ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಅಭೂತಪೂರ್ವ ಸಾಧನೆ, 1 ಕೋಟಿ ದಾಟಿದ ಕೋವಿಡ್ ಚೇತರಿಕೆ ಸಂಖ್ಯೆ


ಸಕ್ರಿಯ ಪ್ರಕರಣಗಳಿಗಿಂತ 44 ಪಟ್ಟು ಅಧಿಕ ಚೇತರಿಕೆ ಪ್ರಕರಣ

5 ರಾಜ್ಯಗಳಲ್ಲಿ ಒಟ್ಟು ಚೇತರಿಕೆಯ ಶೇ.51ರಷ್ಟು ಪ್ರಕರಣ

Posted On: 07 JAN 2021 12:11PM by PIB Bengaluru

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಇಂದು ಮಹತ್ವದ ದಾಪುಗಾಲು. ದೇಶದಲ್ಲಿ ಕೋವಿಡ್‌ನಿಂದ ಗುಣಮುಖರ ಸಂಖ್ಯೆ 1 ಕೋಟಿಯನ್ನು ಮೀರಿದೆ (1,00,16,859). ಭಾರತದ ಚೇತರಿಕೆ ಸಂಖ್ಯೆ ಇಡೀ ವಿಶ್ವದಲ್ಲೇ ಅತ್ಯಧಿಕ.

ಕಳೆದ 24 ಗಂಟೆಗಳ ಅವಧಿಯಲ್ಲಿ 19,587 ರೋಗಿಗಳು ಚೇತರಿಸಿಕೊಂಡು, ಬಿಡುಗಡೆಯಾಗಿದ್ದಾರೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಇದರೊಂದಿಗೆ ಶೇ.96.36 ಆಗಿದೆ. ಸಕ್ರಿಯ ಪ್ರಕರಣ ಮತ್ತು ಚೇತರಿಕೆ ನಡುವಿನ ಅಂತರ ನಿರಂತರವಾಗಿ ಹೆಚ್ಚಾಗುತ್ತಿದೆ (97,88,776) . 

http://static.pib.gov.in/WriteReadData/userfiles/image/image001P24H.jpg

ಸಕ್ರಿಯ ಪ್ರಕರಣಕ್ಕಿಂತ ಚೇತರಿಕೆ ಪ್ರಕರಣದ ಸಂಖ್ಯೆ 44 ಪಟ್ಟು ಹೆಚ್ಚಿದೆ

ಇಂದು ದೇಶದಲ್ಲಿರುವ ಒಟ್ಟು ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 2,28,083, ಅಂದರೆ ಒಟ್ಟು ಪ್ರಕರಣದ ಶೇ.2.19 ಮಾತ್ರ.

http://static.pib.gov.in/WriteReadData/userfiles/image/image002C4B3.jpg

ಶೇ.51ರಷ್ಟು ಚೇತರಿಕೆಯ ಪ್ರಕರಣಗಳು ಐದು ರಾಜ್ಯಗಳಲ್ಲಿ ಅಂದರೆ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿವೆ.

http://static.pib.gov.in/WriteReadData/userfiles/image/image00397E4.jpg

ರಾಷ್ಟ್ರೀಯ ಚೇತರಿಕೆಯ ಪ್ರಮಾಣ ಶೇ.96.36ಆಗಿದೆ. ಅಂತೆಯೆ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಚೇತರಿಕೆ ದರ ಶೇ.90 ಆಗಿದೆ.

http://static.pib.gov.in/WriteReadData/userfiles/image/image00427WL.jpg

ಭಾರತದ ಚೇತರಿಕೆ ದರ ವಿಶ್ವದಲ್ಲೇ ಅತ್ಯಧಿಕವಾಗಿದೆ. ಹೆಚ್ಚಿನ ಸೋಂಕಿನ ಪ್ರಕರಣ ದಾಖಲಿಸುತ್ತಿರುವ ರಾಷ್ಟ್ರಗಳಲ್ಲಿ ಕೂಡ ಚೇತರಿಕೆ ದರ ಭಾರತಕ್ಕಿಂತ ಕಡಿಮೆ ವರದಿಯಾಗುತ್ತಿದೆ.

http://static.pib.gov.in/WriteReadData/userfiles/image/image0059JMR.jpg

ಪರೀಕ್ಷಾ ಮೂಲಸೌಕರ್ಯದಲ್ಲಿ ವಿಸ್ತರಣೆ ಮಾಡಲಾಗಿದ್ದು, ಭಾರತದಲ್ಲಿ ಸೋಂಕಿನ ಪ್ರಕಣಗಳ ದರ ಇಳಿಕೆಯಾಗಿದೆ. ದೈನಿಕ ಸೋಂಕಿನ ದರ ಶೇ.3ಕ್ಕಿಂತ ಕಡಿಮೆ ಇದೆ.

http://static.pib.gov.in/WriteReadData/userfiles/image/image006A9HR.jpg

17 ರಾಜಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಾರದ ಸೋಂಕಿನ ದರ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ.

http://static.pib.gov.in/WriteReadData/userfiles/image/image007VIAE.jpg

ಶೇ.79.08 ಹೊಸ ಚೇತರಿಕೆ ಪ್ರಕರಣಗಳು 10 ರಾಜ್ಯ/ಕೇಂದ್ರಾಡಳಿತ  ಪ್ರದೇಶಗಳಲ್ಲಿವೆ.

ಕೇರಳ 5,110 ಹೊಸ ಚೇತರಿಕೆ ಪ್ರಕರಣದೊಂದಿಗೆ ಏಕದಿನ ಚೇತರಿಕೆಯಲ್ಲಿ ಮೊದಲಿದ್ದು, ಮಹಾರಾಷ್ಟ್ರ2,570ರೊಂದಿಗೆ ಎರಡನೇ ಸ್ಥಾನದಲ್ಲಿದೆ

http://static.pib.gov.in/WriteReadData/userfiles/image/image008WRT5.jpg

ಹೊಸದಾಗಿ ಸೋಂಕು ದೃಢಪಟ್ಟ ಶೇ. 83.88 ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿವೆ.

ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 6,394 ಪ್ರಕರಣಗಳು ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ 4,382 ಹೊಸ ಪ್ರಕರಣಗಳು ದಾಖಲಾಗಿವೆ.,ಛತ್ತೀಸ್‌ ಗಡದಲ್ಲಿ ನಿನ್ನೆ 1,050 ಹೊಸ ಪ್ರಕರಣಗಳು ದಾಖಲಾಗಿವೆ.

http://static.pib.gov.in/WriteReadData/userfiles/image/image009GYMK.jpg

ಕಳೆದ 24 ಗಂಟೆಗಳ ಅವಧಿಯಲ್ಲಿ 222 ಮಂದಿ ಮೃತಪಟ್ಟಿದ್ದಾರೆ. ಪೈಕಿ ಶೇ.67.57 ಆರು ರಾಜ್ಯ/ ಕೇಂದ್ರಾಡಳಿತಪ್ರ ದೇಶಗಳಲ್ಲಿವೆ.

ಮಹಾರಾಷ್ಟ್ರದಲ್ಲಿ ಗರಿಷ್ಠ ಏಕದಿನ ಸಾವಿನ ಸಂಖ್ಯೆ (66 ಸಾವು) ವರದಿಯಾಗಿದೆ. ಕೇರಳದಲ್ಲಿ 25 ಹಾಗೂ ಪಶ್ಚಿಮ ಬಂಗಾಳದಲ್ಲಿ 22 ಹೊಸ ಸಾವು ವರದಿಯಾಗಿದೆ.

http://static.pib.gov.in/WriteReadData/userfiles/image/image010W5BL.jpg

***(Release ID: 1686790) Visitor Counter : 149