ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ 40 ಸಾವಿರಕ್ಕಿಂತ ಕಡಿಮೆ ಹೊಸ ಸೋಂಕು ಪ್ರಕರಣ
ಸಕ್ರಿಯ ಪ್ರಕರಣಗಳ ಸಂಖ್ಯೆ ನಿರಂತರ ಇಳಿಕೆ; ಸದ್ಯ 4.4 ಲಕ್ಷಕ್ಕಿಂತಲೂ ಕಡಿಮೆ ಸಕ್ರಿಯ ಪ್ರಕರಣ
ಪಾಸಿಟಿವಿಟಿ ಪ್ರಮಾಣ ಶೇ. 4 ಕ್ಕಿಂತ ಕಡಿಮೆ - ಇಂದು ಶೇ. 3.45 ದಾಖಲು
Posted On:
24 NOV 2020 12:34PM by PIB Bengaluru
ಭಾರತದಲ್ಲಿ ಆರು ದಿನಗಳ ನಂತರ ದಿನದ ಹೊಸ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 40,000ಕ್ಕಿಂತಲೂ ಕೆಳಗೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 37,975 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಕಳೆದ 17 ದಿನಗಳಿಂದ ಅಂದರೆ ನವೆಂಬರ್ 8ರಿಂದೀಚೆಗೆ ಸತತವಾಗಿ ದಿನ ಹೊಸ ಸೋಂಕು ಪ್ರಕರಣಗಳ ಸಂಖ್ಯೆ 50,000ಕ್ಕಿಂತ ಕಡಿಮೆ ವರದಿಯಾಗುತ್ತಿದೆ.
ಭಾರತದಲ್ಲಿ ಸೋಂಕು ಪತ್ತೆ ಪರೀಕ್ಷಾ ಮೂಲಸೌಕರ್ಯ ಗಣನೀಯವಾಗಿ ಹೆಚ್ಚಳವಾಗಿದ್ದು, ದೇಶಾದ್ಯಂತ 2,134 ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ದಿನ ಒಂದು ಮಿಲಿಯನ್ ಗೂ ಅಧಿಕ ಕೋವಿಡ್ ಪರೀಕ್ಷೆಗಳನ್ನು ಮಾಡುವ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ 10,99,545 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಿಂದಾಗಿ ಭಾರತದ ಒಟ್ಟು ಪರೀಕ್ಷೆಗಳ ಸಂಖ್ಯೆ 13.3 ಕೋಟಿ (13,36,82,275) ದಾಟಿದೆ.
ಪ್ರತಿ ದಿನ ಸರಾಸರಿ ಹತ್ತು ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಅದರಿಂದಾಗಿ ಪಾಸಿಟಿವಿಟಿ ದರ ಸುಸ್ಥಿರ ರೀತಿಯಲ್ಲಿ ಇಳಿಕೆಯಾಗುತ್ತಿದೆ ಮತ್ತು ಸದ್ಯ ಅದು ಇಳಿಮುಖವಾಗಿ ಮುಂದುವರಿದೆ.
ಒಟ್ಟು ರಾಷ್ಟ್ರೀಯ ಪಾಸಿಟಿವಿಟಿ ದರ ಶೇ. 7ಕ್ಕಿಂತಲೂ ಕಡಿಮೆಯಾಗಿದ್ದು, ಇಂದು ಅದು ಶೇ.6.87ರಷ್ಟಿದೆ. ದಿನದ ಪಾಸಿಟಿವಿಡಿ ದರ ಕೇವಲ 3.45ರಷ್ಟಿದೆ. ಅಧಿಕ ಪ್ರಮಾಣದ ಪರೀಕ್ಷೆಗಳ ಕಾರಣ ಪಾಸಿಟಿವಿಟಿ ದರ ತಗ್ಗಿದೆ.
ಪ್ರತಿ ಮಿಲಿಯನ್ ಜನಸಂಖ್ಯೆಗೆ ಪರೀಕ್ಷೆಗಳು(ಟಿಪಿಎಂ) 96,871ಕ್ಕೆ ಏರಿಕೆಯಾಗಿದೆ.
ಕಳೆದ ಕೆಲವು ವಾರಗಳಿಂದೀಚೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಸುಸ್ಥಿರ ರೀತಿಯಲ್ಲಿ ಇಳಿಕೆಯಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ 42,314 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,38,667ಕ್ಕೆ ಕುಸಿದಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಶೇ.4.78ರಷ್ಟಿದ್ದು, ಅದು ಇಳಿಮುಖವಾಗಿ ಮುಂದುವರಿದಿದೆ.
ಚೇತರಿಕೆ ಪ್ರಮಾಣ ಶೇ.93.76ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 86,04,955 ಸೋಂಕಿತರು ಗುಣಮುಖರಾಗಿದ್ದಾರೆ.
ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ.75.71ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.
ದೆಹಲಿಯಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯ 7,216 ಸೋಂಕಿತರು ಗುಣಮುಖರಾಗಿದ್ದಾರೆ. ನಂತರ ಕೇರಳದಲ್ಲಿ 5,425 ಮಹಾರಾಷ್ಟ್ರದಲ್ಲಿ 3,729 ಮಂದಿ ಕ್ರಮೇಣ ಗುಣಮುಖರಾಗಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳ ಪೈಕಿ ಶೇ.77.04ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.
ದೆಹಲಿಯಲ್ಲಿ ಅತ್ಯಧಿಕ ಸಂಖ್ಯೆಯ ಹೊಸ ಪ್ರಕರಣಗಳು ವರದಿಯಾಗುವುದು ಮುಂದುವರಿದಿದ್ದು, ನಿನ್ನೆ 4,454 ಪ್ರಕರಣ ದೃಢಪಟ್ಟಿವೆ. ದೆಹಲಿ ನಂತರ ಮಹಾರಾಷ್ಟ್ರದಲ್ಲಿ 4,153 ಹೊಸ ಪ್ರಕರಣ ಪತ್ತೆಯಾಗಿವೆ.
ಕಳೆದ 24 ಗಂಟೆಗಳಲ್ಲಿ ಹೊಸದಾಗಿ 480 ಸೋಂಕಿತರು ಸಾವನ್ನಪ್ಪಿರುವುದು ವರದಿಯಾಗಿದೆ.
ಹೊಸದಾಗಿ ಸಾವನ್ನಪ್ಪಿರುವ ಪ್ರಕರಣಗಳಲ್ಲಿ ಶೇ.73.54ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು. ದೆಹಲಿಯಲ್ಲಿ ಗರಿಷ್ಠ ಸಾವುಗಳು(121) ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಕ್ರಮವಾಗಿ 47 ಮತ್ತು 30 ಸೋಂಕಿತರು ಸಾವನ್ನಪ್ಪಿದ್ದಾರೆ.
***
(Release ID: 1675287)
Visitor Counter : 242
Read this release in:
Telugu
,
Tamil
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Malayalam