ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಎಥೆನಾಲ್ ಯುಕ್ತ ಪೆಟ್ರೋಲ್ ಕಾರ್ಯಕ್ರಮದಡಿ ಎಥೆನಾಲ್ ಖರೀದಿ ವ್ಯವಸ್ಥೆಗೆ ಸಂಪುಟದ ಅನುಮೋದನೆ
2020-21ರಲ್ಲಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಸರಬರಾಜು ಮಾಡಲು ಎಥೆನಾಲ್ ಬೆಲೆಯ ಪರಿಷ್ಕರಣೆ
Posted On:
29 OCT 2020 3:43PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈ ಕೆಳಗಿನ ತೀರ್ಮಾನಗಳಿಗೆ ಅನುಮೋದನೆ ನೀಡಿದೆ. ವಿವಿಧ ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಪಡೆದ ಎಥೆನಾಲ್ ಬೆಲೆಯನ್ನು ಎಥೆನಾಲ್ ಯುಕ್ತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದ ಅಡಿಯಲ್ಲಿ ಮುಂಬರುವ ಸಕ್ಕರೆ ಹಂಗಾಮಿನ 2020ರ ಡಿಸೆಂಬರ್ 1 ರಿಂದ 2021 ನವೆಂಬರ್ 30 ರವರೆಗೆ 2020-21ರ ಎಥೆನಾಲ್ ಸರಬರಾಜು ವರ್ಷಕ್ಕೆ ನಿಗದಿಪಡಿಸಲಾಗಿದೆ.
(i) ಸಿ ಭಾರಿ ಕಾಕಂಬಿಯ ಎಥೆನಾಲ್ ಬೆಲೆ ಪ್ರತಿ ಲೀಟರ್ಗೆ 43.75 ರೂ.ಗಳಿಂದ 45.69 ರೂ.ಗಳಿಗೆ ಹೆಚ್ಚಳ
(ii) ಬಿ ಭಾರಿ ಕಾಕಂಬಿಯ ಎಥೆನಾಲ್ ಬೆಲೆ ಪ್ರತಿ ಲೀಟರ್ಗೆ 54.27 ರೂ.ಗಳಿಂದ .57.61 ರೂ.ಗಳಿಗೆ ಹೆಚ್ಚಳ
(iii) ಕಬ್ಬಿನ ರಸ / ಸಕ್ಕರೆ / ಸಕ್ಕರೆ ಸಿರಪ್ ಎಥೆನಾಲ್ ಬೆಲೆ ಪ್ರತಿ ಲೀಟರ್ಗೆ 59.48 ರೂ.ಗಳಿಂದ 62.65 ರೂ.ಗೆ ಹೆಚ್ಚಳ
(iv) ಹೆಚ್ಚುವರಿಯಾಗಿ, ಜಿ ಎಸ್ ಟಿ ಮತ್ತು ಸಾರಿಗೆ ಶುಲ್ಕಗಳನ್ನು ಸಹ ಪಾವತಿಸಲಾಗುವುದು. ವಾಸ್ತವಿಕ ಸಾರಿಗೆ ಶುಲ್ಕವನ್ನು ನಿಗದಿಪಡಿಸಲು ಒಎಂಸಿಗಳಿಗೆ ಸೂಚಿಸಲಾಗಿದೆ, ಇದರಿಂದಾಗಿ ಎಥೆನಾಲ್ನ ದೂರದ ಸಾಗಣೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ.
(v) ರಾಜ್ಯದೊಳಗಿನ ಸ್ಥಳೀಯ ಉದ್ಯಮಕ್ಕೆ ನ್ಯಾಯಸಮ್ಮತ ಅವಕಾಶವನ್ನು ನೀಡಲು ಮತ್ತು ಎಥೆನಾಲ್ನ ಅನಗತ್ಯ ಚಲನೆಯನ್ನು ಕಡಿಮೆ ಮಾಡಲು, ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಸಾರಿಗೆ ವೆಚ್ಚ, ಲಭ್ಯತೆಯಂತಹ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿವಿಧ ಮೂಲಗಳಿಂದ ಎಥೆನಾಲ್ನ ಆದ್ಯತೆಯ ಮಾನದಂಡಗಳನ್ನು ನಿರ್ಧರಿಸುತ್ತವೆ. ಈ ಆದ್ಯತೆಯು ಆ ರಾಜ್ಯ / ಕೇಂದ್ರಾಡಳಿತ ಪ್ರದೇಶದಲ್ಲಿ ಉತ್ಪಾದನೆಗಾಗಿ ರಾಜ್ಯ / ಯುಟಿಯ ಸುಂಕದ ಗಡಿಗಳಿಗೆ ಸೀಮಿತವಾಗಿರುತ್ತದೆ. ಅಗತ್ಯವಿರುವ ಕಡೆ ಇತರ ರಾಜ್ಯಗಳಿಂದ ಎಥೆನಾಲ್ ಆಮದು ಮಾಡಿಕೊಳ್ಳಲು ಅದೇ ರೀತಿಯ ಆದ್ಯತೆಯನ್ನುನೀಡಲಾಗುತ್ತದೆ.
ಎಲ್ಲಾ ಡಿಸ್ಟಿಲರಿಗಳು ಯೋಜನೆಯ ಲಾಭವನ್ನು ಪಡೆಯುತ್ತವೆ ಮತ್ತು ಹೆಚ್ಚಿನ ಸಂಖ್ಯೆಯ ಡಿಸ್ಟಿಲರಿಗಳು ಇಬಿಪಿ ಕಾರ್ಯಕ್ರಮಕ್ಕಾಗಿ ಎಥೆನಾಲ್ ಪೂರೈಸುವ ನಿರೀಕ್ಷೆಯಿದೆ. ಎಥೆನಾಲ್ ಸರಬರಾಜುದಾರರಿಗೆ ನೀಡುವ ಸೂಕ್ತ ಬೆಲೆಯು ಕಬ್ಬು ಬೆಳೆಗಾರರ ಬಾಕಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ಕಬ್ಬು ಬೆಳೆಗಾರರ ಸಂಕಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸರ್ಕಾರವು ಎಥೆನಾಲ್ ಯುಕ್ತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇದರಲ್ಲಿ ಒಎಂಸಿಗಳು ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಶೇ.10 ವರೆಗೆ ಮಾರಾಟ ಮಾಡುತ್ತವೆ. ಪರ್ಯಾಯ ಮತ್ತು ಪರಿಸರ ಸ್ನೇಹಿ ಇಂಧನಗಳ ಬಳಕೆಯನ್ನು ಉತ್ತೇಜಿಸಲು 2019 ರ ಏಪ್ರಿಲ್ 01 ರಿಂದ ಜಾರಿಗೆ ಬರುವಂತೆ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಈ ಕಾರ್ಯಕ್ರಮವನ್ನು ಇಡೀ ಭಾರತಕ್ಕೆ ವಿಸ್ತರಿಸಲಾಗಿದೆ. ಈ ಕ್ರಮವು ಇಂಧನ ಅವಶ್ಯಕತೆಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ.
2014 ರಿಂದ ಎಥೆನಾಲ್ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. 2018 ರಲ್ಲಿ ಮೊದಲ ಬಾರಿಗೆ, ಎಥೆನಾಲ್ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳ ಆಧಾರದ ಮೇಲೆ ಎಥೆನಾಲ್ ಗೆ ವಿವಿಧ ಬೆಲೆಯನ್ನು ಸರ್ಕಾರ ಪ್ರಕಟಿಸಿದೆ. ಈ ನಿರ್ಧಾರಗಳು ಎಥೆನಾಲ್ ಸರಬರಾಜನ್ನು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಆ ಮೂಲಕ ಸಾರ್ವಜನಿಕ ವಲಯದ ಒಎಂಸಿಗಳು ಎಥೆನಾಲ್ ಖರೀದಿಯನ್ನು 2013-14ರ ಎಥೆನಾಲ್ ಸರಬರಾಜು ವರ್ಷದಲ್ಲಿದ್ದ 38 ಕೋಟಿ ಲೀಟರ್ ನಿಂದ 2019-20ರಲ್ಲಿ 195 ಕೋಟಿ ಲೀಟರ್ ಗೆ ಹೆಚ್ಚಿಸಿವೆ.
ಪಾಲುದಾರರಿಗೆ ದೀರ್ಘಾವಧಿಯ ದೃಷ್ಟಿಕೋನದ ಉದ್ದೇಶದಿಂದ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು “ಇಬಿಪಿ ಕಾರ್ಯಕ್ರಮದಡಿಯಲ್ಲಿ ದೀರ್ಘಾವಧಿಯ ಆಧಾರದ ಮೇಲೆ ಎಥೆನಾಲ್ ಖರೀದಿ ನೀತಿಯನ್ನು” ಪ್ರಕಟಿಸಿದೆ. ಇದಕ್ಕೆ ಅನುಗುಣವಾಗಿ, ಒಎಂಸಿಗಳು ಈಗಾಗಲೇ ಎಥೆನಾಲ್ ಪೂರೈಕೆದಾರರ ನೋಂದಣಿಯನ್ನು ಪೂರ್ಣಗೊಳಿಸಿವೆ. ಒಎಂಸಿಗಳು ಭದ್ರತಾ ಠೇವಣಿ ಮೊತ್ತವನ್ನು ಶೇ 5 ರಿಂದ ಶೇ.1 ಕ್ಕೆ ಇಳಿಸಿದ್ದು ಎಥೆನಾಲ್ ಪೂರೈಕೆದಾರರಿಗೆ ಸುಮಾರು 400 ಕೋಟಿ ರೂ. ಗಳ ಲಾಬವಾಗಿದೆ. ಒಎಂಸಿಗಳು ಸರಬರಾಜು ಮಾಡದ ಪ್ರಮಾಣದ ಮೇಲಿನ ಅನ್ವಯಿಕ ದಂಡವನ್ನು ಹಿಂದಿನ ಶೇ.5 ರಿಂದ ಶೇ.1 ಕ್ಕೆ ಇಳಿಸಿರುವುದರಿಂದ ಪೂರೈಕೆದಾರರಿಗೆ ಸುಮಾರು 35 ಕೋಟಿ ರೂ. ಲಾಣಭವಾಗಿದೆ. ಇವೆಲ್ಲವೂ ಸುಲಭ ವ್ಯಾಪಾರವನ್ನು ಪ್ರೋತ್ಸಾಹಿಸುತ್ತವೆ ಮತ್ತು ಆತ್ಮನಿರ್ಭರ ಭಾರತ ಉಪಕ್ರಮಗಳ ಉದ್ದೇಶಗಳನ್ನು ಸಾಧಿಸುತ್ತವೆ.
ನಿರಂತರ ಹೆಚ್ಚುವರಿ ಸಕ್ಕರೆ ಉತ್ಪಾದನೆಯ ಸಕ್ಕರೆ ಬೆಲೆಯನ್ನು ತಗ್ಗಿಸುತ್ತದೆ. ಇದರ ಪರಿಣಾಮವಾಗಿ, ಸಕ್ಕರೆ ಉದ್ಯಮದ ಕಡಿಮೆ ಸಾಮರ್ಥ್ಯದ ಪಾವತಿಯ ಕಾರಣದಿಂದಾಗಿ ಕಬ್ಬಿನ ರೈತರ ಬಾಕಿ ಹೆಚ್ಚಾಗಿದೆ. ಕಬ್ಬು ಬೆಳೆಗಾರರ ಬಾಕಿಯನ್ನು ಕಡಿಮೆ ಮಾಡಲು ಸರ್ಕಾರ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದೆ.
ದೇಶದಲ್ಲಿ ಸಕ್ಕರೆ ಉತ್ಪಾದನೆಯನ್ನು ಸೀಮಿತಗೊಳಿಸುವ ಮತ್ತು ದೇಶೀಯ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ, ಸರ್ಕಾರವು ಬಿ ಭಾರಿ ಕಾಕಂಬಿ, ಕಬ್ಬಿನ ರಸ, ಸಕ್ಕರೆ ಮತ್ತು ಸಕ್ಕರೆ ಪಾಕವನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ಅನುವು ಮಾಡಿಕೊಟ್ಟಿದೆ. ಕಬ್ಬಿನ ನ್ಯಾಯೋಚಿತ ಮತ್ತು ಸೂಕ್ತ ಬೆಲೆ (ಎಫ್ಆರ್ಪಿ) ಮತ್ತು ಸಕ್ಕರೆ ಕಾರ್ಖಾನೆಗಳ ಬೆಲೆಗಳಲ್ಲಿ ಬದಲಾವಣೆಯಾಗಿರುವುದರಿಂದ, ವಿವಿಧ ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಪಡೆದ ಎಥೆನಾಲ್ನ ಕಾರ್ಖಾನೆ ಬೆಲೆಯನ್ನು ಪರಿಷ್ಕರಿಸುವ ಅವಶ್ಯಕತೆಯಿತ್ತು.
***
(Release ID: 1668486)
Visitor Counter : 362
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam