ಪ್ರಧಾನ ಮಂತ್ರಿಯವರ ಕಛೇರಿ

ಐಐಎಸ್ಎಫ್ 2020 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ವಿಶ್ವದರ್ಜೆಯ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಲು ಭಾರತದಲ್ಲಿ ಅಗತ್ಯ ದತ್ತಾಂಶ, ಜನಸಂಖ್ಯೆ, ಬೇಡಿಕೆ ಪ್ರಜಾಪ್ರಭುತ್ವವಿದೆ: ಪ್ರಧಾನಮಂತ್ರಿ

ದೇಶದ ಅಭಿವೃದ್ಧಿಗೆ ವಿಜ್ಞಾನದ ಅಭಿವೃದ್ಧಿಯೂ ಅತ್ಯಗತ್ಯವೆಂದು ಪ್ರತಿಪಾದನೆ

ಜಾಗತಿಕ ಸಮುದಾಯ, ಭಾರತೀಯ ಪ್ರತಿಭೆ ಮತ್ತು ಆವಿಷ್ಕಾರಗಳ ಹೂಡಿಕೆಗೆ ಕರೆ

Posted On: 22 DEC 2020 5:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳ (ಐಐಎಸ್ಎಫ್) 2020 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು. ಕೇಂದ್ರ ಸಚಿವ ಡಾ. ಹರ್ಷವರ್ಧನ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಭಾರತ ಶ್ರೀಮಂತ ವೈಭವವನ್ನು ಹೊಂದಿದೆ ಎಂದರು. ನಮ್ಮ ವಿಜ್ಞಾನಿಗಳು ಹಲವು ಮಹತ್ವದ ಸಂಶೋಧನೆಗಳನ್ನು ಕೈಗೊಂಡಿದ್ದಾರೆ ಎಂದ ಅವರು, ನಮ್ಮ ತಂತ್ರಜ್ಞಾನ ಉದ್ಯಮ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ ಎಂದರು. ಆದರೆ ಭಾರತ ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ. ಹಿಂದಿನ ಸಾಧನೆಯನ್ನು ಹೆಮ್ಮೆಯಿಂದ ನೋಡುವ ನಾವು ಉತ್ತಮ ಭವಿಷ್ಯವನ್ನು ಎದುರು ನೋಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ನಮ್ಮೆಲ್ಲಾ ಪ್ರಯತ್ನಗಳ ಗುರಿ ಭಾರತವನ್ನು ವೈಜ್ಞಾನಿಕ ಕಲಿಕೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಕೇಂದ್ರವನ್ನಾಗಿ ಮಾಡುವುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದೇ ವೇಳೆ ನಮ್ಮ ವೈಜ್ಞಾನಿಕ ಸಮುದಾಯ ಜಾಗತಿಕ ಪ್ರತಿಭೆಯ ಅತ್ಯುತ್ತಮವಾದುದನ್ನು ಹಂಚಿಕೊಂಡು ಬೆಳೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು. ನಿಟ್ಟಿನಲ್ಲಿ ಗುರಿ ಸಾಧನೆಗೆ ನಾವು ಕೈಗೊಂಡಿರುವ ಒಂದು ಕ್ರಮವೆಂದರೆ ಭಾರತೀಯ ವಿಜ್ಞಾನಿಗಳಿಗೆ ಅವಕಾಶಗಳನ್ನು ಮತ್ತು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಗಳನ್ನು ಒದಗಿಸಲು ಹ್ಯಾಕಥಾನ್ ಗಳನ್ನು ಆಯೋಜಿಸುವುದಾಗಿದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಚಿಕ್ಕಿಂದಿನಿಂದಲೇ ವೈಜ್ಞಾನಿಕ ಮನೋಭಾವ ಬೆಳವಣಿಗೆಗೆ ಒತ್ತು ನೀಡಲಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಇದೀಗ ನಮ್ಮ ಗಮನ ಒಳನೋಟದಿಂದ ಹೊರನೋಟಕ್ಕೆ ಮತ್ತು ಪಠ್ಯಕ್ರಮದಿಂದ ಸಂಶೋಧನೆ ಮತ್ತು ಅದನ್ನು ಅನ್ವಯಿಸುವುದಕ್ಕೆ ವರ್ಗಾವಣೆಗೊಂಡಿದೆ. ನೀತಿಯಲ್ಲಿ ಉನ್ನತ ಗುಣಮಟ್ಟದ ಶಿಕ್ಷಕರ ಪಡೆಯನ್ನು ಸೃಷ್ಟಿಸಲು ಉತ್ತೇಜನ ಸಿಗಲಿದೆ. ಮನೋಭಾವದಿಂದಾಗಿ ಉದಯೋನ್ಮುಖ ವಿಜ್ಞಾನಿಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಇದಕ್ಕೆ ಪೂರಕವಾಗಿ ಅಟಲ್ ಆವಿಷ್ಕಾರ ಮಿಷನ್ ಮತ್ತು ಅಟಲ್ ಚಿಂತನಾ ಪ್ರಯೋಗಾಲಯಗಳ ಮೂಲಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಗುಣಮಟ್ಟದ ಸಂಶೋಧನೆಗಾಗಿ ಸರ್ಕಾರ ಪ್ರಧಾನಮಂತ್ರಿಗಳ ಸಂಶೋಧನಾ ಫೆಲೋಶಿಪ್ ಯೋಜನೆಯನ್ನು ನಡೆಸುತ್ತಿದೆ. ಮೂಲಕ ದೇಶದ ಪ್ರತಿಭಾವಂತ ಸಮುದಾಯ ತಮ್ಮ ಪ್ರತಿಭೆ ಮತ್ತು ಆಸಕ್ತಿಗೆ ತಕ್ಕಂತೆ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜನ ನೀಡಲಾಗುತ್ತಿದೆ. ಯೋಜನೆಯಿಂದ ಶ್ರೇಷ್ಠ ಸಂಸ್ಥೆಗಳಿಂದ ವಿಜ್ಞಾನಿಗಳಿಗೆ ಸಹಾಯ ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಜನಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಾಮುಖ್ಯತೆ ನೀಡಿ, ಆದ್ಯತೆ ಮೇಲೆ ಕೆಲಸ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕೊರತೆ ಮತ್ತು ಪರಿಣಾಮದ ನಡುವಿನ ಅಂತರವನ್ನು ದೂರ ಮಾಡುತ್ತಿದೆ ಎಂದು ಅವರು ಹೇಳಿದರು. ಅಲ್ಲದೆ ಅದು ಬಡವರಲ್ಲಿ ಅತಿ ಕಡುಬಡವರನ್ನು ಸರ್ಕಾರದ ಜೊತೆ ಸಂಪರ್ಕ ಹೊಂದುವಂತೆ ಮಾಡುತ್ತಿದೆ. ಡಿಜಿಟಲ್ ಬೆಳವಣಿಗೆಗಳಿಂದಾಗಿ ಭಾರತ ಜಾಗತಿಕ ಉನ್ನತ ತಾಂತ್ರಿಕ ಶಕ್ತಿಯಲ್ಲಿ ಕ್ರಾಂತಿಯನ್ನು ಉಂಟುಮಾಡಿ, ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರವಾಗಿ ರೂಪುಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಶಿಕ್ಷಣ, ಆರೋಗ್ಯ, ಸಂಪರ್ಕ, ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕೆ ವಿಶ್ವದರ್ಜೆಯ ಪರಿಹಾರಗಳನ್ನು ಕಂಡುಕೊಳ್ಳಲು ಭಾರತ ದತ್ತಾಂಶ ಜನಸಂಖ್ಯೆ ಮತ್ತು ಬೇಡಿಕೆಯನ್ನು ಹೊಂದಿದೆ. ಇದೆಲ್ಲಕ್ಕೂ ಮುಖ್ಯವಾಗಿ ಭಾರತದಲ್ಲಿ ಎಲ್ಲವನ್ನೂ ಸಮತೋಲಿತ ರೀತಿಯಲ್ಲಿ ಕಾಯ್ದುಕೊಳ್ಳಲು ಮತ್ತು ರಕ್ಷಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದೇವೆ. ಅದೇ ಕಾರಣಕ್ಕೆ ಇಡೀ ಜಗತ್ತು ಭಾರತದ ಮೇಲೆ ವಿಶ್ವಾಸವಿಟ್ಟಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು.

