ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ಶೌಚಾಲಯ ದಿನದಂದು ಸರ್ವರಿಗೂ ಶೌಚಾಲಯ ಒದಗಿಸುವ ಸಂಕಲ್ಪ ಬಲವರ್ಧನೆಗೊಳಿಸಿದ ಭಾರತ: ಪ್ರಧಾನಿ ನರೇಂದ್ರ ಮೋದಿ
ಸ್ವಚ್ಛ ಶೌಚಾಲಯಗಳಿಂದ ಭಾರಿ ಪ್ರಮಾಣದ ಆರೋಗ್ಯ ಅನುಕೂಲಗಳ ಜೊತೆಗೆ ನಮ್ಮ ನಾರಿಶಕ್ತಿಯ ಘನತೆ ಹೆಚ್ಚಳ
Posted On:
19 NOV 2020 1:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ವಿಶ್ವ ಶೌಚಾಲಯ ದಿನದಂದು, ಸರ್ವರಿಗೂ ಶೌಚಾಲಯ ಒದಗಿಸುವ ದೇಶದ ಸಂಕಲ್ಪ ಬಲವರ್ಧನೆಗೊಂಡಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಟ್ವೀಟ್ ಸಂದೇಶದಲ್ಲಿ “ವಿಶ್ವ ಶೌಚಾಲಯ ದಿನದಂದು, ಭಾರತ ಸರ್ವರಿಗೂ ಶೌಚಾಲಯ ಕಲ್ಪಿಸುವ ತನ್ನ ಸಂಕಲ್ಪವನ್ನು ಬಲವರ್ಧನೆಗೊಳಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಕೋಟ್ಯಂತರ ಭಾರತೀಯರಿಗೆ ಶುಚಿ ಶೌಚಾಲಯಗಳನ್ನು ಒದಗಿಸುವದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವುದನ್ನು ಕಾಣಬಹುದಾಗಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳಾಗಿರುವ ಜೊತೆಗೆ ವಿಶೇಷವಾಗಿ ನಮ್ಮ ನಾರಿಶಕ್ತಿಯ ಘನತೆ ಹೆಚ್ಚಿದೆ.’’ ಎಂದು ತಿಳಿಸಿದ್ದಾರೆ.
***
(Release ID: 1674007)
Visitor Counter : 212
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam