ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

2021-22ರ ಮಾರುಕಟ್ಟೆ ಹಂಗಾಮಿನ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳಿಗೆ (ಎಂಎಸ್‌ಪಿ) ಸಂಪುಟದ ಅನುಮೋದನೆ

Posted On: 21 SEP 2020 7:05PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಯು 2021-22 ಮಾರುಕಟ್ಟೆ ಹಂಗಾಮಿಗೆ ಎಲ್ಲಾ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್ಪಿ) ಹೆಚ್ಚಿಸಲು ಅನುಮೋದನೆ ನೀಡಿದೆ. ಕನಿಷ್ಠ ಬೆಂಬಲ ಬೆಲೆಗಳ ಹೆಚ್ಚಳವು ಸ್ವಾಮಿನಾಥನ್ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿರುತ್ತದೆ.

ಪೌಷ್ಠಿಕಾಂಶದ ಅವಶ್ಯಕತೆಗಳು ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸುವ ದೃಷ್ಟಿಯಿಂದ ಮತ್ತು ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು, ಸರ್ಕಾರವು ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಗಳನ್ನು ನಿಗದಿಪಡಿಸಿದೆ.

ಮಸೂರಿ ಬೇಳೆಗೆ ಅತ್ಯಧಿಕ ಕ್ವಿಂಟಲ್ಗೆ 300 ರೂ. ಎಂಎಸ್ಪಿ ಹೆಚ್ಚಳ ಘೋಷಿಸಲಾಗಿದೆ. ಕಡಲೆ  ಮತ್ತು ರಾಪ್ಸೀಡ್ ಹಾಗೂ ಸಾಸಿವೆ (ಪ್ರತಿ ಕ್ವಿಂಟಲ್ಗೆ 225 ರೂ.) ಕುಸುಬೆ (ಕ್ವಿಂಟಲ್ಗೆ 112 ರೂ.) ಎಂಎಸ್ಪಿ ಹೆಚ್ಚಿಸಲಾಗಿದೆ. ಬಾರ್ಲಿ ಮತ್ತು ಗೋಧಿಗೆ. ಕ್ವಿಂಟಲ್ಗೆ ಕ್ರಮವಾಗಿ 75 ರೂ ಮತ್ತು 50 ರೂ. ಹೆಚ್ಚಿಸಲಾಗಿದೆ. ವ್ಯತ್ಯಾಸದ ಎಂಎಸ್ಪಿಯು ಬೆಳೆ ವೈವಿಧ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

2021-22 ಮಾರುಕಟ್ಟೆ ಹಂಗಾಮಿನ ಎಲ್ಲಾ ರಾಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳು

ಬೆಳೆಗಳು

2021-22 ಹಂಗಾಮಿಗೆ ಎಂಎಸ್ಪಿ

(ರೂ/ಕ್ವಿಂಟಾಲ್)

2021-22 ಹಂಗಾಮಿಗೆ ಎಂಎಸ್ಪಿ

(ರೂ/ಕ್ವಿಂಟಾಲ್)

ಉತ್ಪಾದನಾ ವೆಚ್ಚ 2021-22

(ರೂ/ಕ್ವಿಂಟಾಲ್)

ಎಂಎಸ್ಪಿಯಲ್ಲಿ ಹೆಚ್ಚಳ

ವೆಚ್ಚದ ಮೇಲೆ ಗಳಿಕೆ

(ಶೇ.)

ಗೋಧಿ

1925

1975

960

50

106

ಬಾರ್ಲಿ

1525

1600

971

75

65

ಮಸೂರ

4800

5100

2864

300

78

ರಾಪ್ಸೀಡ್ ಮತ್ತು ಸಾಸಿವೆ

4425

4650

2415

225

93

ಕುಸುಬೆ

5215

5327

3551

112

50

 

* ಮಾನವ ಕೆಲಸದ ಕೂಲಿ, ಎತ್ತುಗಳ ಕೆಲಸ / ಯಂತ್ರಗಳ ಕೆಲಸ, ಭೂಮಿ ಗುತ್ತಿಗೆಗೆ ಪಾವತಿಸಿದ ಬಾಡಿಗೆ, ಬೀಜಗ, ರಸಗೊಬ್ಬರ, ಗೊಬ್ಬರ, ನೀರಾವರಿ ಶುಲ್ಕ, ಉಪಕರಣಗಳ ಸವಕಳಿ ಮುಂತಾದ ವಸ್ತುಗಳ ಬಳಕೆಗೆ ಆಗುವ ವೆಚ್ಚಗಳು, ಕೃಷಿ ಕಟ್ಟಡಗಳು, ಕಾರ್ಯ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ಗಳ ಕಾರ್ಯಾಚರಣೆಗೆ ಡೀಸೆಲ್ / ವಿದ್ಯುತ್ ಇತ್ಯಾದಿ, ವಿವಿಧ ವೆಚ್ಚಗಳು ಮತ್ತು ಕುಟುಂಬ ಕಾರ್ಮಿಕರ ಮೌಲ್ಯ ಮತ್ತು ಪಾವತಿಸಿದ ಎಲ್ಲಾ ವೆಚ್ಚಗಳನ್ನು ಇದು ಒಳಗೊಂಡಿದೆ.

