ಪ್ರಧಾನ ಮಂತ್ರಿಯವರ ಕಛೇರಿ

ಆಹಾರ ಮತ್ತು ಕೃಷಿ ಸಂಘಟನೆಯ 75 ನೇ ವರ್ಷಾಚರಣೆಯ ಸ್ಮರಣಾರ್ಥ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 16 OCT 2020 2:42PM by PIB Bengaluru

ನನ್ನ ಸಂಪುಟ ಸಹೋದ್ಯೋಗಿಯಾಗಿರುವ ನರೇಂದ್ರ ಸಿಂಗ್ ಥೋಮರ್ ಜೀ, ಶ್ರೀಮತಿ ಸ್ಮೃತಿ ಇರಾನಿ ಜೀ, ಶ್ರೀ ಪುರುಷೋತ್ತಮ ರೂಪಾಲ್ ಜೀ, ಶ್ರೀ ಕೈಲಾಶ್ ಚೌಧರಿ ಜೀ, ಶ್ರೀಮತಿ ದೇಬಶ್ರೀ ಚೌಧರಿ ಜೀ, ಆಹಾರ ಮತ್ತು ಕೃಷಿ ಸಂಘಟನೆಯ ಪ್ರತಿನಿಧಿಗಳೇ, ಇತರ ಗಣ್ಯರೇ ಮತ್ತು ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ !. ವಿಶ್ವ ಆಹಾರ ದಿನದ ಸಂದರ್ಭದಲ್ಲಿ ನನ್ನ ಶುಭ ಹಾರೈಕೆಗಳು !. ವಿಶ್ವದಾದ್ಯಂತ ನ್ಯೂನ ಪೋಷಣೆಯನ್ನು ನಿರ್ಮೂಲನೆ ಮಾಡಲು ಅವಿಶ್ರಾಂತವಾಗಿ ಶ್ರಮಿಸುತ್ತಿರುವ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ.

ಭಾರತದ ನಮ್ಮ ರೈತ ಸಹೋದರರು , ನಮ್ಮ ಅನ್ನದಾತರು, ನಮ್ಮ ಕೃಷಿ ವಿಜ್ಞಾನಿಗಳು ಮತ್ತು ನಮ್ಮ ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ನ್ಯೂನ ಪೋಷಣೆ ವಿರುದ್ದದ ಆಂದೋಲನದಲ್ಲಿ ಬಲಿಷ್ಟವಾದ ಕಂಭಗಳು ಅಥವಾ ಬಲಿಷ್ಟವಾದ ನೆಲೆಗಟ್ಟನ್ನು ಒದಗಿಸುತ್ತಿರುವವರಾಗಿದ್ದಾರೆ. ಅವರು ತಮ್ಮ ಕೆಲಸದ ಮೂಲಕ ಭಾರತದ ಧಾನ್ಯಗಳ  ದಾಸ್ತಾನು ತುಂಬಲು ಸಹಕರಿಸುವುದು ಮಾತ್ರವಲ್ಲ, ದೂರದಲ್ಲಿರುವ ಬಡವರನ್ನು ತಲುಪಲು ಸರಕಾರಕ್ಕೆ ಸಹಾಯ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳ ಫಲವಾಗಿ ಭಾರತವು ಕೊರೊನಾ ಬಿಕ್ಕಟ್ಟಿನ ನಡುವೆಯೂ ನ್ಯೂನಪೋಷಣೆ ವಿರುದ್ದ ಬಲಿಷ್ಟ ಹೋರಾಟ ನಡೆಸಲು ಸಾಧ್ಯವಾಗಿದೆ.

ಸ್ನೇಹಿತರೇ,

ದಿನ ಆಹಾರ ಮತ್ತು ಕೃಷಿ ಸಂಘಟನೆಗೆ ಬಹಳ ಮಹತ್ವದ ದಿನ. ಇಂದು ಪ್ರಮುಖ  ಸಂಘಟನೆ ತನ್ನ 75 ವರ್ಷಗಳನ್ನು ಪೂರೈಸಿದೆ. ವರ್ಷಗಳಲ್ಲಿ ಎಫ್.ಪಿ..ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವಲ್ಲಿ , ಹಸಿವೆಯನ್ನು ನಿವಾರಿಸುವಲ್ಲಿ, ಮತ್ತು ಭಾರತ ಸಹಿತ ವಿಶ್ವದಾದ್ಯಂತ ಪೋಷಣೆಯನ್ನು ಸುಧಾರಿಸುವಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸಿದೆ. ಇಂದು ಹೊರಡಿಸಲಾದ 75 ರೂಪಾಯಿಗಳ ವಿಶೇಷ ಸ್ಮರಣಾರ್ಥ ನಾಣ್ಯ ನಿಮ್ಮ ಸೇವಾ ಸ್ಪೂರ್ತಿಗೆ ಭಾರತದ 130 ಕೋಟಿಗೂ ಅಧಿಕ ಜನತೆಯ ಪರವಾಗಿ ಸಂದ ಗೌರವ. ಎಫ್.., ವಿಶ್ವ ಆಹಾರ ಕಾರ್ಯಕ್ರಮ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವುದು ಕೂಡಾ ಒಂದು ದೊಡ್ಡ ಸಾಧನೆ. ಮತ್ತು ಇದರಲ್ಲಿ ಭಾರತದ ಭಾಗವಹಿಸುವಿಕೆ ಮತ್ತು ತೊಡಗಿಸಿಕೊಳ್ಳುವಿಕೆ ಚಾರಿತ್ರಿಕವಾದುದು ಮತ್ತು ಇದರಿಂದಾಗಿ ಭಾರತಕ್ಕೆ ಹರ್ಷವೂ ಆಗಿದೆ. ವಿಶ್ವ ಆಹಾರ ಕಾರ್ಯಕ್ರಮವನ್ನು ಆರಂಭಿಸಿದಾಗ ನಮಗೆಲ್ಲರಿಗೂ ತಿಳಿದಿರುವಂತೆ ಡಾ. ಬಿನಯ್ ರಂಜನ್ ಸೇನ್ ಅವರು ಎಫ್... ಮಹಾನಿರ್ದೇಶಕರಾಗಿದ್ದರು. ಡಾ. ಸೇನ್ ಅವರು ಕ್ಷಾಮ ಮತ್ತು ಹಸಿವೆಯ ನೋವನ್ನು ನಿಕಟವಾಗಿ ಅರಿತವರಾಗಿದ್ದರು. ನೀತಿ ನಿರೂಪಕರಾದ ಬಳಿಕ ಅವರು ಎಷ್ಟೊಂದು ವ್ಯಾಪಕವಾಗಿ ಕೆಲಸ ಮಾಡಿದರೆಂದರೆ ಅದು ಈಗಲೂ ಇಡೀ ವಿಶ್ವಕ್ಕೇ ಪ್ರಸ್ತುತ ಎನಿಸುವಂತಿದೆ. ಅಂದು ಹಾಕಿದ ಬೀಜ ನೊಬೆಲ್ ಪ್ರಶಸ್ತಿ ಪಡೆಯುವವರೆಗೆ ತಲುಪಿದೆ.

ಸ್ನೇಹಿತರೇ,

ಕಳೆದ ದಶಕಗಳಲ್ಲಿ ಎಫ್... ನ್ಯೂನ ಪೋಷಣೆ ವಿರುದ್ಧ ಭಾರತದ ಹೋರಾಟವನ್ನು ನಿಕಟವಾಗಿ ಗಮನಿಸಿದೆ. ದೇಶದಲ್ಲಿ ವಿವಿಧ ಸ್ಥರಗಳಲ್ಲಿ , ಕೆಲವು ಇಲಾಖೆಗಳು ಪ್ರಯತ್ನಗಳನ್ನು ಮಾಡಿವೆಯಾದರೂ ಅವುಗಳ ವ್ಯಾಪ್ತಿ ಬಹಳ ಕಿರಿದಾದುದು ಅಥವಾ ಚದುರಿದಂತೆ ಇದೆ. ಕಿರು ವಯಸ್ಸಿನಲ್ಲಿ ಗರ್ಭ ಧರಿಸುವಿಕೆ, ಶಿಕ್ಷಣದ ಕೊರತೆ, ಸಾಕಷ್ಟು ನೀರಿನ ಪೂರೈಕೆಯ ಕೊರತೆ , ನೈರ್ಮಲ್ಯದ ಕೊರತೆಯಂತಹ ಹಲವಾರು ಕಾರಣಗಳಿಂದಾಗಿ ನ್ಯೂನ ಪೋಷಣೆಯ ವಿರುದ್ಧದ ಹೋರಾಟದಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ನಮಗೆ ಸಾಧ್ಯವಾಗಿಲ್ಲ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಸಂಗತಿಗಳನ್ನು ನೆನಪಿಟ್ಟುಕೊಂಡು ಹಲವಾರು ಹೊಸ ಯೋಜನೆಗಳನ್ನು ಆರಂಭಿಸಲಾಯಿತು. ಸಮಸ್ಯೆಯ ಮೂಲ ಕಾರಣಗಳು; ನಮಗೇಕೆ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ, ಮತ್ತು ನಾನು ಹೇಗೆ ಫಲಿತಾಂಶ ಪಡೆಯಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ನನಗೆ ಗುಜರಾತಿನಲ್ಲಿ ಧೀರ್ಘಕಾಲದ ಅನುಭವವಿದೆ. ಅನುಭವಗಳ ಹಿನ್ನೆಲೆಯಲ್ಲಿ ನನಗೆ 2014 ರಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಾಗ, ನಾನು ಹೊಸದಾಗಿ ಕೆಲವು ಪ್ರಯತ್ನಗಳನ್ನು ಆರಂಭಿಸಿದೆ.

ನಾವು ಸಮಗ್ರ ಮತ್ತು ಪೂರ್ಣ ಧೋರಣೆಯಲ್ಲಿ ಮುಂದುವರೆಯತೊಡಗಿದೆವು. ಮೂಲಕ ಘಟಕವಾರು ಧೋರಣೆಯನ್ನು ಕೊನೆಗೊಳಿಸಿದೆವು. ನಾವು ಬಹುಕೋನೀಯ, ಆಯಾಮದ ವ್ಯೂಹದಲ್ಲಿ ಕಾರ್ಯಾಚರಿಸುವುದನ್ನು ಆರಂಭಿಸಿದೆವು. ಒಂದೆಡೆ ರಾಷ್ಟ್ರೀಯ ಪೋಷಣಾ ಅಭಿಯಾನವನ್ನು ಆರಂಭಿಸಿದೆವು ಮತ್ತು ಇನ್ನೊಂದೆಡೆ ನ್ಯೂನ ಪೋಷಣೆಗೆ ಕಾರಣವಾಗುವ ಪ್ರತೀ ಅಂಶಗಳ ಬಗ್ಗೆಯೂ ಗಮನಹರಿಸಿದೆವು. ನಾವು ವಿಸ್ತಾರ ವ್ಯಾಪ್ತಿಯಲ್ಲಿ ಕುಟುಂಬದ ಮತ್ತು ಸಮಾಜದ ವರ್ತನೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಆರಂಭಿಸಿದೆವು. ಸ್ವಚ್ಚ ಭಾರತ ಆಂದೋಲನ ಅಡಿಯಲ್ಲಿ ಭಾರತದಲ್ಲಿ 11 ಕೋಟಿಗೂ ಅಧಿಕ  ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೂರ ದೂರದ ಪ್ರದೇಶಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಿರುವುದರಿಂದ ಸ್ವಚ್ಚತೆಯನ್ನು ಕಾಣಬಹುದಾಗಿದೆ, ಇದರಿಂದ ಅತಿಸಾರದಂತಹ ಹಲವು ರೋಗಗಳು ಕಡಿಮೆಯಾಗಿವೆ. ಅದೇ ರೀತಿ ಗರ್ಭಿಣಿ ತಾಯಿಯಂದಿರು ಮತ್ತು ಮಕ್ಕಳಿಗೆ ಇಂದ್ರಧನುಷ್ ಆಂದೋಲನದಡಿಯಲ್ಲಿ ಲಸಿಕೆ ಪ್ರಮಾಣದ ದರದಲ್ಲಿ ತ್ವರಿತವಾಗಿ ಹೆಚ್ಚಳವಾಗಿದೆ. ರೊಟಾವೈರಸ್ ನಂತಹ ವೈರಸ್ ಗಳಿಗೆ ಹೊಸ ಲಸಿಕೆಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅದನ್ನು ಕೂಡಾ ಇದರಡಿಗೆ ತರಲಾಗಿದೆ. ಗರ್ಭ ಧರಿಸುವಿಕೆ ಮತ್ತು ಹೊಸದಾಗಿ ಜನಿಸಿದ ಮಗುವಿನ 1000 ದಿನಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಪೋಷಣೆ ಮತ್ತು ತಾಯಿ ಮತ್ತು ಮಗುವಿನ ಆರೈಕೆಯನ್ನು ಪರಿಗಣಿಸಿ ಪ್ರಮುಖ ಆಂದೋಲನವನ್ನು ಜಾರಿಗೆ ತರಲಾಗಿದೆ. ಜಲ್ ಜೀವನ ಆಂದೋಲನ ಅಡಿಯಲ್ಲಿ ಗ್ರಾಮಗಳಿಗೆ, ಹಳ್ಳಿಗಳಿಗೆ ಕೊಳವೆ ಮೂಲಕ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ.

ಇಂದುಸ್ಯಾನಿಟೈಸೇಶನ್ ಪ್ಯಾಡ್ ಗಳನ್ನು ದೇಶದ ಬಡ ಸಹೋದರಿಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ತಲಾ ಒಂದು ರೂಪಾಯಿ ದರದಲ್ಲಿ ಒದಗಿಸಲಾಗುತ್ತಿದೆ. ಎಲ್ಲಾ ಪ್ರಯತ್ನಗಳ ಒಂದು ಫಲ ಹೆಣ್ಣು ಮಕ್ಕಳ ಒಟ್ಟು ಶಾಲಾ ದಾಖಲಾತಿ ಪ್ರಮಾಣ ದೇಶದಲ್ಲಿ ಇದೇ ಮೊದಲ ಬಾರಿಗೆ ಗಂಡು ಮಕ್ಕಳ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಹೆಣ್ಣು ಮಕ್ಕಳಿಗೆ ಮದುವೆಗೆ ಸರಿಯಾದ ವಯಸ್ಸನ್ನು ನಿಗದಿ ಮಾಡುವುದಕ್ಕಾಗಿ ಅವಶ್ಯ ಚರ್ಚೆ , ಸಮಾಲೋಚನೆಗಳು ನಡೆದಿವೆ. ನನಗೆ ದೇಶಾದ್ಯಂತದಿಂದ ಹೆಣ್ಣು ಮಕ್ಕಳು ಪತ್ರ ಬರೆದು ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮತ್ತು ಕುರಿತ ಸಮಿತಿಯು ಇದುವರೆಗೆ ಯಾಕೆ ವರದಿಯನ್ನು ಮಂಡಿಸಿಲ್ಲ ಎಂದೂ ಪ್ರಶ್ನಿಸುತ್ತಿದ್ದಾರೆ. ನಾನು ಎಲ್ಲಾ ಹೆಣ್ಣು ಮಕ್ಕಳಿಗೆ ಸರಕಾರವು ವರದಿ ಬಂದ ಕೂಡಲೇ ತ್ವರಿತವಾಗಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಭರವಸೆ ಕೊಡುತ್ತೇನೆ.

ಸ್ನೇಹಿತರೇ,

ನ್ಯೂನ ಪೋಷಣೆಯನ್ನು ನಿಭಾಯಿಸಲು ಈಗ ಇನ್ನೊಂದು ಪ್ರಮುಖ ಕಾರ್ಯವನ್ನು ಅನುಷ್ಟಾನಿಸಲಾಗುತ್ತಿದೆ. ಪ್ರೊಟೀನ್ , ಕಬ್ಬಿಣ , ಜಿಂಕ್ ಇತ್ಯಾದಿ ಸತ್ವಗಳು ಹೆಚ್ಚಿನ ಪ್ರಮಾಣದಲ್ಲಿರುವ ಪೋಷಕಾಂಶಗಳನ್ನು ಒಳಗೊಂಡ ಬೆಳೆಗಳನ್ನು ಈಗ ದೇಶದಲ್ಲಿ ಉತ್ತೇಜಿಸಲಾಗುತ್ತಿದೆ. ಬೇಳೆ ಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವುದನ್ನು ಖಾತ್ರಿಪಡಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಗಿ, ಜೋಳ, ಸಜ್ಜೆ, ನವಣೆ ಇತ್ಯಾದಿಗಳ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗು ಜನರು ತಮ್ಮ ಆಹಾರದಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ. 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲು ಭಾರತವು ಮಂಡಿಸಿದ ಪ್ರಸ್ತಾಪವನ್ನು ಪೂರ್ಣವಾಗಿ ಬೆಂಬಲಿಸಿದ್ದಕ್ಕಾಗಿ ಎಫ್... ಗೆ ನನ್ನ ವಿಶೇಷ ಧನ್ಯವಾದಗಳು ಸಲ್ಲುತ್ತವೆ

ಸ್ನೇಹಿತರೇ,

ಭಾರತವು ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿದಾಗ ಅಲ್ಲಿ, ಸರ್ವಜನ ಹಿತಾಯ-ಸರ್ವ ಜನ ಸುಖಾಯದ ಸ್ಪೂರ್ತಿ ಇತ್ತು. ಭಾರತವು ಸಮಗ್ರ ಕ್ಷೇಮವನ್ನು ಶೂನ್ಯ ಬಜೆಟ್ಟಿನೊಂದಿಗೆ ಜಗತ್ತಿನ ಎಲ್ಲಾ ದೇಶಗಳಿಗೂ ಹರಡಲು ಇಚ್ಚಿಸಿತ್ತು. ಮತ್ತು 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲು ಪ್ರಸ್ತಾವಿಸುವುದರ ಹಿಂದೆ ನಮ್ಮ ಹೃದಯದಲ್ಲಿ ಇಂತಹದೇ ಭಾವನೆಗಳಿವೆ. ಇದರಿಂದ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಎರಡು ಪ್ರಮುಖ ಪ್ರಯೋಜನಗಳಿವೆ. ಒಂದನೆಯದಾಗಿ ಪೋಷಕಾಂಶಯುಕ್ತ ಆಹಾರವನ್ನು ಉತ್ತೇಜಿಸಿದಂತಾಗುತ್ತದೆ ಮತ್ತು ಅದರ ಲಭ್ಯತೆ ಹೆಚ್ಚಿದಂತಾಗುತ್ತದೆ. ಎರಡನೆಯದಾಗಿ- ಸಣ್ಣ ಮತ್ತು ಮಧ್ಯಮ ಹಿಡುವಳಿ ಹೊಂದಿರುವ ರೈತರಿಗೆ ಮತ್ತು ನೀರಾವರಿ ಸೌಲಭ್ಯ ಇಲ್ಲದ , ಮಳೆಯಾಶ್ರಿತ ಭೂಮಿ ಹೊಂದಿರುವವರಿಗೆ ಇದರಿಂದ ಪ್ರಯೋಜನವಾಗುತ್ತದೆ. ಸಣ್ಣ ಮತ್ತು ಮಧ್ಯಮ ಭೂ ಹಿಡುವಳಿದಾರ ರೈತರು ಹೆಚ್ಚಾಗಿ  ತಮ್ಮ ಭೂಮಿಯಲ್ಲಿ ಸಿರಿ ಧಾನ್ಯಗಳನ್ನು ಬೆಳೆಯುತ್ತಾರೆ . ಸಿರಿ ಧಾನ್ಯಗಳು ನೀರಿನ ಕೊರತೆ ಇರುವ  ಪ್ರದೇಶಗಳ ಮತ್ತು ಭೂಮಿ ಅಷ್ಟೊಂದು ಫಲವತ್ತಾಗಿರದ ರೈತರಿಗೆ ಸಹಾಯ ಮಾಡುತ್ತವೆ. ಆದುದರಿಂದ ಅಂತಾರಾಷ್ಟ್ರೀಯ ಸಿರಿ ಧಾನ್ಯ ವರ್ಷ ಆಚರಣೆಯ ಪ್ರಸ್ತಾಪ ಪೋಷಕಾಂಶ ಮತ್ತು ಸಣ್ಣ ರೈತರ ಆದಾಯವನ್ನು ಜೋಡಿಸಿದೆ.

ಸ್ನೇಹಿತರೇ,

ಪೋಷಣ್ ಅಭಿಯಾನವನ್ನು ಭಾರತದಲ್ಲಿ  ಉತ್ತೇಜಿಸಲು  ಇನ್ನೊಂದು ಪ್ರಮುಖ ಕ್ರಮವನ್ನು ಇಂದು ತೆಗೆದುಕೊಳ್ಳಲಾಗಿದೆ. ಇಂದು ಗೋಧಿ ಮತ್ತು ಭತ್ತ ಸಹಿತ ವಿವಿಧ ಬೆಳೆಗಳ 17 ಹೊಸ ತಳಿಯ ಬೀಜಗಳನ್ನು ದೇಶದ ರೈತರಿಗೆ ಲಭ್ಯ ಇರುವಂತೆ ಮಾಡಲಾಗಿದೆ. ಕೆಲವು ಬೆಳೆಗಳ ಸಾಮಾನ್ಯ ತಳಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಪೋಷಕಾಂಶಯುಕ್ತ ಅಂಶಗಳ ಕೊರತೆ ಹೊಂದಿರುವುದನ್ನು ನಾವು ಆಗಾಗ ಕಾಣುತ್ತೇವೆ. ಬೆಳೆಗಳ ಉತ್ತಮ ತಳಿ , ಜೈವಿಕ ಸಂರಕ್ಷಿತ ತಳಿ ಕೊರತೆಗಳನ್ನು ನಿವಾರಿಸುತ್ತದೆ ಮತ್ತು ಕಾಳುಗಳ ಪೋಷಕಾಂಶಯುಕ್ತ ಮೌಲ್ಯವನ್ನು ಸುಧಾರಿಸುತ್ತದೆ. ವರ್ಷಗಳಿಂದ ದೇಶದಲ್ಲಿ ಇಂತಹ ಬೀಜಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬಹಳಷ್ಟು ದೊಡ್ಡ ಕೆಲಸಗಳು ಆಗಿವೆ. ಮತ್ತು ಇದಕ್ಕಾಗಿ ನಾನು ಕೃಷಿ ವಿಶ್ವವಿದ್ಯಾಲಯಗಳನ್ನು ಮತ್ತು ಕೃಷಿ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. 2014 ಕ್ಕೆ ಮೊದಲು ಒಂದೇ ಒಂದು ತಳಿ ರೈತರನ್ನು ತಲುಪಿತ್ತು. ಇಂದು ವಿವಿಧ ಬೆಳೆಗಳ ಜೈವಿಕ ಸಂರಕ್ಷಿತ 70 ತಳಿಗಳು   ರೈತರಿಗೆ ಲಭ್ಯ ಇವೆ. ಇಂತಹ ಕೆಲವು ತಳಿಗಳನ್ನು  ಸ್ಥಳೀಯ ಮತ್ತು ಸಾಂಪ್ರದಾಯಿಕ ಬೆಳೆಗಳ ಸಹಾಯದೊಂದಿಗೆ ಅಭಿವೃದ್ಧಿ ಮಾಡಲಾಗಿದೆ  ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ.

ಸೇಹಿತರೇ,

ಕಳೆದ ಕೆಲವು ತಿಂಗಳಿನಿಂದ , ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ , ಹಸಿವು ಮತ್ತು ನ್ಯೂನ ಪೋಷಣೆ ಬಗ್ಗೆ ಭಾರೀ ಚರ್ಚೆಯಾಗಿದೆ. ತಜ್ಞರು ಮುಂದೆ ಏನಾಗುತ್ತದೆ ಎಂಬ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಆತಂಕ , ಕಳವಳಗಳ ನಡುವೆ , ಭಾರತವು ಕಳೆದ 7-8 ತಿಂಗಳಿನಿಂದ 80 ಕೋಟಿ ಬಡವರಿಗೆ ಉಚಿತ ಪಡಿತರವನ್ನು ಒದಗಿಸುತ್ತಿದೆ. ಅವಧಿಯಲ್ಲಿ , ಭಾರತವು ಬಡವರಿಗೆ ಸುಮಾರು 1.5 ಲಕ್ಷ ಕೋ.ರೂ.ಗಳ ಮೌಲ್ಯದ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಿದೆ. ಮತ್ತು ಆಂದೋಲನ ಆರಂಭ ಮಾಡಿದಾಗ, ನನಗೆ ನೆನಪಿಗೆ ಬರುತ್ತಿದೆ, ಅಕ್ಕಿಯ ಜೊತೆ ಗೋಧಿ , ಬೇಳೆ ಕಾಳುಗಳನ್ನು ಉಚಿತವಾಗಿ ಒದಗಿಸಲೂ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗಿದೆ.

ಇದು ಬಡವರಿಗಾಗಿ ಆಹಾರ ಭದ್ರತೆಯತ್ತ ಇಂದಿನ ಭಾರತದ ಬದ್ಧತೆಯಾಗಿದೆ. ಇದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಷ್ಟಾಗಿ ಪ್ರಸ್ತಾಪವಾಗುತ್ತಿಲ್ಲ. ಆದರೆ ಇಂದು ಭಾರತವು ಬೃಹತ್ ಸಂಖ್ಯೆಯಲ್ಲಿ ನಾಗರಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದೆ. ಇದರ ಸಂಖ್ಯಾಬಾಹುಳ್ಯ ಎಷ್ಟೆಂದರೆ ಅದು ಉಚಿತವಾಗಿ ಒದಗಿಸುತ್ತಿರುವ ಆಹಾರ ಧಾನ್ಯಗಳನ್ನು ಪಡೆಯುತ್ತಿರುವವರ ಸಂಖ್ಯೆ ಇಡೀ ಯುರೋಪಿಯನ್ ಯೂನಿಯನ್ ಮತ್ತು ಅಮೇರಿಕಾಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ. ಆದರೂ ನಾವು ದೈನಂದಿನ ಜೀವನದಲ್ಲಿ ಕೆಲವೊಮ್ಮೆ ದೊಡ್ಡ ಟ್ರೆಂಡ್ ನ್ನು ತಪ್ಪಿಸಿಕೊಳ್ಳುತ್ತೇವೆ. ಆಹಾರ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಭಾರತದ ಕಾರ್ಯಕ್ಕೆ ಸಂಬಂಧಿಸಿದಂತೆ ಇಂತಹದ್ದು ನಡೆದಿದೆ. ನನ್ನಲ್ಲಿ ಕೆಲವು ಪ್ರಶ್ನೆಗಳಿವೆ, ಇದರಿಂದ ಅಂತಾರಾಷ್ಟ್ರೀಯ ತಜ್ಞರು ನಿಟ್ಟಿನಲ್ಲಿ ಭಾರತ ಏನನ್ನು ಸಾಧಿಸಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. 2014 ರವರೆಗೆ ಆಹಾರ ಭದ್ರತಾ ಕಾಯ್ದೆ ಬರೇ 11 ರಾಜ್ಯಗಳಲ್ಲಿ ಜಾರಿಯಲ್ಲಿತ್ತು ಎಂಬುದು ನಿಮಗೆ ಗೊತ್ತಿತ್ತೇ, ಮತ್ತು ಅದನ್ನು ಇಡೀ ದೇಶದಲ್ಲಿ 2014  ಬಳಿಕ  ಸಮರ್ಪಕವಾಗಿ ಜಾರಿಗೊಳಿಸಲಾಯಿತು ಎಂಬ ಸಂಗತಿ. ?.

ಇಡೀ ಜಗತ್ತೇ ಕೊರೊನಾದಿಂದಾಗಿ ಹೋರಾಟ ಮಾಡುತ್ತಿರುವಾಗ , ಭಾರತದ ರೈತರು ಕಳೆದ ವರ್ಷದ ಉತ್ಪಾದನೆಯ ದಾಖಲೆಯನ್ನು ಬಾರಿ ಮುರಿದರು ಎಂಬ ಸಂಗತಿ.?. ಗೋಧಿ, ಭತ್ತ, ಮತ್ತು ಕಾಳುಗಳ ಸಹಿತ ಎಲ್ಲಾ ಆಹಾರ ಧಾನ್ಯಗಳ ಖರೀದಿಯಲ್ಲಿ ಸರಕಾರ ತನ್ನ ಹಳೆಯ ದಾಖಲೆ ಮುರಿಯಿತು ಎಂಬ ಸಂಗತಿ ನಿಮಗೆ ಗೊತ್ತೇ ?. ಅವಶ್ಯಕ ಕೃಷಿ ಸಾಮಗ್ರಿಗಳ ರಫ್ತು ಕಳೆದವರ್ಶದ 6 ತಿಂಗಳ ಇದೇ ಅವಧಿಗೆ ಹೋಲಿಸಿದಾಗ 40 ಶೇಖಡಾ ಹೆಚ್ಚಳವಾಗಿರುವುದು ನಿಮಗೆ ಗೊತ್ತಿದೆಯೇ ?. ’ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್ವ್ಯವಸ್ಥೆಯನ್ನು ದೇಶದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸುವುದಕ್ಕಾಗಿ ಈಗಾಗಲೇ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ ?.

ಸ್ನೇಹಿತರೇ,

ಇಂದು ಇಂತಹ ಸುಧಾರಣೆಗಳನ್ನು ಭಾರತದಲ್ಲಿ ನಿರಂತರವಾಗಿ ತರಲಾಗುತ್ತಿದೆ. ಇದು ಜಾಗತಿಕ ಆಹಾರ ಭದ್ರತೆಗೆ ಸಂಬಂಧಿಸಿ ಭಾರತದ ಬದ್ದತೆಯನ್ನು ತೋರಿಸುತ್ತದೆ. ಕೃಷಿ ಕ್ಷೇತ್ರದಿಂದ ಹಿಡಿದು , ರೈತರ ಸಶಕ್ತೀಕರಣದಿಂದ , ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆಯವರೆಗೆ ಒಂದರ ನಂತರ ಒಂದರಂತೆ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ಕೈಗೆತ್ತಿಕೊಳ್ಳಲಾದ ಮೂರು ಪ್ರಮುಖ ಕೃಷಿ ಸುಧಾರಣೆಗಳು ದೇಶದ ಕೃಷಿ ವಲಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಹಳ ಮುಖ್ಯ ಕ್ರಮಗಳು. ಸ್ನೇಹಿತರೇ, ನಾವು .ಪಿ.ಎಂ.ಸಿ. ಎಂಬ ವ್ಯವಸ್ಥೆಯನ್ನು ವರ್ಷಗಳಿಂದ ಹೊಂದಿದ್ದೇವೆ. ಇದು ಅದರದ್ದೇ ಗುರುತಿಸುವಿಕೆ ಮತ್ತು ಶಕ್ತಿಯನ್ನು ಹೊಂದಿದೆ. ಕಳೆದ 6 ವರ್ಷಗಳಲ್ಲಿ ದೇಶದ ಕೃಷಿ ಮಾರುಕಟ್ಟೆಗಳಲ್ಲಿ ಉತ್ತಮ ಮೂಲಸೌಕರ್ಯವನ್ನು ರೂಪಿಸಲು 2500 ಕೋ.ರೂ. ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ. ಮಂಡಿಗಳಲ್ಲಿ .ಟಿ. ಮೂಲಸೌಕರ್ಯವನ್ನು ಕಲ್ಪಿಸಲು , ಅಭಿವೃದ್ಧಿಪಡಿಸಲು ನೂರಾರು ಕೋ.ರೂ. ಗಳನ್ನು ವ್ಯಯಿಸಲಾಗಿದೆ. ಮಂಡಿಗಳನ್ನು -ನಾಮ್ ಗಳಿಗೆ ಅಂದರೆ ರಾಷ್ಟ್ರೀಯ ಕೃಷಿ ಮಾರುಕಟ್ಟೆಗಳಿಗೆ ಸಂಪರ್ಕಿಸಲಾಗಿದೆ. .ಪಿ.ಎಂ.ಸಿ. ಕಾಯ್ದೆಯಲ್ಲಿ ಮಾಡಲಾಗಿರುವ ತಿದ್ದುಪಡಿ .ಪಿ.ಎಂ.ಸಿ. ಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಉದ್ದೇಶವನ್ನು ಹೊಂದಿದೆ. ರೈತರು ತಮ್ಮ ಉತ್ಪಾದನೆಗೆ ತಗಲುವ  ವೆಚ್ಚದ 1.5 ಪಟ್ಟು ದರವು ಅವರಿಗೆ ಎಂ.ಎಸ್.ಪಿ. ರೂಪದಲ್ಲಿ ಲಭಿಸುವಂತೆ ಮಾಡುವುದನ್ನು ಖಾತ್ರಿಪಡಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ನೇಹಿತರೇ,

ಎಂ.ಎಸ್.ಪಿ. ಮತ್ತು ಸರಕಾರಿ ಖರೀದಿಯು ದೇಶದ ಆಹಾರ ಭದ್ರತೆಯ ಪ್ರಮುಖ ಭಾಗ. ಆದುದರಿಂದ ಅದನ್ನು ವೈಜ್ಞಾನಿಕವಾಗಿ ಉತ್ತಮವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಉತ್ತಮ ನಿರ್ವಹಣಾ ವ್ಯವಸ್ಥೆಯೊಂದಿಗೆ ಅದು ಮುಂದುವರಿದುಕೊಂಡು ಹೋಗಬೇಕಾಗುತ್ತದೆ ಮತ್ತು ನಾವೆಲ್ಲರೂ ಅದಕ್ಕೆ ಬದ್ದರಾಗಿರುತ್ತೇವೆ. ಮೊದಲು ದೇಶದ ಸಣ್ಣ ರೈತರು ತಮ್ಮ ಉತ್ಪಾದನೆಗಳನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡುವುದು ಕಡ್ದಾಯವಾಗಿತ್ತು. ಮಂಡಿಗಳನ್ನು ತಲುಪುವುದು ಕಷ್ಟ ಸಾಧ್ಯವಾಗಿರುವುದರಿಂದ ಪರಿಸ್ಥಿತಿ ಇತ್ತು. ಹೊಸ ಅವಕಾಶಗಳಲ್ಲಿ ಈಗ ಮಾರುಕಟ್ಟೆಯೇ ಸಣ್ಣ ರೈತರ ಮನೆ ಬಾಗಿಲು ತಲುಪಲಿದೆ. ಇದರಿಂದ ರೈತರಿಗೆ ಹೆಚ್ಚಿನ ದರ ಲಭಿಸಲಿದೆ ಮಾತ್ರವಲ್ಲ , ಅವರಿಗೆ ಮಧ್ಯವರ್ತಿಗಳ ನಿವಾರಣೆಯಿಂದಾಗಿ ದೊಡ್ಡ ಪರಿಹಾರ ದೊರೆಯಲಿದೆ. ಖರೀದಿದಾರ ಅಥವಾ ಬಳಕೆದಾರರಿಗೂ ಇದರಿಂದ ಲಾಭವಾಗಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದು ರೈತರಿಗೆ ಹೊಸ ಸವಲತ್ತುಗಳನ್ನು ಕೃಷಿನವೋದ್ಯಮಗಳ ಮೂಲಕ ಒದಗಿಸುವ  ಯುವಜನತೆಗೆ ಹೊಸ ಅವಕಾಶಗಳನ್ನು ತೆರೆಯಲಿದೆ.

ಸ್ನೇಹಿತರೇ,

ಸಣ್ಣ ರೈತರಿಗೆ ಶಕ್ತಿ ಕೊಡಲು , ರೈತರ ಉತ್ಪನ್ನಗಳ ಸಂಘಟನೆಗಳು ಅಂದರೆ ಎಫ್.ಪಿ.. ಗಳ ಬೃಹತ್ ಜಾಲವನ್ನು ದೇಶಾದ್ಯಂತ ಅಭಿವೃದ್ಧಿಪಡಿಸಲಾಗುತ್ತಿದೆ. ದೇಶದಲ್ಲಿ ಇಂತಹ 10 ಸಾವಿರ ಕೃಷಿ ಉತ್ಪನ್ನ ಸಂಘಟನೆಗಳ ರಚನೆಯನ್ನು ತ್ವರಿತಗತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಸಂಘಟನೆಗಳು ಸಣ್ಣ ರೈತರ ಪರವಾಗಿ ಮಾರುಕಟ್ಟೆಯಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳಲಿವೆ. ಎಫ್.ಪಿ.. ಗಳು ಸಹಕಾರ ಚಳವಳಿಯು ಹಾಲು ಅಥವಾ ಸಕ್ಕರೆ ಕ್ಷೇತ್ರದಲ್ಲಿ ಮಾಡಿದಂತೆ ಅಥವಾ ಮಹಿಳಾ  ಸ್ವ-ಸಹಾಯ ಚಳವಳಿ ಹಳ್ಳಿಗಳಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ಮಾಡಿದಂತೆಸಣ್ಣ ರೈತರ ಬದುಕಿನಲ್ಲಿ ಬದಲಾವಣೆಗಳನ್ನು ತರಲಿವೆ.

ಸ್ನೇಹಿತರೇ,

ಭಾರತದಲ್ಲಿ ಆಹಾರ ಧಾನ್ಯಗಳು ಪೋಲಾಗುವಿಕೆ ಸದಾ ಒಂದು ದೊಡ್ಡ ಸಮಸ್ಯೆ. ಈಗ ಅವಶ್ಯಕ ವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ, ಇದು ಪರಿಸ್ಥಿತಿಯನ್ನು ಬದಲಾಯಿಸಲಿದೆ. ಈಗ ಸರಕಾರ ಮತ್ತು ಇತರ ಏಜೆನ್ಸಿಗಳಿಗೆ ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ನಿರ್ಮಿಸಲು ಉತ್ತಮ ಅವಕಾಶಗಳು ಲಭಿಸಲಿವೆ. ನಮ್ಮ ಎಫ್.ಪಿ. ಗಳ ಪಾತ್ರ ಇದರಲ್ಲಿ ಬಹಳ ಮುಖ್ಯವಾಗಿರುತ್ತದೆ. ಸರಕಾರವು ಇತ್ತೀಚೆಗೆ 1 ಲಕ್ಷ ಕೋ.ರೂ.ಗಳ ಮೂಲಸೌಕರ್ಯ ನಿಧಿಯನ್ನು ಆರಂಭಿಸಿದೆ. ಎಫ್.ಪಿ.. ಕೂಡಾ ಪೂರೈಕೆ ಸರಪಳಿಗಳನ್ನು ಮತ್ತು ಮೌಲ್ಯವರ್ಧನೆ ಸಾಮರ್ಥ್ಯಗಳನ್ನು ಗ್ರಾಮಗಳಲ್ಲಿ ರೂಪಿಸಲಿದೆ.

ಸ್ನೇಹಿತರೇ,

ಜಾರಿಗೆ ತಂದಿರುವ ಮೂರನೇ ಕಾನೂನು ಬೆಳೆಗಳ ಏರಿಳಿತಗಳಿಂದ ರೈತರಿಗೆ ಪರಿಹಾರ ಒದಗಿಸುತ್ತದೆ ಮತ್ತು ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗೆ ಉತ್ತೇಜನ ನೀಡುತ್ತದೆ. ಇದರಡಿ ರೈತರಿಗೆ ಹೆಚ್ಚು ಅವಕಾಶಗಳನ್ನು ಒದಗಿಸುವುದಲ್ಲದೆ ಕಾನೂನು ರಕ್ಷಣೆಯನ್ನು ಕೂಡಾ ಒದಗಿಸಲಾಗುತ್ತದೆ. ರೈತರು ಯಾವುದೇ ಖಾಸಗಿ ಏಜೆನ್ಸಿ ಜೊತೆ ಅಥವಾ ಕೈಗಾರಿಕೆಗಳ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಬೀಜ ಬಿತ್ತನೆಗೆ ಮೊದಲೇ ಉತ್ಪನ್ನದ ಬೆಲೆ ನಿರ್ಧಾರವಾಗಿರುತ್ತದೆ. ಮತ್ತು ಕಂಪೆನಿಯು ಬೀಜಗಳನ್ನು , ರಸಗೊಬ್ಬರಗಳನ್ನು , ಯಂತ್ರೋಪಕರಣಗಳನ್ನು ಮತ್ತು ಇದಕ್ಕೆ ಅವಶ್ಯ ಇರುವ ಪ್ರತಿಯೊಂದನ್ನೂ ಒದಗಿಸಲಿದೆ.

ಇನ್ನೊಂದು ಪ್ರಮುಖವಾದ ಸಂಗತಿ ; ಯಾವುದಾದರೂ ಕಾರಣಕ್ಕೆ ರೈತರು ಒಪ್ಪಂದದಿಂದ  ಹೊರಗೆ ಬರಲು ಇಚ್ಚಿಸಿದರೆ , ಆಗ ಆತ ಯಾವುದೇ ದಂಡ ಪಾವತಿಸಬೇಕಿಲ್ಲ. ಆದರೆ ಒಪ್ಪಂದ ಮಾಡಿಕೊಂಡಿದ್ದ ಕಂಪೆನಿಯು ಒಪ್ಪಂದವನ್ನು ಮುರಿದರೆ , ಆಗ ಅದು ರೈತರಿಗೆ ದಂಡ ಪಾವತಿಸಬೇಕಾಗುತ್ತದೆ. ಮತ್ತು ನಾವು ಕೂಡಾ ಒಂದಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಏನೆಂದರೆ ಒಪ್ಪಂದ ಇರುವುದು ಉತ್ಪನ್ನದ ಮೇಲೆ ಮಾತ್ರ. ರೈತನ  ಭೂಮಿ ಅದರಲ್ಲಿ ಒಳಗೊಂಡಿರುವುದಿಲ್ಲ. ಅಂದರೆ ರೈತರಿಗೆ ಸುಧಾರಣೆಗಳ ಮೂಲಕ ಪ್ರತೀ ಬಗೆಯ ಸುರಕ್ಷೆಯನ್ನು ಖಾತ್ರಿಪಡಿಸಲಾಗಿದೆ. ಭಾರತದ ರೈತ ಸಶಕ್ತನಾದರೆ ಮತ್ತು ಆತನ ಆದಾಯ ಹೆಚ್ಚಳವಾದರೆ , ನ್ಯೂನಪೋಷಣೆ ವಿರುದ್ದದ ಆಂದೋಲನಕ್ಕೂ ಅಷ್ಟೇ ಉತ್ತೇಜನ ದೊರೆಯುತ್ತದೆ. ಭಾರತ ಮತ್ತು ಎಫ್.ಪಿ.. ನಡುವೆ ಹೆಚ್ಚುತ್ತಿರುವ ಏಕೀಭಾವ ಆಂದೋಲನಕ್ಕೆ ಹೆಚ್ಚಿನ ಇನ್ನಷ್ಟು ಬಲವನ್ನು ತಂದುಕೊಡುತ್ತದೆ.

ಎಫ್.ಪಿ..ಗೆ 75 ವರ್ಷ ಸಂದರ್ಭದಲ್ಲಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ. ನೀವು ಪ್ರಗತಿ ಸಾಧಿಸುತ್ತೀರಿ ಮತ್ತು ದೇಶದಲ್ಲಿಯ ಹಾಗು ವಿಶ್ವದಲ್ಲಿಯ ಬಡವರಲ್ಲಿ ಬಡವರು ದೈನಂದಿನ ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ನೀವು ಕಾರ್ಯನಿರತರಾಗುತ್ತೀರಿ. ವಿಶ್ವ ಸಮುದಾಯದ ಜೊತೆ ಕೆಲಸ ಮಾಡುವ ನಮ್ಮ ನಿರ್ಧಾರವನ್ನು ಪುನರುಚ್ಚರಿಸುತ್ತಾ, ನಾನು ಮತ್ತೊಮೆ ನಿಮಗೆ ಶುಭವನ್ನು ಹಾರೈಸುತ್ತೇನೆ.

ಬಹಳ ಧನ್ಯವಾದಗಳು

ಧನ್ಯವಾದಗಳು.

***



(Release ID: 1665753) Visitor Counter : 250