ಚುನಾವಣಾ ಆಯೋಗ

ವಿವಿಧ ರಾಜ್ಯಗಳಲ್ಲಿ ವಿಧಾನಸಭಾ/ ಲೋಕಸಭಾ ಉಪ ಚುನಾವಣೆ ಕುರಿತ ಚುಣಾವಣಾ ಆಯೋಗದ ಸಭೆ

Posted On: 04 SEP 2020 2:41PM by PIB Bengaluru

ವಿವಿಧ ರಾಜ್ಯಗಳಲ್ಲಿ ಬಾಕಿ ಇರುವ ಉಪ ಚುನಾವಣೆಗಳ  ನಡೆಸುವ ಕುರಿತು  ಚುನಾವಣಾ ಆಯೋಗದ ಸಭೆ ಇಂದು ನಡೆಯಿತು. ಪ್ರಸ್ತುತ 65 ವಿಧಾನಸಭೆ/ಲೋಕಸಭಾ ಕ್ಷೇತ್ರಗಳು ತೆರವಾಗಿದ್ದು, ಇವುಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಈ ಪೈಕಿ 64 ಖಾಲಿ ಸ್ಥಾನಗಳು ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಾಗಿವೆ ಮತ್ತು ಒಂದು  ಲೋಕಸಭಾ ಕ್ಷೇತ್ರವಾಗಿದೆ.
ಆಯೋಗ, ಸಂಬಂಧಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ಮುಖ್ಯ ಚುನಾವಣಾಧಿಕಾರಿಗಳು  ತಮ್ಮ ರಾಜ್ಯಗಳಲ್ಲಿ  ಭಾರೀ ಮಳೆ ಹಾಗೂ ಸಾಂಕ್ರಾಮಿಕ ಇತ್ಯಾದಿ ತೊಡಕುಗಳ ಹಿನ್ನೆಲೆಯಲ್ಲಿ  ಉಪಚುನಾವಣೆಯನ್ನು ಮುಂದೂಡುವಂತೆ ಕೋರಿ ಕಳುಹಿಸಿರುವ ವರದಿಗಳು ಮತ್ತು ಅಭಿಪ್ರಾಯಗಳ ಪರಾಮರ್ಶೆ ನಡೆಸಿತು.

ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಕೂಡ ಬಾಕಿ ಇದ್ದು, 2020ರ ನವೆಂಬರ್ 29ಕ್ಕೆ ಮೊದಲು ಅದು ಪೂರ್ಣಗೊಳ್ಳಬೇಕಾಗಿದೆ ಎಂಬುದನ್ನೂ ಪರಿಗಣಿಸಿದ ಆಯೋಗ, ಎಲ್ಲ 65 ಕ್ಷೇತ್ರಗಳ ಉಪ ಚುನಾವಣೆ ಮತ್ತು ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆಯನ್ನು ಏಕ ಕಾಲದಲ್ಲೇ ನಡೆಸುವ ನಿರ್ಧಾರ ಕೈಗೊಂಡಿತು

ಈ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದರಿಂದ ಆಗುವ ಪ್ರಮುಖ ಪ್ರಯೋಜನವೆಂದರೆ ಸಿಎಪಿಎಫ್ ನ / ಇತರ ಕಾನೂನು ಮತ್ತು ಸುವ್ಯವಸ್ಥೆ ಪಡೆಗಳ ಹಾಗೂ ಸಂಬಂಧಿತ ಸಾರಿಗೆ ಸಾಗಾಟ  ಸುಲಭವಾಗುತ್ತದೆ.  

ಬಿಹಾರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತ್ತು ಈ ಉಪಚುನಾವಣೆಗಳ ವೇಳಾಪಟ್ಟಿಯನ್ನು ಆಯೋಗವು ಸೂಕ್ತ ಸಮಯದಲ್ಲಿ ಪ್ರಕಟಿಸಲಿದೆ.

***


(Release ID: 1651275) Visitor Counter : 268