ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ 5 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಫಲಾನುಭವಿಗಳಿಗೆ ಪ್ರಧಾನಿ ಅಭಿನಂದನೆ

प्रविष्टि तिथि: 13 JAN 2021 11:37AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಗೆ 5 ವರ್ಷ ತುಂಬಿದ ಸಂದರ್ಭದಲ್ಲಿ ಎಲ್ಲ ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಶ್ರಮಪಟ್ಟು ದುಡಿಯುವ ರೈತರನ್ನು ಪ್ರಾಕೃತಿಕ  ವಿಕೋಪಗಳಿಂದ ರಕ್ಷಿಸುವ ಪ್ರಮುಖ ಉಪಕ್ರಮವಾದ, ಪ್ರಧಾನಮಂತ್ರಿ ಬೆಳೆವಿಮೆ ಯೋಜನೆ ಇಂದು 5 ವರ್ಷಗಳನ್ನು ಪೂರೈಸಿದೆ. ಯೋಜನೆ ವ್ಯಾಪ್ತಿಯನ್ನು ಹೆಚ್ಚಿಸಿದೆ, ಅಪಾಯವನ್ನು ತಗ್ಗಿಸಿದೆ ಮತ್ತು ಕೋಟ್ಯಂತರ ರೈತರಿಗೆ ಇದರಿಂದ ಪ್ರಯೋಜನವಾಗಿದೆ. ಯೋಜನೆಯ ಎಲ್ಲಾ ಫಲಾನುಭವಿಗಳನ್ನು ನಾನು ಅಭಿನಂದಿಸುತ್ತೇನೆ.

ಪ್ರಧಾನಮಂತ್ರಿಯವರ ಬೆಳೆ ವಿಮೆ ಯೋಜನೆ ಹೇಗೆ ರೈತರಿಗೆ ದೊಡ್ಡ ಪ್ರಯೋಜನ ತಂದಿದೆ?

ವಿಮಾ ಕ್ಲೇಮುಗಳ ಇತ್ಯರ್ಥದ ವೇಳೆ ಹೇಗೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ?

ಪಿಎಂ ಎಫ್.ಬಿ.ವೈ.ಗೆ ಸಂಬಂಧಿಸಿದ ಅಂಶಗಳು ಮತ್ತು ಇತರ ಅಂಶಗಳಿಗೆ ನಮೋ ಆಪ್ ನಲ್ಲಿನ ನಿಮ್ಮ ಧ್ವನಿ ವಿಭಾಗದಲ್ಲಿ ನಾವಿನ್ಯ ಪೂರ್ಣವಾಗಿ ಉತ್ತರಿಸಲಾಗಿದೆ." ಎಂದು ತಿಳಿಸಿದ್ದಾರೆ.

***


(रिलीज़ आईडी: 1688282) आगंतुक पटल : 170
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Telugu , Malayalam