ಪ್ರಧಾನ ಮಂತ್ರಿಯವರ ಕಛೇರಿ

ವ್ಯವಸ್ಥೆ ಮತ್ತು ಪ್ರಕ್ರಿಯೆಯ ಕ್ರೋಡೀಕರಣದ ಮೂಲಕ ‘ಏಕ ಭಾರತ ಶ್ರೇಷ್ಠ ಭಾರತ’ ವಿವರಿಸಿದ ಪ್ರಧಾನಮಂತ್ರಿ


‘ಕನಿಷ್ಠ ಸರ್ಕಾರ – ಗರಿಷ್ಠ ಆಡಳಿತ’ ದೇಶವ್ಯಾಪಿ ಏಕೀಕೃತ ಸೇವೆಯಲ್ಲಿ ರೂಪ ತಳೆಯುತ್ತಿದೆ

प्रविष्टि तिथि: 28 DEC 2020 1:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಪ್ರಥಮ ಚಾಲಕ ರಹಿತ ಮೆಟ್ರೋ ಕಾರ್ಯಾಚರಣೆಯನ್ನು ಉದ್ಘಾಟಿಸಿ, ದೆಹಲಿ ಮೆಟ್ರೋದ ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ರಾಷ್ಟ್ರೀಯ ಸಮಾನ ಸಾರಿಗೆ ಕಾರ್ಡ್ ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಕಳೆದ ವರ್ಷ ಈ ಕಾರ್ಡ್ ಅಹಮದಾಬಾದ್ ನಲ್ಲಿ ಆರಂಭವಾಯಿತು. ಚಾಲನೆ ನೀಡಿದ ಸಂದರ್ಭದಲ್ಲಿ ಶ್ರೀ ಮೋದಿಯವರು ತಮ್ಮ ‘ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ’ ಎಂಬ ಮಂತ್ರದ ಅತ್ಯಂತ ನಿರ್ಣಾಯಕ ಅಂಶಗಳು, ಅಂದರೆ ‘ಏಕ ಭಾರತ, ಶ್ರೇಷ್ಠ ಭಾರತ’ ದೃಷ್ಟಿಯನ್ನು ಬಲಪಡಿಸಲು ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳ ಏಕೀಕರಣದ ಮೇಲೆ ಬೆಳಕು ಚೆಲ್ಲಿದರು.
ಆಧುನೀಕರಣಕ್ಕೆ ಒಂದೇ ರೀತಿಯ ಗುಣಮಟ್ಟ ಮತ್ತು ಸೌಲಭ್ಯಗಳನ್ನು ಒದಗಿಸುವುದು ಬಹಳ ಮುಖ್ಯ ಎಂದು ಪ್ರಧಾನಮಂತ್ರಿ ಹೇಳಿದರು. ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಚಲನಶೀಲತೆ ಕಾರ್ಡ್ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಒಂದು ಕಾರ್ಡ್ ಪ್ರಯಾಣಿಕರು ಎಲ್ಲಿಗೆ ಹೋದರೂ, ಅವರು ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಅವರಿಗೆ ಸಮಗ್ರ ಪ್ರವೇಶ ನೀಡುತ್ತದೆ ಎಂದರು.

 


ಸಮಾನ ಸಾರಿಗೆ ಕಾರ್ಡ್ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ‘ಸುಗಮ ಜೀವನ’ ಸುಧಾರಣೆಗಾಗಿ ಈ ಎಲ್ಲ ವ್ಯವಸ್ಥೆಗಳ ಕ್ರೋಡೀಕರಣ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು. ಅಂಥ ವ್ಯವಸ್ಥೆಗಳ ಕ್ರೋಡೀಕರಣದ ಮೂಲಕ ದೇಶದ ಶಕ್ತಿ ಇನ್ನೂ ಉತ್ತಮ ಸಹಯೋಗಿ ಮತ್ತು ಸಮರ್ಥ ಮಾರ್ಗದಲ್ಲಿ ಬಳಕೆಯಾಗುತ್ತದೆ ಎಂದರು.  “ಒಂದು ರಾಷ್ಟ್ರ ಒಂದು ಸಾರಿಗೆ ಕಾರ್ಡ್ ನಂತೆ ನಮ್ಮ ಸರ್ಕಾರ ಕಳೆದ ಕೆಲವು ವರ್ಷಗಳಲ್ಲಿ ದೇಶದ ವ್ಯವಸ್ಥೆಯ ಏಕೀಕರಣಕ್ಕೆ ಹಲವು ಕಾರ್ಯ ಮಾಡಿದೆ ಎಂದು ಶ್ರೀ ಮೋದಿ ಹೇಳಿದರು.  

 


ಒಂದು ರಾಷ್ಟ್ರ, ಒಂದು ಫಾಸ್ಟ್ ಟ್ಯಾಗ್ ದೇಶಾದ್ಯಂತ ಹೆದ್ದಾರಿಗಳಲ್ಲಿ ಪ್ರಯಾಣವನ್ನು ತಡೆರಹಿತಗೊಳಿಸಿದೆ. ಇದು ಪ್ರಯಾಣಿಸುವವರಿಗೆ ಆಗುತ್ತಿದ್ದ ವಿಳಂಬ ತಪ್ಪಿಸಿದೆ. ಒಂದು ದೇಶ ಒಂದು ತೆರಿಗೆ ಅಂದರೆ ಜಿಎಸ್ಟಿ ತೆರಿಗೆ ವ್ಯವಸ್ಥೆಯಲ್ಲಿದ್ದ ಸಂಕೀರ್ಣತೆಯನ್ನು ಕೊನೆಗಾಣಿಸಿದೆ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಏರರೂಪತೆ ತಂದಿದೆ. ಒಂದು ರಾಷ್ಟ್ರ ಒಂದು ಪವರ್ ಗ್ರಿಡ್ ಸೂಕ್ತ ಪ್ರಮಾಣದ ಮತ್ತು ನಿರಂತರ ವಿದ್ಯುತ್ ಲಭ್ಯತೆಯನ್ನು ದೇಶದ ಎಲ್ಲ ಭಾಗದಲ್ಲೂ ಖಾತ್ರಿಪಡಿಸುತ್ತಿದೆ, ವಿದ್ಯುತ್ ಸೋರಿಕೆ ತಗ್ಗಿದೆ ಎಂದರು.

 


ಒಂದು ರಾಷ್ಟ್ರ ಒಂದು ಗ್ಯಾಸ್ ಗ್ರಿಡ್, ತಡೆರಹಿತ ಅನಿಲ ಸಂಪರ್ಕದೊಂದಿಗೆ ಕನಸಾಗಿದ್ದ ಅನಿಲ ಆಧಾರಿತ ಮತ್ತು ಅನಿಲ ಉಳಿತಾಯದ ಖಾತ್ರಿಪಡಿಸಿದೆ. ಒಂದು ರಾಷ್ಟ್ರ ಒಂದು ಆರೋಗ್ಯ ವಿಮೆ ಯೋಜನೆ ಅಂದರೆ ಆಯುಷ್ಮಾನ್ ಭಾರತ್ ಮೂಲಕ ಭಾರತದ ಲಕ್ಷಾಂತರ ಜನರು ದೇಶದ ಮೂಲೆ ಮೂಲೆಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿಯ ಮೂಲಕ ಹೊಸ ಪಡಿತರ ಚೀಟಿಗಳನ್ನು ತಯಾರಿಸುವ ತೊಂದರೆ ತಪ್ಪಿಸಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ನಾಗರಿಕರಿಗೆ ಸ್ವಾತಂತ್ರ್ಯ ನೀಡಲಾಗಿದೆ, ಅದೇ ರೀತಿ, ಹೊಸ ಕೃಷಿ ಸುಧಾರಣೆಗಳು ಮತ್ತು ವ್ಯವಸ್ಥೆಗಳಿಂದಾಗಿ ದೇಶವು ಒಂದು ರಾಷ್ಟ್ರ, ಇ-ನಾಮ್ ನಂಥ ಒಂದು ಕೃಷಿ ಮಾರುಕಟ್ಟೆಯ ದಿಕ್ಕಿನತ್ತ ಸಾಗುತ್ತಿದೆ ಎಂದರು.

 

****

 


(रिलीज़ आईडी: 1684189) आगंतुक पटल : 251
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Bengali , Manipuri , Assamese , Punjabi , Gujarati , Tamil , Telugu , Malayalam