ಪ್ರಧಾನ ಮಂತ್ರಿಯವರ ಕಛೇರಿ
ಕರ್ಮಯೋಗಿ ಯೋಜನೆ ಸರ್ಕಾರದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯನ್ನು ಆಮೂಲಾಗ್ರವಾಗಿ ಬದಲಾಯಿಸಲಿದೆ: ಪ್ರಧಾನಿ ನರೇಂದ್ರ ಮೋದಿ
ಐ ಜಿಓಟಿ ವೇದಿಕೆ ಪಾತ್ರಾಧಾರಿತ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ನಿರಂತರ ಕಲಿಕೆಗೆ ಅವಕಾಶ ಕಲ್ಪಿಸಲಿದೆ
ಪ್ರಕಟಣಾ ದಿನಾಂಕ:
02 SEP 2020 7:48PM by PIB Bengaluru
ನಾಗರಿಕ ಸೇವೆಗಳ ಸಾಮರ್ಥ್ಯವರ್ಧನೆಯ ರಾಷ್ಟ್ರೀಯ ಕಾರ್ಯಕ್ರಮ ಸರ್ಕಾರದಲ್ಲಿರುವ ಮಾನವ ಸಂಪನ್ಮೂಲ ನಿರ್ವಹಣೆಯ ರೂಢಿಗಳನ್ನು ಆಮೂಲಾಗ್ರವಾಗಿ ಸುಧಾರಣೆ ಮಾಡಲಿದೆ. ಇದು ನಾಗರಿಕ ಸೇವಕರ ಸಾಮರ್ಥ್ಯ ಹೆಚ್ಚಿಸಲು ಸುಸಜ್ಜಿತ ಮೂಲಸೌಕರ್ಯವನ್ನು ಹೆಚ್ಚಿಸಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಐ ಜಿಓಟಿ ವೇದಿಕೆಯು ಪಾತ್ರಾಧಾರಿತ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ನಿರಂತರ ಕಲಿಕೆಯ ಬದಲಾವಣೆಗೆ ಅವಕಾಶ ಕಲ್ಪಿಸಲಿದೆ. ಕರ್ಮಯೋಗಿ ಯೋಜನೆ ನಾಗರಿಕ ಸೇವಕರನ್ನು ತಂತ್ರಜ್ಞಾನ ಮತ್ತು ಪಾರದರ್ಶಕತೆಯೊಂದಿಗೆ ಹೆಚ್ಚು ಸೃಜನಶೀಲ, ರಚನಾತ್ಮಕ ಮತ್ತು ನಾವಿನ್ಯಪೂರ್ಣಗೊಳಿಸಿ ಭವಿಷ್ಯಕ್ಕೆ ಸನ್ನದ್ಧಗೊಳಿಸಲಿದೆ” ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1650787)
ವಿಸಿಟರ್ ಕೌಂಟರ್ : 273
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam