ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

13 ಕೋಟಿಗೂ ಅಧಿಕ ಕೋವಿಡ್ ಪರೀಕ್ಷೆಗಳ ಮೂಲಕ ಭಾರತದ ಮತ್ತೊಂದು ಮೈಲಿಗಲ್ಲು


ಗರಿಷ್ಠ ಪ್ರಮಾಣದ ಪರೀಕ್ಷೆಗಳಿಂದಾಗಿ ಪಾಸಿಟಿವಿಟಿ ದರ ಇಳಿಕೆ

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 4.86ಕ್ಕೆ ಇಳಿಕೆ

Posted On: 21 NOV 2020 11:44AM by PIB Bengaluru

ಜಾಗತಿಕ ಸಾಂಕ್ರಾಮಿಕದ ವಿರುದ್ಧದ ಸಮರದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದೆ. ಪ್ರತಿ ದಿನ ಒಂದು ಮಿಲಿಯನ್ ಗೂ ಅಧಿಕ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸುವ ಬದ್ಧತೆಗೆ ಅನುಗುಣವಾಗಿ ಕಳೆದ 24 ಗಂಟೆಗಳಲ್ಲಿ 10,66,022 ಸೋಂಕು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರೊಂದಿಗೆ ಭಾರತ ಒಟ್ಟಾರೆ 13,06,57,808 ಪರೀಕ್ಷೆಗಳನ್ನು ನಡೆಸಿದಂತಾಗಿದೆ.

ಕೇವಲ ಕಳೆದ ಹತ್ತು ದಿನಗಳ ವ್ಯಾಪ್ತಿಯಲ್ಲಿ ಒಂದು ಕೋಟಿ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ.

http://static.pib.gov.in/WriteReadData/userfiles/image/image001U0RI.jpg

ಪ್ರತಿ ದಿನ ಸರಾಸರಿ ಹತ್ತು ಲಕ್ಷಕ್ಕೂ ಅಧಿಕ ಸೋಂಕು ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಪಾಸಿಟಿವಿಟಿ ದರ ಕ್ರಮೇಣ ಇಳಿಕೆಯಾಗುತ್ತಿದೆ ಮತ್ತು ಪ್ರಸ್ತುತ ಅದು ಇಳಿಕೆ ಪ್ರವೃತ್ತಿಯಲ್ಲಿ ಮುಂದುವರಿದಿದೆ. ಇಂದು ಒಟ್ಟು ರಾಷ್ಟ್ರೀಯ ಪಾಸಿಟಿವಿಟಿ ದರ ಶೇ.7ಕ್ಕಿಂತ ಕಡಿಮೆ ಅಂದರೆ ಶೇ.6.93 ಇತ್ತು. ದಿನದ ಪಾಸಿಟಿವಿಟಿ ದರ ನಿನ್ನೆ ಕೇವಲ ಶೇ.4.34ರಷ್ಟಿತ್ತು. ಅಧಿಕ ಪ್ರಮಾಣದ ಸೋಂಕು ಪರೀಕ್ಷೆಗಳು ನಡೆಸುತ್ತಿರುವ ಕಾರಣ ಪಾಸಿಟಿವಿಟಿ ದರ ಇಳಿಕೆಯಾಗಿದೆ.

http://static.pib.gov.in/WriteReadData/userfiles/image/image0024O4T.jpg

ಕಳೆದ 24 ಗಂಟೆಗಳಲ್ಲಿ 46,232 ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ದಿನದ ಪಾಸಿಟಿವಿಟಿ ದರ ಶೇ. 4.34ರಷ್ಟಿದ್ದು, ಭಾರೀ ಪ್ರಮಾಣದ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದೆ. ಐರೋಪ್ಯ ಮತ್ತು ಅಮೆರಿಕ ರಾಷ್ಟ್ರಗಳಲ್ಲಿ ಪ್ರತಿ ದಿನ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತ ಸೋಂಕು ನಿಯಂತ್ರಣಕ್ಕೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

ಒಟ್ಟಾರೆ ಭಾರತಕ್ಕಿಂತ 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೆಚ್ಚಿನ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

http://static.pib.gov.in/WriteReadData/userfiles/image/image003N4AM.jpg

12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಪ್ರತಿ ಮಿಲಿಯನ್ ಜನಸಂಖ್ಯೆಗೆ ನಡೆಸುತ್ತಿರುವ ಪರೀಕ್ಷೆಗಳು ಕಡಿಮೆ ಇವೆ ಮತ್ತು ಆ ರಾಜ್ಯಗಳಿಗೆ ಕ್ರಮೇಣ ಪರೀಕ್ಷಾ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಸೂಚಿಸಲಾಗಿದೆ.

http://static.pib.gov.in/WriteReadData/userfiles/image/image004N3JD.jpg

ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ4,39,747 ಇದ್ದು, ಭಾರತದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಇವು ಶೇ.4.86ರಷ್ಟು ಮತ್ತು ಸುಸ್ಥಿರ ರೀತಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.5ಕ್ಕಿಂತ ಕಡಿಮೆ ಮುಂದುವರಿದಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 49,715 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದು, ಇದರಿಂದಾಗಿ ಒಟ್ಟಾರೆ ಗುಣಮುಖರಾದವರ ಸಂಖ್ಯೆ 84,78,124ಕ್ಕೆ ಏರಿಕೆಯಾಗಿದೆ. ಇಂದು ಚೇತರಿಕೆ ಪ್ರಮಾಣ ಶೇ.93.67 ತಲುಪಿದೆ. ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದವರ ಪ್ರಕರಣಗಳ ನಡುವಿನ ಅಂತರ ಕ್ರಮೇಣ ಹೆಚ್ಚಾಗುತ್ತಿದ್ದು, ಸದ್ಯ ಅದು 80,38,377 ರಷ್ಟಿದೆ.

ಹೊಸದಾಗಿ ಗುಣಮುಖರಾಗಿರುವ ಪ್ರಕರಣಗಳಲ್ಲಿ ಶೇ. 78.19ರಷ್ಟು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ದೆಹಲಿಯಲ್ಲಿ ಕೋವಿಡ್ ನಿಂದಾಗಿ 8,775 ಸೋಂಕಿತರು ಗುಣಮುಖರಾಗಿದ್ದಾರೆ. ಅಂತೆಯೇ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕ್ರಮವಾಗಿ 6,945 ಮತ್ತು 6,398 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ.

http://static.pib.gov.in/WriteReadData/userfiles/image/image005FDLK.jpg

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ. 77.69ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 6,608 ಹೊಸ ಪ್ರಕರಣ ಪತ್ತೆಯಾಗಿವೆ. ಕೇರಳದಲ್ಲಿ 6,028 ಮತ್ತು ಮಹಾರಾಷ್ಟ್ರದಲ್ಲಿ 5,640 ಹೊಸ ಪ್ರಕರಣಗಳು ನಿನ್ನೆ ದೃಢಪಟ್ಟಿವೆ.

http://static.pib.gov.in/WriteReadData/userfiles/image/image006AF7A.jpg

ಕಳೆದ 24 ಗಂಟೆಗಳಲ್ಲಿ 564 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ ಶೇ. 82.62ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಹೊಸದಾಗಿ ಸಾವನ್ನಪ್ಪಿರುವ ಪ್ರಕರಣಗಳಲ್ಲಿ ಶೇ.27.48ರಷ್ಟು ಅಂದರೆ 155 ಸಾವುಗಳು ಮಹಾರಾಷ್ಟ್ರದಲ್ಲಿ ಸಂಭವಿಸಿವೆ. ದೆಹಲಿಯಲ್ಲಿ ಮರಣ ಪ್ರಮಾಣ ಮೂರಂಕಿ ತಲುಪಿದ್ದು, ಅಲ್ಲಿ 118 ಮಂದಿ ಸೋಂಕಿತರು ಸಾವನ್ನಪ್ಪುವುದರೊಂದಿಗೆ ಹೊಸದಾಗಿ ಸಾವನ್ನಪ್ಪಿರುವವರಲ್ಲಿ ದೆಹಲಿಯ ಪ್ರಮಾಣ ಶೇ.20.92ರಷ್ಟಿದೆ.

http://static.pib.gov.in/WriteReadData/userfiles/image/image007F9RL.jpg

***



(Release ID: 1674806) Visitor Counter : 187