ಪ್ರಧಾನ ಮಂತ್ರಿಯವರ ಕಛೇರಿ

ಭಾರತ - ಜಪಾನ್ ಸಂವಾದ ಸಮಾವೇಶ: ಪ್ರಧಾನಿ ನರೇಂದ್ರ ಮೋದಿ ಸಂದೇಶ

Posted On: 21 DEC 2020 10:01AM by PIB Bengaluru

ಆತ್ಮೀಯ ಸ್ನೇಹಿತರೆ,

ಆರನೇ ಭಾರತ - ಜಪಾನ್ ಸಂವಾದ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿರುವುದು ಗೌರವದ ಸಂಗತಿಯಾಗಿದೆ. ಐದು ವರ್ಷಗಳ ಹಿಂದೆ, ನಾವು ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅವರೊಂದಿಗೆ ಸರಣಿ ಸಮಾವೇಶಗಳನ್ನು ಪ್ರಾರಂಭಿಸಿದೆವು. ಅಂದಿನಿಂದ, ಸಂವಾದ ನವದೆಹಲಿಯಿಂದ ಟೋಕಿಯೊಗೆ, ಯಾಂಗೊನ್‌ ನಿಂದ ಉಲಾನ್‌ ಬತಾರ್‌ ವರೆಗೆ ಸಾಗಿದೆ. ಪಯಣದಲ್ಲಿ, ಅದು ತನ್ನ ಮೂಲಭೂತ ಉದ್ದೇಶಗಳಾದ: ಮಾತುಕತೆ ಮತ್ತು ಚರ್ಚೆಯನ್ನು ಪ್ರೋತ್ಸಾಹಿಸುವುದು; ಪ್ರಜಾಪ್ರಭುತ್ವ, ಮಾನವತಾವಾದ, ಅಹಿಂಸಾ, ಸ್ವಾತಂತ್ರ್ಯ ಮತ್ತು ಸಹಿಷ್ಣುತೆಯ ನಮ್ಮ ಹಂಚಿಕೆಯ ಮೌಲ್ಯಗಳನ್ನು ಒತ್ತಿ ಹೇಳುವುದು; ಮತ್ತು, ನಮ್ಮ ಪ್ರಾಚೀನ ಆಧ್ಯಾತ್ಮಿಕ ಮತ್ತು ವಿದ್ವತ್ಪೂರ್ಣ ವಿನಿಮಯದ ಸಂಪ್ರದಾಯವನ್ನು ಮುಂದುವರಿಸುವುದಕ್ಕೆ ಅನುಗುಣವಾಗಿದೆ. ಸಂವಾದಕ್ಕೆ ನಿರಂತರ ಬೆಂಬಲ ನೀಡಿದ ಜಪಾನ್ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೆ,

ಭಗವಾನ್ ಬುದ್ಧನ ವಿಚಾರಗಳು ಮತ್ತು ಆದರ್ಶಗಳನ್ನು ವಿಶೇಷವಾಗಿ ಯುವಕರಲ್ಲಿ ಉತ್ತೇಜಿಸಲು ವೇದಿಕೆ ಉತ್ತಮ ಕೆಲಸ ಮಾಡಿದೆ. ಐತಿಹಾಸಿಕವಾಗಿ, ಬುದ್ಧನ ಸಂದೇಶದ ಬೆಳಕು ಭಾರತದಿಂದ ವಿಶ್ವದ ಅನೇಕ ಭಾಗಗಳಿಗೆ ಹರಡಿತು. ಆದಾಗ್ಯೂ, ಬೆಳಕು ಸ್ಥಿರವಾಗಷ್ಟೇ ಉಳಿಯಲಿಲ್ಲ. ಅದು ತಲುಪಿದ ಪ್ರತಿ ಹೊಸ ಸ್ಥಳದಲ್ಲಿ, ಬುದ್ಧನ ಚಿಂತನೆಯು ಶತಮಾನಗಳಿಂದ ಮತ್ತಷ್ಟು ವಿಕಸನಗೊಳ್ಳುತ್ತಲೇ ಇದೆ. ಕಾರಣದಿಂದಾಗಿ, ಬೌದ್ಧ ಸಾಹಿತ್ಯ ಮತ್ತು ತತ್ತ್ವಶಾಸ್ತ್ರದ ದೊಡ್ಡ ಸಂಪತ್ತನ್ನು ವಿವಿಧ ದೇಶಗಳ ಹಲವು ವಿಹಾರಗಳಲ್ಲಿ ಮತ್ತು ವಿವಿಧ ಭಾಷೆಗಳಲ್ಲಿ ಕಾಣಬಹುದು.

ಬರಹದ ವಸ್ತು ಒಟ್ಟಾರೆಯಾಗಿ ಮಾನವಕುಲದ ನಿಧಿಯಾಗಿದೆ. ಅಂತಹ ಎಲ್ಲಾ ಸಾಂಪ್ರದಾಯಿಕ ಬೌದ್ಧ ಸಾಹಿತ್ಯ ಮತ್ತು ಧರ್ಮಗ್ರಂಥಗಳ ಗ್ರಂಥಾಲಯ ರೂಪಿಸುವಂತೆ ನಾನು ಇಂದು ಪ್ರಸ್ತಾಪಿಸಲು ಬಯಸುತ್ತೇನೆ. ಭಾರತದಲ್ಲಿ ಅಂತಹ ಸೌಲಭ್ಯವನ್ನು ರಚಿಸಲು ನಾವು ಹರ್ಷಿಸುತ್ತೇವೆ ಮತ್ತು ಅದಕ್ಕೆ ಸೂಕ್ತವಾದ ಸಂಪನ್ಮೂಲಗಳನ್ನು ಒದಗಿಸುತ್ತೇವೆ. ಗ್ರಂಥಾಲಯವು ಅಂತಹ ಎಲ್ಲಾ ಬೌದ್ಧ ಸಾಹಿತ್ಯದ ಡಿಜಿಟಲ್ ಪ್ರತಿಗಳನ್ನು ವಿವಿಧ ದೇಶಗಳಿಂದ ಸಂಗ್ರಹಿಸುತ್ತದೆ. ಅದು ಅವೆಲ್ಲವನ್ನೂ ಭಾಷಾಂತರಿಸುವ ಗುರಿಯನ್ನು ಇಟ್ಟುಕೊಂಡಿರುತ್ತದೆ ಮತ್ತು ಅದು ಎಲ್ಲ ಬೌದ್ಧ ಸನ್ಯಾಸಿಗಳಿಗೆ ಹಾಗೂ ಬೌದ್ಧ ವಿದ್ವಾಂಸರಿಗೆ ಸುಲಭವಾಗಿ ಸಿಗುವಂತೆ ಮಾಡುತ್ತದೆ. ಗ್ರಂಥಾಲಯ ಕೇವಲ ಸಾಹಿತ್ಯದ ಭಂಡಾರವಷ್ಟೇ ಆಗಿರುವುದಿಲ್ಲ. ಇದು ಸಂಶೋಧನೆ ಮತ್ತು ಚರ್ಚೆಯ ವೇದಿಕೆಯೂ ಆಗಿರುತ್ತದೆ. ಹಾಗೂ ಮಾನವರ ನಡುವೆ, ಸಮಾಜಗಳ ನಡುವೆ ಮತ್ತು ಮನುಷ್ಯ ಮತ್ತು ಪ್ರಕೃತಿಯ ನಡುವೆ ನಿಜವಾದ 'ಸಂವಾದ'ವಾಗಿರುತ್ತದೆ. ಸಮಕಾಲೀನ ಸವಾಲುಗಳ ವಿರುದ್ಧ ಅಂದರೆ ಬಡತನ, ವರ್ಣಭೇದ ನೀತಿ, ಉಗ್ರವಾದ, ಲಿಂಗ ತಾರತಮ್ಯ, ಹವಾಮಾನ ಬದಲಾವಣೆ ಮತ್ತು ಇತರ ಹಲವು ಸವಾಲುಗಳಿಗೆ ಬುದ್ಧನ ಸಂದೇಶಗಳು ನಮ್ಮ ಆಧುನಿಕ ಜಗತ್ತಿಗೆ ಹೇಗೆ ಮಾರ್ಗದರ್ಶನ ನೀಡುತ್ತದೆ ಎಂಬುದನ್ನು ಪರೀಕ್ಷಿಸುವುದನ್ನು ಸಂಶೋಧನಾ ಆದೇಶಗಳು ಒಳಗೊಂಡಿರುತ್ತವೆ.

ಸ್ನೇಹಿತರೆ,

ಸುಮಾರು ಮೂರು ವಾರಗಳ ಹಿಂದೆ ನಾನು ಸಾರನಾಥನಲ್ಲಿದ್ದೆ. ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ನಂತರ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಸ್ಥಳವೆಂದರೆ ಸಾರನಾಥ. ಸಹಾನುಭೂತಿ, ಔದಾರ್ಯ ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ಮಾನವ ಕಲ್ಯಾಣ ಅವರ ಸಂಪೂರ್ಣ ಮಾನವೀಯತೆಯ ಮೌಲ್ಯಗಳನ್ನು ಸ್ವೀಕರಿಸಿ ಪ್ರಪಂಚದಾದ್ಯಂತ ಹರಡಿರುವ ಜ್ಯೋತಿ ಪುಂಜ ಸಾರನಾಥದಿಂದ ಹೊರಹೊಮ್ಮಿತು. ನಿಧಾನವಾಗಿ, ಶಾಂತಿಯುತವಾಗಿ, ಇದು ವಿಶ್ವ ಇತಿಹಾಸದ ಹಾದಿಯನ್ನೇ ಬದಲಾಯಿಸಿತು. ಸಾರಾನಾಥದಲ್ಲಿಯೇ ಭಗವಾನ್ ಬುದ್ಧ ಸವಿವರವಾಗಿ ತನ್ನ ಆದರ್ಶ ಧಮ್ಮದ ಬಗ್ಗೆ ಮಾತನಾಡಿದ್ದು. ಅವರಿಗೆ ಧಮ್ಮ ಪ್ರಾರ್ಥನೆ ಮತ್ತು ಧಾರ್ಮಿಕ ಆಚರಣೆಗಳಿಗಿಂತ ಮಿಗಿಲಾಗಿತ್ತು. ಧಮ್ಮದ ಕೇಂದ್ರದಲ್ಲಿ ಮಾನವರು, ಮತ್ತು ಸಹ ಮಾನವರೊಂದಿಗೆ ಅವರ ಸಂಬಂಧವಿದೆ. ಹೀಗಾಗಿ, ಇತರರ ಜೀವನದಲ್ಲಿ ಸಕಾರಾತ್ಮಕ ಶಕ್ತಿಯಾಗಿರುವುದು ಬಹಳ ಮುಖ್ಯ. ಸಂವಾದ ನಮ್ಮ ಭೂಗ್ರಹದಾದ್ಯಂತ ಸಕಾರಾತ್ಮಕತೆ, ಏಕತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಹರಡುವ ಸ್ಫೂರ್ತಿಯಲ್ಲಿ ಒಂದಾಗಿರಬೇಕು. ಅದೂ ನಮಗೆ ಹೆಚ್ಚು ಅಗತ್ಯವಿರುವ ಸಮಯದಲ್ಲಿ.

ಸ್ನೇಹಿತರೇ,

ಇದು ಹೊಸ ದಶಕದ ಪ್ರಥಮ ಸಂವಾದವಾಗಿದೆ. ಇದು ಮಾನವ ಇತಿಹಾಸದ ಗಂಭೀರ ಸನ್ನಿವೇಶದಲ್ಲಿ ನಡೆಯುತ್ತಿದೆ. ಇಂದಿನ ನಮ್ಮ ಕಾರ್ಯಗಳು ಮುಂಬರುವ ಸಮಯದಲ್ಲಿ ಪ್ರವಚನವನ್ನು ರೂಪಿಸುತ್ತವೆ. ದಶಕ ಮತ್ತು ಅದರಾಚೆ ನಾವಿನ್ಯತೆಯೊಂದಿಗೆ ಒಟ್ಟಿಗೆ ಕಲಿಯುವ ಸಮಾಜಕ್ಕೆ ಸೇರಿದೆ. ಇದು ಪ್ರಕಾಶಮಾನವಾದ ಯುವ ಮನಸ್ಸುಗಳನ್ನು ಪೋಷಿಸುವುದಕ್ಕಾಗಿ ಇರುತ್ತದೆ, ಅವರು ಮುಂದಿನ ಸಮಯದಲ್ಲಿ ಮಾನವೀಯತೆಗೆ ಮೌಲ್ಯವನ್ನು ಸೇರಿಸುತ್ತಾರೆ. ಕಲಿಕೆಯು ನಾವಿನ್ಯತೆಯನ್ನು ಹೆಚ್ಚಿಸುತ್ತದೆ. ತದನಂತರ, ನಾವೀನ್ಯತೆ ಮಾನವ ಸಬಲೀಕರಣದ ಮೂಲಾಧಾರವಾಗುತ್ತದೆ.

ಮುಕ್ತ ಮನಸ್ಸಿನ, ಪ್ರಜಾಪ್ರಭುತ್ವದ ಮತ್ತು ಪಾರದರ್ಶಕ ಸಮಾಜಗಳು,ನಾವಿನ್ಯತೆಗೆ ಉತ್ತಮವಾಗಿ ಹೊಂದುತ್ತವೆ. ಹೀಗಾಗಿ, ಇದು ಹಿಂದೆಂದಿಗಿಂತ ಹೆಚ್ಚಾಗಿ, ನಾವು ಬೆಳವಣಿಗೆ ಕಾಣುವ ದೃಷ್ಟಾಂತವನ್ನು ಬದಲಾಯಿಸುವ ಸಮಯವಾಗಿದೆ. ಜಾಗತಿಕ ಬೆಳವಣಿಗೆಯ ಕುರಿತು ಚರ್ಚೆಗಳು ಕೆಲವರ ನಡುವೆ ಮಾತ್ರ ಆಗುವುದಿಲ್ಲ. ಚರ್ಚೆಯ ಮೇಜು ದೊಡ್ಡದಾಗಿರಬೇಕು. ಕಾರ್ಯಸೂಚಿಯೂ ವಿಶಾಲವಾಗಿರಬೇಕು. ವೃದ್ಧಿಯ ಸ್ವರೂಪ ಮಾನವ ಕೇಂದ್ರಿತ ನಿಲುವು ಅನುಸರಿಸಬೇಕು ಮತ್ತು ನಮ್ಮ ಸುತ್ತಮುತ್ತಲೂ ಸೌಹಾರ್ದತೆ ಇರಬೇಕು.

ಸ್ನೇಹಿತರೇ,

ಹಗೆತನದಲ್ಲಿ ಅದು ಶಾಂತಿಯನ್ನು ಸಾಧಿಸುವುದಿಲ್ಲ ಎಂದು ಸರಿಯಾಗಿ ಉಲ್ಲೇಖಿಸಲಾಗಿದೆ.

यमक वग्गो धम्मपद:

हि वेरेन वेरानि, सम्मन्तीध कुदाचं।

अवेरेन सम्मन्ति, एस धम्मो सनन्तनो॥

ಹಿಂದೆ, ಮಾನವೀಯತೆಯು ಸಹಯೋಗದ ಬದಲು ಮುಖಾಮುಖಿಯ ಹಾದಿಯನ್ನು ಹಿಡಿದಿತ್ತು. ಸಾಮ್ರಾಜ್ಯಶಾಹಿಯಿಂದ ಹಿಡಿದು ವಿಶ್ವ ಯುದ್ಧಗಳವರೆಗೆ. ಶಸ್ತ್ರಾಸ್ತ್ರ ಸ್ಪರ್ಧೆಯಿಂದ ಬಾಹ್ಯಾಕಾಶದವರೆಗೆ ಸ್ಪರ್ಧೆಯಿತ್ತು. ನಾವು ಮಾತುಕತೆಗಳನ್ನು ನಡೆಸುತ್ತಿದ್ದೆವು, ಆದರೆ ಅವರು ಇತರರನ್ನು ಕೆಳಕ್ಕೆ ಎಳೆಯುವ ಗುರಿಯನ್ನು ಹೊಂದಿದ್ದರು. ಈಗ, ನಾವು ಒಟ್ಟಾಗಿ ಏಳೋಣ. ಭಗವಾನ್ ಬುದ್ಧನ ಬೋಧನೆಗಳು, ಆಲೋಚನೆಗಳನ್ನು ದ್ವೇಷದಿಂದ ಸಬಲೀಕರಣದತ್ತ ತಿರುಗಿಸುವ ಶಕ್ತಿಯನ್ನು ಹೊಂದಿವೆ. ಅವರ ಬೋಧನೆಗಳು ನಮ್ಮನ್ನು ವಿಶಾಲ ಹೃದಯಿಗಳನ್ನಾಗಿ ಮಾಡುತ್ತದೆ. ಅವರು ನಮಗೆ ಹೇಳುತ್ತಾರೆ: ಹಿಂದಿನದನ್ನು ಕಲಿಯಿರಿ ಮತ್ತು ಉತ್ತಮ ಭವಿಷ್ಯದತ್ತ ಕೆಲಸ ಮಾಡಿ. ನಮ್ಮ ಭವಿಷ್ಯದ ಪೀಳಿಗೆಗೆ ನಾವು ಮಾಡಬಹುದಾದ ಅತ್ಯುತ್ತಮ ಸೇವೆ ಇದು.

ಸ್ನೇಹಿತರೆ,

ಸಂವಾದದ ತಿರುಳು ಒಟ್ಟುಗೂಡುವುದೇ ಆಗಿದೆ. ಸಂವಾದ ನಮ್ಮಲ್ಲಿರುವ ಉತ್ತಮವಾದ್ದನ್ನು ಒಗ್ಗೂಡಿಸುತ್ತದೆ. ನಮ್ಮ ಪ್ರಾಚೀನ ಮೌಲ್ಯಗಳನ್ನು ಸೆಳೆಯಲು ಮತ್ತು ಮುಂದಿನ ಸಮಯಕ್ಕೆ ತಯಾರಿ ಮಾಡುವ ಸಮಯ ಇದಾಗಿದೆ. ನಾವು ಮಾನವತಾವಾದವನ್ನು ನಮ್ಮ ನೀತಿಗಳ ಅಂತರಂಗದಲ್ಲಿಡಬೇಕು. ನಮ್ಮ ಅಸ್ತಿತ್ವದ ಕೇಂದ್ರ ಆಧಾರ ಸ್ತಂಭವಾಗಿ ನಾವು ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆಯನ್ನು ಮಾಡಬೇಕು. ಸಂವಾದ, ನಮ್ಮೊಂದಿಗೆ, ಸಹ ಮಾನವರೊಂದಿಗೆ ಮತ್ತು ಪ್ರಕೃತಿಯೊಂದಿಗೆ ಮಾತುಕತೆ ಹಾದಿಯಲ್ಲಿ ನಮ್ಮ ದಾರಿಯನ್ನು ಬೆಳಗಿಸಬಹುದು. ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ನಾನು ಅಭಿನಂದಿಸುತ್ತೇನೆ ಮತ್ತು ಅವರ ಚರ್ಚೆಗಳಲ್ಲಿ ಎಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

ಧನ್ಯವಾದಗಳು.

***



(Release ID: 1682343) Visitor Counter : 194