ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಐದು ತಿಂಗಳ ನಂತರ ಭಾರತದಲ್ಲಿ ಕಡಿಮೆ ಸೋಂಕು ಪ್ರಕರಣ ದಾಖಲು
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3.83 ಲಕ್ಷಕ್ಕೆ ಇಳಿಕೆ, ಶೇಕಡಾವಾರು 4ಕ್ಕಿಂತ ಕಡಿಮೆ
ಸೋಂಕಿತರ ಮರಣ ಪ್ರಮಾಣದಲ್ಲೂ ಕ್ರಮೇಣ ಕುಸಿತ; ಪ್ರತಿ ದಿನ ಮರಣ ಪ್ರಮಾಣ 400ಕ್ಕಿಂತ ಕಡಿಮೆ
Posted On:
08 DEC 2020 11:55AM by PIB Bengaluru
ಕೋವಿಡ್ ವಿರುದ್ಧದ ಸಮರದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಪತ್ತೆಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 27,000 (26,567)ಕ್ಕಿಂತ ಕೆಳಗೆ ಇಳಿಕೆಯಾಗಿದ್ದು, 5 ತಿಂಗಳ ನಂತರ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 2020ರ ಜುಲೈ 10ರಂದು 26,506 ಹೊಸ ಪ್ರಕರಣಗಳು ಪತ್ತೆಯಾಗಿದ್ದವು.
ಪ್ರತಿ ದಿನ ಗರಿಷ್ಠ ಸಂಖ್ಯೆಯ ಕೋವಿಡ್ ಸೋಂಕಿತರು ಗುಣಮುಖರಾಗುತ್ತಿರುವುದರಿಂದ ಸೋಂಕಿತರ ಸಾವಿನ ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿವೆ ಮತ್ತು ಭಾರತದಲ್ಲಿ ಸಕ್ರಿಯ ಪ್ರಕರಣಗಳ ಇಳಿಕೆ ಪ್ರವೃತ್ತಿ ಸ್ಥಿರವಾಗಿ ಮುಂದುವರಿದಿದೆ.
ಭಾರತ ಮತ್ತೊಂದು ಸಾಧನೆಗೈದಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಪ್ರಮಾಣ ಇಂದು ಶೇ.4ಕ್ಕಿಂತ ಕೆಳಗಿಳಿದಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿ 3.83 ಲಕ್ಷಕ್ಕೆ ಕುಸಿದಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಕ್ರಿಯ ಸಂಖ್ಯೆ 3,83,866 ಇದೆ. ಅಂದರೆ ಒಟ್ಟು ಪ್ರಕರಣಗಳಲ್ಲಿ ಆ ಪ್ರಮಾಣ(ಶೇ.3.96) ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ ಹೊಸದಾಗಿ 39,045 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ನಿವ್ವಳವಾಗಿ 12,863 ಪ್ರಕರಣ ಇಳಿಕೆಯಾಗಿವೆ.
ಪ್ರತಿ ದಿನ ಹೊಸ ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವ ಪ್ರಕರಣಗಳೇ ಅಧಿಕವಾಗಿ ಮುಂದುವರಿದಿದ್ದು, ಇಂದು ಚೇತರಿಕೆ ಪ್ರಮಾಣ ಶೇ.94.59ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಒಟ್ಟು ಗುಣಮುಖರಾದವರ ಸಂಖ್ಯೆ ಇಂದು 91,78,946 ತಲುಪಿದೆ.
ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ.76.31 ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.
ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯ 7,345 ಸೋಂಕಿತರು ಗುಣಮುಖರಾಗಿದ್ದಾರೆ. ಅಂತೆಯೇ ಕೇರಳದಲ್ಲಿ 4,705 ಮತ್ತು ದೆಹಲಿಯಲ್ಲಿ 3,818 ಸೋಂಕಿತರು ಕಳೆದ 24 ಗಂಟೆಗಳಲ್ಲಿ ಗುಣಮುಖರಾಗಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.72.50ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.
ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 3,272 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 3,075 ಪ್ರಕರಣ ಮತ್ತು ಪಶ್ಚಿಮ ಬಂಗಾಳದಲ್ಲಿ 2,214 ಪ್ರಕರಣ ಹೊಸದಾಗಿ ಪತ್ತೆಯಾಗಿವೆ.
ಕಳೆದ 24 ಗಂಟೆಗಳಲ್ಲಿ ಹೊಸದಾಗಿ 385 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ ಶೇ.75.58ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.
ದೆಹಲಿಯಲ್ಲಿ ಒಟ್ಟು ಸಾವನ್ನಪ್ಪಿರುವ ಪ್ರಕರಣಗಳಲ್ಲಿ ಶೇ.16.36 ಅಂದರೆ 63 ಸೋಂಕಿತರ ಸಾವು ಸಂಭವಿಸಿದೆ. ಅಂತೆಯೇ ಪಶ್ಚಿಮಬಂಗಾಳದಲ್ಲಿ 48 ಮತ್ತು ಮಹಾರಾಷ್ಟ್ರದಲ್ಲಿ 40 ಸೋಂಕಿತರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಪ್ರತಿ ದಿನ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 400ಕ್ಕಿಂತ ಕಡಿಮೆ ಸೋಂಕಿತರು ಸಾವನ್ನಪ್ಪಿದ್ದಾರೆ.
***
(Release ID: 1679065)
Visitor Counter : 281
Read this release in:
Tamil
,
Telugu
,
Assamese
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Malayalam