ಹಣಕಾಸು ಸಚಿವಾಲಯ
68,825 ಕೋಟಿ ರೂ. ಕ್ರೋಡೀಕರಣಕ್ಕೆ 20 ರಾಜ್ಯಗಳಿಗೆ ಅವಕಾಶ
Posted On:
13 OCT 2020 6:28PM by PIB Bengaluru
ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಇಂದು 20 ರಾಜ್ಯಗಳಿಗೆ ಮುಕ್ತ ಸಾಲ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ 68,825 ಕೋಟಿ ರೂ. ಸಾಲ ಪಡೆದುಕೊಳ್ಳಲು ಅನುಮತಿ ನೀಡಿದೆ.
ಜಿಎಸ್ಟಿ ಜಾರಿಯಿಂದಾಗಿ ಎದುರಾಗಿರುವ ಕೊರತೆಯನ್ನು ತುಂಬಿಕೊಳ್ಳಲು ಹಣಕಾಸು ಸಚಿವಾಲಯ ನೀಡಿದ್ದ ಎರಡು ಆಯ್ಕೆಗಳ ಪೈಕಿ 1ನೇ ಆಯ್ಕೆಗೆ ಸಮ್ಮತಿಸಿದ್ದ ರಾಜ್ಯಗಳಿಗೆ ರಾಜ್ಯದ ಒಟ್ಟು ದೇಶೀಯ ಉತ್ಪನ್ನ (ಜಿಎಸ್.ಡಿ.ಪಿ.)ಯ @ಶೇ.0.50ರಷ್ಟು ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ.
2020ರ ಆಗಸ್ಟ್ 27ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ, ಈ ಎರಡು ಆಯ್ಕೆಗಳನ್ನು ಮುಂದಿಡಲಾಗಿತ್ತು ಮತ್ತು ತದನಂತರ 2020ರ ಆಗಸ್ಟ್ 29ರಂದು ಇದನ್ನು ರಾಜ್ಯಗಳಿಗೆ ತಿಳಿಸಲಾಗಿತ್ತು. 20 ರಾಜ್ಯಗಳು ಆಯ್ಕೆ 1ಕ್ಕೆ ತಮ್ಮ ಆದ್ಯತೆ ನೀಡಿದ್ದವು. ಈ ರಾಜ್ಯಗಳೆಂದರೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ. ಎಂಟು ರಾಜ್ಯಗಳು ಇನ್ನೂ ತಮ್ಮ ಆಯ್ಕೆಯನ್ನು ಚಲಾಯಿಸಬೇಕಾಗಿದೆ.
ಇತರ ಆಯ್ಕೆಯ ನಡುವೆ ಆಯ್ಕೆ -1ನ್ನು ಆಯ್ಕೆ ಮಾಡುವ ರಾಜ್ಯಗಳಿಗೆ ಲಭ್ಯವಿರುವ ಸೌಲಭ್ಯಗಳು:
ಎ) ವಿಶೇಷ ಸಾಲ ಪಡೆಯುವ ಸೌಲಭ್ಯ ಸಾಲ ವಿತರಣೆಯ ಮೂಲಕ ಆದಾಯದಲ್ಲಿನ ಕೊರತೆಯ ಪ್ರಮಾಣವನ್ನು ಸರಿದೂಗಿಸಲು ಹಣಕಾಸು ಸಚಿವಾಲಯದ ಸಂಯೋಜನೆ. ಈ ಲೆಕ್ಕದಲ್ಲಿ ರಾಜ್ಯಗಳ ಆದಾಯದಲ್ಲಿನ ಒಟ್ಟು ಕೊರತೆಯನ್ನು ಸುಮಾರು 1.1 ಲಕ್ಷ ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ.
ಬಿ) ಕೋವಿಡ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಭಾರತ ಸರ್ಕಾರವು ಅನುಮತಿಸಿದ ಶೇ.2 ಹೆಚ್ಚುವರಿ ಸಾಲಗಳಲ್ಲಿ ಜಿಎಸ್‌ಡಿಪಿಯ ಶೇ.0.5 ಅಂತಿಮ ಕಂತು ಸಾಲ ಪಡೆಯಲು ಅನುಮತಿ, ಸುಧಾರಣೆಗಳ ಸ್ಥಿತಿಯನ್ನು ಮನ್ನಾ ಮಾಡುವುದು.
ವೆಚ್ಚ ಇಲಾಖೆ, 2020ರ ಮೇ 17ರಂದು ಹೆಚ್ಚುವರಿ ಸಾಲ ಮಿತಿಯನ್ನು ರಾಜ್ಯಗಳ ಜಿಎಸ್.ಡಿ.ಪಿ.ಯ ಶೇ. 2ರವರೆಗೆ ಒದಗಿಸಿದೆ. ಶೇ.2ರ ಮಿತಿಯ ಅಂತಿಮ ಕಂತಾದ ಶೇ.0.5 ಭಾರತ ಸರ್ಕಾರವು ನಿಗದಿಪಡಿಸಿದ ನಾಲ್ಕು ಸುಧಾರಣೆಗಳಲ್ಲಿ ಕನಿಷ್ಠ ಮೂರನ್ನು ಕೈಗೊಳ್ಳಲು ಸಂಪರ್ಕಿತವಾಗಿದೆ. ಆದಾಗ್ಯೂ, ಆಯ್ಕೆ 1ನ್ನು ಚಲಾಯಿಸಿರುವ ರಾಜ್ಯಗಳ ವಿಚಾರದಲ್ಲಿ, ಜಿಎಸ್ಟಿ ಜಾರಿಯಿಂದ ಎದುರಾಗಿರುವ ಕೊರತೆಯನ್ನು ತುಂಬಲು ಜಿಎಸ್ಡಿಪಿಯ ಶೇ.0.5ರ ಅಂತಿಮ ಕಂತು ಪಡೆಯಲು ಸುಧಾರಣೆಗಳನ್ನು ಕೈಗೊಳ್ಳುವ ಸ್ಥಿತಿಯನ್ನು ಮನ್ನಾ ಮಾಡಲಾಗಿದೆ. ಹೀಗಾಗಿ, ಆಯ್ಕೆ -1 ಅನ್ನು ಚಲಾಯಿಸಿದ 20 ರಾಜ್ಯಗಳು ಮುಕ್ತ ಸಾಲ ಮಾರುಕಟ್ಟೆಗಳ ಮೂಲಕ 68,825 ಕೋಟಿ ರೂಪಾಯಿಗಳನ್ನು ಕ್ರೋಡೀಕರಿಸಲು ಅರ್ಹವಾಗಿರುತ್ತವೆ. ವಿಶೇಷ ಸಾಲ ಪಡೆಯುವ ಅವಕಾಶದ ಮೇಲೆ ಪ್ರತ್ಯೇಕವಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ರಾಜ್ಯವಾರು ವಿವರ ಈ ಕೆಳಕಂಡಂತಿದೆ:
ಕ್ರ.ಸಂ.
|
ರಾಜ್ಯ
|
13.10.2020ರಂದು ಅನುಮತಿಸಲಾದ ಹೆಚ್ಚುವರಿ ಸಾಲ
(ರೂ. ಕೋಟಿಯಲ್ಲಿ)
|
1
|
ಆಂಧ್ರಪ್ರದೇಶ
|
5,051.00
|
2
|
ಅರುಣಾಚಲ ಪ್ರದೇಶ
|
143.00
|
3
|
ಅಸ್ಸಾಂ
|
1,869.00
|
4
|
ಬಿಹಾರ
|
3,231.00
|
5
|
ಗೋವಾ
|
446.00
|
6
|
ಗುಜರಾತ್
|
8,704.00
|
7
|
ಹರಿಯಾಣ
|
4,293.00
|
8
|
ಹಿಮಾಚಲ ಪ್ರದೇಶ
|
877.00
|
9
|
ಕರ್ನಾಟಕ
|
9,018.00
|
10
|
ಮಧ್ಯಪ್ರದೇಶ
|
4,746.00
|
11
|
ಮಹಾರಾಷ್ಟ್ರ
|
15,394.00
|
12
|
ಮಣಿಪುರ
|
151.00
|
13
|
ಮೇಘಾಲಯ
|
194.00
|
14
|
ಮಿಜೋರಾಂ
|
132.00
|
15
|
ನಾಗಾಲ್ಯಾಂಡ್
|
157.00
|
16
|
ಒಡಿಶಾ
|
2,858.00
|
17
|
ಸಿಕ್ಕಿಂ
|
156.00
|
18
|
ತ್ರಿಪುರಾ
|
297.00
|
19
|
ಉತ್ತರ ಪ್ರದೇಶ
|
9,703.00
|
20
|
ಉತ್ತರಾಖಂಡ
|
1,405.00
|
|
ಒಟ್ಟು
|
68,825.00
|
***
(Release ID: 1664291)
Visitor Counter : 339
Read this release in:
Hindi
,
Assamese
,
Bengali
,
English
,
Urdu
,
Marathi
,
Manipuri
,
Punjabi
,
Gujarati
,
Odia
,
Tamil
,
Telugu