ಗೃಹ ವ್ಯವಹಾರಗಳ ಸಚಿವಾಲಯ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೌರವಾರ್ಥ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ

Posted On: 31 AUG 2020 7:27PM by PIB Bengaluru

ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ನವದೆಹಲಿಯ ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಯಲ್ಲಿ 2020 ಆಗಸ್ಟ್ 31ರಂದು ನಿಧನರಾದರೆಂದು ಭಾರತ ಸರ್ಕಾರ ಅತೀವ ದುಃಖದೊಂದಿಗೆ ಪ್ರಕಟಿಸಿದೆ.

ಅಗಲಿದ ಗಣ್ಯರ ಗೌರವಾರ್ಥ 31.08.2020 ರಿಂದ 06.09.2020ರವರೆಗೆ ಎರಡೂ ದಿನಗಳು ಸೇರಿದಂತೆ ಭಾರತದಾದ್ಯಂತ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ನಡೆಸಲಾಗುತ್ತದೆ. ರಾಷ್ಟ್ರೀಯ ಶೋಕಾಚರಣೆಯ ಅವಧಿಯಲ್ಲಿ ದೇಶದಾದ್ಯಂತ ಎಲ್ಲೆಲ್ಲಿ ನಿಯಮಿತವಾಗಿ ರಾಷ್ಟ್ರಧ್ವಜ ಹಾರಿಸಲಾಗುತ್ತದೆಯೋ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಲಿದೆ ಮತ್ತು ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ.

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯುವ ಸಮಯ, ದಿನಾಂಕ, ಸ್ಥಳದ ಬಗ್ಗೆ ಆನಂತರ ತಿಳಿಸಲಾಗುವುದು.

***(Release ID: 1650119) Visitor Counter : 135