ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್ 24 ರಂದು ವಿಶ್ವ ಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಿ ಭಾಷಣ

ಪ್ರಕಟಣಾ ದಿನಾಂಕ: 22 DEC 2020 2:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 2020 ಡಿಸೆಂಬರ್ 24ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರು ಮತ್ತು ಕೇಂದ್ರ ಶಿಕ್ಷಣ ಸಚಿವರು ಭಾಗವಹಿಸಲಿದ್ದಾರೆ

ವಿಶ್ವ ಭಾರತಿ ಕುರಿತು

ಗುರುದೇವ ರವೀಂದ್ರನಾಥ್ ಠ್ಯಾಗೂರ್ ಅವರು 1921ರಲ್ಲಿ ಇದನ್ನು ಸ್ಥಾಪಿಸಿದರು. ವಿಶ್ವ ಭಾರತಿ ದೇಶದ ಅತ್ಯಂತ ಹಳೆಯ ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ. 1951 ಮೇ ತಿಂಗಳಿನಲ್ಲಿ ವಿಶ್ವಭಾರತಿಯನ್ನು ಕೇಂದ್ರೀಯ ವಿಶ್ವವಿದ್ಯಾಲಯ ಎಂದು ಘೋಷಿಸಲಾಯಿತು ಮತ್ತು ಸಂಸತ್ತಿನ ಕಾಯ್ದೆಯ ಅನುಸಾರ ಸಂಸ್ಥೆಯನ್ನು ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆಯನ್ನಾಗಿಮಾಡಲಾಯಿತು. ವಿಶ್ವವಿದ್ಯಾಲಯ ಗುರುದೇವ ಠ್ಯಾಗೂರ್ ಅವರು ರೂಪಿಸಿದ ಶಿಕ್ಷಣ ಶಾಸ್ತ್ರದ ಮೇಲೆ ನಡೆಯುತ್ತಿದ್ದು, ಕ್ರಮೇಣ ಅದು ಬೇರೆಡೆ ಅಭಿವೃದ್ಧಿಗೊಂಡಿರುವ ಆಧುನಿಕ ವಿಶ್ವವಿದ್ಯಾಲಯಗಳಲ್ಲಿ ಅನುಸರಿಸುತ್ತಿರುವ ಮಾದರಿಗಳನ್ನು ಅನುಸರಿಸಲಾರಂಭಿಸಿತು. ಪ್ರಧಾನಮಂತ್ರಿ ಅವರು ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದಾರೆ.

***


(ಪ್ರಕಟಣೆ ಐ.ಡಿ.: 1682683) ವಿಸಿಟರ್ ಕೌಂಟರ್ : 239