ಪ್ರಧಾನ ಮಂತ್ರಿಯವರ ಕಛೇರಿ

ಜಾಮ್ ನಗರ ಮತ್ತು ಜೈಪುರದಲ್ಲಿ ಭವಿಷ್ಯಕ್ಕೆ ಸಜ್ಜಾದ ಎರಡು ಆಯುರ್ವೇದ ಸಂಸ್ಥೆಗಳ ಉದ್ಘಾಟನೆ ವೇಳೆ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಭಾಷಾಂತರ

Posted On: 13 NOV 2020 1:00PM by PIB Bengaluru

ನಮಸ್ಕಾರ!

ನನ್ನ ಸಂಪುಟ ಸಹೋದ್ಯೋಗಿಯಾದ ಶ್ರೀ ಶ್ರೀಪಾದ ನಾಯಕ್ ಅವರೇ, ರಾಜಾಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಅವರೇ, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಅವರೇ, ರಾಜಾಸ್ಥಾನದ ರಾಜ್ಯಪಾಲರಾದ ಶ್ರೀ ಕಲ್ ರಾಜ್ ಜೀ ಅವರೇ, ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವರಥ್ ಅವರೇ, ಇತರ ಎಲ್ಲ ಸಚಿವರುಗಳೇ, ಸಂಸದಸರೇ, ಶಾಸಕರೇ ಹಾಗೂ ಎಲ್ಲ ಆಯುರ್ವೇದದೊಂದಿಗೆ ಸಂಪರ್ಕಿತರಾದ ಎಲ್ಲ ವಿದ್ವಾಂಸರೇ, ಮಹಿಳೆಯರೇ ಮತ್ತು ಮಹನೀಯರೇ!

ನಿಮ್ಮೆಲ್ಲರಿಗೂ ಧಂತೇರಸ್ ಅಂದರೆ, ಭಗವಾನ್ ಧನ್ವಂತ್ರಿಯ ಜನ್ಮ ಜಯಂತಿಯ ಶುಭಾಶಯಗಳು. ಧನ್ವಂತ್ರಿಯನ್ನು ರೋಗ ಗುಣಪಡಿಸುವ ದೇವರು ಮತ್ತು ದೇವರ ಆಶೀರ್ವಾದದಿಂದಲೇ ಆಯುರ್ವೇದ ಸೃಷ್ಟಿಯಾದದ್ದು ಎಂದು ಪರಿಗಣಿಸಲಾಗುತ್ತದೆ. ಪವಿತ್ರ ದಿನದಂದು ಅಂದರೆ ಆಯುರ್ವೇದ ದಿನದಂದು ಇಡೀ ಮಾನವ ಕುಲ ಭಾರತವೂ ಸೇರಿದಂತೆ ಇಡೀ ವಿಶ್ವವನ್ನು ಹರಸುವಂತೆ ಪ್ರಾರ್ಥಿಸುತ್ತಿದೆ.

ಸ್ನೇಹಿತರೆ,

ಬಾರಿ ಆಯುರ್ವೇದ ದಿನ ಗುಜರಾತ್ ಮತ್ತು ರಾಜಾಸ್ಥಾನಕ್ಕೆ ವಿಶೇಷವಾಗಿದೆ; ಇದು ನಮ್ಮ ಯುವ ಸ್ನೇಹಿತರಿಗೆ ವಿಶೇಷವಾಗಿದೆ. ಇಂದು, ಗುಜರಾತ್ ಜಾಮ್ನಗರದ ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಸಂಸ್ಥೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ. ಅಂತೆಯೇ, ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆ ಇಂದು ಸ್ವಾಯತ್ತವಿಶ್ವವಿದ್ಯಾಲಯವಾಗಿ ಪ್ರಾರಂಭವಾಗಿದೆ. ಆಯುರ್ವೇದದಲ್ಲಿ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಅತ್ಯುತ್ತಮ ಸಂಸ್ಥೆಗಳಿಗಾಗಿ ರಾಜಸ್ಥಾನ ಮತ್ತು ಗುಜರಾತ್ ಹಾಗೂ ಇಡೀ ದೇಶಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ಸ್ನೇಹಿತರೆ,
ಆಯುರ್ವೇದ ಭಾರತದ ಪರಂಪರೆಯಾಗಿದ್ದು, ಇದರ ವಿಸ್ತರಣೆ ಇಡೀ ಮಾನವ ಕುಲದ ಕ್ಷೇಮಕ್ಕಾಗಿ ಮಹತ್ವದ್ದಾಗಿದೆ ಎಂದರು. ನಮ್ಮ ಸಾಂಪ್ರದಾಯಿಕ ಜ್ಞಾನವು ಇಂದು ಇತರ ದೇಶಗಳನ್ನೂ ಸಮೃದ್ಧಗೊಳಿಸುತ್ತಿರುವುದನ್ನು ನೋಡಿದಾಗ ಯಾವ ಭಾರತೀಯನಿಗೆ ಸಂತೋಷವಾಗುವುದಿಲ್ಲ ಹೇಳಿ? ಇಂದು, ಬ್ರೆಜಿಲ್ ರಾಷ್ಟ್ರೀಯ ನೀತಿಯು ಆಯುರ್ವೇದವನ್ನು ಒಳಗೊಂಡಿದೆ. ಭಾರತ - ಅಮೆರಿಕ ಸಂಬಂಧಗಳೇ ಇರಲಿ ಅಥವಾ ಭಾರತ-ಜರ್ಮನ್ ಸಂಬಂಧವೇ ಆಗಿರಲಿ, ಆಯುಷ್ ಮತ್ತು ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿಗೆ ಸಂಬಂಧಿಸಿದ ಸಹಕಾರವು ನಿರಂತರವಾಗಿ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಡಬ್ಲ್ಯು.ಎಚ್.. ಮುಖ್ಯಸ್ಥರಾದ ನನ್ನ ಸ್ನೇಹಿತರು, ಇಂದು ಅತ್ಯಂತ ಮಹತ್ವದ ಪ್ರಕಟಣೆ ಮಾಡಿದ್ದಾರೆ: ಡಬ್ಲ್ಯು ಎಚ್.. ಸಾಂಪ್ರದಾಯಿಕ ವೈದ್ಯಪದ್ಧತಿಯ ಜಾಗತಿಕ ಕೇಂದ್ರ ಸ್ಥಾಪನೆಗೆ ಭಾರತವನ್ನು ಆಯ್ಕೆ ಮಾಡಿದೆ ಮತ್ತು ಈಗ ಭಾರತದಲ್ಲಿ ಜಗತ್ತಿನ ಕಲ್ಯಾಣದ ನಿಟ್ಟಿನಲ್ಲಿ ಕೆಲಸ ನಡೆಯಲಿದೆ. ಭಾರತಕ್ಕೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ್ದಕ್ಕಾಗಿ ನಾನು ವಿಶ್ವ ಆರೋಗ್ಯ ಸಂಸ್ಥೆಗೆ, ಅದರಲ್ಲೂ ನನ್ನ ಸ್ನೇಹಿತ ಡಬ್ಲ್ಯು ಎಚ್.. ಮಹಾ ನಿರ್ದೇಶಕ ಡಾ. ಟೆಡ್ರಸ್ ಅವರಿಗೆ ಹೃತ್ಫೂರ್ವಕ ಧನ್ಯವಾದ ಅರ್ಪಿಸುತ್ತೇನೆ. ಭಾರತ 'ವಿಶ್ವದ ಔಷಧಾಲಯ'ವಾಗಿ ಹೊರಹೊಮ್ಮಿರುವಂತೆಯೇ ಸಾಂಪ್ರದಾಯಿಕ ವೈದ್ಯಪದ್ಧತಿಯ ಕೇಂದ್ರ ಜಾಗತಿಕ ಕ್ಷೇಮದ ಕೇಂದ್ರವಾಗಿ ಪರಿವರ್ತಿತವಾಗುತ್ತದೆ. ಕೇಂದ್ರ ಸಾಂಪ್ರದಾಯಿಕ ವೈದ್ಯ ವ್ಯವಸ್ಥೆಯನ್ನು ವಿಶ್ವಾದ್ಯಂತ ಅಭಿವೃದ್ಧಿ ಪಡಿಸುವ ಮತ್ತು ಅದಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಹೊಸ ಎತ್ತರ ತಲುಪಿ ಸಾಬೀತು ಪಡಿಸಲಿದೆ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೆ,
ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಇಂದು ಎಲ್ಲವೂ ಏಕೀಕೃತವಾಗುತ್ತಿದೆ. ಇದಕ್ಕೆ ಆರೋಗ್ಯವೂ ಹೊರತಾಗಿಲ್ಲ. ಕಲ್ಪನೆಯೊಂದಿಗೆ, ದೇಶವು ಚಿಕಿತ್ಸೆಯ ವಿವಿಧ ವಿಧಾನಗಳ ಏಕೀಕರಣದತ್ತ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಎಲ್ಲದರ ಮಹತ್ವವನ್ನು ಒತ್ತಿಹೇಳುತ್ತಿದೆ. ಚಿಂತನೆಯು ಆಯುಷ್ ಮತ್ತು ಆಯುರ್ವೇದವನ್ನು ದೇಶದ ಆರೋಗ್ಯ ನೀತಿಯ ಪ್ರಮುಖ ಭಾಗವನ್ನಾಗಿ ಮಾಡಿದೆ. ಇಂದು, ನಾವು ನಮ್ಮ ಸಾಂಪ್ರದಾಯಿಕ ಆರೋಗ್ಯ ಭಂಡಾರವನ್ನು ಕೇವಲ ಒಂದು ಆಯ್ಕೆಯನ್ನಾಗಿ ಮಾಡುತ್ತಿಲ್ಲ, ಆದರೆ ದೇಶದ ಆರೋಗ್ಯ ನೀತಿಯ ಬೆನ್ನೆಲುಬಾಗಿ ಮಾಡುತ್ತಿದ್ದೇವೆ.
ಸ್ನೇಹಿತರೆ,
ಭಾರತವು ಆರೋಗ್ಯಕ್ಕೆ ಸಂಬಂಧಿಸಿದ ಅಂತಹ ಶ್ರೀಮಂತ ಪರಂಪರೆಯನ್ನು ಹೊಂದಿದೆ ಎಂಬುದು ಸದಾ ಸಿದ್ಧ ಸತ್ಯವಾಗಿದೆ. ಆದರೆ ಜ್ಞಾನವು ಹೆಚ್ಚಾಗಿ ಪುಸ್ತಕಗಳಲ್ಲಿ, ಧರ್ಮಗ್ರಂಥಗಳಲ್ಲಿ ಮತ್ತು ನಮ್ಮ ಅಜ್ಜಿ ನೀಡುವ ಸಲಹೆಗಳು ಮತ್ತು ಸೂತ್ರಗಳೊಂದಿಗೆ ಮಾತ್ರ ಇದೆ ಎಂಬುದು ಅಷ್ಟೇ ಸತ್ಯ. ಆಧುನಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಜ್ಞಾನವನ್ನು ಅಭಿವೃದ್ಧಿಪಡಿಸುವುದು ಬಹಳ ಮುಖ್ಯವಾಗಿದೆ. ಆದ್ದರಿಂದ, ದೇಶದಲ್ಲಿ ಮೊದಲ ಬಾರಿಗೆ, ನಮ್ಮ ಪ್ರಾಚೀನ ವೈದ್ಯ ಜ್ಞಾನವನ್ನು 21 ನೇ ಶತಮಾನದ ಆಧುನಿಕ ವೈಜ್ಞಾನಿಕ ಜ್ಞಾನದೊಂದಿಗೆ ಸಂಯೋಜಿಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಇಲ್ಲಿ ಸ್ಥಾಪಿಸಲಾಯಿತು. ಲೇಹ್ನಲ್ಲಿರುವ ಸೋವಾ-ರಿಗ್ಪಾಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಇತರ ಅಧ್ಯಯನಗಳಿಗಾಗಿ ರಾಷ್ಟ್ರೀಯ ಸೋವಾ ರಿಗ್ಪಾ ಸಂಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಇಂದು, ನವೀಕರಿಸಲಾದ ಗುಜರಾತ್ ಮತ್ತು ರಾಜಸ್ಥಾನದ ಎರಡು ಸಂಸ್ಥೆಗಳು ಸಹ ಇದರ ವಿಸ್ತರಣೆಯಾಗಿವೆ.

ಸಹೋದರ ಮತ್ತು ಸಹೋದರಿಯರೇ,

ಎಲ್ಲಿ ಪ್ರಗತಿ ಮತ್ತು ವಿಸ್ತರಣೆ ಇರುತ್ತದೋ ಅಲ್ಲಿ ಜವಾಬ್ದಾರಿ ಸಹ ಹೆಚ್ಚಳವಾಗುತ್ತದೆ ಎಂದು ಹೇಳಲಾಗುತ್ತದೆ. ಇಂದು, ಎರಡು ಮಹತ್ವದ ಸಂಸ್ಥೆಗಲು ಪ್ರತಿಷ್ಠೆಯೊಂದಿಗೆ ಬೆಳೆದಿದ್ದು, ನನ್ನದೂ ಒಂದು ವಿನಂತಿ ಇದೆ- ದೇಶದ ಪ್ರಮುಖ ಆಯುರ್ವೇದ ಸಂಸ್ಥೆಗಳಾಗಿರುವುದರಿಂದ, ಅಂತಾರಾಷ್ಟ್ರೀಯ ರೂಢಿಗಳಿಗೆ ಹೊಂದುವಂಥ ಮತ್ತು ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾದ ಕೋರ್ಸ್ಗಳನ್ನು ವಿನ್ಯಾಸಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಆಯುರ್-ಭೌತಶಾಸ್ತ್ರ ಮತ್ತು ಆಯುರ್-ರಸಾಯನಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ಹೊಸ ಸಾಧ್ಯತೆಗಳೊಂದಿಗೆ ಕೆಲಸ ಮಾಡಲು ನಾನು ಶಿಕ್ಷಣ ಸಚಿವಾಲಯ ಮತ್ತು ಯುಜಿಸಿಯನ್ನು ಆಗ್ರಹಿಸುತ್ತೇನೆ. ಸಂಶೋಧನೆಗೆ ಗರಿಷ್ಠ ಉತ್ತೇಜನ ನೀಡಲು ಸಮಗ್ರ ವೈದ್ಯ ಶಿಕ್ಷಣ ಮತ್ತು ಸ್ನಾತಕೋತ್ತರ ವೈದ್ಯ ಶಿಕ್ಷಣ ಪಠ್ಯಕ್ರಮವನ್ನು ರಚಿಸಲು ಇದು ಕೆಲಸ ಮಾಡುತ್ತದೆ.

ಇಂದು ನಾನು ನವೋದ್ಯಮಗಳು ಮತ್ತು ದೇಶದ ಖಾಸಗಿ ವಲಯಕ್ಕೂ ವಿಶೇಷ ವಿನಂತಿ ಮಾಡುತ್ತೇನೆ. ದೇಶದ ಖಾಸಗಿ ನವೋದ್ಯಮಗಳು ಅಥವಾ ಹೊಸ ನವೋದ್ಯಮಗಳು ಆಯುರ್ವೇದದ ಜಾಗತಿಕ ಬೇಡಿಕೆಯನ್ನು ಅಧ್ಯಯನ ಮಾಡಬೇಕು ಮತ್ತು ಕ್ಷೇತ್ರದ ಬೆಳವಣಿಗೆಯಲ್ಲಿ ತಮ್ಮ ಪಾಲನ್ನು ಖಚಿತಪಡಿಸಿಕೊಳ್ಳಬೇಕು. ಆಯುರ್ವೇದದ ಸ್ಥಳೀಯ ಶಕ್ತಿಯಾಗಿದ್ದು, ನೀವು ಪ್ರಪಂಚದಾದ್ಯಂತ ಅದಕ್ಕೆ ಧ್ವನಿಯಾಗಬೇಕು. ಆಯುಷ್ ಮಾತ್ರವಲ್ಲದೆ ನಮ್ಮ ಇಡೀ ಆರೋಗ್ಯ ವ್ಯವಸ್ಥೆಯು ನಮ್ಮ ಸಂಘಟಿತ ಪ್ರಯತ್ನಗಳಿಂದ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ವರ್ಷ ಸಂಸತ್ತಿನ ಮುಂಗಾರು ಅಧಿವೇಶದಲ್ಲಿ ಎರಡು ಐತಿಹಾಸಿಕ ಮಹತ್ವದ ಆಯೋಗಗಳನ್ನು ಸ್ಥಾಪಿಸಲಾಯಿತು. ಮೊದಲನೆಯದು ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಎರಡನೆಯದು ಹೋಮಿಯೋಪಥಿ ಕುರಿತ ರಾಷ್ಟ್ರೀಯ ಆಯೋಗ. ಜೊತೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತದ ವೈದ್ಯಕೀಯ ಶಿಕ್ಷಣದಲ್ಲಿ ಏಕೀಕರಣದ ವಿಧಾನವನ್ನು ಪ್ರೋತ್ಸಾಹಿಸಲಾಗಿದೆ. ಅಲೋಪತಿ ಶಿಕ್ಷಣದಲ್ಲಿ ಆಯುರ್ವೇದದ ಮೂಲಭೂತ ಜ್ಞಾನ ಮತ್ತು ಆಯುರ್ವೇದ ಶಿಕ್ಷಣದಲ್ಲಿ ಅಲೋಪಥಿಯ ಅಭ್ಯಾಸಗಳ ಮೂಲ ಜ್ಞಾನವನ್ನು ಹೊಂದಿರುವುದು ನೀತಿಯ ಸ್ಫೂರ್ತಿಯಾಗಿದೆ. ಹಂತಗಳು ಆಯುಷ್ ಮತ್ತು ಭಾರತೀಯ ಸಾಂಪ್ರದಾಯಿಕ ವೈದ್ಯಕ್ಕೆ ಸಂಬಂಧಿಸಿದ ಶಿಕ್ಷಣ ಮತ್ತು ಸಂಶೋಧನೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಸ್ನೇಹಿತರೆ,
21
ನೇ ಶತಮಾನದ ಭಾರತವು ಇನ್ನೆಂದು ಬಿಡಿಯಾಗಿ ಯೋಚಿಸುವುದಿಲ್ಲ ಬದಲಾಗಿ, ಸಮಗ್ರವಾಗಿ ಯೋಚಿಸುತ್ತದೆ.

ಆರೋಗ್ಯದ ಸವಾಲುಗಳನ್ನು ಸಹ ಸಮಗ್ರ ವಿಧಾನದೊಂದಿಗೆ ಇದೇ ರೀತಿಯಲ್ಲಿ ಪರಿಹರಿಸಲಾಗುತ್ತದೆ.

ಇಂದು, ಯೋಗಕ್ಷೇಮ ದೇಶದಲ್ಲಿ ಅಗ್ಗದ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಜೊತೆಗೆ ರೋಗ ತಡೆ ಆರೋಗ್ಯ ಆರೈಕೆಯತ್ತ ಹೆಚ್ಚು ಗಮನ ಹರಿಸುತ್ತಿದೆ. ಆಚಾರ್ಯ ಚರಕ ಅವರು ಹೀಗೆ ಹೇಳುತ್ತಾರೆ

स्वस्थस्य स्वास्थ्य रक्षणं, आतुरस्य विकार प्रशमनं !

ಆರೋಗ್ಯವಂತ ವ್ಯಕ್ತಿಯ ಆರೋಗ್ಯ ರಕ್ಷಣೆ ಮತ್ತು ರೋಗಿಯ ರೋಗ ನಿವಾರಣೆ ಆಯುರ್ವೇದದ ಉದ್ದೇಶ.

ಆರೋಗ್ಯವಂತ ಜನರು ಆರೋಗ್ಯವಂತರಾಗಿರಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಅನಾರೋಗ್ಯಕ್ಕೆ ಕಾರಣವಾಗುವ ಪರಿಸ್ಥಿತಿಯನ್ನು ನಿವಾರಿಸಲಾಗುತ್ತಿದೆ. ಒಂದೆಡೆ ಸ್ವಚ್ಛತೆ, ನೈರ್ಮಲ್ಯ, ಶೌಚಾಲಯ, ಶುದ್ಧ ಕುಡಿಯುವ ನೀರು, ಹೊಗೆ ಮುಕ್ತ ಅಡುಗೆಮನೆ, ಪೌಷ್ಟಿಕತೆಗೆ ಕಾಳಜಿ ವಹಿಸಲಾಗಿದೆ, ಮತ್ತೊಂದೆಡೆ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಭಾರತದ ಮೂಲೆ ಮೂಲೆಯಲ್ಲೂ ಸ್ಥಾಪಿಸಲಾಗುತ್ತಿದೆ. ಪೈಕಿ 12,500 ಆಯುಷ್ ಕ್ಷೇಮ ಕೇಂದ್ರಗಳಾಗಿದ್ದು, ಸಂಪೂರ್ಣವಾಗಿ ಆಯುರ್ವೇದಕ್ಕೆ ಸಮರ್ಪಿತವಾಗಿವೆ ಅಥವಾ ಆಯುರ್ವೇದಕ್ಕೆ ಸಂಪರ್ಕಿತವಾಗಿರುತ್ತವೆ.

ಸ್ನೇಹಿತರೆ,

ಭಾರತದ ಕ್ಷೇಮದ ತತ್ವ ಇಡೀ ವಿಶ್ವವನ್ನೇ ಇಂದು ಆಕರ್ಷಿಸುತ್ತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದ ಭಾರತದ ಸಾಂಪ್ರದಾಯಿಕ ಜ್ಞಾನ ಎಷ್ಟು ಪರಿಣಾಮಕಾರಿ ಎಂಬುದನ್ನು ನಿರೂಪಿಸಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಯಾವುದೇ ಮಾರ್ಗ ಇಲ್ಲದಿದ್ದಾಗ, ಹಲವು ರೋಗನಿರೋಧಕ ಶಕ್ತಿ ಹೆಚ್ಚಿಸುವ ಪರಿಹಾರಗಳಾದ ಹರಿಶಿನ, ಹಾಲು ಸೇರಿದ ಕಷಾಯ ಭಾರತದ ಮನೆ ಮನೆಯಲ್ಲೂ ತಯಾರಿಸಲಾಗುತ್ತಿತ್ತು ಮತ್ತು ಅದು ನಮ್ಮನ್ನು ರಕ್ಷಿಸಿತು. ನಮ್ಮದು ಹೆಚ್ಚು ಜನಸಂಖ್ಯೆಯ ರಾಷ್ಟ್ರ, ಆದಾಗ್ಯೂ ನಮ್ಮ ಸಾಂಪ್ರದಾಯಿಕ ಜ್ಞಾನ ದೇಶದಲ್ಲಿ ಇಂದು ಸ್ಥಿರವಾದ ಸ್ಥಿತಿ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಸ್ನೇಹಿತರೇ,

ಕೊರೊನಾ ಕಾಲದಲ್ಲಿ ಆಯುರ್ವೇದ ಉತ್ಪನ್ನಗಳಿಗೆ ವಿಶ್ವಾದ್ಯಂತ ಬೇಡಿಕೆ ತ್ವರಿತವಾಗಿ ಹೆಚ್ಚಾಯಿತು. ಆಯುರ್ವೇದ ಉತ್ಪನ್ನಗಳ ರಫ್ತು 1.5ರಷ್ಟು ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷ ಸೆಪ್ಟೆಂಬರ್ ನಲ್ಲಿ ಶೇ.45ರಷ್ಟು ಹೆಚ್ಚಳವಾಗಿದೆ. ಮಿಗಿಲಾಗಿ ಸಾಂಬಾರ ಪದಾರ್ಥಗಳ ರಫ್ತಿನಲ್ಲೂ ಗಣನೀಯ ಏರಿಕೆ ಆಗಿದೆ. ಹರಿಶಿನ, ಶುಂಟಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎನ್ನಲಾಗುವ ಸಾಂಬಾರ ಪದಾರ್ಥಗಳ ರಫ್ತು ದಿಢೀರ್ ಹೆಚ್ಚಳವಾಗಿದ್ದು, ಇದು ಭಾರತದ ಆಯುರ್ವೇದ ಪರಿಹಾರ ಮತ್ತು ಭಾರತೀಯ ಸಾಂಬಾರ ಪದಾರ್ಥಗಳ ಮೇಲೆ ವಿಶ್ವಕ್ಕೆ ಇರುವ ವಿಶ್ವಾಸವನ್ನು ತೋರಿಸುತ್ತದೆ. ಇಂದು ಹಲವು ರಾಷ್ಟ್ರಗಳಲ್ಲಿ ಹರಿಶಿನ ಸಹಿತ ವಿಶೇಷ ಪೇಯ ಸೇವನೆ ಪ್ರವೃತ್ತಿಯಾಗಿದೆ. ಇಂದು ವಿಶ್ವದ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕಗಳು ಸಹ ಆಯುರ್ವೇದದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿವೆ.

ಸ್ನೇಹಿತರೆ,

ಕೊರೊನಾ ಯುಗದಲ್ಲಿ ನಮ್ಮ ಗಮನ ಆಯುರ್ವೇದದ ಬಳಕೆಗಷ್ಟೇ ಸೀಮಿತವಾಗಿಲ್ಲ. ಜೊತೆಗೆ ದೇಶದಲ್ಲಿ ಮತ್ತು ವಿಶ್ವದಲ್ಲಿ ಆಯುಷ್ ಸಂಬಂಧಿತ ಮುಂದುವರಿದ ಸಂಶೋಧನೆಗಳಿಗೆ ಒತ್ತು ನೀಡಲಾಗಿದೆ. ಇಂದು ಒಂದೆಡೆ ಭಾರತ ಲಸಿಕೆಗಳನ್ನು ಪರೀಕ್ಷಿಸುತ್ತಿದೆ; ಜೊತೆಗೆ ಮತ್ತೊಂದೆಡೆ ಕೋವಿಡ್ ವಿರುದ್ಧ ಹೋರಾಡಲು ಆಯುರ್ವೇದ ಸಂಶೋಧನೆಗೆ ಅಂತಾರಾಷ್ಟ್ರೀಯ ಸಹಕಾರವನ್ನೂ ಹೆಚ್ಚಿಸುತ್ತಿದೆ. ಸಮಯದಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎಂದು ಈಗಷ್ಟೇ ನನ್ನ ಸಹೋದ್ಯೋಗಿ ಶ್ರೀಪಾದ್ ಅವರು ಹೇಳುತ್ತಿದ್ದರು. ದೆಹಲಿ ಒಂದರಲ್ಲೇ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ನೀವು ವಿವರವಾಗಿ ಹೇಳಿದಂತೆ 80 ಸಾವಿರ ದೆಹಲಿ ಪೊಲೀಸ್ ಸಿಬ್ಬಂದಿಯ ಮೇಲೆ ರೋಗ ನಿರೋಧಕ ಶಕ್ತಿ ವರ್ಧನೆಯ ಸಂಶೋಧನೆ ನಡೆಯುತ್ತಿದೆ. ಬಹುಶಃ ಇದು ವಿಶ್ವದ ಅತಿ ದೊಡ್ಡ ಸಮೂಹ ಅಧ್ಯಯನವಾಗಿದೆ. ಜೊತೆಗೆ ಇದರಿಂದ ಆಶಾದಾಯಕವಾದ ಫಲಶ್ರುತಿಯೂ ಬರುತ್ತಿದೆ. ಕೆಲವು ಅಂತಾರಾಷ್ಟ್ರೀಯ ಪ್ರಯೋಗಗಳೂ ಮುಂದಿನ ದಿನಗಳಲ್ಲಿ ನಡೆಯಲಿವೆ.

ಸ್ನೇಹಿತರೆ,

ಇಂದು, ನಾವು ಆಯುರ್ವೇದ ಔಷಧಗಳಿಗೆ ವಿಶೇಷ ಒತ್ತು ನೀಡುತ್ತಿದ್ದೇವೆ, ಗಿಡಮೂಲಿಕೆಗಳು ಮತ್ತು ಪೌಷ್ಟಿಕ ಆಹಾರ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತಿದೆ. ಇಂದು ರೈತರಿಗೆ ಸಿರಿ ಧಾನ್ಯ ಬೆಳೆಯಲು ಉತ್ತೇಜಿಸಲಾಗುತ್ತಿದೆ. ಮಿಗಿಲಾಗಿ ಸಾವಯವ ಉತ್ಪನ್ನಗಳನ್ನು ಗಂಗಾನದಿಯ ತಟದಲ್ಲಿ ಮತ್ತು ಹಿಮಾಲಯ ಪ್ರದೇಶದಲ್ಲಿ ಬೆಳೆಯಲು ಉತ್ತೇಜಿಸಲಾಗುತ್ತಿದೆ. ಆಯುರ್ವೇದ ಗಿಡಗಳನ್ನು ಮತ್ತು ಸಸ್ಯಗಳನ್ನು ಬೆಳೆಸಲು ಒತ್ತು ನೀಡಲಾಗಿತ್ತಿದೆ. ವಿಶ್ವದ ಯೋಗಕ್ಷೇಮಕ್ಕೆ ಭಾರತ ಹೆಚ್ಚು ಹೆಚ್ಚು ಕೊಡುಗೆ ನೀಡುವುದನ್ನು ಖಾತ್ರಿ ಪಡಿಸಿಕೊಳ್ಳಲು ಮತ್ತು ನಮ್ಮ ರೈತರ ಆದಾಯವನ್ನು ಹಾಗೂ ರಫ್ತು ಹೆಚ್ಚಿಸಲೂ ಪ್ರಯತ್ನಿಸಲಾಗುತ್ತಿದೆ. ಆಯುಷ್ ಸಚಿವಾಲಯ ಇದಕ್ಕಾಗಿ ಸಮಗ್ರ ಯೋಜನೆ ರೂಪಿಸುತ್ತಿದೆ. ಕೋವಿಡ್ ಸಾಂಕ್ರಾಮಿಕ ಬಂದ ಬಳಿಕ ನೀವು ನೋಡಿರಬಹುದು, ಆಯುರ್ವೇದ ಮೂಲಿಕೆಗಳಾದ ಅಶ್ವಗಂಧ, ಜಿಲೋಯ್, ತುಳಸಿ ಇತ್ಯಾದಿಗಳ ದರದಲ್ಲೂ ಹೆಚ್ಚಳವಾಗಿದೆ. ಅವುಗಳಿಗೆ ಹೆಚ್ಚಿರುವ ಬೇಡಿಕೆಯೇ ಇದಕ್ಕೆ ಕಾರಣ. ಜನರಲ್ಲಿ ಆಯುರ್ವೇದದ ಬಗ್ಗೆ ವಿಶ್ವಾಸ ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಶ್ವಗಂಧದ ಬೆಲೆ ದುಪ್ಪಟ್ಟಾಗಿದೆ ಎಂದು ನನಗೆ ತಿಳಿಸಲಾಯಿತು. ಇಂಥ ಗಿಡಮೂಲಿಕೆ ಮತ್ತು ಔಷಧೀಯ ಸಸ್ಯ ಬೆಳೆಯುವ ನಮ್ಮ ರೈತರಿಗೆ ಮತ್ತು ಅವರ ಕುಟುಂಬದವರಿಗೆ ಇದರಿಂದ ಪ್ರಯೋಜನವಾಗುತ್ತಿದೆ. ಅನೇಕ ಗಿಡಮೂಲಿಕೆಗಳು ಇದ್ದರೂ, ಅವುಗಳ ಉಪಯುಕ್ತತೆಯ ಬಗ್ಗೆ ನಮ್ಮಲ್ಲಿ ಇನ್ನೂ ಜಾಗೃತಿ ಮೂಡಿಸಬೇಕಾಗಿದೆ. ಸುಮಾರು 50 ಔಷಧೀಯ ಸಸ್ಯಗಳಿವೆ, ಅವು ತರಕಾರಿಗಳು ಮತ್ತು ಸಲಾಡ್ಗಳಂತೆ ಉತ್ತಮ ಉಪಯುಕ್ತತೆಯನ್ನು ಹೊಂದಿವೆ. ಕೃಷಿ ಸಚಿವಾಲಯವೇ ಇರಲಿ, ಆಯುಷ್ ಸಚಿವಾಲಯವೇ ಆಗಿರಲಿ ಅಥವಾ ಇತರ ಇಲಾಖೆಗಳೇ ಆಗಲಿ, ಎಲ್ಲರ ಸಂಘಟಿತ ಪ್ರಯತ್ನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು.

ಸ್ನೇಹಿತರೆ,

ಆಯುರ್ವೇದಕ್ಕೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಯ ಅಭಿವೃದ್ಧಿಯೊಂದಿಗೆ, ದೇಶದ ಆರೋಗ್ಯ ಮತ್ತು ಕ್ಷೇಮ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರಕಲಿದೆ. ಗುಜರಾತ್ ಮತ್ತು ರಾಜಸ್ಥಾನಗಳು ಒಂದೇ ರೀತಿಯ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಜಮ್ ನಗರ ಮತ್ತು ಜೈಪುರದ ಎರಡು ಸಂಸ್ಥೆಗಳು ನಿಟ್ಟಿನಲ್ಲಿಯೂ ಉಪಯುಕ್ತವಾಗಲಿವೆ ಎಂದು ನಾನು ಭಾವಿಸುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು! ಇಂದು ಚೋಟಿ ದೀಪಾವಳಿ ಮತ್ತು ನಾಳೆ ಬಡಿ ದೀಪಾವಳಿ. ದೀಪಾವಳಿಯ ಹಬ್ಬದಂದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಶುಭಾಶಯಗಳು.

ತುಂಬಾ ತುಂಬಾ ಧನ್ಯವಾದಗಳು!!

***



(Release ID: 1673228) Visitor Counter : 201