ಪ್ರಧಾನ ಮಂತ್ರಿಯವರ ಕಛೇರಿ

ಅಮೆರಿಕಾ ಉಪಾಧ್ಯಕ್ಷರಾದ ಶ್ರೀಮತಿ ಕಮಲಾ ಹ್ಯಾರಿಸ್ ಅವರಿಗೆ ಪ್ರಧಾನಮಂತ್ರಿ ಶುಭಾಶಯ

Posted On: 21 JAN 2021 9:18AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಕಮಲಾ ಹ್ಯಾರಿಸ್ ಅವರಿಗೆ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ ನಲ್ಲಿ, "ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ @ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆಗಳು. ಇದೊಂದು ಐತಿಹಾಸಿಕ ಸಂದರ್ಭ. ಭಾರತ- ಅಮೆರಿಕ ಬಾಂಧವ್ಯವನ್ನು ಹೆಚ್ಚು ಚೈತನ್ಯದಾಯಕಗೊಳಿಸಲು ಅವರೊಂದಿಗೆ ಸಂವಾದ ನಡೆಸಲು ಎದಿರು ನೋಡುತ್ತಿದ್ದೇನೆ. ಭಾರತ- ಅಮೆರಿಕ ಪಾಲುದಾರಿಕೆ ನಮ್ಮ ಭೂಗ್ರಹಕ್ಕೆ ಉಪಯುಕ್ತವಾಗಿದೆ." ಎಂದು ತಿಳಿಸಿದ್ದಾರೆ.

***



(Release ID: 1690857) Visitor Counter : 98