ಪ್ರಧಾನ ಮಂತ್ರಿಯವರ ಕಛೇರಿ

ತಿರುವಳ್ಳವರ್ ದಿನ: ಪೂಜ್ಯ ತಿರುವಳ್ಳವರ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ

Posted On: 15 JAN 2021 9:01AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿರುವಳ್ಳವರ್ ದಿನದಂದು ಪೂಜ್ಯ ತಿರುವಳ್ಳವರ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿತಿರುವಳ್ಳವರ್ ದಿನದಂದು ಪೂಜ್ಯ ತಿರುವಳ್ಳವರ್ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆಲೋಚನೆಗಳು ಮತ್ತು ಕೃತಿಗಳು ಅವರ ಅಪಾರ ಜ್ಞಾನವನ್ನು ಮತ್ತು ಆರ್ಶೀವದಿಸಿದ ಬುದ್ದಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಹಲವು ಪೀಳಿಗೆಯ ಜನರು ಅವರ ಆದರ್ಶಗಳಿಂದ ಧನಾತ್ಮಕವಾಗಿ ಪ್ರಭಾವಿತರಾಗಿದ್ದಾರೆ. ದೇಶಾದ್ಯಂತ ಹೆಚ್ಚಿನ ಯುವಜನರು ಅವರ ಚಿಂತನೆಗಳನ್ನು ಓದಿಕೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ.ಎಂದು ಹೇಳಿದ್ದಾರೆ

***(Release ID: 1688774) Visitor Counter : 43