ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸಕ್ರಿಯ ಪ್ರಕರಣಗಳ ಇಳಿಕೆ ಪ್ರವೃತ್ತಿಯಲ್ಲಿ ಸ್ಥಿರತೆ ಸಾಧಿಸಿದ ಭಾರತ


ಜಾಗತಿಕವಾಗಿ ಪ್ರತಿ 10 ಲಕ್ಷ ಪ್ರಕರಣಕ್ಕೆ ಅತಿ ಕಡಿಮೆಯ ರಾಷ್ಟ್ರಗಳ ಪೈಕಿ ಒಂದಾದ ಭಾರತ

ಸತತ ಮೂರನೇ ದಿನವೂ ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷಕ್ಕಿಂತ ಕಡಿಮೆ

17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ 10 ಲಕ್ಷದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಪ್ರಕರಣ

Posted On: 01 NOV 2020 11:29AM by PIB Bengaluru

ಸಕ್ರಿಯ ಪ್ರಕರಣಗಳಲ್ಲಿ ಕುಸಿತದ ಪ್ರವೃತ್ತಿಯನ್ನು ಭಾರತ ಮುಂದುವರಿಸಿದೆ. ಮೂರು ತಿಂಗಳ ನಂತರ ಸಕ್ರಿಯ ಪ್ರಕರಣಗಳು ಸತತ ಮೂರನೇ ದಿನ 6 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಕುಸಿತದಲ್ಲಿ ಪ್ರಗತಿಯನ್ನು ಕಾಯ್ದುಕೊಳ್ಳಲಾಗಿದೆ.

ಭಾರತದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 5,70,458.

WhatsApp Image 2020-11-01 at 10.36.24 AM.jpeg

ದೇಶದ ಒಟ್ಟು ದೃಢಪಟ್ಟ ಸೋಂಕಿನ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳು ಕೇವಲ ಶೇ.6.97ಕ್ಕೆ ಕುಸಿದಿದ್ದು, ಇದು ಒಟ್ಟು ಪ್ರಕರಣಗಳಲ್ಲಿ ಸ್ಥಿರವಾದ ಇಳಿಕೆಯ ಶೇಕಡಾವಾರು ಪ್ರಮಾಣವನ್ನು ತೋರಿಸುತ್ತದೆ.

WhatsApp Image 2020-11-01 at 10.36.23 AM.jpeg

ಕೇಂದ್ರದ ಸಮಗ್ರ ಪರೀಕ್ಷೆ, ಸಕಾಲಿಕ ಪತ್ತೆ, ತ್ವರಿತ ಆಸ್ಪತ್ರೆಯ ದಾಖಲಾತಿ ಮತ್ತು ಗುಣಮಟ್ಟದ ಚಿಕಿತ್ಸಾ ಶಿಷ್ಟಾಚಾರಗಳ ಕಟ್ಟುನಿಟ್ಟಿನ ಪಾಲನೆಯ ಕೇಂದ್ರದ ಕಾರ್ಯತಂತ್ರದ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸಹಯೋಗದ ಕ್ರಮದ ಫಲಿತಾಂಶ ಇದಾಗಿದ್ದು, ಇದು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆರೈಕೆಯ ಗುಣಮಟ್ಟವನ್ನು ಮತ್ತು ಮನೆಯ ಪ್ರತ್ಯೇಕೀಕರಣದ ಪ್ರಕರಣಗಳ ಸೂಕ್ತ ಆರೈಕೆ ಖಾತ್ರಿಪಡಿಸಿದೆ.

WhatsApp Image 2020-11-01 at 10.39.10 AM.jpeg

ವಿವಿಧ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಸಕ್ರಿಯ ಪ್ರಕರಣಗಳ ಪಥವು ಕೋವಿಡ್ -19 ವಿರುದ್ಧದ ಅವುಗಳ ಹೋರಾಟದಲ್ಲಿ ಕೇಂದ್ರೀಕೃತ ಪ್ರಯತ್ನಗಳು ಮತ್ತು ಕ್ರಮೇಣ ಪ್ರಗತಿಯನ್ನು ತೋರಿಸುತ್ತದೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ತೀವ್ರ ಕುಸಿತ ವರದಿಯಾಗಿದೆ.

WhatsApp Image 2020-11-01 at 10.58.37 AM.jpeg

ಸಕ್ರಿಯ ಪ್ರಕರಣಗಳಲ್ಲಿನ ನಿರಂತರ ಇಳಿಕೆಯೊಂದಿಗೆ ಪ್ರತಿ ಹತ್ತು ಲಕ್ಷಕ್ಕೆ ಇರುವ ಪ್ರಕರಣಗಳಲ್ಲಿ ಭಾರತ ವಿಶ್ವದ ರಾಷ್ಟ್ರಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಪ್ರತಿ 10 ಲಕ್ಷಕ್ಕೆ ಭಾರತದ ಸರಾಸರಿ ಪ್ರಕರಣಗಳ ಸಂಖ್ಯೆ 5,930 ಆಗಿದೆ.

WhatsApp Image 2020-11-01 at 11.04.46 AM.jpeg

17 ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಹತ್ತು ಲಕ್ಷಕ್ಕೆ ಪ್ರತಿಯಾಗಿ ಪ್ರಕರಣಗಳ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆಯ ಇದೆ.

WhatsApp Image 2020-11-01 at 10.58.42 AM.jpeg

ಭಾರತದಲ್ಲಿ ಮರಣ ಸಂಖ್ಯೆಯೂ ಸ್ಥಿರವಾಗಿ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 470 ಸಾವು ವರದಿಯಾಗಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಭಾರತದ ಮರಣ ದರ ವಿಶ್ವದಲ್ಲೇ ಕಡಿಮೆ ಇದ್ದು, ಇದು 88ಆಗಿದೆ.  

WhatsApp Image 2020-11-01 at 11.04.46 AM (1).jpeg

21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ 10 ಲಕ್ಷಕ್ಕೆ ಮರಣ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ.

WhatsApp Image 2020-11-01 at 10.58.38 AM.jpeg

 ಶೇಕಡಾವಾರು ಸಕ್ರಿಯ ಪ್ರಕರಣಗಳ ಕ್ಷೀಣಿಸುವ ಪ್ರವೃತ್ತಿಯು ಗುಣಮುಖ ಪ್ರಕರಣಗಳ ಶೇಕಡಾವಾರು ಹೆಚ್ಚಳದಿಂದ ಬೆಂಬಲಿತವಾಗಿದೆ. ಚೇತರಿಸಿಕೊಂಡ ಒಟ್ಟು ಪ್ರಕರಣಗಳು 74,91,513. ಗುಣಮುಖ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವು 69 ಲಕ್ಷವನ್ನು (69,21,055) ದಾಟಿದೆ.

ಚೇತರಿಕೆ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದೊಂದಿಗೆ ಈ ವ್ಯತ್ಯಾಸ ನಿರಂತರವಾಗಿ ವಿಸ್ತರಿಸುತ್ತಿದೆ.

ಹೆಚ್ಚಿನ ಸಂಖ್ಯೆಯ ಚೇತರಿಕೆಗಳು ರಾಷ್ಟ್ರೀಯ ಚೇತರಿಕೆ ದರವನ್ನು ಶೇ.91.54ಕ್ಕೆ ಹೆಚ್ಚಳವಾಗಲು ನೆರವಾಗಿದೆ. ಕಳೆದ 24 ಗಂಟೆಗಳಲ್ಲಿ 58,684 ಜನರು ಚೇತರಿಸಿಕೊಂಡು, ಬಿಡುಗಡೆ ಹೊಂದಿದ್ದರೆ, ಆದರೆ ಹೊಸ ದೃಢಪಟ್ಟ ಪ್ರಕರಣಗಳು 46,963 ಆಗಿದೆ.

ಶೇ.76ರಷ್ಟು ಹೊಸ ಗುಣಮುಖ ಪ್ರಕರಣಗಳು 10 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿವೆ.

ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಗರಿಷ್ಠ ಚೇತರಿಕೆ ಪ್ರಕರಣಗಳಿಗೆ ದೊಡ್ಡ ಕೊಡುಗೆ ನೀಡಿದ್ದು, ಇಲ್ಲಿ ದಿನ ನಿತ್ಯದ ಚೇತರಿಕೆ 7 ಸಾವಿರವಾಗಿದೆ. ದೆಹಲಿ ಮತ್ತು ಪಶ್ಚಿಮ ಬಂಗಾಳ 4 ಸಾವಿರಕ್ಕೂ ಅಧಿಕ ಹೊಸ ಚೇತರಿಕೆ ಪ್ರಕರಣಗಳಿವೆ.

WhatsApp Image 2020-11-01 at 10.36.22 AM.jpeg

ಕಳೆದ 24 ಗಂಟೆಗಳಲ್ಲಿ 46,963 ಹೊಸ ಪ್ರಕರಣಗಳು ದೃಢಪಟ್ಟಿವೆ.

ಈ ಪೈಕಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.77ರಷ್ಟು ಪ್ರಕರಣ ಇದೆ. ಕೇರಳದಲ್ಲಿ ಇನ್ನೂ 7 ಸಾವಿರಕ್ಕಿಂತ  ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿ ಇದ್ದು ಇಲ್ಲಿ 5 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

 WhatsApp Image 2020-11-01 at 10.36.19 AM.jpeg

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 470 ಸಾವಿನ ಪ್ರಕರಣ ವರದಿಯಾಗಿದೆ. ಈ ಪೈಕಿ ಶೇ.78ರಷ್ಟು ಪ್ರಕರಣಗಳು  ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿವೆ.

ಶೇಕಡ 15ರಷ್ಟು ಸಾವಿನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ (74 ಸಾವು)

WhatsApp Image 2020-11-01 at 10.36.20 AM.jpeg

 

****



(Release ID: 1669385) Visitor Counter : 198