಲಯದ  8.25% ರಷ್ಟು ಸರಾಸರಿ ವಾರ್ಷಿಕ ಬೆಳವಣಿಗೆಯ ದರಕ್ಕೆ (ಎಎಜಿಆರ್) ಹೋಲಿಸಿದರೆ ಆಹಾರ ಸಂಸ್ಕರಣಾ ಉದ್ಯಮ (ಎಫ್ಪಿಐ) ವಲಯವು ಸುಮಾರು 9.99% ರಷ್ಟುಬೆಳವಣಿಕೆ ಕಂಡಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ:

  • 80.96 ಕೋಟಿ ಫಲಾನುಭವಿಗಳಿಗೆ 2020 ನವೆಂಬರ್ ವರೆಗೆ ಎನ್ಎಫ್ಎಸ್ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಯಿತು.
  • 75000 ಕೋಟಿ ರೂ. ಮೌಲ್ಯದ 200 ಎಲ್ಎಂಟಿಗೂ ಹೆಚ್ಚಿನ ಆಹಾರ ಧಾನ್ಯಗಳನ್ನು  ಒದಗಿಸಲಾಯಿತು.
  • ಆತ್ಮನಿರ್ಭರ ಭಾರತ್ ಪ್ಯಾಕೇಜ್: ಸುಮಾರು 8 ಕೋಟಿ ವಲಸಿಗರಿಗೆ (ಎನ್ಎಫ್ಎಸ್ ಅಥವಾ ರಾಜ್ಯ ಪಡಿತರ ಚೀಟಿ ಅಡಿಯಲ್ಲಿ ಹೊರಗಿರುವ) ಅಂದಾಜು 3109 ಕೋಟಿ ರೂ.ಗಳನ್ನು ನಾಲ್ಕು ತಿಂಗಳಿಗೆ (ಮೇ ನಿಂದ ಆಗಸ್ಟ್) ಪ್ರತಿ ವ್ಯಕ್ತಿಗೆ 5 ಕೆ.ಜಿ.ಯಂತೆ ಸಬ್ಸಿಡಿ ನೀಡಲಾಯಿತು.

ಉದ್ಯಮ ಮತ್ತು ಮೂಲಸೌಕರ್ಯ

  • ಆರ್ಥಿಕ ಚಟುವಟಿಕೆಯ ಬಲವಾದ ವಿ-ಆಕಾರದ ಚೇತರಿಕೆಯು ಐಐಪಿ ದತ್ತಾಂಶದಿಂದ ಮತ್ತಷ್ಟು ದೃಢೀಕರಿಸಲ್ಪಟ್ಟಿದೆ
  • ಐಐಪಿ ಮತ್ತು ಎಂಟು-ಪ್ರಮುಖ ಸೂಚ್ಯಂಕವು ಕೋವಿಡ್ ಪೂರ್ವ ಮಟ್ಟಕ್ಕೆ ತಲುಪುವತ್ತ ಸಾಗಿದೆ
  • ಐಐಪಿಯಲ್ಲಿನ ವಿಶಾಲ-ಆಧಾರಿತ ಚೇತರಿಕೆಯ ಪರಿಣಾಮವಾಗಿ ನವೆಂಬರ್ 2020 ರಲ್ಲಿ (-) 1.9% ನಷ್ಟು ಬೆಳವಣಿಗೆ ಕಂಡಿದೆ. ನವೆಂಬರ್ 2019 ರಲ್ಲಿ ಇದು 2.1% ಮತ್ತು ಏಪ್ರಿಲ್ 2020 ರಲ್ಲಿ (-) 57.3% ಇತ್ತು.
  • ಸರ್ಕಾರದ ಬಂಡವಾಳ ವೆಚ್ಚದ ಹೆಚ್ಚಳ, ಲಸಿಕಾ ಅಭಿಯಾನ ಮತ್ತು ದೀರ್ಘಾವಧಿಯ ಬಾಕಿ ಉಳಿದಿರುವ ಸುಧಾರಣಾ ಕ್ರಮಗಳಿಂದಾಗಿ ಕೈಗಾರಿಕೆಗಳಲ್ಲಿ ಮತ್ತಷ್ಟು ಚಟುವಟಿಕೆಗಳು ಮತ್ತು ಸುಧಾರಣೆಗಳು ಕಂಡಿವೆ
  • ಭಾರತದ ಜಿಡಿಪಿಯ ಶೇ.15 ರಷ್ಟು ಮೌಲ್ಯದ ಉತ್ತೇಜನಾ ಪ್ಯಾಕೇಜ್ ಹೊಂದಿರುವ ಆತ್ಮಾನಿರ್ಭರ್ ಭಾರತ್ ಅಭಿಯಾನ್ ಘೋಷಿಸಲಾಗಿದೆ
  • ಈಸ್ ಆಫ್ ಡೂಯಿಂಗ್ ಬಿಸಿನೆಸ್ ರಿಪೋರ್ಟ್ (ಡಿಬಿಆರ್) ಪ್ರಕಾರ 2019 ಸುಲಲಿತ ವ್ಯವಹಾರ (ಇಒಡಿಬಿ) ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2018 ರಲ್ಲಿದ್ದ 77 ನೇ ಸ್ಥಾನದಿಂದ 2020 ರಲ್ಲಿ 63 ನೇ ಸ್ಥಾನಕ್ಕೆ ಏರಿದೆ:
  • 10 ಸೂಚಕಗಳಲ್ಲಿ 7 ರಲ್ಲಿ ಭಾರತ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ
  • ಮೂರು ವರ್ಷಗಳಲ್ಲಿ 67 ಶ್ರೇಯಾಂಕಗಳ ಸುಧಾರಣೆಯೊಂದಿಗೆ ಸತತ ಮೂರನೇ ಬಾರಿಗೆ ಭಾರತವು ಅಗ್ರ 10 ಸುಧಾರಕ ದೇಶಗಲ್ಲೊಂದಾಗಿದೆ.
  • ಇದು 2011 ನಂತರ ಯಾವುದೇ ದೊಡ್ಡ ದೇಶದಅತಿ ಹೆಚ್ಚು ಜಿಗಿತವಾಗಿದೆ
  • ಎಫ್ಡಿಐ ಒಳಹರಿವು  2020 ನೇ ಆರ್ಥಿಕ ವರ್ಷದಲ್ಲಿ 49.98 ಬಿಲಿಯನ್ ಡಾಲರ್ ಆಗಿದ್ದರೆ, 2019 ನೇ ಆರ್ಥಿಕ ವರ್ಷದ ಅವಧಿಯಲ್ಲಿ 44.37 ಬಿಲಿಯನ್ ಡಾಲರ್ ಆಗಿತ್ತು.
  • ಇದು 2021 ನೇ ಆರ್ಥಿಕ ವರ್ಷದಲ್ಲಿ (ಸೆಪ್ಟೆಂಬರ್ -2020 ರವರೆಗೆ) ಗೆ 30.0 ಬಿಲಿಯನ್ ಆಗಿದೆ
  • ಎಫ್ಡಿಐ ಇಕ್ವಿಟಿ ಹರಿವಿನ ಬಹುಪಾಲು ಉತ್ಪಾದಕೇತರ ವಲಯದಲ್ಲಿದೆ
  • ಉತ್ಪಾದನಾ ವಲಯದಲ್ಲಿ, ಆಟೋಮೊಬೈಲ್, ದೂರಸಂಪರ್ಕ, ಮೆಟಲರ್ಜಿಕಲ್, ಅಸಾಂಪ್ರದಾಯಿಕ ಇಂಧನ, ರಾಸಾಯನಿಕ (ರಸಗೊಬ್ಬರಗಳನ್ನು ಹೊರತುಪಡಿಸಿ), ಆಹಾರ ಸಂಸ್ಕರಣೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಕೈಗಾರಿಕೆಗಳು ಎಫ್ಡಿಐಯ ಬಹುಭಾಗವನ್ನು ಪಡೆದಿವೆ
  • ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತುಗಳನ್ನು ಹೆಚ್ಚಿಸಲು ಆತ್ಮನಿರ್ಭರ್ ಭಾರತ್ ಅಡಿಯಲ್ಲಿ 10 ಪ್ರಮುಖ ಕ್ಷೇತ್ರಗಳಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯನ್ನು ಸರ್ಕಾರ ಘೋಷಿಸಿದೆ.
  • ಒಟ್ಟಾರೆ 1.46 ಲಕ್ಷ ಕೋಟಿ ಅಂದಾಜು ವೆಚ್ಚದ ಮತ್ತು ವಲಯದ ನಿರ್ದಿಷ್ಟ ಆರ್ಥಿಕ ಮಿತಿಗಳೊಂದಿಗೆ ಸಂಬಂಧಪಟ್ಟ ಸಚಿವಾಲಯಗಳು ಇದನ್ನು ಅನುಷ್ಠಾನಗೊಳಿಸುತ್ತವೆ

ಸೇವಾ ವಲಯ

  • ಭಾರತದ ಸೇವಾ ವಲಯವು ಕೋವಿಡ್ ಸಾಂಕ್ರಾಮಿಕದ ಲಾಕ್ಡೌನ್ ಸಮಯದಲ್ಲಿ 2020-21 ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಸುಮಾರು 16% ರಷ್ಟು ಕುಸಿತ ಕಂಡಿತು.
  • ಸೇವೆಗಳ ಖರೀದಿ ವ್ಯವಸ್ಥಾಪಕರ ಸೂಚ್ಯಂಕ, ರೈಲು ಸರಕು ಸಾಗಣೆ ಮತ್ತು ಬಂದರು ದಟ್ಟಣೆಯಂತಹ ಪ್ರಮುಖ ಸೂಚಕಗಳು ಲಾಕ್ಡೌನ್ ಸಮಯದಲ್ಲಿ ತೀವ್ರ ಕುಸಿತದ ನಂತರ ವಿ ಆಕಾರದ ಚೇತರಿಕೆಯನ್ನು ತೋರುತ್ತಿವೆ.
  • ಜಾಗತಿಕವಾಗಿ ಅಡೆತಡೆಗಳು ಕಂಡುಬಂದರೂ, 2020 ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಸೇವಾ ಕ್ಷೇತ್ರಕ್ಕೆ ಎಫ್ಡಿಐ ಒಳಹರಿವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.34 ರೆಷ್ಟು ಹೆಚ್ಚಾಗಿ 23.6 ಬಿಲಿಯನ್ ಯುಎಸ್ ಡಾಲರ್ಗಳನ್ನು ತಲುಪಿತು
  • ಸೇವಾ ವಲಯವು ಭಾರತದ ಒಟ್ಟು ಜಿವಿಎಯ ಶೇ.54 ಕ್ಕಿಂತ ಹೆಚ್ಚು ಮತ್ತು ಭಾರತ ಒಟ್ಟು ಎಫ್ಡಿಐ ಒಳಹರಿವಿನ ಸುಮಾರು ನಾಲ್ಕೈದು ಭಾಗದಷ್ಟಿದೆ
  • ಜಿವಿಎಯಲ್ಲಿನ ಸೇವಾ ವಲಯದ ಪಾಲು 33 ರಾಜ್ಯಗಳ ಮತ್ತು ಯುಟಿಗಳಲ್ಲಿ 15 ರಲ್ಲಿ ಶೇ.50 ಮೀರಿದೆ ಮತ್ತು ಇದು ದೆಹಲಿ ಮತ್ತು ಚಂಡೀಗಢದಲ್ಲಿ ಶೇ.85 ಕ್ಕಿಂತ ಹೆಚ್ಚು ಇದೆ.
  • ಸೇವಾ ವಲಯವು ಒಟ್ಟು ರಫ್ತಿನ ಶೇ.48 ರಷ್ಟು ಪಾಲನ್ನು ಹೊಂದಿದೆ, ಇತ್ತೀಚಿನ ವರ್ಷಗಳಲ್ಲಿ ಸರಕು ರಫ್ತುಗಿಂತ ಉತ್ತಮವಾಗಿದೆ
  • ಬಂದರುಗಳಲ್ಲಿ ಸಾಗಿಸುವ ಸಮಯವು 2010-11ರಲ್ಲಿದ್ದ 4.67 ದಿನಗಳಿಂದ 2019-20ರಲ್ಲಿ 2.62 ದಿನಗಳಿಗೆ ಇಳಿದು ಅರ್ಧದಷ್ಟು ಕಡಿಮೆಯಾಗಿದೆ
  • ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯು ಕೋವಿಡ್ ಸಾಂಕ್ರಾಮಿಕದ ಮಧ್ಯೆಯೂ ಉತ್ತಮವಾಗಿ ಪ್ರಗತಿಯಲ್ಲಿದೆ, ಇದು 38 ಯುನಿಕಾರ್ನ್ ಗಳಿಗೆ ನೆಲೆಯಾಗಿದೆ - ಕಳೆದ ವರ್ಷ ಯುನಿಕಾರ್ನ್ ಪಟ್ಟಿಗೆ ದಾಖಲೆಯ 12 ಸ್ಟಾರ್ಟ್ ಅಪ್ ಗಳು ಸೇರಿವೆ
  • ಕಳೆದ ಆರು ದಶಕಗಳಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರವು ಭಾರಿ ಪ್ರಮಾಣದಲ್ಲಿ ಬೆಳೆದಿದೆ.
  • 2019-20ರಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ಸುಮಾರು 1.8 ಬಿಲಿಯನ್ ಖರ್ಚು ಮಾಡಲಾಗಿದೆ
  • ಖಾಸಗಿ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಮತ್ತು ನಾವೀನ್ಯತೆ ಮತ್ತು ಹೂಡಿಕೆಯನ್ನು ಆಕರ್ಷಿಸಲು ಬಾಹ್ಯಾಕಾಶ ಪರಿಸರ ವ್ಯವಸ್ಥೆಯು ಹಲವಾರು ನೀತಿ ಸುಧಾರಣೆಗಳನ್ನು ತಂದಿದೆ

