ಹಣಕಾಸು ಸಚಿವಾಲಯ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಪ್ರಗತಿ


42 ಕೋಟಿಗೂ ಹೆಚ್ಚು ಬಡ ಜನರಿಗೆ ರೂ. 68,820 ಕೋಟಿ ಆರ್ಥಿಕ ನೆರವು

Posted On: 08 SEP 2020 1:00PM by PIB Bengaluru

ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಅಂಗವಾಗಿ ಉಚಿತ ಆಹಾರಧಾನ್ಯ ಮತ್ತು ಮಹಿಳೆಯರು, ಬಡ ಹಿರಿಯ ನಾಗರಿಕರು ಮತ್ತು ರೈತರಿಗೆ ನಗದು ನೆರವು ಘೋಷಿಸಿತು. ಪ್ಯಾಕೇಜ್ ತ್ವರಿತ ಅನುಷ್ಠಾನದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ನಿಗಾ ವಹಿಸಿದೆ. ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಸುಮಾರು 42 ಕೋಟಿ ಬಡವರು 68,820 ಕೋಟಿ ರೂ.ಆರ್ಥಿಕ ನೆರವು ಪಡೆದಿದ್ದಾರೆ.

  • ಪಿ.ಎಂ. ಕಿಸಾನ್ ಮೊದಲ ಕಂತಿನ ಪಾವತಿಯಾಗಿ 17,891 ಕೋಟಿ ರೂ.ಗಳನ್ನು 8.94 ಫಲಾನುಭವಿಗಳಿಗೆ ಪಾವತಿಸಲು ಜಮಾ ಮಾಡಲಾಗಿದೆ.
  • 20.65 ಕೋಟಿ (ಶೇ.100) ಮಹಿಳಾ ಜನ್ ಧನ್ ಖಾತೆದಾರರಿಗೆ 10,325 ಕೋಟಿ ರೂ. ಪ್ರಥಮ ಕಂತನ್ನು ಜಮಾ ಮಾಡಲಾಗಿದೆ. 10,315 ಕೋಟಿ ರೂ.ಗಳನ್ನು 20.63 ಕೋಟಿ (ಶೇ.100) ಜನ್ ಧನ್ ಖಾತೆ ಹೊಂದಿರುವ ಮಹಿಳೆಯರಿಗೆ ಎರಡನೇ ಕಂತಿನಲ್ಲಿ ಜಮಾ ಮಾಡಲಾಗಿದೆ. 20.62 ಕೋಟಿ (ಶೇ.100) ಮಹಿಳಾ ಜನ್ ಧನ್ ಖಾತೆದಾರರಿಗೆ 10,312 ಕೋಟಿ ರೂ.ಗಳನ್ನು ಮೂರನೇ ಕಂತಾಗಿ ಪಾವತಿಸಲಾಗಿದೆ.
  • ಒಟ್ಟು 2,814.5 ಕೋಟಿ ರೂ. ಗಳನ್ನು 2.81 ಕೋಟಿ ಹಿರಿಯ ನಾಗರಿಕರು, ವಿಧವೆಯರು ಮತ್ತು ದಿವ್ಯಾಂಗ ವ್ಯಕ್ತಿಗಳಿಗೆ ಎರಡು ಕಂತುಗಳನ್ನು ವಿತರಿಸಲಾಗಿದೆ. 2.81 ಕೋಟಿ ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ ಸವಲತ್ತು ವರ್ಗಾವಣೆಯಾಗಿದೆ.
  • 1.82 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು 4,987.18 ಕೋಟಿ ರೂ. ಆರ್ಥಿಕ ನೆರವು ಪಡೆದುಕೊಂಡಿದ್ದಾರೆ.
  1. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ 37.52 ಎಲ್.ಎಂ.ಟಿ. ಆಹಾರಧಾನ್ಯವನ್ನು 75.04 ಕೋಟಿ ಫಲಾನುಭವಿಗಳಿಗೆ ಏಪ್ರಿಲ್ 20ರಲ್ಲಿ, 37.46 ಎಲ್.ಎಂ.ಟಿ.ಯನ್ನು 74.92 ಕೋಟಿ ಫಲಾನುಭವಿಗಳಿಗೆ ಮೇ 20ರಲ್ಲಿ ಮತ್ತು 36.62 ಎಲ್.ಎಂ.ಟಿ.ಯನ್ನು 73.24 ಕೋಟಿ ಫಲಾನುಭವಿಗಳಿಗೆ ಜೂನ್ 20ರಲ್ಲಿ ವಿತರಿಸಲಾಗಿದೆ. ಯೋಜನೆಯನ್ನು ಮತ್ತೆ 5 ತಿಂಗಳುಗಳ ಕಾಲ ಅಂದರೆ ನವೆಂಬರ್ ವರೆಗೆ ವಿಸ್ತರಿಸಲಾಗಿದೆ. ಅಲ್ಲಿಂದೀಚೆಗೆ 98.31 ಎಲ್.ಎಂ.ಟಿ. ಆಹಾರಧಾನ್ಯವನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈವರೆಗೆ ಎತ್ತುವಳಿ ಮಾಡಿವೆ. ಜುಲೈ 20ರಲ್ಲಿ 36.09 ಎಲ್.ಎಂ.ಟಿ. ಆಹಾರ ಧಾನ್ಯವನ್ನು 72.18 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ, ಆಗಸ್ಟ್ 20ರಲ್ಲಿ 30.22 ಎಲ್.ಎಂ.ಟಿ.ಯನ್ನು 60.44 ಕೋಟಿ ಫಲಾನುಭವಿಗಳಿಗೆ ಮತ್ತು ಸೆಪ್ಟೆಂಬರ್ 20ರಲ್ಲಿ 2020 ಸೆಪ್ಟೆಂಬರ್ 7ರವರೆಗೆ 1.92 ಎಲ್.ಎಂ.ಟಿ.ಯನ್ನು 3.84 ಕೋಟಿ ಫಲಾನುಭವಿಗಳಿಗೆ ವಿತರಸಲಾಗಿದೆ.
  2. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ, ಒಟ್ಟು 5.43 ಎಲ್.ಎಂ.ಟಿ. ದ್ವಿದಳ ಧಾನ್ಯವನ್ನು 2020 ಏಪ್ರಿಲ್-ಜೂನ್ ಅವಧಿಯಲ್ಲಿ 18.8 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಯೋಜನೆಯನ್ನು ಸಹ ಕಡಲೆಕಾಳು ವಿತರಣೆಗಾಗಿ 5 ತಿಂಗಳುಗಳ ಕಾಲ ಅಂದರೆ 2020 ನವೆಂಬರ್ ವರೆಗೆ ವಿಸ್ತರಿಸಲಾಗಿದೆ. 4.6 ಎಲ್.ಎಂ.ಟಿ. ಕಡಲೆಕಾಳನ್ನು ಈವರೆಗೆ ರವಾನಿಸಲಾಗಿದೆ. ಜುಲೈನಲ್ಲಿ 1.03 ಎಲ್.ಎಂ.ಟಿ. ಕಡಲೆಕಾಳನ್ನು 10.3 ಕೋಟಿ ಫಲಾನುಭವಿ ಕುಟುಂಬಗಳಿಗೆ, ಆಗಸ್ಟ್ ನಲ್ಲಿ 23,258 ಎಂ.ಟಿ. ಕಡಲೆಕಾಳನ್ನು 2.3 ಕೋಟಿ ಫಲಾನುಭವಿ ಕುಟುಂಬಗಳಿಗೆ ಮತ್ತು 2020 ಸೆಪ್ಟೆಂಬರ್ 7ರವರೆಗೆ 1475 ಎಂ.ಟಿ ಕಡಲೆಕಾಳನ್ನು 15 ಲಕ್ಷ ಫಲಾನುಭವಿ ಕುಟುಂಬಗಳಿಗೆ ವಿತರಿಸಲಾಗಿದೆ. 86 ಎಂ.ಟಿ ಕಾಳನ್ನು 0.008 ಕೋಟಿ ಫಲಾನುಭವಿ ಕುಟುಂಬಗಳಿಗೆ ಅಕ್ಟೋಬರ್ ತಿಂಗಳಿಗಾಗಿ ಮತ್ತು 40 ಎಂ.ಟಿಯನ್ನು 0.004 ಕೋಟಿ ಫಲಾನುಭವಿ ಕುಟುಂಬಗಳಿಗೆ ನವೆಂಬರ್ ತಿಂಗಳಿಗಾಗಿ ವಿತರಿಸಲಾಗಿದೆ.
  3. ಆತ್ಮ ನಿರ್ಭರ ಭಾರತ, ಅಡಿಯಲ್ಲಿ ಸರ್ಕಾರ ಉಚಿತ ಆಹಾರ ಧಾನ್ಯ ಮತ್ತು ಕಡಲೆಕಾಳನ್ನು 2 ತಿಂಗಳುಗಳ ಕಾಲ ವಲಸೆ ಕಾರ್ಮಿಕರಿಗೆ ಪೂರೈಸುವುದಾಗಿ ಘೋಷಿಸಿದೆ. ರಾಜ್ಯಗಳು ಪೂರೈಸಿದ ವಲಸಿಗರ ಅಂದಾಜು ಸಂಖ್ಯೆ 2.8 ಕೋಟಿ. ಆಗಸ್ಟ್ ವರೆಗಿನ ವಿತರಣಾ ಅವಧಿಯಲ್ಲಿ, 5.32 ಕೋಟಿ ವಲಸಿಗರಿಗೆ ಒಟ್ಟು 2.67 ಎಲ್.ಎಂಟಿ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಇದು ತಿಂಗಳಿಗೆ ಸರಾಸರಿ 2.66 ಕೋಟಿ ಫಲಾನುಭವಿಗಳಾಗುತ್ತದೆ, ಇದು ವಲಸಿಗರ ಅಂದಾಜು ಸಂಖ್ಯೆಯ ಸುಮಾರು ಶೇ.95 ರಷ್ಟಾಗುತ್ತದೆ. ಅಂತೆಯೇ, ಆತ್ಮ ನಿರ್ಭರ್ ಭಾರತ ಅಡಿಯಲ್ಲಿ, ಒಟ್ಟು ಕಡಲೆಕಾಳು ವಿತರಣೆಯ ಪ್ರಮಾಣವು 16,417 ಎಂ.ಟಿ.ಯಿಂದ 1.64 ಕೋಟಿ ವಲಸೆ ಕುಟುಂಬಗಳಿಗೆ ಹೆಚ್ಚಿದೆ, ಇದು ಮಾಸಿಕ ಸರಾಸರಿ 82 ಲಕ್ಷ ಕುಟುಂಬಗಳಾಗುತ್ತವೆ.
  • ಒಟ್ಟು 8.52 ಕೋಟಿ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂ.ಯುವೈ) ಸಿಲಿಂಡರ್ ಗಳನ್ನು ಬುಕ್ ಮಾಡಲಾಗಿದ್ದು, ಯೋಜನೆಯಡಿ ಏಪ್ರಿಲ್ ಮತ್ತು ಮೇ 2020ರಲ್ಲಿ ವಿತರಿಸಲಾಗಿದೆ. ಈವರೆಗೆ 3.27 ಕೋಟಿ ಪಿಎಂಯುವೈ ಉಚಿತ ಸಿಲಿಂಡರ್ ಗಳನ್ನು ಫಲಾನುಭವಿಗಳಿಗೆ ಜೂನ್ 2020ರಲ್ಲಿ ವಿತರಿಸಲಾಗಿದ್ದರೆ, 1.05 ಕೋಟಿಯನ್ನು ಜುಲೈ 2020ರಲ್ಲಿ, 0.89 ಕೋಟಿ ಆಗಸ್ಟ್ ನಲ್ಲಿ ಮತ್ತು 0.15 ಕೋಟಿ ಸೆಪ್ಟೆಂಬರ್ 2020ರಲ್ಲಿ ವಿತರಿಸಲಾಗಿದೆ.
  • .ಪಿ.ಎಫ್.. ಖಾತೆ ಹೊಂದಿರುವ 36.05 ಲಕ್ಷ ಸದಸ್ಯರು ಆನ್ ಲೈನ್ ಮೂಲಕ ಮತ್ತೆ ಹಿಂತಿರುಗಿಸಲಾಗದ ಇಪಿಎಫ್. ಮುಂಗಡ ರೂ.9,543 ಕೋಟಿ ಹಣ ಹಿಂಪಡೆದಿದ್ದಾರೆ.
  • ಶೇ.24 ಇಪಿಎಫ್ ವಂತಿಗೆಯನ್ನು 0.43 ಕೋಟಿ ನೌಕರರಿಗೆ ಸುಮಾರು 2,476 ಕೋಟಿಯಷ್ಟು ವರ್ಗಾವಣೆ ಮಾಡಲಾಗಿದೆ. ಮಾರ್ಚ್ ಸೌಲಭ್ಯವನ್ನು 34.29 ಲಕ್ಷ ನೌಕರರಿಗೆ ಸುಮಾರು 514.6 ಕೋಟಿ ನೀಡಿದ್ದರೆ, ಏಪ್ರಿಲ್ ನಲ್ಲಿ 32.87 ಲಕ್ಷ ನೌಕರರಿಗೆ 500.8 ಕೋಟಿ ರೂ. ಮೇ ಗಾಗಿ 32.68 ಲಕ್ಷ ನೌಕರರಿಗೆ 482.6 ಕೋಟಿ, ಜೂನ್ ಗಾಗಿ 32.21 ಲಕ್ಷ ನೌಕರರಿಗೆ 491.5 ಕೋಟಿ, ಜುಲೈನಲ್ಲಿ 30.01 ಲಕ್ಷ ನೌಕರರಿಗೆ 461.9 ಕೋಟಿ ಹಾಗೂ ಆಗಸ್ಟ್ ನಲ್ಲಿ 1.77 ಲಕ್ಷ ನೌಕರರಿಗೆ 24.74 ಕೋಟಿ ವಿತರಿಸಲಾಗಿದೆ.
  • ಎಂ.ಎನ್..ಆರ್.ಜಿ..: 1.4.2020ರಿಂದ ಅನ್ವಯವಾಗುವಂತೆ ಹೆಚ್ಚಿನ ದರ ಅಧಿಸೂಚಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 195.21 ಕೋಟಿ ಜನರಿಂದ ಕೆಲಸದ ಮಾನವ ದಿನ ಸೃಷ್ಟಿಸಲಾಗಿದೆ..59,618 ಕೋಟಿ ರೂ.ಗಳನ್ನು ರಾಜ್ಯಗಳಿಗೆ ಕೂಲಿ ಮತ್ತು ಸರಕಿನ ಬಾಕಿ ಪಾವತಿಗಾಗಿ ಬಿಡುಗಡೆ ಮಾಡಲಾಗಿದೆ.
  • ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಅಡಿಯಲ್ಲಿ, ರಾಜ್ಯಗಳಿಗೆ ನಿಧಿಯ ಶೇ.30ರಷ್ಟು ವೆಚ್ಚ ಮಾಡಲು ತಿಳಿಸಲಾಗಿದ್ದು, ಇದರ ಮೊತ್ತವೇ 3,787 ಕೋಟಿ ರೂ. ಆಗುತ್ತದೆ ಮತ್ತು 343.66 ಕೋಟಿ ರೂ.ಗಳನ್ನು ಈವರೆಗೆ ವೆಚ್ಚ ಮಾಡಲಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್

ಒಟ್ಟು ನೇರ ಸವಲತ್ತು ವರ್ಗಾವರೆ 7/09/2020ರವರೆಗೆ

ಯೋಜನೆ

ಫಲಾನುಭವಿಗಳ ಸಂಖ್ಯೆ

ಮೊತ್ತ

ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆ ಬೆಂಬಲ

1ನೇ ಕಂತು - 20.65 ಕೋಟಿ (100%)

2ನೇಕಂತು – 20.63 ಕೋಟಿ

3ನೇ ಕಂತು - 20.62 (100%)

1 ನೇ ಕಂತು – 10,325 ಕೋಟಿ

2 ನೇ ಕಂತು – 10,315 ಕೋಟಿ

3 ನೇ ಕಂತು – 10,312 ಕೋಟಿ

ಎನ್.ಎಸ್..ಪಿ. (ವಯೋವೃದ್ಧ ವಿಧವೆಯರು, ದಿವ್ಯಾಂಗದವರು, ಹಿರಿಯ ನಾಗರಿಕರು)

2.81 ಕೋಟಿ (ಶೇ.100)

2814 ಕೋಟಿ

ರೈತರಿಗೆ ಪಿಎಂ-ಕಿಸಾನ್ ಅಡಿ ಕಂತಿನ ಪಾವತಿ

8.94 ಕೋಟಿ

17891 ಕೋಟಿ

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಬೆಂಬಲ

1.82 ಕೋಟಿ

4987 ಕೋಟಿ

ಶೇ.24 ವಂತಿಗೆ ಇಪಿಎಫ್..ಗೆ

.43 ಕೋಟಿ

2476 ಕೋಟಿ

ಪ್ರಧಾನಮಂತ್ರಿ ಉಜ್ವಲ ಯೋಜನೆ

1 ನೇ ಕಂತು – 7.43ಕೋಟಿ

2 ನೇ ಕಂತು – 4.43 ಕೋಟಿ

3 ನೇ ಕಂತು – 1.82ಕೋಟಿ

9700 ಕೋಟಿ

ಒಟ್ಟು

42.08 ಕೋಟಿ

68820 ಕೋಟಿ

***


(Release ID: 1652292) Visitor Counter : 278