ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ 138 ದಿನಗಳ ನಂತರ ಕೋವಿಡ್ -19 ಪ್ರಕರಣ ಇಳಿಕೆ: 4.03ಕ್ಕೆ ಕುಸಿತ


ಗುಣಮುಖರಾದವರ ಸಂಖ್ಯೆ 91 ಲಕ್ಷಕ್ಕೂ ಅಧಿಕ

ದೇಶದಲ್ಲಿ ಜನಸಂಖ್ಯೆಗೆ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ, ವಿಶ್ವದಲ್ಲಿಯೇ ಅತಿ ಕಡಿಮೆ.

Posted On: 06 DEC 2020 11:34AM by PIB Bengaluru

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿ ಇಂದು 4.03 (4,03, 248)ಕ್ಕೆ ತಗ್ಗಿದೆ. ಇದು 138 ದಿನಗಳ ನಂತರ ಅತಿ ಕಡಿಮೆ ಸಕ್ರಿಯ ಪ್ರಕರಣಗಳಾಗಿವೆ. 2020ರ ಜು.21ರಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,05,529 ಇತ್ತು.

ಕಳೆದ 24 ಗಂಟೆಗಳಲ್ಲಿ ಹೊಸ ಸೋಂಕು ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವ ಪ್ರಕರಣಗಳೇ ಅತ್ಯಧಿಕವಾಗಿದ್ದು, ಕಳೆದ 9 ದಿನಗಳಿಂದಲೂ ಅದೇ ಪ್ರವೃತ್ತಿ ಮುಂದುವರಿದಿದೆ. ಸಕ್ರಿಯ ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವ ಪ್ರಕರಣಗಳೇ ಅಧಿಕವಾಗುತ್ತಿರುವ ಪ್ರವೃತ್ತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಶೇ.4.18ರಷ್ಟು ಮಾತ್ರ.

 

 

WhatsApp Image 2020-12-06 at 10.33.28 AM (1).jpeg

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 36,011 ಸೋಂಕು  ಪ್ರಕರಣಗಳು ದೃಢಪಟ್ಟಿವೆ. ಅದೇ ರೀತಿ ಕಳೆದ 24 ಗಂಟೆಗಳಲ್ಲಿ 41,970 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.ಹೊಸದಾಗಿ ಹೆಚ್ಚಿನ ಸಂಖ್ಯೆಯ ಸೋಂಕಿತರು ಗುಣಮುಖವಾಗಿರುವವರ ಕಾರಣ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 6,441 ಕಡಿಮೆಯಾಗಿವೆ.

WhatsApp Image 2020-12-06 at 10.27.35 AM.jpeg

ಕಳೆದ ಏಳು ದಿನಗಳಿಂದ ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೊಸದಾಗಿ 186 ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದು ವಿಶ್ವದಲ್ಲಿಯೇ ಅತಿ ಕಡಿಮೆಯಾಗಿದೆ.

WhatsApp Image 2020-12-06 at 10.33.28 AM.jpeg

ಹೊಸ ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ, ಅವುಗಳ ನಡುವೆ ವ್ಯತ್ಯಾಸ ಹೆಚ್ಚಾಗಿದ್ದು, ಇಂದು ಚೇತರಿಕೆ ಪ್ರಮಾಣ ಶೇ.94.37ಕ್ಕೆ ಏರಿಕೆಯಾಗಿದೆ.

ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 91 ಲಕ್ಷ (91,00,792)ದಾಟಿದೆ. ಸಕ್ರಿಯ ಪ್ರಕರಣಗಳು ಮತ್ತು ಗುಣಮುಖವಾಗುತ್ತಿರುವವರ ನಡುವಿನ ವ್ಯತ್ಯಾಸ ಸುಮಾರು 87ಲಕ್ಷದ ಸನಿಹದಲ್ಲಿದೆ ಮತ್ತು ಇಂದು ಸದ್ಯ 86,97,544 ರಷ್ಟಿದೆ.

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ 76.6ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಒಂದೇ ದಿನ ಅತ್ಯಧಿಕ ಸಂಖ್ಯೆಯ 5,834 ಸೋಂಕಿತರು ಹೊಸದಾಗಿ  ಗುಣಮುಖರಾಗಿದ್ದಾರೆ. ಆನಂತರ ಕೇರಳದಲ್ಲಿ 5,820 ಮತ್ತು ದೆಹಲಿಯಲ್ಲಿ 4,916 ಸೋಂಕಿತರು ಗುಣಮುಖರಾಗಿದ್ದಾರೆ.

WhatsApp Image 2020-12-06 at 10.12.17 AM.jpeg

ಹೊಸದಾಗಿ ಪತ್ತೆಯಾಗಿರುವ ಸೋಂಕು ಪ್ರಕರಣಗಳಲ್ಲಿ ಶೇ.75.70ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಕೇರಳದಲ್ಲಿ ಪ್ರತಿದಿನ ಅತ್ಯಧಿಕ 5,848 ಸೋಂಕು ಪ್ರಕರಣ ದೃಢಪಟ್ಟಿವೆ. ಆನಂತರ ಮಹಾರಾಷ್ಟ್ರದಲ್ಲಿ 4,922 ಹೊಸ ಕೋವಿಡ್ ಪ್ರಕರಣ ವರದಿಯಾಗಿವೆ. ದೆಹಲಿಯಲ್ಲಿ ಹೊಸದಾಗಿ 3,419 ಕೋವಿಡ್ ಪ್ರಕರಣ ದೃಢಪಟ್ಟಿವೆ.

 

WhatsApp Image 2020-12-06 at 10.12.14 AM.jpeg

ಕಳೆದ 24 ಗಂಟೆಗಳಲ್ಲಿ 482 ಸೋಂಕಿತರು ಮರಣವನ್ನಪ್ಪಿರುವುದಾಗಿ ವರದಿಯಾಗಿದೆ.

ಹೊಸದಾಗಿ ಸಾವನ್ನಪ್ಪಿರುವ ಸೋಂಕಿತರಲ್ಲಿ ಶೇ.79.05ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.ಮಹಾರಾಷ್ಟ್ರದಲ್ಲಿ ಅತ್ಯಧಿಕ (95) ಸಾವು ಸಂಭವಿಸಿದ್ದರೆ, ಆನಂತರ ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 77 ಮತ್ತು 49 ಸೋಂಕಿತರು ಸಸಾವನ್ನಪ್ಪಿರುವುದಾಗಿ ವರದಿಯಾಗಿವೆ.

WhatsApp Image 2020-12-06 at 10.12.16 AM.jpeg

ಭಾರತದಲ್ಲಿ ಕಳೆದೊಂದು ವಾರದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಸಾವಿನ ಪ್ರಮಾಣ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಅತಿ ಕಡಿಮೆ ಇದೆ, ಅಂದರೆ ಪ್ರತಿ ಮಿಲಿಯನ್ ಜನಸಂಖ್ಯೆಗೆ 3 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.

****


(Release ID: 1678709) Visitor Counter : 306