ವಾರ್ತಾ ಮತ್ತು ಪ್ರಸಾರ ಸಚಿವಾಲಯ

51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI) ಮಾಧ್ಯಮ ನೋಂದಣಿ ಆರಂಭ


ಆನ್ ಲೈನ್ ಮೂಲಕ ಭಾಗವಹಿಸುವಿಕೆಗೆ ಉತ್ತೇಜನ

Posted On: 30 DEC 2020 11:13AM by PIB Bengaluru

2021ರ ಜನವರಿ 16 ರಿಂದ 24 ರವರೆಗೆ ಗೋವಾದಲ್ಲಿ ಜರುಗಲಿರುವ 51ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲಿಚ್ಚಿಸುವ ಮಾಧ್ಯಮ ಪ್ರತಿನಿಧಿಗಳಿಗೆ ನೋಂದಣಿ ಕಾರ್ಯ ಆರಂಭವಾಗಿದೆ.

 ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, 51ನೇ ಐಎಫ್ ಎಫ್ ಐ ಅನ್ನು ಹೈಬ್ರೀಡ್ ರೂಪದಲ್ಲಿ ನಡೆಸಲಾಗುವುದು.

ಕೋವಿಡ್-19 ಸಂಬಂಧಿ ಶಿಷ್ಟಾಚಾರಗಳನ್ನು ಕಾಯ್ದುಕೊಳ್ಳುವ ಸಲುವಾಗಿ, ಗೋವಾದಲ್ಲಿ ನಡೆಯಲಿರುವ ಉತ್ಸವದಲ್ಲಿ ಖುದ್ದು ಪಾಲ್ಗೊಂಡು,  ವರದಿ ಮಾಡುವ ಮಾಧ್ಯಮ ಪ್ರತಿನಿಧಿಗಳ ಸಂಖ್ಯೆ ಎಂದಿಗಿಂತ ಈ ಭಾರಿ ಕಡಿಮೆ ಇರಲಿದೆ.

ಆಸಕ್ತ ಮಾಧ್ಯಮ ಪ್ರತಿನಿಧಿಗಳು ಖುದ್ದು ಉತ್ಸವದಲ್ಲಿ ಭಾಗವಹಿಸಲು ಇಚ್ಚಿಸುವವರು ಈ ಲಿಂಕ್ https://my.iffigoa.org/extranet/media/ ನ್ನು ಬಳಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಅರ್ಜಿದಾರರು 2020ರ ಜನವರಿ 1ಕ್ಕೆ 21 ವರ್ಷ ಪೂರ್ಣಗೊಂಡಿರಬೇಕು ಮತ್ತು ಐಎಫ್ ಎಫ್ ಐನಂತಹ ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ವರದಿ ಮಾಡಿದ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು. ಪಿಐಬಿಯ ಪ್ರಧಾನ ಮಹಾನಿರ್ದೇಶಕರು ಅನುಮೋದಿಸುವ ಮಾರ್ಗಸೂಚಿಯಂತೆ ಮಾಧ್ಯಮ ಮಾನ್ಯತೆಯನ್ನು ನೀಡಲಾಗುವುದು.

ನೋಂದಣಿಯ ಅವಧಿ 2021ರ ಜನವರಿ 10ರ ಮಧ್ಯರಾತ್ರಿಗೆ ಮುಕ್ತಾಯವಾಗಲಿದೆ.

 

<><><>

ಆನ್ ಲೈನ್  ವಿಧಾನದ ಮೂಲಕ ಭಾಗವಹಿಸಲು ಅವಕಾಶ

ಚಲನಚಿತ್ರೋತ್ಸವ ಸಂಬಂಧಿ ಚಟುವಟಿಕೆಗಳಲ್ಲಿ ವರ್ಚುವಲ್ ಮೂಲಕ ಭಾಗವಹಿಸಲು ಅವಕಾಶವಿರಲಿದೆ. ಆನ್ ಲೈನ್ ಮೂಲಕ ಹಲವು ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಐಎಫ್ಎಫ್ ಐ ನ ಎಲ್ಲ ಸುದ್ದಿಗೋಷ್ಠಿಗಳನ್ನು ಪಿಐಬಿಯ ಯೂಟ್ಯೂಬ್ ಚಾನಲ್ youtube.com/pibindia ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುವುದು ಮತ್ತು ಪತ್ರಕರ್ತರಿಗೆ ಆನ್ ಲೈನ್ ಮೂಲಕ ಪ್ರಶ್ನೆಗಳನ್ನು ಕೇಳಲು ಅವಕಾಶವಿದೆ.

ಆನ್ ಲೈನ್ ನಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

* * *


(Release ID: 1684661) Visitor Counter : 242