2021-22 ಮಾರುಕಟ್ಟೆ ಹಂಗಾಮಿಗೆ ರಾಬಿ ಬೆಳೆಗಳಿಗೆ ಎಂಎಸ್ಪಿ ಹೆಚ್ಚಳವು 2018-19 ಕೇಂದ್ರ ಬಜೆಟ್ ಘೋಷಿಸಿದಂತೆ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಎಂಎಸ್ಪಿಗಳನ್ನು ಹೆಚ್ಚಿಸುವ ತತ್ವಕ್ಕೆ ಅನುಗುಣವಾಗಿರುತ್ತದೆ. ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಆದಾಯವು ಗೋಧಿ (106%) ಮತ್ತು ರಾಪ್ಸೀಡ್ ಮತ್ತು ಸಾಸಿವೆ (93%), ಕಡಲೆ ಮತ್ತು ಮಸೂರ (78%) ಗಳಲ್ಲಿ ಬರಲಿದೆ ಅಂದಾಜಿಸಲಾಗಿದೆ. ಬಾರ್ಲಿಗೆ ಸಂಬಂಧಿಸಿದಂತೆ ಆದಾಯವು ಉತ್ಪಾದನಾ ವೆಚ್ಚದ ಮೇಲೆ 65% ನಷ್ಟು ಮತ್ತು ಕುಸುಬೆಗೆ 50% ಆಗಿದೆ ಎಂದು ಅಂದಾಜಿಸಲಾಗಿದೆ.

ಬೆಂಬಲವು ಎಂಎಸ್ಪಿ ಮತ್ತು ಖರೀದಿಯ ರೂಪದಲ್ಲಿರುತ್ತದೆ. ಏಕದಳ ಧಾನ್ಯಗಳಿಗೆ, ಭಾರತ ಆಹಾರ ನಿಗಮ (ಎಫ್ಸಿಐ) ಮತ್ತು ಇತರ ಗೊತ್ತುಪಡಿಸಿದ ರಾಜ್ಯ ಸಂಸ್ಥೆಗಳು ರೈತರಿಗೆ ಬೆಲೆ ಬೆಂಬಲವನ್ನು ನೀಡುತ್ತಲೇ ಇರುತ್ತವೆ. ದ್ವಿದಳ ಧಾನ್ಯಗಳ ಕಾಪು ದಾಸ್ತಾನನ್ನು ಸರ್ಕಾರ ಸ್ಥಾಪಿಸಿದೆ ಮತ್ತು ದ್ವಿದಳ ಧಾನ್ಯಗಳ ದೇಶೀಯ ಖರೀದಿಯನ್ನು ಸಹ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಅಡಿಯಲ್ಲಿ ಮಾಡಲಾಗುತ್ತಿದೆ.

ಬೆಲೆ ಬೆಂಬಲ ಯೋಜನೆ (ಪಿಎಸ್ಎಸ್), ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್), ಮತ್ತು ಖಾಸಗಿ ಖರೀದಿ ಮತ್ತು ಸ್ಟಾಕಿಸ್ಟ್ ಯೋಜನೆ (ಪಿಪಿಎಸ್ಎಸ್) ಗಳ ಪೈಲಟ್ ಯೋಜನೆ ಒಳಗೊಂಡಿರುವಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ ಅಭಿಯಾನ”(ಪಿಎಂ-ಆಶಾ) ವು ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಖರೀದಿಗೆ ನೆರವು ನೀಡುತ್ತದೆ.

ಕೋವಿಡ್-19 ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಹೊರತಾಗಿಯೂ, ಸರ್ಕಾರದ ಸಮಯೋಚಿತ ಕ್ರಮಗಳಿಂದಾಗಿ 2020-21ರಲ್ಲಿ ಸಾರ್ವಕಾಲಿಕ ದಾಖಲೆಯ ಸುಮಾರು 39 ದಶಲಕ್ಷ ಟನ್ಗಳಷ್ಟು ಗೋಧಿಯನ್ನು ಖರಿದಿಸಲಾಗಿದೆ. ಖರೀದಿ ಅವಧಿಯಲ್ಲಿ ಸುಮಾರು 43 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ, ಇದು  2019-20ಕ್ಕಿಂತ ಶೇಕಡಾ 22 ರಷ್ಟು ಹೆಚ್ಚಾಗಿದೆ. 2019-20ರಲ್ಲಿ 390 ಲಕ್ಷ ಟನ್ ಗೋಧಿ ಖರೀದಿಯನ್ನು ಅಂದಾಜಿಸಲಾಗಿದೆ. 2014-15ರಲ್ಲಿ 280 ಲಕ್ಷ ಟನ್ ಖರೀದಿಸಲಾಗಿತ್ತು. 2019-20ರಲ್ಲಿ 15 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ಖರೀದಿಸಲು ಅಂದಾಜಿಸಲಾಗಿದ್ದು, 2014-15ರಲ್ಲಿ 3 ಲಕ್ಷ ಟನ್ ಖರೀದಿಸಲಾಗಿತ್ತು. 2019-20ರಲ್ಲಿ 18 ಲಕ್ಷ ಮೆಟ್ರಿಕ್ ಟನ್ ಎಣ್ಣೆಬೀಜಗಳನ್ನು ಖರೀದಿಸಲು ಅಂದಾಜಿಸಲಾಗಿದ್ದು, 2014-15ರಲ್ಲಿ 12 ಸಾವಿರ ಮೆಟ್ರಿಕ್ ಟನ್ ಖರೀದಿಸಲಾಗಿತ್ತು.

ಸಾಂಕ್ರಾಮಿಕ ರೋಗದ ಸದ್ಯದ ಪರಿಸ್ಥಿತಿಯಲ್ಲಿ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ, ಸರ್ಕಾರವು ಕೈಗೊಂಡ ವಿವಿಧ ಕ್ರಮಗಳು ಹೀಗಿವೆ:

i.          ಎಂಎಸ್ಪಿ ಹೆಚ್ಚಳದ ಜೊತೆಗೆ, ಗರಿಷ್ಠ ಸಂಖ್ಯೆಯ ರೈತರು ಅದರ ಪ್ರಯೋಜನವನ್ನು ಪಡೆಯಲು ಖರೀದಿ ಪ್ರಕ್ರಿಯೆಯನ್ನು ಬಲಪಡಿಸಲಾಗಿದೆ.

ii.         ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಗೋಧಿ ಮತ್ತು ದ್ವಿದಳ ಧಾನ್ಯ-ಎಣ್ಣೆಕಾಳುಗಳ ಖರೀದಿ ಕೇಂದ್ರಗಳನ್ನು ಕ್ರಮವಾಗಿ 1.5 ಪಟ್ಟು ಮತ್ತು 3 ಪಟ್ಟು ಹೆಚ್ಚಿಸಲಾಗಿದೆ.

iii.        ಸಾಂಕ್ರಾಮಿಕ ಸಮಯದಲ್ಲಿ 390 ಲಕ್ಷ ಟನ್ ಗೋಧಿಯನ್ನು 75,000 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ, ಇದು ಕಳೆದ ವರ್ಷಕ್ಕಿಂತ ಶೇ.15 ರಷ್ಟು ಹೆಚ್ಚಾಗಿದೆ.

iv.        ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರಂಭದಿಂದ ಸುಮಾರು 10 ಕೋಟಿ ರೈತರು ಪ್ರಯೋಜನ ಪಡೆದಿದ್ದಾರೆ. ವಿತರಿಸಿದ ಒಟ್ಟು ಮೊತ್ತ ಸುಮಾರು 93,000 ಕೋಟಿ ರೂ.

v.         ಪಿಎಂ ಕಿಸಾನ್ ಅಡಿಯಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸುಮಾರು 9 ಕೋಟಿ ರೈತರು ಸುಮಾರು 38000 ಕೋಟಿ ರೂ. ನೆರವು ಪಡೆದಿದ್ದಾರೆ

vi.        ಕಳೆದ 6 ತಿಂಗಳಲ್ಲಿ 1.25 ಕೋಟಿ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಲಾಗಿದೆ.

vii.       ಬೇಸಿಗೆಯ ಬಿತ್ತನೆಯು 57 ಲಕ್ಷ ಹೆಕ್ಟೇರ್ ಆಗಿದೆ, ಇದು ಕಳೆದ ವರ್ಷಕ್ಕಿಂತ 16 ಲಕ್ಷ ಹೆಕ್ಟೇರ್ ಹೆಚ್ಚಾಗಿದೆ. ಖಾರಿಫ್ ಬಿತ್ತನೆ ಕೂಡ ಕಳೆದ ವರ್ಷಕ್ಕಿಂತ ಶೇ 5 ರಷ್ಟು ಹೆಚ್ಚಾಗಿದೆ.

viii.      ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ -ನ್ಯಾಮ್ ಮಾರುಕಟ್ಟೆಗಳ ಸಂಖ್ಯೆ 585 ರಿಂದ 1000 ಕ್ಕೆ ಏರಿದೆ. ಕಳೆದ ವರ್ಷ -ಪ್ಲಾಟ್ಫಾರ್ಮ್ 35000 ಕೋಟಿ ರೂ.ವಹಿವಾಟು ನಡೆಸಿತ್ತು.

ix.        ಐದು ವರ್ಷಗಳ ಅವಧಿಯಲ್ಲಿ 10,000 ಎಫ್ಪಿಒಗಳನ್ನು ರಚಿಸಲು 6850 ಕೋಟಿ ರೂ.ವೆಚ್ಚ ಮಾಡಲಾಗುವುದು

X.        ಬೆಳೆ ವಿಮೆ ಯೋಜನೆಯಡಿ ಕಳೆದ 4 ವರ್ಷಗಳಲ್ಲಿ, ರೈತರು ಪಾವತಿಸಿದ 17500 ಕೋಟಿ ರೂ. ಪ್ರೀಮಿಯಂಗೆ 77,000 ಕೋಟಿ ರೂ. ಕ್ಲೈಮ್ ಪಡೆದಿದ್ದಾರೆ

xi.        ಫಸಲ್ ಬಿಮಾ ಯೋಜನೆಯನ್ನು ಸ್ವ ಇಚ್ಛೆಗೆ ಬಿಡಲಾಗಿದೆ.

xii.       ಕಿಸಾನ್ ರೈಲು ಪ್ರಾರಂಭಿಸಲಾಗಿದೆ.

ರೈತರು ತಮ್ಮ ಉತ್ಪನ್ನಗಳನ್ನು ಸಾಂಪ್ರದಾಯಿಕ ಹೊರಗೆ ಮಾರಾಟ ಮಾಡಲು ಪರ್ಯಾಯ ಮಾರ್ಗಗಳನ್ನು ಒದಗಿಸಲು, ಎಪಿಎಂಸಿ ಮಂಡಿ ವ್ಯವಸ್ಥೆ ಮತ್ತು ಕೃಷಿ ವ್ಯವಹಾರದಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ, ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಸುಗ್ರೀವಾಜ್ಞೆ, 2020,  ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ 2020 ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿತ್ತು. ಸಮರ್ಥ ಕೃಷಿ-ಆಹಾರ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಮತ್ತು ಮೌಲ್ಯವರ್ಧನೆ, ವೈಜ್ಞಾನಿಕ ಸಂಗ್ರಹಣೆ, ಉಗ್ರಾಣ ಮತ್ತು ಮಾರುಕಟ್ಟೆ ಮೂಲಸೌಕರ್ಯಗಳಲ್ಲಿ ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸಲು 2020 ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆಯನ್ನು ಘೋಷಿಸಲಾಯಿತು.

ಕೃಷಿ ಮೂಲಸೌಕರ್ಯ ನಿಧಿ ಯೋಜನೆಯಡಿ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ವರ್ಷಕ್ಕೆ ಶೇ.3 ಬಡ್ಡಿ ಸಹಾಯಧನ ಮತ್ತು 2 ಕೋಟಿ ರೂ. ವರೆಗಿನ ಸಾಲಕ್ಕಾಗಿ ಸಿಜಿಟಿಎಂಎಸ್ (ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಮತ್ತು ಸ್ಮಾಲ್ ಎಂಟರ್ಪ್ರೈಸಸ್) ಅಡಿಯಲ್ಲಿ ಸಾಲವಾಗಿ 1 ಲಕ್ಷ ಕೋಟಿ ರೂ.ಗಳನ್ನು ಒದಗಿಸಲಿವೆ. ಯೋಜನೆಯು ಸಮುದಾಯ ಕೃಷಿ ಸ್ವತ್ತುಗಳನ್ನು ನಿರ್ಮಿಸಲು ಮತ್ತು ಸುಗ್ಗಿಯ ನಂತರದ ಕೃಷಿ ಮೂಲಸೌಕರ್ಯಗಳನ್ನು ನಿರ್ಮಿಸಲು ರೈತರು, ಪಿಎಸಿಎಸ್, ಎಫ್ಪಿಒಗಳು, ಕೃಷಿ-ಉದ್ಯಮಿಗಳು ಮತ್ತಿತರರಿಗೆ ಸಹಾಯ ಮಾಡುತ್ತದೆ.

***



(Release ID: 1657454) Visitor Counter : 271