ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಸ್ವಚ್ಛತಾ ಕೇಂದ್ರ - ಸ್ವಚ್ಛ ಭಾರತ್ ಮಿಷನ್ ಅಡಿ ನಿರ್ಮಿಸಿರುವ ಸಂವಾದಾತ್ಮಕ ಅನುಭವ ಕೇಂದ್ರ- ಉದ್ಘಾಟಿಸಿದ ಪ್ರಧಾನಮಂತ್ರಿ

ಮಹಾತ್ಮ ಗಾಂಧಿ ಅವರಿಗೆ ಶಾಶ್ವತ ಗೌರವ ಸಲ್ಲಿಸಲು ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಲೋಕಾರ್ಪಣೆ ಮಾಡಿದ ಪ್ರಧಾನಿ ಸ್ವಚ್ಛತಾ ಆಂದೋಲನವನ್ನು ಜನಾಂದೋಲನವನ್ನಾಗಿ ಪರಿವರ್ತಿಸಿದ ಭಾರತದ ಜನತೆಯನ್ನು ಪ್ರಶಂಸಿಸಿದ ಪ್ರಧಾನಿ; ಭವಿಷ್ಯದಲ್ಲೂ ಅದನ್ನೇ ಮುಂದುವರಿಸಲು ಕರೆ; ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಒಂದು ವಾರದ ‘ಗಂಧ ಮುಕ್ತ ಭಾರತ’ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ

Posted On: 08 AUG 2020 5:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವದೆಹಲಿಯ ರಾಜ್ ಘಾಟ್ ನ ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿ ನಿರ್ಮಿಸಿರುವ ಸಂವಾದಾತ್ಮಕ ಅನುಭವ ಕೇಂದ್ರ- ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಇಂದು ಉದ್ಘಾಟಿಸಿದರು. ಈ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ(ಆರ್ ಎಸ್ ಕೆ) ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು ನಿರ್ಮಿಸಲಾಗಿದೆ. ಗಾಂಧೀಜಿ ಚಂಪಾರಣ್ ಸತ್ಯಾಗ್ರಹ ನಡೆಸಿದ ಶತಮಾನೋತ್ಸವ ಆಚರಣೆ ವೇಳೆ 2017ರ ಏಪ್ರಿಲ್ 10ರಂದು ಪ್ರಧಾನಮಂತ್ರಿ ಅವರು ಈ ಕೇಂದ್ರದ ನಿರ್ಮಾಣವನ್ನು ಪ್ರಕಟಿಸಿದ್ದರು. ಕಾರ್ಯಕ್ರಮದಲ್ಲಿ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೆಖಾವತ್, ಜಲಶಕ್ತಿ ರಾಜ್ಯ ಸಚಿವ ಶ್ರೀ ರತನ್ ಲಾಲ್ ಕಟಾರಿಯಾ ಅವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಚ್ಛತಾ ಕೇಂದ್ರಕ್ಕೆ ಭೇಟಿ

ಆರ್ ಎಸ್ ಕೆಯಲ್ಲಿ ಡಿಜಿಜಲ್ ಹಾಗೂ ಹೊರಾಂಗಣ ಪ್ರತಿಮೆಗಳ ಮಿಶ್ರಣವಿದ್ದುಅವು 2014ರಿಂದ 2019ರ ವರೆಗೆ ಬಯಲು ಬಹಿರ್ದೆಸೆ ಮುಕ್ತಗೊಳಿಸಿದ ನಿಟ್ಟಿನಲ್ಲಿ ತಮ್ಮ ನಡವಳಿಕೆಯನ್ನು ಬದಲಿಸಿಕೊಂಡ 50 ಕೋಟಿ ಜನರನ್ನು ಪ್ರತಿಬಿಂಬಿಸುತ್ತದೆಪ್ರಧಾನಮಂತ್ರಿ ಅವರುಆರ್ ಎಸ್ ಕೆಯ ಮೂರು ವಿಭಿನ್ನ ವಿಭಾಗಗಳಿಗೆ ಭೇಟಿ ನೀಡಿದ್ದರುಅವರು ಮೊದಲಿಗೆ ಸ್ವಚ್ಛ ಭಾರತ್ ಯೋಜನೆಯ ಪಯಣದ ಸ್ಥೂಲ ನೋಟ ನೀಡುವ ಒಂದನೇ ಸಭಾಂಗಣಕ್ಕೆ ಭೇಟಿ ನೀಡಿಅಲ್ಲಿ 360 ಡಿಗ್ರಿ ಆಡಿಯೋ ವಿಶುಯಲ್ ಪ್ರದರ್ಶನದ ವಿಭಿನ್ನ ಅನುಭವವನ್ನು ಪಡೆದರುನಂತರ ಎರಡನೇ ಸಭಾಂಗಣಕ್ಕೆ ಭೇಟಿ ನೀಡಿದ ಅವರುಅಲ್ಲಿನ ಸಂವಾದಾತ್ಮಕ ಎಲ್ಇಡಿ ಪ್ಯಾನಲ್, ಹಾಲೋಗ್ರಾಮ್ ಬಾಕ್ಸ್ ಗಳು ಸಂವಾದಾತ್ಮಕ ಕ್ರೀಡೆಗಳು ಮತ್ತು ಸ್ವಚ್ಛ ಭಾರತ್ ಮಿಷನ್ ಕುರಿತ ಹಲವು ಅಂಶಗಳನ್ನು ವೀಕ್ಷಿಸಿದರುಅಲ್ಲದೆ ಪ್ರಧಾನಮಂತ್ರಿ ಅವರು ಆರ್ ಎಸ್ ಕೆಗೆ ಹೊಂದಿಕೊಂಡಿರುವ ಹುಲ್ಲುಗಾವಲಿನ ಮೇಲಿನ ಅಳವಡಿಸಿರುವ ಪ್ರದರ್ಶನಗಳನ್ನು ವೀಕ್ಷಿಸಿದರುಅವು ಸ್ವಚ್ಛ ಭಾರತ್ ನೊಂದಿಗೆ ಥಳುಕು ಹಾಕಿಕೊಂಡಿದ್ದುಮಹಾತ್ಮ ಗಾಂಧೀಜಿ ಜನರನ್ನು ಸ್ವಚ್ಛತೆಯ ಪ್ರತಿಜ್ಞೆಯೊಂದಿಗೆ ಮುನ್ನಡೆಸುತ್ತಿರುವುದು ಗ್ರಾಮೀಣ ಜಾರ್ಖಂಡ್ ನ ರಾಣಿ ಮಿಸ್ಟ್ರೀಸ್ ಗಳು ಮತ್ತು ತಮ್ಮನ್ನು ತಾವು ವಾನರ ಸೇನೆ ಎಂದು ಕರೆದುಕೊಳ್ಳುವ ಬಾಲಸ್ವಚ್ಛಾಗ್ರಹಿಗಳನ್ನು ಕಾಣಬಹುದು.

ಶಾಲಾ ಮಕ್ಕಳೊಂದಿಗೆ ಸಂವಾದ

ಇಡೀ ಆರ್ ಎಸ್ ಕೆಗೆ ಭೇಟಿ ನೀಡಿದ ನಂತರ ಪ್ರಧಾನಮಂತ್ರಿ ಅವರುಸ್ಮಾರಕ ಕೇಂದ್ರಕ್ಕೆ ಭೇಟಿ ನೀಡಿದ್ದರುನಂತರ ಅವರು ದೆಹಲಿ ಹಾಗೂ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ 36 ಶಾಲಾ ವಿದ್ಯಾರ್ಥಿಗಳೊಂದಿಗೆ ಸಾಮಾಜಿಕ ಅಂತರ ಶಿಷ್ಟಾಚಾರಗಳನ್ನು ಪಾಲಿಸಿಆರ್ ಎಸ್ ಕೆ ಆಂಪಿಥಿಯೇಟರ್ ನಲ್ಲಿ ಸಂವಾದ ನಡೆಸಿದರುಮಕ್ಕಳು ತಮ್ಮ ಮನೆಗಳಲ್ಲಿಶಾಲೆಗಳಲ್ಲಿ ಕೈಗೊಂಡ ಸ್ವಚ್ಛತಾ ಚಟುವಟಿಕೆಗಳು ಮತ್ತು ಅನುಭವಗಳನ್ನು ಹಾಗೂ ಆರ್ ಎಸ್ ಕೆ ಕುರಿತ ಅನಿಸಿಕೆಗಳನ್ನು ಹಂಚಿಕೊಂಡರುಓರ್ವ ಬಾಲಕ ಪ್ರಧಾನಮಂತ್ರಿ ಅವರನ್ನು ಆರ್ ಎಸ್ ಕೆಯಲ್ಲಿನ ನಿಮ್ಮ ನೆಚ್ಚಿನ ವಿಭಾಗ ಯಾವುದು ಎಂದು ಪ್ರಶ್ನಿಸಿದರುಅದಕ್ಕೆ ಪ್ರಧಾನಿ ಅವರುಸ್ವಚ್ಛತಾ ಭಾರತ್ ಮಿಷನ್ ಯೋಜನೆಗೆ ಸ್ಫೂರ್ತಿಯಾದ ಮಹಾತ್ಮ ಗಾಂಧೀಜಿ ಅವರಿಗೆ ಸಮರ್ಪಿಸಿರುವ ವಿಭಾಗ ಹೆಚ್ಚು ಖುಷಿ ಕೊಟ್ಟಿತು ಎಂದು ಹೇಳಿದರು.

