ಸಂಪುಟ

ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಫಿನ್‌ ಲ್ಯಾಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 02 SEP 2020 4:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗಣಿ ಸಚಿವಾಲಯದ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣೆ ಮತ್ತು ಫಿನ್ ಲ್ಯಾಂಡ್ ಸರ್ಕಾರದ ಉದ್ಯೋಗ ಮತ್ತು ಆರ್ಥಿಕತೆ ಸಚಿವಾಲಯದ ಫಿನ್ ಲ್ಯಾಂಡ್ ನ ಭೂ ವಿಜ್ಞಾನ ಸರ್ವೇಷಣಾಲಯ(Geologiantutkimuskeskus) ದ ನಡುವೆ ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದ, ಎರಡು ಸಂಸ್ಥೆಗಳ ನಡುವಿನ ವೈಜ್ಞಾನಿಕ ಸಂಪರ್ಕಗಳನ್ನು ಬಲಪಡಿಸುವ ಮತ್ತು ಪುನರ್ ಬಲಗೊಳಿಸುವ ಉದ್ದೇಶದಿಂದ ಆಖೈರುಗೊಳಿಸಲಾದ ಭೂವಿಜ್ಞಾನ, ತರಬೇತಿ, ಖನಿಜ ಮುನ್ಸೂಚನೆ ಮತ್ತು ಸೂಕ್ತತೆ ವಿಶ್ಲೇಷಣೆ, 3/4 ಡಿ ಮಾಡೆಲಿಂಗ್, ಭೂಕಂಪ ಮತ್ತು ಇತರ ಭೂ ಭೌತಶಾಸ್ತ್ರದ ಸಮೀಕ್ಷೆಗಳಲ್ಲಿ ಸಹಕಾರಕ್ಕೆ ಅವಕಾಶ ಕಲ್ಪಿಸುತ್ತದೆ.

ಈ ಒಪ್ಪಂದವು ಪರಸ್ಪರ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಲಾಭಕ್ಕಾಗಿ ಪಾಲ್ಗೊಳ್ಳುವವರ ನಡುವೆ ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಒಂದು ಚೌಕಟ್ಟು ಮತ್ತು ವೇದಿಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ; ಹಾಗೂ ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲಗಳ ಕ್ಷೇತ್ರಗಳಲ್ಲಿನ ಪರಿಶೋಧನೆ ಮತ್ತು ಗಣಿಗಾರಿಕೆಯನ್ನು ಉತ್ತೇಜಿಸಲು ಭೂವೈಜ್ಞಾನಿಕ ದತ್ತಾಂಶ ನಿರ್ವಹಣೆ ಮತ್ತು ಮಾಹಿತಿ ಪ್ರಸರಣದ ಅನುಭವಗಳನ್ನು ಹಂಚಿಕೊಳ್ಳಲಿದೆ.

ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ (ಜಿಎಸ್.ಐ) ಸಂಸ್ಥೆ, ರಾಷ್ಟ್ರೀಯ ಭೂ ವೈಜ್ಞಾನಿಕ ಮಾಹಿತಿ ಮತ್ತು ಖನಿಜ ಸಂಪನ್ಮೂಲ ಮೌಲ್ಯಮಾಪನದ ರಚನೆ ಮತ್ತು ನವೀಕರಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸಂಸ್ಥೆಯಾಗಿದೆ. ಈ ಉದ್ದೇಶಗಳನ್ನು ಭೂ ಸರ್ವೇಕ್ಷಣೆ, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳು, ಖನಿಜ ನಿರೀಕ್ಷೆ ಮತ್ತು ಶೋಧಗಳು, ಬಹು-ಶಿಸ್ತೀಯ ಭೂವೈಜ್ಞಾನಿಕ, ಭೌಗೋಳಿಕ-ತಾಂತ್ರಿಕ, ಭೌಗೋಳಿಕ-ಪರಿಸರ ಮತ್ತು ನೈಸರ್ಗಿಕ ಅಪಾಯಗಳ ಅಧ್ಯಯನಗಳು, ಹಿಮನದಿಶಾಸ್ತ್ರ, ಭೂಕಂಪನ ಅಧ್ಯಯನ ಮತ್ತು ಮೂಲಭೂತ ಸಂಶೋಧನೆಗಳ ಮೂಲಕ ಸಾಧಿಸಲಾಗುತ್ತದೆ.

ಫಿನ್ ಲ್ಯಾಂಡ್ ನ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ. ಖನಿಜ ಮುನ್ಸೂಚನೆ, ಅಪಾಯ ನಿರ್ವಹಣೆ, ಪರಿಸರ ಪ್ರಭಾವದ ಮೌಲ್ಯಮಾಪನಕ್ಕಾಗಿ 3/4 ಡಿ ಮಾಡೆಲಿಂಗ್‌ಗೆ ವಿಶೇಷ ಒತ್ತು ನೀಡುವ ಪ್ರಾದೇಶಿಕ ವೇದಿಕೆಯನ್ನು ಬಳಸುವುದರೊಂದಿಗೆ ಬಹು ವಿಷಯ ದತ್ತಾಂಶ ಕ್ರೋಡೀಕರಣ ಮತ್ತು ವಿಶ್ಲೇಷಣೆಯಲ್ಲಿ ಮತ್ತು ಸಾಮಾಜಿಕ-ಆರ್ಥಿಕ ಪ್ರಾಮುಖ್ಯತೆಯ ಇತರ ಕ್ಷೇತ್ರಗಳು ಮತ್ತು ಅಭಿವೃದ್ಧಿ ಬೆಂಬಲ ನಿರ್ಧಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು, ಜಿಐಎಸ್ ಆಧಾರಿತ ಮಾಡೆಲಿಂಗ್‌ ನ ಕನಿಷ್ಠ ಜ್ಞಾನ ಹೊಂದಿರುವ ಬಳಕೆದಾರರು ಬಳಸುವಂತೆ ಮಾಡುವಲ್ಲಿ ಪರಿಣತಿಯನ್ನು ಪಡೆದಿದೆ.

***



(Release ID: 1650657) Visitor Counter : 281