ಪ್ರಧಾನ ಮಂತ್ರಿಯವರ ಕಛೇರಿ

ಒಂದು ಶ್ರೇಣಿ-ಒಂದು ಪಿಂಚಣಿ’ ಯೋಜನೆಯ 5ನೇ ವರ್ಷಾಚರಣೆ; ಅಪ್ರತಿಮ ಸೇವೆಗೈದ ಹಿರಿಯ ಸೇನಾನಿಗಳಿಗೆ ಪ್ರಧಾನಿ ನಮನ

Posted On: 07 NOV 2020 6:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಒಂದು ಶ್ರೇಣಿ-ಒಂದು ಪಿಂಚಣಿ ಯೋಜನೆ ಜಾರಿಯಾಗಿ ಐದು ವರ್ಷ ಪೂರೈಸಿದ ಸಂದರ್ಭದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಹಿರಿಯ ಸೇನಾನಿಗಳಿಗೆ ನಮನ ಸಲ್ಲಿಸಿದ್ದಾರೆ.
 “ಐದು ವರ್ಷಗಳ ಹಿಂದೆ ಇದೇ ದಿನ, ಶೌರ್ಯದಿಂದ ನಮ್ಮ ರಾಷ್ಟ್ರವನ್ನು ರಕ್ಷಿಸುತ್ತಿರುವ ಶ್ರೇಷ್ಠ ಯೋಧರ ಕಲ್ಯಾಣಕ್ಕಾಗಿ ಭಾರತ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿತ್ತು. ಒಆರ್ ಒಪಿ ಜಾರಿಯಾಗಿ ಐದು ವರ್ಷ ಪೂರ್ಣಗೊಂಡಿರುವುದು ಸ್ಮರಣಾರ್ಹ ಸಂದರ್ಭವಾಗಿದೆ. ಭಾರತ ಒಆರ್ ಒಪಿ ಗಾಗಿ ದಶಕಗಳ ಕಾಲ ಕಾಯುತ್ತಿತ್ತು.
ಅಪ್ರತಿಮ ಸೇವೆ ಸಲ್ಲಿಸಿರುವ ನಮ್ಮ ಹಿರಿಯ ಸೇನಾನಿಗಳಿಗೆ ನಮನ ಸಲ್ಲಿಸುತ್ತೇನೆ’’ಎಂದು ಪ್ರಧಾನಿ ಹೇಳಿದ್ದಾರೆ. 

***

 


(Release ID: 1671122) Visitor Counter : 159