ರಾಷ್ಟ್ರವನ್ನುದ್ದೇಶಿಸಿ ಭಾಷಣ

ಮಕ್ಕಳೊಂದಿಗೆ ಸಂವಾದ ನಡೆಸಿದ ನಂತರ ಪ್ರಧಾನಮಂತ್ರಿ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಿ ಅವರು, ಸ್ವಚ್ಛ ಭಾರತ್ ಮಿಷನ್ ಪಯಣವನ್ನು ನೆನಪಿಸಿಕೊಂಡರು ಮತ್ತು ಆರ್ ಎಸ್ ಕೆಯನ್ನು ಮಹಾತ್ಮ ಗಾಂಧೀಜಿ ಅವರಿಗೆ ಶಾಶ್ವತ ಗೌರವ ಪೂರ್ವಕವಾಗಿ ಸಮರ್ಪಿಸುತ್ತಿರುವುದಾಗಿ ಹೇಳಿದರು. ಸ್ವಚ್ಛತಾ ಆಂದೋಲನವನ್ನು ಜನಾಂದೋಲನವನ್ನಾಗಿ ಪರಿವರ್ತಿಸಿದ್ದಕ್ಕೆ ಭಾರತದ ಜನತೆಯನ್ನು ಅಭಿನಂದಿಸಿದ ಅವರು, ಭವಿಷ್ಯದಲ್ಲೂ ಅದನ್ನೇ ಮುಂದುವರಿಸಿಕೊಂಡು ಹೋಗುವಂತೆ ಕರೆ ನೀಡಿದರು. ನಮ್ಮ ದಿನನಿತ್ಯದ ಜೀವನದಲ್ಲಿ ವಿಶೇಷವಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಅವರು ಪುನರುಚ್ಚರಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಒಂದು ವಾರದ ವಿಶೇಷ ಸ್ವಚ್ಛತಾ ಅಭಿಯಾನ ‘ಗಂಧಮುಕ್ತ ಭಾರತ’ಕ್ಕೆ ಚಾಲನೆ ನೀಡಿದರು. ಅದರಡಿ ಆಗಸ್ಟ್ 15ರ ವರೆಗೆ ಪ್ರತಿ ದಿನ ನಗರ ಮತ್ತು ಗ್ರಾಮೀಣ ಭಾರತದಲ್ಲಿ ಸ್ವಚ್ಛತೆಗಾಗಿ ಜನಾಂದೋಲನದ ಮೂಲಕ ವಿಶೇಷ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

ರಾಷ್ಟ್ರೀಯ ಸ್ವಚ್ಛತಾ ಕೇಂದ್ರಕ್ಕೆ ಭೇಟಿ

ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಆಗಸ್ಟ್ 9 ರಿಂದ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ತೆರೆದಿರುತ್ತದೆ. ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಶುಚಿತ್ವ ಸೇರಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರ್ ಎಸ್ ಕೆಗೆ ಭೇಟಿ ನೀಡುವ ಜನರ ಸಂಖ್ಯೆಯನ್ನು ಸೀಮಿತ ಅವಧಿಯವರೆಗೆ ಮಿತಿಗೊಳಿಸಲಾಗುವುದು. ಸದ್ಯಕ್ಕೆ ಶಾಲಾ ಮಕ್ಕಳ ಪ್ರವಾಸಗಳನ್ನು ಸಂಘಟಿಸುವಂತಿಲ್ಲ. ಭೌತಿಕ ಪ್ರವಾಸ ಆರಂಭವಾಗುವವರೆಗೆ ಆರ್ ಎಸ್ ಕೆಗೆ ವರ್ಚುಯಲ್ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ವರ್ಚುಯಲ್ ಪ್ರವಾಸ ಆಗಸ್ಟ್ 13ರಂದು ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಅವರೊಂದಿಗೆ ಆಯೋಜಿಸಲಾಗಿದೆ. ಆರ್ ಎಸ್ ಕೆಗೆ  ಭೇಟಿ ನೀಡಲಿಚ್ಛಿಸುವವರು ಟಿಕೆಟ್ ಕಾಯ್ದಿರಿಸುವುದು 



(Release ID: 1644803) Visitor Counter : 203