ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಶೇ. 95% ಗಡಿ ದಾಟಿದ ಕೋವಿಡ್-19 ರಾಷ್ಟ್ರೀಯ ಸರಾಸರಿ ಚೇತರಿಕೆ ದರ, ವಿಶ್ವದಲ್ಲೇ ಅತ್ಯಂತ ಗರಿಷ್ಠ
3.4 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು
161 ದಿನಗಳ ನಂತರ 22,065ಕ್ಕೆ ಇಳಿದ ಹೊಸ ಪ್ರಕರಣಗಳು
प्रविष्टि तिथि:
15 DEC 2020 10:42AM by PIB Bengaluru
ಕೋವಿಡ್ -19 ಸೋಂಕು ನಿಯಂತ್ರಣ ಹೋರಾಟದಲ್ಲಿ ಭಾರತ ಹಲವು ಹೊಸ ಮೈಲಿಗಲ್ಲುಗಳನ್ನು ಸಾಧಿಸಿದೆ.
ಕಳೆದ 24 ತಾಸುಗಳಲ್ಲಿ ಹೊಸದಾಗಿ ದೃಢಪಟ್ಟ ಕೊರೊನಾ ಪ್ರಕರಣಗಳ ಸಂಖ್ಯೆ 22,100ಕ್ಕೆ ಇಳಿಕೆ ಕಂಡಿದೆ. 161 ದಿನಗಳ ನಂತರ ದಿನವೊಂದರಲ್ಲಿ 22,065 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಿರಂತರ ಇಳಿಕೆಯ ಹಾದಿ ಹಿಡಿದಿದೆ. 2020 ಜುಲೈ 7ರಂದು 22,252 ಹೊಸ ಪ್ರಕರಣಗಳು ದಾಖಲಾಗಿದ್ದವು.

ಪ್ರತಿದಿನ ಅಧಿಕ ಸಂಖ್ಯೆಯ ಕೊರೊನಾ ಸೋಂಕಿತರು ಗುಣಮುಖರಾಗುತ್ತಿರುವುದರಿಂದ ಮತ್ತು ಸಾವಿನ ಪ್ರಮಾಣ ದಿನೇದಿನೆ ತಗ್ಗುತ್ತಿರುವುದರಿಂದ, ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯ ಇಳಿಕೆ ಪ್ರವೃತ್ತಿ ಮುಂದುವರಿದಿದೆ.
ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3.4 ಲಕ್ಷ ಮಟ್ಟದಿಂದ ಕೆಳಕ್ಕೆ ಇಳಿದಿದೆ. ದೇಶಾದ್ಯಂತ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇದೀಗ 3,39,820ಕ್ಕೆ ತಗ್ಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆಯ ಶೇಕಡ 3.43ರಷ್ಟಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗುತ್ತಿರುವುದರಿಂದ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ದೇಶಾದ್ಯಂತ ಇಲ್ಲಿಯ ತನಕ 94 ಸೋಂಕಿತರು ಗುಣಮುಖರಾಗಿದ್ದಾರೆ (94,22,636). ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆ ಪ್ರಕರಣಗಳ ನಡುವಿನ ಅಂತರ ಹೆಚ್ಚಾಗುತ್ತಿದ್ದು, ಈವರೆಗಿನ ಸಕ್ರಿಯ ಪ್ರಕರಣಗಳ ಸಂಖ್ಯೆ 90,82,816ರಷ್ಟಿದೆ.
ರಾಷ್ಟ್ರೀಯ ಚೇತರಿಕೆ ದರ ಇದೀಗ ಶೇ. 95.12%ಗೆ ಸುಧಾರಣೆ ಕಂಡಿದೆ.

ಭಾರತದ ಚೇತರಿಕೆ ದರ ವಿಶ್ವದಲ್ಲೇ ಅತ್ಯಂತ ಗರಿಷ್ಠವಾಗಿದೆ.

ಕಳೆದ 24 ತಾಸುಗಳಲ್ಲಿ 34,477 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 74.24% ಹೊಸ ಚೇತರಿಕೆ ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಗರಿಷ್ಠ ಸಂಖ್ಯೆಯ ಅಂದರೆ 4,610 ಸೋಂಕಿತರು ಗುಣಮುಖರಾಗಿದ್ದಾರೆ. ಕೇರಳದಲ್ಲಿ 4,481 ಮತ್ತು ಪಶ್ಚಿಮ ಬಂಗಾಳದಲ್ಲಿ 2,980 ಜನರು ಚೇತರಿಸಿಕೊಂಡಿದ್ದಾರೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ ಶೇ. 73.52% ಹೊಸ ಪ್ರಕರಣಗಳು ಪತ್ತೆಯಾಗಿವೆ.
ಮಹಾರಾಷ್ಟ್ರದಲ್ಲಿ ನಿನ್ನೆ ಗರಿಷ್ಠ 2,949, ಕೇರಳದಲ್ಲಿ 2,707 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 354 ಸಾವುಗಳು ಸಂಭವಿಸಿವೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 79.66% ಸಾವುಗಳು ವರದಿಯಾಗಿವೆ.
ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕ್ರಮವಾಗಿ 60 ಸಾವುಗಳು ಸಂಭವಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ 43 ಸಾವುಗಳು ವರದಿಯಾಗಿವೆ.

***
(रिलीज़ आईडी: 1680769)
आगंतुक पटल : 269
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam