ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷಕ್ಕೆ ಇಳಿಕೆ; 163 ದಿನಗಳಲ್ಲಿ ಅತ್ಯಂತ ಕನಿಷ್ಠ

ಕೊರೊನಾ ಪ್ರಕರಣಗಳ ಶೇ.3% ಗಿಂತ ಸಕ್ರಿಯ ಪ್ರಕರಣಗಳು ಇಳಿಕೆ

ದೈನಂದಿನ ಹೊಸ ಪ್ರಕರಣಗಳು 20 ಸಾವಿರಕ್ಕಿಂತ ಕಡಿಮೆ; 173 ದಿನಗಳಲ್ಲಿ ಅತ್ಯಂತ ಕನಿಷ್ಠ

Posted On: 22 DEC 2020 11:54AM by PIB Bengaluru

ಕೊರೊನಾ ಸೋಂಕು ನಿಯಂತ್ರಣ ಹೋರಾಟದಲ್ಲಿ ಭಾರತ ಹಲವು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.

ಭಾರತದಲ್ಲಿ ಕಳೆದ 24 ತಾಸುಗಳಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷ (2,92,518) ಮಟ್ಟದಿಂದ ಇಳಿಕೆ. ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪಾಲು ಮತ್ತಷ್ಟು ಇಳಿಕೆ ಕಂಡಿದ್ದು, ಅದೀಗ 2.90%ಗೆ ಕುಸಿತ ಕಂಡಿದೆ. 163 ದಿನಗಳ ನಂತರ ಅತ್ಯಂತ ಕನಿಷ್ಠ ಪ್ರಮಾಣ ಇದಾಗಿದೆ. 2020 ಜುಲೈ 12ರಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,92,258.

ಕಳೆದ 24 ತಾಸುಗಳಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 11,121ರಷ್ಟು ಇಳಿಕೆ ಆಗಿದೆ.

ದೈನಂದಿನ ಹೊಸ ಪ್ರಕರಣಗಳ ದಾಖಲು ಇಳಿಕೆಯಾಗಿದ್ದು, ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಕಳೆದ 24 ತಾಸುಗಳಲ್ಲಿ 19,556 ಹೊಸ ಪ್ರಕರಣಗಳು ದೃಢಪಟ್ಟಿದ್ದು, 173 ದಿನಗಳ ನಂತರ ರಾಷ್ಟ್ರೀಯ ಸರಾಸರಿ 20,000 ಮಟ್ಟದಿಂದ ಕೆಳಕ್ಕೆ ಇಳಿದಿದೆ. 2020 ಜುಲೈ 2ರಂದು 19,148 ಹೊಸ ಪ್ರಕರಣಗಳು ಪತ್ತೆಯಾಗಿದ್ದವು.

ಪ್ರತಿ 10 ಲಕ್ಷ ಜನರಲ್ಲಿ ಕೇವಲ 219 (ಸಕ್ರಿಯ ಪ್ರಕರಣಗಳು) ಮಂದಿಗೆ ಮಾತ್ರ ಭಾರತದಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ಅಮೆರಿಕ, ಇಟಲಿ, ಬ್ರೆಜಿಲ್, ಟರ್ಕಿ ಮತ್ತು ರಷ್ಯಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ.

ಇಲ್ಲಿಯ ತನಕ ಒಟ್ಟು ಗುಣಮುಖರಾದವರ ಸಂಖ್ಯೆ 96 ಲಕ್ಷದ ಗಡಿ ದಾಟಿದೆ(96,36,487). ಇದರ ಪರಿಣಾಮವಾಗಿ ಚೇತರಿಕೆ ದರ 95.65%ಗೆ ಸುಧಾರಣೆ ಕಂಡಿದೆ. ಚೇತರಿಕೆ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ನಿರಂತರ ಬೆಳವಣಿಗೆ ಕಾಣುತ್ತಿದ್ದು, ಪ್ರಸ್ತುತ, ಅದೀಗ 93,43,969ರಷ್ಟಿದೆ.

ಕಳೆದ 24 ತಾಸುಗಳಲ್ಲಿ 30,376 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 25 ದಿನಗಳಿಂದ ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ.

ದಿನನಿತ್ಯ ಉನ್ನತ ಮಟ್ಟದ ಪರೀಕ್ಷಾ ಸೌಲಭ್ಯ ಹಾಗೂ ಏರಿಕೆ ಕಾಣುತ್ತಿರುವ ಚೇತರಿಕೆ ಪ್ರಮಾಣದಿಂದಾಗಿ, ಹೊಸ ಪ್ರಕರಣಗಳು ಗಣನೀಯವಾಗಿ ತಗ್ಗುತ್ತಿದೆ. ಇದರ ಪರಿಣಾಮ ಎಂಬಂತೆ ಸಾವುಗಳು (ಮರಣ ದರ) ಕಡಿಮೆಯಾಗುತ್ತಿವೆ.

Image

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ 75.31% ಹೊಸ ಚೇತರಿಕೆ ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ 6,053 ಸೋಂಕಿತರು ಗುಣಮುಖರಾಗಿದ್ದಾರೆ. ಕೇರಳದಲ್ಲಿ 4,494 ಮತ್ತು ಪಶ್ಚಿಮ ಬಂಗಾಳದಲ್ಲಿ 2,342 ಮಂದಿ ಚೇತರಿಸಿಕೊಂಡಿದ್ದಾರೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 75.69% ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳ ಅವಧಿಯಲ್ಲಿ ಕೇರಳದಲ್ಲಿ ಗರಿಷ್ಠ ಅಂದರೆ 3,423, ಮಹಾರಾಷ್ಟ್ರದಲ್ಲಿ 2,834 ಮತ್ತು ಪಶ್ಚಿಮ ಬಂಗಾಳದಲ್ಲಿ 1,515 ಹೊಸ ಪ್ರಕರಣಗಳು ದೃಢಪಟ್ಟಿವೆ.

ದೇಶಾದ್ಯಂತ ನಿನ್ನೆ ಒಂದೇ ದಿನ 301 ಸಾವುಗಳು ಸಂಭವಿಸಿದ್ದು, ಅದರಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 76.74% ಸಾವುಗಳು ಉಂಟಾಗಿವೆ.

ಮಹಾರಾಷ್ಟ್ರದಲ್ಲಿ 55, ಪಶ್ಚಿಮ ಬಂಗಾಳದಲ್ಲಿ 41 ಮತ್ತು ಕೇರಳದಲ್ಲಿ 27 ಹೊಸ ಸಾವುಗಳು ಸಂಭವಿಸಿವೆ.

***(Release ID: 1682634) Visitor Counter : 106