ಪ್ರಧಾನ ಮಂತ್ರಿಯವರ ಕಛೇರಿ
ಕೆನಡಾದಲ್ಲಿ ನಡೆಯಲಿರುವ ‘ಭಾರತದಲ್ಲಿ ಬಂಡವಾಳ ಹೂಡಿ’ ಸಮಾವೇಶವನ್ನುದ್ದೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಲಿರುವ ಪ್ರಧಾನಿ
Posted On:
08 OCT 2020 11:32AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಜೆ 6.30ಕ್ಕೆ (ಭಾರತೀಯ ಕಾಲಮಾನ) ಕೆನಡಾದಲ್ಲಿ ನಡೆಯಲಿರುವ ಭಾರತದಲ್ಲಿ ಬಂಡವಾಳ ಹೂಡಿ ಸಮಾವೇಶವನ್ನು ಉದ್ದೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಇದು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಸಂಭವನೀಯ ಅವಕಾಶಗಳ ಬಗ್ಗೆ ಕೆನಡಾದ ಉದ್ಯಮ ಸಮೂಹಕ್ಕೆ ಪ್ರಾಥಮಿಕ ಮಾಹಿತಿಯನ್ನು ನೀಡುವ ಮತ್ತು ಭಾರತವನ್ನು ಬಂಡವಾಳ ಹೂಡಿಕೆಯ ತಾಣವನ್ನಾಗಿ ಪ್ರದರ್ಶಿಸಲು ಒಂದು ವೇದಿಕೆಯಾಗಿದೆ.
ಈ ಸಮಾವೇಶದಲ್ಲಿ ಬ್ಯಾಂಕ್ ಮತ್ತು ವಿಮಾ ಕಂಪನಿ, ಬಂಡವಾಳ ನಿಧಿಗಳ ಪ್ರತಿನಿಧಿಗಳು ಹಾಗೂ ವೈಮಾನಿಕ, ವಿದ್ಯುನ್ಮಾನ, ಉತ್ಪಾದನಾ, ಸಲಹಾ ಕಂಪನಿಗಳು ಮತ್ತು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
***
(Release ID: 1663056)
Visitor Counter : 174
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam