ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಕಳೆದ 7 ತಿಂಗಳಲ್ಲೇ ಅತಿ ಕಡಿಮೆ ಸೋಂಕು; ಕಳೆದ 24 ಗಂಟೆಗಳಲ್ಲಿ 10,064 ಹೊಸ ಪಾಸಿಟಿವ್ ಪ್ರಕರಣ
ಸಕ್ರಿಯ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ಜನರಿಗೆ ಲಸಿಕೆ
Posted On:
19 JAN 2021 11:29AM by PIB Bengaluru
ಭಾರತ ಜಾಗತಿಕ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲು ದಾಟಿದೆ. ಇಂದು ಪ್ರತಿ ದಿನದ ಹೊಸ ಪ್ರಕರಣಗಳ ಸಂಖ್ಯೆ ಅತ್ಯಂತ ಕೆಳಗೆ ಇಳಿದಿದೆ.
ಏಳು ತಿಂಗಳ ಬಳಿಕ ಕಳೆದ 24 ಗಂಟೆಗಳಲ್ಲಿ ಒಟ್ಟಾರೆ 10,064 ಹೊಸ ಸೋಂಕಿತ ಪ್ರಕರಣಗಳು ರಾಷ್ಟ್ರೀಯ ಸರಾಸರಿಗೆ ಸೇರ್ಪಡೆಯಾಗಿವೆ. ದಿನದ ಹೊಸ ಪ್ರಕರಣಗಳು 2020ರ ಜೂನ್ 12ರಂದು 10,956.
ಭಾರತದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 2 ಲಕ್ಷಕ್ಕೆ (2,00,528) ಇಳಿಕೆಯಾಗಿದೆ.
ಭಾರತದಲ್ಲಿ ಸದ್ಯ ಒಟ್ಟು ಸೋಂಕಿತ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ ಶೇ.1.90 ಆಗಿದೆ.
ಒಂದೆಡೆ ಅತ್ಯಂತ ವೇಗವಾಗಿ ಕೋವಿಡ್ ಸೋಂಕಿತರ ಪ್ರತಿ ದಿನದ ಪ್ರಮಾಣ ಇಳಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಅಷ್ಟೇ ವೇಗದಲ್ಲಿ ಹೆಚ್ಚಿನ ಜನರಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ವಿರುದ್ಧ ಲಸಿಕೆಯನ್ನು ಹಾಕಲಾಗುತ್ತಿದೆ. ಸದ್ಯ ಸಕ್ರಿಯ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ಜನರಿಗೆ ಒಟ್ಟಾರೆ ಲಸಿಕೆ ಹಾಕಲಾಗಿದೆ.
ಕಳೆದ 24 ಗಂಟೆಗಳಲ್ಲಿ 3,930 ಕಡೆ ಒಟ್ಟಾರೆ 2,23,669 ಮಂದಿಗೆ ಲಸಿಕೆಯನ್ನು ಹಾಕಲಾಗಿದ್ದು, ಈವರೆಗೆ ಒಟ್ಟು 4,54,049 ಮಂದಿಗೆ ಲಸಿಕೆ ಹಾಕಲಾಗಿದೆ. (ಈವರೆಗೆ 7,860 ಲಸಿಕೆ ನೀಡುವ ಕಾರ್ಯಾಚರಣೆ ನಡೆದಿದೆ).
ರಾಜ್ಯವಾರು ಲಸಿಕೆ ಪಡೆದಿರುವ ಫಲಾನುಭವಿಗಳ ವಿವರ ಹೀಗಿದೆ:
ಕ್ರ.ಸಂ.
|
ರಾಜ್ಯ/ಕೇಂದ್ರಾಡಳಿತ ಪ್ರದೇಶ
|
ಲಸಿಕೆ ಪಡೆದ ಫಲಾನುಭವಿಗಳು
|
1
|
ಅಂಡಮಾನ್-ನಿಕೋಬಾರ್ ದ್ವೀಪ
|
442
|
2
|
ಆಂಧ್ರಪ್ರದೇಶ
|
46,680
|
3
|
ಅರುಣಾಚಲಪ್ರದೇಶ
|
2,805
|
4
|
ಅಸ್ಸಾಂ
|
5,542
|
5
|
ಬಿಹಾರ
|
33,389
|
6
|
ಚಂಡಿಗಢ
|
265
|
7
|
ಛತ್ತೀಸ್ ಗಢ
|
10,872
|
8
|
ದಾದ್ರ ಮತ್ತು ನಗರ್ ಹವೇಲಿ
|
80
|
9
|
ದಾಮನ್ ಮತ್ತು ದಿಯು
|
43
|
10
|
ದೆಹಲಿ
|
7,968
|
11
|
ಗೋವಾ
|
426
|
12
|
ಗುಜರಾತ್
|
10,787
|
13
|
ಹರಿಯಾಣ
|
17,642
|
14
|
ಹಿಮಾಚಲಪ್ರದೇಶ
|
4,817
|
15
|
ಜಮ್ಮು & ಕಾಶ್ಮೀರ
|
3,375
|
16
|
ಜಾರ್ಖಂಡ್
|
6,059
|
17
|
ಕರ್ನಾಟಕ
|
66,392
|
18
|
ಕೇರಳ
|
15,477
|
19
|
ಲಡಾಖ್
|
119
|
20
|
ಲಕ್ಷದ್ವೀಪ
|
201
|
21
|
ಮಧ್ಯಪ್ರದೇಶ
|
18,174
|
22
|
ಮಹಾರಾಷ್ಟ್ರ
|
18,582
|
23
|
ಮಣಿಪುರ
|
978
|
24
|
ಮೇಘಾಲಯ
|
530
|
25
|
ಮಿಝೋರಾಂ
|
554
|
26
|
ನಾಗಾಲ್ಯಾಂಡ್
|
1,436
|
27
|
ಒಡಿಶಾ
|
46,506
|
28
|
ಪುದುಚೆರಿ
|
554
|
29
|
ಪಂಜಾಬ್
|
3,318
|
30
|
ರಾಜಸ್ಥಾನ
|
23,546
|
31
|
ಸಿಕ್ಕಿಂ
|
120
|
32
|
ತಮಿಳುನಾಡು
|
16,462
|
33
|
ತೆಲಂಗಾಣ
|
17,408
|
34
|
ತ್ರಿಪುರಾ
|
1,736
|
35
|
ಉತ್ತರ ಪ್ರದೇಶ
|
22,644
|
36
|
ಉತ್ತರಾಖಂಡ
|
4,237
|
37
|
ಪಶ್ಚಿಮ ಬಂಗಾಳ
|
29,866
|
38
|
ಇತರೆ
|
14,017
|
ಪರೀಕ್ಷಾ ಮೂಲಸೌಕರ್ಯ ಪ್ರಮಾಣ ಹೆಚ್ಚಾಗಿರುವಂತೆಯೇ ಪಾಸಿಟಿವಿಟಿ ದರ ಕ್ರಮೇಣ ಕುಸಿಯುತ್ತಿದೆ.
ಭಾರತದಲ್ಲಿ ವಾರದ ಪಾಸಿಟಿವಿಟಿ ದರ ಶೇ.1.97.
22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದ ಪಾಸಿಟಿವಿಟಿ ದರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ.
13 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದ ಪಾಸಿಟಿವಿಟಿ ದರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 140ಕ್ಕೂ ಕಡಿಮೆ ಮರಣ(137 ಸಾವು) ಸಂಭವಿಸಿವೆ. 8 ತಿಂಗಳ ಬಳಿಕ ಇದೇ ಮೊದಲ ಬಾರಿ ಇಷ್ಟು ಕಡಿಮೆ ಮರಣ ಸಂಭವಿಸಿವೆ.
ಭಾರತದಲ್ಲಿ ಇಂದು ಚೇತರಿಕೆ ಪ್ರಮಾಣ ಶೇ.96.66ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಚೇತರಿಕೆಯಾಗಿರುವವರ ಪ್ರಮಾಣ 1,02,28,753ಕ್ಕೆ ಏರಿಕೆಯಾಗಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 2,08,012 ರಲ್ಲಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 17,411 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊಸದಾಗಿ ಗುಣಮುಖರಾಗಿರುವ ಪ್ರಕರಣಗಳಲ್ಲಿ ಶೇ.80.41 ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.
ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕಿತರು ಅಂದರೆ ಒಂದೇ ದಿನ 3,921 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 3,854 ಸೋಂಕಿತರು ಗುಣಮುಖರಾದರೆ ಛತ್ತೀಸ್ ಗಢದಲ್ಲಿ 1,301 ಮಂದಿ ಗುಣಮುಖರಾಗಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.71.76 ರಷ್ಟು ಪ್ರಕರಣ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.
ಕೇರಳದಲ್ಲಿ ಹೊಸದಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಅಂದರೆ 3,346 ಪ್ರಕರಣಗಳು ದೃಢಪಟ್ಟಿವೆ. ಆ ನಂತರ ಕ್ರಮವಾಗಿ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ 1,924 ಮತ್ತು 551 ಹೊಸ ಪ್ರಕರಣಗಳು ದೃಢಪಟ್ಟಿವೆ.
ಕಳೆದ 24 ಗಂಟೆಗಳಲ್ಲಿ ಸಂಭವಿಸಿರುವ ಒಟ್ಟು ಸೋಂಕಿತರ ಸಾವು ಪ್ರಕರಣಗಳಲ್ಲಿ ಶೇ.72.99 ರಷ್ಟು ಪ್ರಕರಣಗ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದವು.
ಮಹಾರಾಷ್ಟ್ರದಲ್ಲಿ 35 ಸೋಂಕಿತರು ಸಾವನ್ನಪ್ಪಿರುವ ವರದಿಯಾಗಿದೆ. ಕೇರಳದಲ್ಲೂ ಸಹ 17 ಮಂದಿ ಸಾವನ್ನಪ್ಪಿದ್ದರೆ, ಪಶ್ಚಿಮಬಂಗಾಳದಲ್ಲಿ 10 ಸೋಂಕಿತರು ಮರಣ ಹೊಂದಿದ್ದಾರೆ.
***
(Release ID: 1690013)
Visitor Counter : 236
Read this release in:
Assamese
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu