ಪ್ರಧಾನ ಮಂತ್ರಿಯವರ ಕಛೇರಿ

ಐಸಿಸಿಆರ್ ಮತ್ತು ಯುಪಿಐಡಿ ಆಯೋಜಿಸಿದ ವೆಬಿನಾರ್‌ನಲ್ಲಿ ಭಾರತೀಯ ಜವಳಿ ಪರಂಪರೆಯ ಕುರಿತು ಪ್ರಧಾನಿ ಅವರ ಸಂದೇಶ

Posted On: 03 OCT 2020 7:29PM by PIB Bengaluru

ನಮಸ್ತೆ, ಜವಳಿ ಕ್ಷೇತ್ರದ ಕುರಿತ ಸಂವಾದದಲ್ಲಿ ಪಾಲ್ಗೊಳ್ಳಲು ನನಗೆ ಸಂತೋಷವೆನಿಸಿದೆ. ಜಗತ್ತಿನ ವಿವಿಧ ದೇಶಗಳಿಂದ ಜನರು ಇಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹವಾಗಿದೆ.

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಮತ್ತು ಉತ್ತರ ಪ್ರದೇಶ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಎಲ್ಲರನ್ನೂ ಒಂದುಗೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ನೀವೆಲ್ಲ ಒಂದು ವಿಶಾಲವಾದ ವಿಸ್ತಾರವಾದ ಹರವು ಇರುವ ವಿಷಯವನ್ನು ಆಯ್ಕೆ ಮಾಡಿದ್ದೀರಿ. ನೀವು ಒಂದು ದೊಡ್ಡ ವಿಷಯವನ್ನು ಆರಿಸಿದ್ದೀರಿ- "ನೇಯ್ಗೆ ಬಾಂಧವ್ಯ: ಜವಳಿ ಸಂಪ್ರದಾಯಇದು ಅತ್ಯಂತ ವಿಶಾಲವಾದ ವಿಷಯವನ್ನು ಒಳಗೊಂಡಿದೆ.

ಸ್ನೇಹಿತರೆ, ಜವಳಿ ಕ್ಷೇತ್ರದ ಜೊತೆಗಿನ ನಮ್ಮ ಬಾಂಧವ್ಯ ಶತಮಾನಗಳಷ್ಟು ಹಿಂದಕ್ಕೆ ಹೋಗುತ್ತದೆನಮ್ಮ ಇತಿಹಾಸ, ನಮ್ಮ ವೈವಿಧ್ಯತೆ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಪಾರವಾದ ಅವಕಾಶಗಳಿರುವುದನ್ನು ನೋಡಬಹುದಾಗಿದೆ

ಸ್ನೇಹಿತರೆ, ಭಾರತೀಯ ಜವಳಿ ಕ್ಷೇತ್ರವು ಪ್ರಾಚೀನ ಪರಂಪರೆ ಹೊಂದಿದೆ. ನಮ್ಮಲ್ಲಿ ಅತಿ ಹಳೆಯ ಕಾಲದಿಂದಲೇ ಕೈಮಗ್ಗಗಳಿದ್ದವು. ಚರಕಗಳಿದ್ದವು. ಬಟ್ಟೆಗೆ ಬಣ್ಣ ಹಾಕಲಾಗುತ್ತಿತ್ತು. ಭಾರತೀಯ ವಸ್ತ್ರ ವೈಭವಕ್ಕೆ ಹಿರಿದಾದ ಪರಂಪರೆ ಇದೆ. ನೈಸರ್ಗಿಕ ಬಣ್ಣಗಳನ್ನು ಬಳಸಿ ವಸ್ತ್ರವೈವಿಧ್ಯಕ್ಕೆ ಅತಿ ಸಮೃದ್ಧ ಇತಿಹಾಸವಿದೆ. ರೇಷ್ಮೆ ವಸ್ತ್ರಕ್ಕೆ ಸಂಬಂಧಿಸಿದಂತೆಯೂ ಇದೇ ಮಾತು ಹೇಳಬಹುದಾಗಿದೆ.

ಸ್ನೇಹಿತರೆ,   ನಮ್ಮ ವಸ್ತ್ರವೈಭವದಲ್ಲಿರುವ ವಿಭಿನ್ನತೆಯೂ ನಮ್ಮ ವಸ್ತ್ರಸಿರಿಯನ್ನು ಎತ್ತಿ ಹಿಡಿಯುತ್ತದೆ. ನಮ್ಮ ದೇಶದ ಪ್ರತಿ ರಾಜ್ಯ, ಪ್ರತಿ ಹಳ್ಳಿಯಲ್ಲೂ ವಸ್ತ್ರಗಳಿಗೆ ಸಂಬಂಧಿಸಿದ ಇತಿಹಾಸ ಮತ್ತು ಸಂಸ್ಕೃತಿ ದೊರೆಯುತ್ತದೆ. ವಿಭಿನ್ನ ಸಮುದಾಯಗಳನ್ನು ಭೇಟಿ ನೀಡಿ, ಅವರ ಉಡುಗೆ ತೊಡುಗೆಗಳೂ ವಿಶಿಷ್ಟವಾಗಿರುತ್ತವೆಪ್ರತಿ ರಾಜ್ಯಕ್ಕೂ ವಿಶೇಷ ಮತ್ತು ವಿಶಿಷ್ಟವಾದ ವಸ್ತ್ರಹಿನ್ನೆಲೆ ಇದೆ. ಆಂಧ್ರಪ್ರದೇಶದಲ್ಲಿ ಕಲಮಕಾರಿ ಸಿಗುತ್ತದೆ. ಮುಗಾ ರೇಷ್ಮೆ, ಆಸ್ಸಾಮಿನ ಗರಿಮೆಯಾಗಿದೆ. ಕಾಶ್ಮೀರದಲ್ಲಿಪಾಶ್ಮಿನಾ ಹಾಗೂ ಪಂಜಾಬ್‌ ಸಂಸ್ಕೃತಿಯಲ್ಲಿ ಫುಲ್ಕಾರಿ ದೊರೆಯುತ್ತದೆಗುಜರಾತ್‌ ಪಟೋಲಾಗಳಿಗೆ, ಬನಾರಸ್‌, ಸೀರೆಗಳಿಗೆ, ಮಧ್ಯಪ್ರದೇಶದಲ್ಲಿ ಚಂದೇರಿ, ಓಡಿಶಾದಲ್ಲಿ ಸಂಭಲಪುರಿ ಎಂದು ಕೆಲವನ್ನು ಹೆಸರಿಸಬಹುದಾಗಿದೆ. ನಾನಿಲ್ಲಿ ಕೆಲವೇ ಕೆಲವನ್ನು ಹೆಸರಿಸಿದ್ದೇನೆ. ಭಾರತೀಯ ವಸ್ತ್ರಪರಂಪರೆಯ ಹರವು ವಿಸ್ತಾರವಾಗಿದೆ. ಭಾರತೀಯ ಬುಡಕಟ್ಟು ಜನಾಂಗದ ಕಡೆಗೆ ಗಮನ ಹರಿಸಿದ್ದಲ್ಲಿ ವೈವಿಧ್ಯಮಯ, ವರ್ಣರಂಜಿತ ಇತಿಹಾಸವನ್ನು ಗಮನಿಸದೇ ಇರಲಾಗದು.

ಸ್ನೇಹಿತರೆ, ಜವಳಿ ಕ್ಷೇತ್ರವು ಯಾವಾಗಲೂ ಹಲವಾರು ಅವಕಾಶಗಳನ್ನು ತೆರೆದಿರಿಸಿದೆ. ಜವಳಿ ಕ್ಷೇತ್ರವು ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವ ಅತಿ ದೊಡ್ಡ ವಲಯವಾಗಿದೆ. ಅಂತರರಾಷ್ಟ್ರೀಯ ಮಟ್ಟದ ವಾಣಿಜ್ಯ ವ್ಯಾಪಾರಗಳಿಗೂ ಸಾಂಸ್ಕೃತಿಕ ಬಾಂಧವ್ಯ ವೃದ್ಧಿಸಲೂ ಜವಳಿ ಕ್ಷೇತ್ರವು ಪೂರಕವಾಗಿದೆ. ಜಾಗತಿಕವಾಗಿ ಭಾರತೀಯ ವಸ್ತ್ರಪರಂಪರೆಗೆ ತನ್ನದೇ ಆದ ಮೌಲ್ಯವಿದೆ. ಇಲ್ಲಿಯ ಆಚರಣೆಗಳು, ತಂತ್ರಗಾರಿಕೆ, ಸಾಂಸ್ಕೃತಿಕ ಮಹತ್ವ ಇವೆಲ್ಲವೂ ವಿಭಿನ್ನ ಲೋಕವನ್ನೇ ತೆರೆದಿಡುತ್ತವೆ.  

ಸ್ನೇಹಿತರೆ, ಕಾರ್ಯಕ್ರಮವನ್ನು ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಆಯೋಜಿಸಲಾಗಿದೆ. ಮಹಾತ್ಮಾ ಗಾಂಧೀಜಿಯವರು ಜವಳಿ ಕ್ಷೇತ್ರ ಮತ್ತು ಸಾಮಾಜಿಕ ಸಬಲೀಕರಣದ ನಡುವೆ ಪ್ರಬಲವಾದ ಬಾಂಧವ್ಯ ಇರುವುದನ್ನು ಗಮನಿಸಿದ್ದರು. ಚರಕವು ಭಾರತೀಯ ಸ್ವಾತಂತ್ರ್ಯದ ಸಂಕೇತದಂತೆಯೇ ಬಿಂಬಿಸಲಾಗಿದೆ. ಇದೇ ಚರಕ ನಮ್ಮನ್ನು ಒಂದೇ ಭಾರತ, ಒಂದು ದೇಶ ಎನ್ನುವ ಭಾವದ ಎಳೆಗಳನ್ನು ಹೆಣೆದಿರುವ ಸಾಧನವೂ ಆಗಿದೆ.

ಸ್ನೇಹಿತರೆ, ಆತ್ಮನಿರ್ಭರ ಭಾರತರಚನೆಯಲ್ಲಿ ಜವಳಿ ಕ್ಷೇತ್ರ ಅತಿ ಮಹತ್ವದ ಗುರುತರ ಪಾತ್ರ ನಿರ್ವಹಿಸಲಿದೆ. ನಮ್ಮ ಸರ್ಕಾರವು ಸದ್ಯ ಗಮನ ಕೇಂದ್ರೀಕರಿಸುತ್ತಿರುವ ಕೆಲವು ಅಂಶಗಳು ಹೀಗಿವೆ: ಕೌಶಲ ಅಭಿವೃದ್ಧಿ, ಹಣಕಾಸಿನ ನೆರವು, ಉನ್ನತ ತಂತ್ರಜ್ಞಾನದ ಅಳವಡಿಕೆ. ಮೂರು ಅಂಶಗಳಿಂದ ನಮ್ಮ ನೇಕಾರರು ಎಂದಿನಂತೆ ವಿಶ್ವವಿಖ್ಯಾತ ಉತ್ಪನ್ನಗಳನ್ನು ತಯಾರಿಸಲು ಪ್ರೋತ್ಸಾಹಿಸಲಾಗುತ್ತಿದೆ. ನಮ್ಮಲ್ಲಿ ಜಗತ್ತಿನ ವಿಶೇಷ ಮತ್ತು ವಿಭಿನ್ನ ತಂತ್ರಗಾರಿಕೆಗಳಿವೆ. ನೇಯ್ಗೆ ಕ್ಷೇತ್ರದ ತಂತ್ರಗಾರಿಕೆಗಳನ್ನು ಜಗತ್ತೂ ಗಮನಿಸಲಿ ಎಂಬುದೂ ನಮ್ಮ ಆಶಯವಾಗಿದೆ. ಇದೇ ಕಾರಣಕ್ಕೆ ಭಾರತದೊಂದಿಗೆ ಹನ್ನೊಂದು ದೇಶಗಳು ವೆಬ್‌ನಾರ್‌ನಲ್ಲಿ ಪಾಲ್ಗೊಂಡಿರುವುದು ಮಹತ್ವದ್ದಾಗಿದೆ. ತಂತ್ರಗಾರಿಕೆ ಮತ್ತು ನವ ಯೋಚನೆಗಳ ವಿನಿಮಯವಾದಲ್ಲಿ ಸಂಯೋಜನೆಯು ಹೊಸತೊಂದು ಅಧ್ಯಾಯವನ್ನು ಬರೆಯಬಹುದಾಗಿದೆ.

ಸ್ನೇಹಿತರೆ, ಇಡೀ ವಿಶ್ವದಲ್ಲಿಯೇ ಜವಳಿ ಕ್ಷೇತ್ರವು ಅತಿ ಹೆಚ್ಚು ಸಂಖ್ಯೆಯ ಮಹಿಳೆಯರಿಗೆ ಉದ್ಯೋಗಾವಕಾಶ ನೀಡುತ್ತದೆ. ಮಹಿಳಾ ಸಬಲೀಕರಣಕ್ಕೆ ವೈವಿಧ್ಯಮಯ ಜವಳಿ ಕ್ಷೇತ್ರಗಳು, ಹೆಚ್ಚಿನ ಕೊಡುಗೆಯನ್ನು ನೀಡುತ್ತವೆಬಂಧುಗಳೇ, ಸಮಯದ ಸವಾಲುಗಳನ್ನೆ ಎದುರಿಸುವಲ್ಲಿ ನಾವು ನಮ್ಮ ಭವಿಷ್ಯವನ್ನು ಸಜ್ಜುಗೊಳಿಸಬೇಕಾಗಿದೆ. ನಮ್ಮ ಜವಳಿ ಪರಂಪರೆಯು ಅತ್ಯಂತ ಸಬಲವಾದ ತತ್ವಸಿದ್ಧಾಂತಗಳು ಹಾಗೂ ಉಪಾಯಗಳನ್ನು ಸೂಚಿಸುತ್ತಲೇ ಬಂದಿವೆ. ಇವು ವಿಭಿನ್ನತೆಯನ್ನೂ, ಆನ್ವಯಿಕ ಗುಣವನ್ನು, ಸಬಲೀಕರಣವನ್ನೂ, ಕೌಶಲ ಮತ್ತು ನಾವೀನ್ಯವನ್ನು ಅಳವಡಿಸಿಕೊಳ್ಳಲು ಸದಾ ತುಡಿಯುತ್ತಿದೆ. ಸಿದ್ಧಾಂತಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಇವೊತ್ತು ಹಮ್ಮಿಕೊಂಡಿರುವಂಥ ವೆಬಿನಾರ್‌ನಂಥ ಕಾರ್ಯಕ್ರಮವು ನಮ್ಮ ಆಶಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ ಎಂಬ ಆಶಾಭಾವನೆ ನನ್ನದಾಗಿದೆ. ಅಷ್ಟೇ ಅಲ್ಲ ನಮ್ಮ ವಸ್ತ್ರವೈಭವಕ್ಕೆ ಇನ್ನಷ್ಟು ಗರಿಗಳನ್ನೂ ತಂದು ಕೊಡಬಹುದಾಗಿದೆ.   ICCR, UPID  ಹಾಗೂ ಇನ್ನಿತರ ಎಲ್ಲ ಪಾಲ್ಗೊಳ್ಳುತ್ತಿರುವ ದೇಶಗಳಿಗೆ ಒಳಿತಾಗಲಿ ಎಂದು ಬಯಸುತ್ತೇನೆ. ಹರಸುತ್ತೇನೆ.

***


(Release ID: 1661715) Visitor Counter : 210