ಪ್ರಧಾನ ಮಂತ್ರಿಯವರ ಕಛೇರಿ
ಸಂಸತ್ ಸದಸ್ಯರ ಬಹು ಮಹಡಿ ವಸತಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡ 17ನೇ ಲೋಕಸಭೆ
Posted On:
23 NOV 2020 11:54AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಸತ್ ಸದಸ್ಯರಿಗಾಗಿ ಬಹುಮಹಡಿ ವಸತಿಗಳನ್ನು ಉದ್ಘಾಟಿಸಿದರು. ನವದೆಹಲಿಯ ಡಾ. ಬಿ.ಡಿ. ಮಾರ್ಗ್ ನಲ್ಲಿ ಈ ವಸತಿಗಳಿವೆ. 80 ವರ್ಷಕ್ಕಿಂತ ಹಳೆಯ 8 ಹಳೆಯ ಬಂಗ್ಲೆಗಳನ್ನು 76 ಫ್ಲಾಟ್ ಗಳಾಗಿ ಅಭಿವೃದ್ಧಿಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂಸತ್ ಸದಸ್ಯರಿಗಾಗಿ ನಿರ್ಮಿಸಿರುವ ಈ ಬಹುಮಹಡಿ ಫ್ಲಾಟ್ ಗಳಲ್ಲಿ ಹಸಿರು ಕಟ್ಟಡದ ನಿಯಮಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಈ ಹೊಸ ಫ್ಲ್ಯಾಟ್ ಗಳು ಎಲ್ಲಾ ನಿವಾಸಿಗಳು ಮತ್ತು ಸಂಸದರನ್ನು ಸುರಕ್ಷಿತವಾಗಿ ಮತ್ತು ಸದೃಢವಾಗಿರಿಸುತ್ತವೆ ಎಂದು ಅವರು ಆಶಿಸಿದರು. ಸಂಸತ್ ಸದಸ್ಯರಿಗೆ ವಸತಿ ಸೌಕರ್ಯವು ದೀರ್ಘಕಾಲದ ಸಮಸ್ಯೆಯಾಗಿತ್ತು, ಈಗ ಅದನ್ನು ಪರಿಹರಿಸಲಾಗಿದೆ ಎಂದು ಅವರು ಹೇಳಿದರು. ದಶಕಗಳ ಹಳೆಯ ಸಮಸ್ಯೆಗಳಿಗೆ ಸ್ಪಂದಿಸದೆ ತಪ್ಪಿಸಿಕೊಳ್ಳುವುದರಿಂದ ಅವು ಬಗೆಹರಿಯುವುದಿಲ್ಲ, ಬದಲಾಗಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಪರಿಹರಿಸಬೇಕು ಎಂದು ಅವರು ಹೇಳಿದರು. ದೆಹಲಿಯಲ್ಲಿ ಅಂತಹ ಅನೇಕ ಯೋಜನೆಗಳನ್ನು ಪಟ್ಟಿ ಮಾಡಿದ ಅವರು, ಅವುಗಳು ಹಲವು ವರ್ಷಗಳಿಂದ ಅಪೂರ್ಣವಾಗಿದ್ದವು, ಈ ಸರ್ಕಾರ ಅದನ್ನು ಕೈಗೆತ್ತಿಕೊಂಡಿತು ಮತ್ತು ನಿಗದಿತ ಗಡುವಿಗೆ ಮುಂಚಿತವಾಗಿ ಪೂರ್ಣಗೊಳಿಸಿತು ಎಂದರು. ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದ ಚರ್ಚೆ ಆರಂಭವಾಯಿತು, ಆದರೆ 23 ವರ್ಷಗಳ ತರುವಾಯ ತಮ್ಮ ಸರ್ಕಾರ ಅದನ್ನು ನಿರ್ಮಾಣ ಮಾಡಿತು. ಕೇಂದ್ರೀಯ ಮಾಹಿತಿ ಆಯುಕ್ತರ ಕಚೇರಿ ನೂತನ ಕಟ್ಟಡ, ಇಂಡಿಯಾ ಗೇಟ್ ಬಳಿ ಯುದ್ಧ ಸ್ಮಾರಕ ಮತ್ತು ರಾಷ್ಟ್ರೀಯ ಪೊಲೀಸ್ ಸ್ಮಾರಕ ಬಹುಕಾಲದಿಂದ ನನೆಗುದಿಗೆ ಬಿದ್ದಿತ್ತು, ಈ ಸರ್ಕಾರ ಅದನ್ನು ನಿರ್ಮಾಣ ಮಾಡಿತು.
ಸಂಸತ್ತಿನ ಫಲಪ್ರದತೆಯಲ್ಲಿ ವಸ್ತು ಮತ್ತು ಪ್ರಕ್ರಿಯೆ ಎರಡರ ಬಗ್ಗೆ ಎಲ್ಲಾ ಸಂಸದರೂ ಕಾಳಜಿ ವಹಿಸುತ್ತಿದ್ದಾರೆ ಮತ್ತು ಈ ದಿಕ್ಕಿನಲ್ಲಿ ಹೊಸ ಎತ್ತರಕ್ಕೆ ಏರುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಫಲಪ್ರದತೆ ಮತ್ತು ಕಾರ್ಯವಿಧಾನ ಉತ್ತಮವಾಗಿ ನಡೆಸುತ್ತಿರುವ ಸದನದ ಉಸ್ತುವಾರಿ ನೋಡಿಕೊಳ್ಳುವ ಲೋಕಸಭಾಧ್ಯರನ್ನು ಅವರು ಶ್ಲಾಘಿಸಿದರು. ಸಾಂಕ್ರಾಮಿಕದ ಸಮಯದಲ್ಲಿ ಸಹ ಹೊಸ ನಿಯಮಗಳು ಮತ್ತು ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಂಸತ್ತಿನ ಪ್ರಕ್ರಿಯೆಗಳು ಮುಂದುವರೆಯಿತು ಎಂದು ಅವರು ಸಂತಸ ವ್ಯಕ್ತಪಡಿಸಿದರು. ಮುಂಗಾರು ಅಧಿವೇಶನದಲ್ಲಿ ಸುಗಮ ಪ್ರಕ್ರಿಯೆಯನ್ನು ಖಾತ್ರಿಪಡಿಸಲು ಉಭಯ ಸದನಗಳು ವಾರಾಂತ್ಯದಲ್ಲಿ ಸಹ ಕಲಾಪ ನಡೆಸಿದವು ಎಂದು ಅವರು ಹೇಳಿದರು.
16-18 ವರ್ಷ ವಯಸ್ಸು ಯುವಕರಿಗೆ ಬಹಳ ಮುಖ್ಯವಾದ್ದು ಎಂದ ಅವರು, ನಾವು 2019ರ ಚುನಾವಣೆಯೊಂದಿಗೆ 16 ನೇ ಲೋಕಸಭೆಯ ಅವಧಿಯನ್ನು ಪೂರ್ಣಗೊಳಿಸಿದ್ದೇವೆ ಮತ್ತು ಈ ಅವಧಿಯು ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಐತಿಹಾಸಿಕವಾಗಿ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. 17 ನೇ ಲೋಕಸಭೆಯ ಅವಧಿ 2019ರಿಂದ ಪ್ರಾರಂಭವಾಗಿದೆ ಮತ್ತು ಈ ಅವಧಿಯಲ್ಲಿ ಲೋಕಸಭೆಯಲ್ಲಿ ಈಗಾಗಲೇ ಕೆಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಹೊಸ ದಶಕದಲ್ಲಿ ದೇಶವನ್ನು ಮುಂದೆ ಕೊಂಡೊಯ್ಯುವಲ್ಲಿ ಮುಂದಿನ (18 ನೇ) ಲೋಕಸಭೆಯೂ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
***
(Release ID: 1675081)
Visitor Counter : 272
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam