ಜವಳಿ ಸಚಿವಾಲಯ

ಜವಳಿ ಸಚಿವಾಲಯದ #Local4Diwali ದೇಶೀಯ ದೀಪಾವಳಿ ಅಭಿಯಾನ


ಕರಕುಶಲ ವಸ್ತುಗಳನ್ನು ಖರೀದಿಸಿ ದೀಪಾವಳಿ ಆಚರಿಸಲು ಮನವಿ

Posted On: 11 NOV 2020 1:15PM by PIB Bengaluru

ಕರಕುಶಲ ವಸ್ತುಗಳು ಭಾರತದ ಅದ್ಭುತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿವೆ ಮತ್ತು ದೇಶದಲ್ಲಿ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಕರಕುಶಲ ಕುಶಲಕರ್ಮಿಗಳು ಮತ್ತು ಸಂಬಂಧಿತ ಕಾರ್ಮಿಕರಲ್ಲಿ ಶೇ.55ರಷ್ಟು ಮಹಿಳೆಯರು ಇರುವುದರಿಂದ ಕ್ಷೇತ್ರವು ಮಹಿಳೆಯರ ಸಬಲೀಕರಣಕ್ಕೆ ಮುಖ್ಯವಾಗಿದೆ.

ಭಾರತದ ಕರಕುಶಲ ವಸ್ತುಗಳನ್ನು ಬಳಸುವುದು ನಮ್ಮ ಪ್ರಯತ್ನವಾಗಿರಬೇಕು ಮತ್ತು ಅವುಗಳ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ತಿಳಿಸಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ದೇಶೀಯ ದೀಪಾವಳಿ ಅಭಿಯಾನ ಕುರಿತು ಜವಳಿ ಸಚಿವರು ಮನವಿ:

ನವೆಂಬರ್ 9 ರಂದು ಪ್ರಧಾನ ಮಂತ್ರಿಯವರು ನೀಡಿದ ಸ್ಪಷ್ಟ ಕರೆಯಿಂದ ಪ್ರೇರಿತರಾಗಿ, ಎಲ್ಲರೂ ಸ್ಥಳೀಯ ಜವಳಿ ಮತ್ತು ಕರಕುಶಲ ವಸ್ತುಗಳ ಖರೀದಿಗೆ ನಮ್ಮ ಬೆಂಬಲವನ್ನು ನೀಡೋಣ. ಮಣ್ಣಿನ ಹಣತೆ, ದೇಸಿ ಹೊದಿಕೆ, ಬೆಡ್ಶೀಟ್‌, ಪರದೆ ಅಥವಾ ಕರಕುಶಲ ವಸ್ತುಗಳಂತಹ ಗೃಹೋಪಯೋಗಿ ವಸ್ತುಗಳು ನಿಮ್ಮ ಬಂಧುಗಳಿಗೆ ಮತ್ತು ಆತ್ಮೀಯರಿಗೆ ಉಡುಗೊರೆಯಾಗಿರಲಿ; ದೀಪಾವಳಿಯ ಪ್ರತಿ ಖರೀದಿಯೂ ಮುಖ್ಯವಾಗುತ್ತದೆ. ನೇಕಾರರು, ಕುಶಲಕರ್ಮಿಗಳು, ಸ್ಥಳೀಯ ಮತ್ತು ಸಣ್ಣ ಉದ್ಯಮಗಳ ಮೂಲಕ ದೀಪಾವಳಿ ಮಾರಾಟವನ್ನು ಉತ್ತೇಜಿಸಲು ದಯವಿಟ್ಟು ನಿಮ್ಮ ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ #Local4Diwali ಎಂಬ ಹ್ಯಾಶ್ಟ್ಯಾಗ್ ಬಳಸಿ. ನೀವು ದೀಪಾವಳಿಗೆ ಮನೆಯಲ್ಲಿ ಬಳಸಲು ಅಥವಾ ಇನ್ನೊಬ್ಬರಿಗೆ ಉಡುಗೊರೆ ನೀಡಲು ಬಯಸುವ ನಿಮಗೆ ಇಷ್ಟವಾದ ವಸ್ತುವಿನ-ಅದು ಬಟ್ಟೆ ಅಥವಾ ಕರಕುಶಲ ವಸ್ತು- ಚಿತ್ರವನ್ನು ತೆಗೆದುಕೊಳ್ಳಿ. ನೀವು ಖರೀದಿಸಿದ ವ್ಯಕ್ತಿಯನ್ನು ಅದಕ್ಕೆ ಟ್ಯಾಗ್ ಮಾಡಿ ಮತ್ತು #Local4Diwaliನಲ್ಲಿ ಹಾಕಿ. ಸವಾಲಿನ ಸಂದರ್ಭದಲ್ಲಿ ಮಾರಾಟವನ್ನು ಬೆಂಬಲಿಸುವ ಪ್ರವೃತ್ತಿಯು ನೆರವಿಗೆ ಬರಲಿ; ನಿಮ್ಮ ಬೆಂಬಲವು ಅಗತ್ಯವಿರುವವರಿಗೆ ಅವಕಾಶಗಳ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ.”

***



(Release ID: 1671892) Visitor Counter : 220