ನೀರಿನ ಕೊರತೆ, ಮಾಲಿನ್ಯ, ಮಣ್ಣಿನ ಗುಣಮಟ್ಟ, ಆಹಾರ ಭದ್ರತೆ ಸೇರಿದಂತೆ ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳಿಗೆ ಆಧುನಿಕ ವಿಜ್ಞಾನದಲ್ಲಿ ಪರಿಹಾರಗಳಿವೆ ಎಂದು ಪ್ರಧಾನಮಂತ್ರಿ ಹೇಳಿದರು. ನೀರು, ಇಂಧನ ಮತ್ತು ನಮ್ಮ ಸಮುದ್ರಗಳಲ್ಲಿನ ಆಹಾರ ಸಂಪನ್ಮೂಲಗಳ ಕ್ಷಿಪ್ರ ಅನ್ವೇಷಣೆಯಲ್ಲಿ ವಿಜ್ಞಾನದ ಪಾತ್ರ ಅತಿ ದೊಡ್ಡದಿದೆ ಎಂದು ಅವರು ಹೇಳಿದರು. ಭಾರತ ಆಳವಾದ ಸಮುದ್ರ ಯೋಜನೆಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಸಾಕಷ್ಟು ಸಾಧನೆ ಮಾಡಲಾಗಿದೆ ಎಂದ ಅವರು, ವಿಜ್ಞಾನದಲ್ಲಿನ ಹೊಸ ಆವಿಷ್ಕಾರಗಳ ಪ್ರಯೋಜನದಿಂದ ವಾಣಿಜ್ಯ ಮತ್ತು ವ್ಯಾಪಾರ ಎರಡರಲ್ಲೂ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಇದೀಗ ನಮ್ಮ ಯುವ ಶಕ್ತಿಯನ್ನು ಉತ್ತೇಜಿಸಲು ಬಾಹ್ಯಾಕಾಶ ವಲಯದಲ್ಲೂ ಸಹ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಖಾಸಗಿ ವಲಯಕ್ಕೆ ಕೇವಲ ಆಕಾಶವನ್ನು ಮುಟ್ಟಲಷ್ಟೇ ಅವಕಾಶಗಳಲ್ಲದೆ ಬಾಹ್ಯಾಕಾಶದ ಎತ್ತರಕ್ಕೇರಲು ಸಹ ಅವಕಾಶಗಳು ದೊರಕಲಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ಪಾದನಾ ಆಧಾರಿತ ಪ್ರೋತ್ಸಾಹಕರ ಯೋಜನೆ ಹೊಸದಾಗಿ ಜಾರಿಗೊಳಿಸಲಾಗಿದ್ದು, ಇದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಲಯವಾರು ಗಮನಹರಿಸಲಾಗುತ್ತಿದೆ ಎಂದರು. ಅಂತಹ ಕ್ರಮಗಳಿಂದಾಗಿ ವೈಜ್ಞಾನಿಕ ಸಮುದಾಯಕ್ಕೆ ಉತ್ತೇಜನ ಸಿಗುತ್ತಿದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪೂರಕ ವ್ಯವಸ್ಥೆ ನಿರ್ಮಾಣವಾಗಲಿದೆ. ಆವಿಷ್ಕಾರಕ್ಕೆ ಉತ್ತಮ ಹಾಗೂ ಹೆಚ್ಚಿನ ಸಂಪನ್ಮೂಲಗಳು ಲಭ್ಯವಾಗಲಿವೆ ಮತ್ತು ವಿಜ್ಞಾನ ಮತ್ತು ಉದ್ಯಮದ ನಡುವೆ ಹೊಸ ಪಾಲುದಾರಿಕೆಯ ಸಂಸ್ಕೃತಿ ಸೃಷ್ಟಿಯಾಗಲಿದೆ ಎಂದು ಹೇಳಿದರು. ಉತ್ಸವ ಸಮನ್ವಯದ ಸ್ಫೂರ್ತಿಗೆ ಹೊಸ ಆಯಾಮ ನೀಡಲಿದೆ ಎಂದು ಶುಭ ಕೋರಿದ ಪ್ರಧಾನಮಂತ್ರಿ ಅವರು, ವಿಜ್ಞಾನ ಮತ್ತು ತಂತ್ರಜ್ಞಾನದ ನಡುವಿನ ಹೊಸ ಸಹಭಾಗಿತ್ವದಿಂದಾಗಿ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದರು.

ಸದ್ಯ ವಿಜ್ಞಾನ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಎಂದರೆ ಅದು ಕೋವಿಡ್-19 ಸಾಂಕ್ರಾಮಿಕಕ್ಕೆ ಲಸಿಕೆ ಆಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಆದರೆ ದೀರ್ಘಾವಧಿಯ ಅತಿ ದೊಡ್ಡ ಸಮಸ್ಯೆ ಎಂದರೆ ಉತ್ತಮ ಗುಣಮಟ್ಟದ ಯುವಕರನ್ನು ವಿಜ್ಞಾನದ ಕಡೆಗೆ ಆಕರ್ಷಿಸಿ ಅವರನ್ನು ಅಲ್ಲಿಯೇ ಉಳಿಸಿಕೊಳ್ಳುವುದಾಗಿದೆ ಎಂದರು. ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳತ್ತ ಯುವಕರನ್ನು ಆಕರ್ಷಿಸಲಾಗುತ್ತಿದೆ ಎಂದ ಅವರು, ದೇಶದ ಅಭಿವೃದ್ಧಿಗೆ ವಿಜ್ಞಾನದ ಅಭಿವೃದ್ಧಿಯೂ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸಿದರು. ಇಂದು ವಿಜ್ಞಾನ ಎಂದು ಕರೆಯಲ್ಪಡುವುದು ನಾಳೆ ಅದು ತಂತ್ರಜ್ಞಾನವಾಗುತ್ತದೆ ಮತ್ತು ನಂತರ ಅದು ವಿಜ್ಞಾನದ ಪರಿಹಾರವಾಗುತ್ತದೆ ಎಂದು ಅವರು ಹೇಳಿದರು. ನಮ್ಮ ವಿಜ್ಞಾನ ವಲಯಕ್ಕೆ ಉತ್ತಮ ಪ್ರತಿಭೆಗಳನ್ನು ಆಕರ್ಷಿಸುವುದಕ್ಕೆ ಸರ್ಕಾರ ನಾನಾ ಹಂತಗಳಲ್ಲಿ ವಿದ್ಯಾರ್ಥಿವೇತನಗಳ ಮೂಲಕ ಹಲವು ಕ್ರಮಗಳನ್ನು ಪ್ರಕಟಿಸಿದೆ ಎಂದರು. ಆದರೆ ಇದಕ್ಕೆ ವಿಜ್ಞಾನ ಸಮುದಾಯದಲ್ಲೂ ಭಾರೀ ಉತ್ತೇಜನ ನೀಡುವ ಅಗತ್ಯವಿದೆ ಎಂದು ಹೇಳಿದರು. ಚಂದ್ರಯಾನ ಯೋಜನೆಯ ಸುತ್ತಮುತ್ತ ಸಾಕಷ್ಟು ಆಕರ್ಷಣೆಗಳಿವೆ. ಇದು ಯುವಜನರಲ್ಲಿ ಆಸಕ್ತಿಯನ್ನು ಹುಟ್ಟಿಸಲು ಅತ್ಯಂತ ಪ್ರಮುಖ ಆರಂಭವಾಗಲಿದೆ ಎಂದು ಹೇಳಿದರು.  

ಭಾರತದ ಪ್ರತಿಭೆಯಲ್ಲಿ ಮತ್ತು ಭಾರತದ ಆವಿಷ್ಕಾರಗಳಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಮಂತ್ರಿ ಅವರು ಕರೆ ನೀಡಿದರು. ಮುಕ್ತ ಸಂಸ್ಕೃತಿಯನ್ನು ಆಚರಿಸಲು ಮತ್ತು ಪಾರದರ್ಶಕತೆ ಮೂಡಲು ಭಾರತದಲ್ಲಿನ ಅತ್ಯುತ್ತಮ ವಿಜ್ಞಾನಿಗಳು ಒಂದೆಡೆ ಸೇರಬೇಕು ಎಂದು ಅವರು ಹೇಳಿದರು. ಭಾರತ ಸರ್ಕಾರ ದೇಶದಲ್ಲಿ ಸಂಶೋಧನಾ ವಾತಾವರಣವನ್ನು ಸುಧಾರಿಸಲು ಮತ್ತು ಯಾವುದೇ ಸವಾಲನ್ನು ಎದುರಿಸಲು ಸರ್ವಸನ್ನದ್ಧವಾಗಿದೆ ಎಂದು ಅವರು ಹೇಳಿದರು. ವಿಜ್ಞಾನ ವ್ಯಕ್ತಿಯಲ್ಲಿನ ಅತ್ಯುತ್ತಮವಾದುದನ್ನು ಹೊರತರುತ್ತದೆ ಮತ್ತು ವ್ಯತ್ಯಾಸದ ಶಕ್ತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ನಮ್ಮ ವಿಜ್ಞಾನಿಗಳು ಭಾರತವನ್ನು ಮುಂಚೂಣಿಯಲ್ಲಿಟ್ಟದ್ದಾರೆ ಎಂದು ಶ್ಲಾಘಿಸಿದ ಅವರು, ಕೊರೊನಾ ವಿರುದ್ಧದ ಸಮರದಲ್ಲಿ ದೇಶ ಇತರೆ ದೇಶಗಳಿಗಿಂತ ಅತ್ಯುತ್ತಮ ಸ್ಥಾನದಲ್ಲಿರುವಂತೆ ಮಾಡಿದ್ದಾರೆ ಎಂದು ಹೇಳಿದರು.

***



(Release ID: 1682897) Visitor Counter : 198