ಪ್ರಧಾನ ಮಂತ್ರಿಯವರ ಕಛೇರಿ

ತ್ರಿಪುರಾ ರಾಜ್ಯೋತ್ಸವ: ರಾಜ್ಯದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 21 JAN 2021 8:59AM by PIB Bengaluru

ತ್ರಿಪುರಾ ರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆ ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.

ಟ್ವೀಟ್ ನಲ್ಲಿ ಮೋದಿ ಅವರು, "ತ್ರಿಪುರಾ ರಾಜ್ಯೋದಯ ದಿನದ ವಿಶೇಷ ಸಂದರ್ಭದಲ್ಲಿ ಆ ರಾಜ್ಯದ ಜನತೆಗೆ ಶುಭಾಶಯಗಳು. ತ್ರಿಪುರಾ ಜನರ ಸಂಸ್ಕೃತಿ ಮತ್ತು ಆತ್ಮೀಯ ಸ್ವಭಾವಕ್ಕೆ ಭಾರತದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತದೆ. ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ. ಅದೇ ಉತ್ಸಾಹ ಮುಂದುವರಿಯಲಿ." ಎಂದು ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1690859) ವಿಸಿಟರ್ ಕೌಂಟರ್ : 161