ಸಾಮಾಜಿಕ ಮೂಲಸೌಕರ್ಯ, ಉದ್ಯೋಗ ಮತ್ತು ಮಾನವಾಭಿವೃದ್ಧಿ

  • ಕಳೆದ ವರ್ಷಕ್ಕೆ ಹೋಲಿಸಿದರೆ 2020-21ರಲ್ಲಿ ಜಿಡಿಪಿಯ ಶೇಕಡಾವಾರು (ಕೇಂದ್ರ ಮತ್ತು ರಾಜ್ಯಗಳು) ಸಾಮಾಜಿಕ ವಲಯದ ಖರ್ಚು ಹೆಚ್ಚಾಗಿದೆ.
  • ಎಚ್ಡಿಐ 2019 ರಲ್ಲಿ ಭಾರತದ ಶ್ರೇಯಾಂಕವು ಒಟ್ಟು 189 ದೇಶಗಳಲ್ಲಿ 131 ಎಂದು ದಾಖಲಿಸಲಾಗಿದೆ.
  • ಭಾರತದ ಜಿಎನ್ ತಲಾ ಆದಾಯ (2017 ಪಿಪಿಪಿ $) 2018 ರಲ್ಲಿದ್ದ 6,427 ಡಾಲರ್ ನಿಂದ 2019 ರಲ್ಲಿ 6,681 ಡಾಲರ್ ಗೆ  ಏರಿದೆ
  • ಜೀವಿತಾವಧಿಯು 2018 ರಲ್ಲಿದ್ದ 69.4 ವರ್ಷದಿಂದ 2019 ರಲ್ಲಿ 69.7 ವರ್ಷಗಳಿಗೆ ಸುಧಾರಿಸಿದೆ
  • ಸಾಂಕ್ರಾಮಿಕ ಸಮಯದಲ್ಲಿ ಆನ್ಲೈನ್ ಕಲಿಕೆ ಮತ್ತು ಮನೆಯಿಂದಲೇ ಕೆಲಸದಿಂದಾಗಿ ಡೇಟಾ ನೆಟ್ವರ್ಕ್, ಕಂಪ್ಯೂಟರ್, ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳಿಗೆ ಪ್ರವೇಶ ಪ್ರಾಮುಖ್ಯತೆಯನ್ನು ಪಡೆಯಿತು.
  • ಜನವರಿ 2019 ರಿಂದ ಮಾರ್ಚ್ 2020 ಅವಧಿಯಲ್ಲಿ ನಗರ ವಲಯದಲ್ಲಿ ನಿಯಮಿತ ವೇತನ / ಸಂಬಳದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು (ಪಿಎಲ್ಎಫ್ಎಸ್ ತ್ರೈಮಾಸಿಕ ಸಮೀಕ್ಷೆ)
  • ಆತ್ಮನಿರ್ಭರ ಭಾರತ್ ರೋಜ್ಗಾರ್ ಯೋಜನೆ ಮೂಲಕ ಉದ್ಯೋಗವನ್ನು ಹೆಚ್ಚಿಸಲು ಸರ್ಕಾರದ ಪ್ರೋತ್ಸಾಹ ಮತ್ತು ಅಸ್ತಿತ್ವದಲ್ಲಿದ್ದ ಕಾರ್ಮಿಕ ಸಂಹಿತೆಗಳನ್ನು 4 ಕೋಡ್ಗಳಾಗಿ ಸರಳೀಕರಣ
  • ಭಾರತದಲ್ಲಿ ಕಡಿಮೆ ಮಟ್ಟದ ಮಹಿಳಾ ಕಾರ್ಮಿಕರ ಪಾಲು
  • ಮಹಿಳೆಯರು ತಮ್ಮ ಪುರುಷ ಸಹವರ್ತಿಗಳಿಗೆ ಹೋಲಿಸಿದರೆ ಮನೆಯಲ್ಲಿ ಪಾವತಿಸದ ದೇಶೀಯ ಮತ್ತು ಆರೈಕೆ ಸೇವೆಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ (ಸಮಯ ಬಳಕೆಯ ಸಮೀಕ್ಷೆ, 2019)
  • ವೇತನ ಮತ್ತು ವೃತ್ತಿ ಪ್ರಗತಿಯಲ್ಲಿ ತಾರತಮ್ಯರಹಿತ ಅಭ್ಯಾಸಗಳನ್ನು ಉತ್ತೇಜಿಸುವ ಅಗತ್ಯತೆ, ಮಹಿಳಾ ಕಾರ್ಮಿಕರಿಗೆ ಇತರ ವೈದ್ಯಕೀಯ ಮತ್ತು ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಒಳಗೊಂಡಂತೆ ಕೆಲಸದ ಪ್ರೋತ್ಸಾಹವನ್ನು ಸುಧಾರಿಸುವ ಅವಶ್ಯಕತೆ ಇದೆ.
  • ಪಿಎಮ್ಜಿಕೆಪಿಯ ಮಾರ್ಚ್ 2020 ವರದಿ ಪ್ರಕಾರ, ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ (ಎನ್ಎಸ್ಎಪಿ) ಅಡಿಯಲ್ಲಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲ ಫಲಾನುಭವಿಗಳಿಗೆ 1000 ರೂ.ವರೆಗೆ ನಗದು ವರ್ಗಾವಣೆ ಮಾಡಲಾಗಿದೆ
  • ಪಿಎಂ ಜನ ಧನ್ ಯೋಜನೆಯಡಿ ಒಟ್ಟು 20.64 ಕೋಟಿ ರೂ.ಗಳನ್ನು ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 500 ರೂ. ಗಳಂತೆ ಮೂರು ತಿಂಗಳವರೆಗೆ ಡಿಜಿಟಲ್ ರೂಪದಲ್ಲಿ ವರ್ಗಾಯಿಸಲಾಯಿತು
  • ಸುಮಾರು 8 ಕೋಟಿ ಕುಟುಂಬಗಳಿಗೆ ಮೂರು ತಿಂಗಳವರೆಗೆ ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ವಿತರಿಸಲಾಯಿತು
  • ಮೇಲಾಧಾರ ಮುಕ್ತ ಸಾಲ ನೀಡುವ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು 6.85 ಕೋಟಿ ಕುಟುಂಬಗಳಿಗೆ ನೆರವಾಗುವ  63 ಲಕ್ಷ ಮಹಿಳಾ ಸ್ವಸಹಾಯ ಸಂಘಗಳಿಗೆ ಇದು ನೆರವಾಗುತ್ತದೆ
  • ಮಹಾತ್ಮ ಗಾಂಧಿ ಎನ್ಆರ್ಇಜಿಎ ಅಡಿಯಲ್ಲಿ ವೇತನವನ್ನು ಏಪ್ರಿಲ್, 2020ರಿಂದ 182 ರೂ.ಗಳಿಂದ 202 ರೂ.ಗಳಿಗೆ ಹೆಚ್ಚಿಸಲಾಗಿದೆ.  

ಕೋವಿಡ್-19 ವಿರುದ್ಧ ಭಾರತದ ಸಮರ:

  • ಲಾಕ್ ಡೌನ್, ಸಾಮಾಜಿಕ ಅಂತರ, ಪ್ರಯಾಣ ಮಾರ್ಗಸೂಚಿಗಳು, ಕೈಗಳ ಸ್ವಚ್ಛತೆ, ಮುಖಗವಸುಗಳನ್ನು ಧರಿಸುವುದು ಮತ್ತಿತರ ಆರಂಭಿಕ ಕ್ರಮಗಳು ರೋಗದ ಹರಡುವಿಕೆಯನ್ನು ಕಡಿಮೆ ಮಾಡಿದವು
  • ಅಗತ್ಯ ಔಷಧಿಗಳು, ಹ್ಯಾಂಡ್ ಸ್ಯಾನಿಟೈಜರ್ಗಳು, ಮುಖಗವಸುಗಳು, ಪಿಪಿಇ ಕಿಟ್ಗಳು, ವೆಂಟಿಲೇಟರ್ಗಳು, ಕೋವಿಡ್ -19 ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳಲ್ಲಿ ದೇಶವು ಸ್ವಾವಲಂಬಿಯಾಗಿದೆ
  • ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕಾ ಅಭಿಯಾನವನ್ನು  2021 ಜನವರಿ 16 ರಂದು ದೇಶೀಯವಾಗಿ  ತಯಾರಿಸಿದ ಎರಡು ಲಸಿಕೆಗಳ ಮೂಲಕ ಪ್ರಾರಂಭಿಸಲಾಗಿದೆ.

***




(Release ID: 1693475) Visitor Counter : 14736