ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್‌ 11ರಂದು ಅಂತಾರಾಷ್ಟ್ರೀಯ ಭಾರತಿ ಉತ್ಸವ 2020 ಉದ್ದೇಶಿಸಿ ಪ್ರಧಾನಿ ಭಾಷಣ

ಪ್ರಕಟಣಾ ದಿನಾಂಕ: 09 DEC 2020 9:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಡಿಸೆಂಬರ್ 11ರಂದು ಸಂಜೆ 4.30ಕ್ಕೆ ಅಂತಾರಾಷ್ಟ್ರೀಯ ಭಾರತಿ ಉತ್ಸವ 2020 ಅನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಈ ಉತ್ಸವವನ್ನು ವರ್ಚುವಲ್ ರೂಪದಲ್ಲಿ ಆಯೋಜಿಸಲಾಗಿದೆ ಮತ್ತು ಇದರಲ್ಲಿ ಹಲವು ಹೆಸರಾಂತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕವಿಗಳು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ. ಮಹಾಕವಿ ಸುಬ್ರಮಣ್ಯ ಭಾರತಿ ಅವರ 138ನೇ ಜನ್ಮ ವಾರ್ಷಿಕೋತ್ಸವದ ಆಚರಣೆ ಅಂಗವಾಗಿ ವನವಿಲ್ ಸಾಂಸ್ಕೃತಿಕ ಕೇಂದ್ರ ಈ ಉತ್ಸವವನ್ನು ಆಯೋಜಿಸಿದೆ.

***


(ಪ್ರಕಟಣೆ ಐ.ಡಿ.: 1679604) ವಿಸಿಟರ್ ಕೌಂಟರ್ : 208