ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದ ಚೇತರಿಕೆಯ ಪ್ರಮಾಣ 83% ರಷ್ಟು ಹೆಚ್ಚಾಗಿದೆ
ಚೇತರಿಕೆ ಪ್ರಕರಣಗಳು ಸಕ್ರಿಯ ಪ್ರಕರಣಗಳಿಗಿಂತ 41.5 ಲಕ್ಷಕ್ಕಿಂತ ಹೆಚ್ಚಿವೆ
Posted On:
29 SEP 2020 12:19PM by PIB Bengaluru
ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಚೇತರಿಕೆ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ ಚೇತರಿಕೆ ಪ್ರಕರಣಗಳು, ಹೊಸದಾಗಿ ದೃಢೀಕರಿಸಲ್ಪಟ್ಟ ಪ್ರಕರಣಗಳನ್ನು ಮೀರಿವೆ. ಇದರೊಂದಿಗೆ, ಭಾರತದ ಚೇತರಿಕೆಯ ಪ್ರಮಾಣವು 83%ರಷ್ಟು ಹೆಚ್ಚಾಗಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 84,877 ಚೇತರಿಸಿಕೊಂಡ ಪ್ರಕರಣಗಳು ದಾಖಲಾಗಿದ್ದರೆ, ಹೊಸ ದೃಢಪಡಿಸಿದ ಪ್ರಕರಣಗಳ ಸಂಖ್ಯೆಯು 70,589 ಆಗಿದೆ. ಒಟ್ಟು ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 51,01,397 ಕ್ಕೆ ತಲುಪಿದೆ.
73% ಹೊಸದಾಗಿ ಚೇತರಿಸಿಕೊಂಡ ಪ್ರಕರಣಗಳು ಹತ್ತು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ದೆಹಲಿ, ಒಡಿಶಾ, ಕೇರಳ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಿಂದ ವರದಿಯಾಗಿದೆ.
ಸುಮಾರು 20,000 ಚೇತರಿಸಿಕೊಂಡ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳು ಒಂದೇ ದಿನ ಚೇತರಿಸಿಕೊಂಡ 7,000 ಪ್ರಕರಣಗಳನ್ನು ವರದಿ ಮಾಡಿವೆ.

ನಿರಂತರ ಉನ್ನತ ಮಟ್ಟದ ಚೇತರಿಕೆಯ ಪ್ರಕರಣಗಳು, ಸಕ್ರಿಯ ಮತ್ತು ಚೇತರಿಸಿಕೊಂಡ ಪ್ರಕರಣಗಳ ನಡುವಿನ ಅಂತರವನ್ನು ಮತ್ತಷ್ಟು ವಿಸ್ತರಿಸಲು ಕಾರಣವಾಗಿವೆ. ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳನ್ನು (9,47,576) 41.5 ಲಕ್ಷಕ್ಕಿಂತ ಹೆಚ್ಚಾಗಿ (41,53,831) ಮೀರಿಸಿವೆ. ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳ 5.38 ಪಟ್ಟು ಇವೆ ಇದರಿಂದಾಗಿ ಚೇತರಿಸಿಕೊಂಡ ಪ್ರಕರಣಗಳು ನಿರಂತರವಾಗಿ ಏರುತ್ತಿವೆ ಎನ್ನುವುದನ್ನು ಖಚಿತಪಡಿಸುತ್ತದೆ.
ದೇಶದ ಪ್ರಸ್ತುತ ಒಟ್ಟು ದೃಢಪಡಿಸಿದ ಪ್ರಕರಣಗಳಲ್ಲಿ ಕೇವಲ 15.42%ರಷ್ಟು ಸಕ್ರಿಯ ಪ್ರಕರಣಗಳು ಇವೆ ಮತ್ತು ಇದು ನಿರಂತರವಾಗಿ ಕಡಿಮೆಯಾಗುತ್ತಿದೆ.
ಕೆಳಗಿನ ಎರಡು ಗ್ರಾಫ್‌ಗಳು ಸೆಪ್ಟೆಂಬರ್ 23 ಮತ್ತು 29 ರ ನಡುವಿನ ಮೊದಲ ಹತ್ತು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಬದಲಾಗುತ್ತಿರುವ ಸನ್ನಿವೇಶವನ್ನು ತೋರಿಸುತ್ತದೆ.


ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 70,589 ಹೊಸ ಪ್ರಕರಣಗಳು ವರದಿಯಾಗಿವೆ.
ಹೊಸ ದೃಢಪಡಿಸಿದ ಪ್ರಕರಣಗಳಲ್ಲಿ 10 ರಾಜ್ಯಗಳು / ಕೇಂದ್ರಾಡಳಿ ಪ್ರದೇಶಗಳ ಪಾಲು 73% ರಷ್ಟಿದೆ.
ಮಹಾರಾಷ್ಟ್ರವು ಈ ಸಂಖ್ಯೆಯಲ್ಲಿ ಮುನ್ನಡೆಯಲ್ಲಿದೆ. ಇದರಲ್ಲಿ 11,000 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿದ್ದು ಮತ್ತು ಕರ್ನಾಟಕವು 6,000 ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿದೆ.

ಕಳೆದ 24 ಗಂಟೆಗಳಲ್ಲಿ 776 ಸಾವುಗಳು ಸಂಭವಿಸಿವೆ.
ಕೋವಿಡ್ ನಿಂದಾಗಿ ಕಳೆದ 24 ಗಂಟೆಗಳಲ್ಲಿ 10 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು 78% ಸಾವುಗಳಿಗೆ ಕಾರಣವಾಗಿವೆ.
ಹೊಸದಾಗಿ ವರದಿಯಾದ ಸಾವುಗಳಲ್ಲಿ, ಮಹಾರಾಷ್ಟ್ರವು 180 ಸಾವುಗಳೊಂದಿಗೆ 23% ಕ್ಕಿಂತ ಹೆಚ್ಚು ಮತ್ತು ತಮಿಳುನಾಡು 70 ಸಾವುಗಳನ್ನು ವರದಿ ಮಾಡಿದೆ.

***
(Release ID: 1660347)
Visitor Counter : 218
Read this release in:
Malayalam
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu