ಪ್ರಧಾನ ಮಂತ್ರಿಯವರ ಕಛೇರಿ

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020 ಗ್ರಾಂಡ್ ಫಿನಾಲೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 01 AUG 2020 8:21PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ 2020 - 21ನೇ ಶತಮಾನದ ಯುವಜನರ ಆಶೋತ್ತರಗಳನ್ನು ಬಿಂಬಿಸುತ್ತದೆ: ಪ್ರಧಾನಮಂತ್ರಿ

ಎನ್..ಪಿ. ಪರಿವರ್ತನಾತ್ಮಕ ಸುಧಾರಣೆಯ ಗುರಿ ಹೊಂದಿದೆ;

ಕೆಲಸ ಕೇಳುವವರ ಬದಲಾಗಿ, ಉದ್ಯೋಗದಾತರನ್ನು ನಿರ್ಮಿಸುವತ್ತ ಗಮನ ಹರಿಸಿದೆ: ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020 ಗ್ರ್ಯಾಂಡ್ ಫಿನಾಲೆ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶ ಎದುರಿಸುತ್ತಿರುವ ವಿವಿಧ ಸವಾಲುಗಳಿಗೆ ಪರಿಹಾರ ಹುಡುಕಲು ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ ಎಂದರು. ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜೊತೆಗೆ, ಇದು ದತ್ತಾಂಶ, ಡಿಜಿಟಲೀಕರಣ ಮತ್ತು ಹೈಟೆಕ್ ಭವಿಷ್ಯಕ್ಕೆ ಸಂಬಂಧಿಸಿದಂತೆ ಭಾರತದ ಆಶೋತ್ತರಗಳನ್ನೂ ಈಡೇರಿಸುತ್ತದೆ ಎಂದರು. ತ್ವರಿತವಾಗಿ ಬದಲಾಗುತ್ತಿರುವ 21ನೇ ಶತಮಾನದಲ್ಲಿ, ಭಾರತ ಸಹ ತನ್ನ ಪಾತ್ರದ ನಿರ್ವಹಣೆಯ ಮುಂದುವರಿಕೆಗಾಗಿ ತ್ವರಿತವಾಗಿ ಬದಲಾಗಬೇಕು ಎಂದ ಪ್ರಧಾನಮಂತ್ರಿಯವರು, ಇದಕ್ಕಾಗಿ ದೇಶದಲ್ಲಿ ಅಗತ್ಯವಾದ ನಾವಿನ್ಯ, ಸಂಶೋಧನೆ, ವಿನ್ಯಾಸ, ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಅಗತ್ಯ ಪರಿಸರ ನಿರ್ಮಿಸಬೇಕೆಂದರು. ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಆಧುನಿಕಗೊಳಿಸುವ ಮತ್ತು ಪ್ರತಿಭೆಗೆ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, 21ನೇ ಶತಮಾನದ ಯುವಜನರ ಆಶೋತ್ತರ ಮತ್ತು ಭರವಸೆಗಳನ್ನು ಗಮನದಲ್ಲಿಟ್ಟುಕೊಂಡು ಕರಡು ಸಿದ್ಧಪಡಿಸಲಾಗಿದೆ ಎಂದರು. ಇದು ಕೇವಲ ಒಂದು ನೀತಿಯ ದಸ್ತಾವೇಜಷ್ಟೇ ಅಲ್ಲ, 130ಕೋಟಿ ಜನರ ಆಕಾಂಕ್ಷೆಗಳ ಪ್ರತಿಬಿಂಬ ಎಂದು ಬಣ್ಣಿಸಿದರು. ಇಂದಿಗೂ ಹಲವು ವಿದ್ಯಾರ್ಥಿಗಳು ತಮಗೆ ಆಸಕ್ತಿ ಇಲ್ಲದೆ ಇರುವ ವಿಷಯದ ಆಧಾರದ ಮೇಲೆ ತಮ್ಮನ್ನು ಅಳೆಯಲಾಗುತ್ತಿದೆ ಎಂದು ನೋವು ವ್ಯಕ್ತಪಡಿಸುತ್ತಾರೆ. ಪಾಲಕರ ಬಂಧು, ಮಿತ್ರರ ಒತ್ತಡದಿಂದ ಮಕ್ಕಳು ಬಲವಂತವಾಗಿ ಇತರರು ಆಯ್ಕೆ ಮಾಡಿದ ವಿಷಯವನ್ನು ಕಲಿಯುತ್ತಿದ್ದಾರೆ. ಇದರ ಪರಿಣಾಮ ಜನಸಂಖ್ಯೆಯ ಮೇಲೆ ಆಗಿದೆ, ಅದು ಸುಶಿಕ್ಷಿತವಾಗಿದೆ, ಆದರೆ ಅವರು ಓದಿದ ಹೆಚ್ಚಿನ ವಿಷಯ ಅವರಿಗೆ ಉಪಯುಕ್ತವಲ್ಲ.ಎಂದರು. ಹೊಸ ಶಿಕ್ಷಣ ನೀತಿ, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯವಸ್ಥಿತ ಸುಧಾರಣೆಯ ದೃಷ್ಟಿಕೋನದೊಂದಿಗೆ ಬದಲಾವಣೆ ಬಯಸುತ್ತದೆ ಮತ್ತು ಉದ್ದೇಶ ಮತ್ತು ಪಠ್ಯ ಎರಡನ್ನೂ ಪರಿವರ್ತಿಸುವ ಪ್ರಯತ್ನ ಮಾಡುತ್ತದೆ ಎಂದು ಒತ್ತಿ ಹೇಳಿದರು. ಎನ್..ಪಿ. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲಿಕೆ, ಸಂಶೋಧನೆ, ನಾವಿನ್ಯತೆಯೊಂದಿಗೆ, ಫಲಪ್ರದ, ವಿಶಾಲ ಆಧಾರಿತ ಮತ್ತು ಒಬ್ಬರ ನೈಸರ್ಗಿಕ ಮನೋಭಾವಗಳಿಗೆ ಮಾರ್ಗದರ್ಶನ ನೀಡುವ ಅನುಭವ ನೀಡುತ್ತವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, " ಹ್ಯಾಕಥಾನ್ ನೀವು ಪರಿಹರಿಸಲು ಪ್ರಯತ್ನಿಸಿದ ಮೊದಲ ಸಮಸ್ಯೆಯೂ ಅಲ್ಲ, ಇದು ಕೊನೆಯದೂ ಅಲ್ಲ." ಎಂದರು. ಕಲಿಕೆ, ಪ್ರಶ್ನಿಸುವುದು ಮತ್ತು ಪರಿಹರಿಸುವುದು ಎಂಬ ಮೂರು ಕಾರ್ಯಗಳನ್ನು ಯುವಕರು ಮುಂದುವರಿಸಬೇಕೆಂದು ಅವರು ಹಾರೈಸಿದರು. ಒಬ್ಬರು ಕಲಿತಾಗ, ಪ್ರಶ್ನಿಸುವ ಬುದ್ಧಿವಂತಿಕೆ ಬರುತ್ತದೆ, ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಶಾಲೆಯ ಚೀಲದ ಭಾರದಿಂದ, ಜೀವನಕ್ಕೆ ಸಹಾಯ ಮಾಡುವ ಕಲಿಕೆಯತ್ತ ಶಿಕ್ಷಣ ಗಮನ ಹರಿಸಿದೆ, ಸರಳವಾಗಿ ಕಂಠಪಾಠ ಮಾಡುವುದರ ಬದಲಿಗೆ ವಿಮರ್ಶಾತ್ಮಕ ಚಿಂತನೆಗೆ ಗಮನ ಹರಿಸುತ್ತಿದೆ ಎಂದು ಹೇಳಿದರು.

ಅಂತರ ಶಿಕ್ಷಣ ಅಧ್ಯಯನಕ್ಕೆ ಒತ್ತು

ಹೊಸ ಶಿಕ್ಷಣ ನೀತಿಯ ಪ್ರಮುಖಾಂಶಗಳಲ್ಲಿ ಅಂತರ ಶಿಕ್ಷಣ ಅಧ್ಯಯನಕ್ಕೆ ನೀಡಿರುವ ಒತ್ತು ಪ್ರಮುಖವಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಕಲ್ಪನೆ, ಜನಪ್ರಿಯತೆ ಪಡೆದುಕೊಳ್ಳುತ್ತದೆ, ಏಕೆಂದರೆ ಒಂದೇ ಅಳತೆ ಎಲ್ಲರಿಗೂ ಹೊಂದುವಂತದ್ದಲ್ಲ ಎಂದರು. ಅಂತರ ಶಿಕ್ಷಣ ಅಧ್ಯಯನವು ವಿದ್ಯಾರ್ಥಿ ಸಮಾಜದಿಂದ ಏನು ಮಾಡಬೇಕೆಂದು ಬಯಸುತ್ತದೆ ಎನ್ನುವುದಕ್ಕಿಂತ ಅವನು ಏನು ಕಲಿಯಲು ಬಯಸುತ್ತಾನೆ ಎಂಬುದರ ಮೇಲೆ ಗಮನ ಹರಿಸುತ್ತದೆ ಎಂದರು.

ಶಿಕ್ಷಣಕ್ಕೆ ಪ್ರವೇಶ

ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಶಿಕ್ಷಣ ನೀತಿ, ಅವರ ಶಿಕ್ಷಣದ ಲಭ್ಯತೆಯ ಕಲ್ಪನೆಗೆ ಸಮರ್ಪಿತವಾಗಿದೆ ಎಂದರು. ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭವಾಗುವ ಶಿಕ್ಷಣದ ಪ್ರವೇಶದ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿ ದೊಡ್ಡ ಚಿಂತನೆ ಹೊಂದಿದೆ. ನೀತಿಯು 2035 ವೇಳೆಗೆ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು 50 ಪ್ರತಿಶತಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಶಿಕ್ಷಣ ನೀತಿಯು ಉದ್ಯೋಗಾಕಾಂಕ್ಷಿಗಳನ್ನು ರೂಪಿಸುವುದಕ್ಕಿಂತ ಉದ್ಯೋಗ ದಾತರನ್ನು ರೂಪಿಸುವುದರ ಮೇಲೆ ಗಮನ ನೀಡುತ್ತದೆ ಎಂದು ಹೇಳಿದರು. ಅಂದರೆ, ಒಂದು ರೀತಿಯಲ್ಲಿ ನಮ್ಮ ಮನಃಸ್ಥಿತಿಯಲ್ಲಿ ಮತ್ತು ನಮ್ಮ ವಿಧಾನದಲ್ಲಿ ಸುಧಾರಣೆಯನ್ನು ತರುವ ಪ್ರಯತ್ನ ಇದೆಂದರು.

ಸ್ಥಳೀಯ ಭಾಷೆಗೆ ಒತ್ತು

ಹೊಸ ಶಿಕ್ಷಣ ನೀತಿ ಭಾರತೀಯ ಭಾಷೆಗಳ ಹೆಚ್ಚಿನ ಬೆಳವಣಿಗೆಗೆ ನೆರವಾಗುತ್ತದೆ ಎಂದು ಪ್ರಧಾನಮಂತ್ರಿಗಳು ತಿಳಿಸಿದರು. ಆರಂಭಿಕ ವರ್ಷಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಭಾಷೆಯಲ್ಲಿ ಕಲಿಯುವ ಪ್ರಯೋಜನ ಪಡೆಯಲಿದ್ದಾರೆ ಎಂದರು. ಹೊಸ ಶಿಕ್ಷಣ ನೀತಿಯು ವಿಶ್ವಕ್ಕೆ ಶ್ರೀಮಂತ ಭಾರತೀಯ ಭಾಷೆಗಳನ್ನು ಪರಿಚಯಿಸಲಿದೆ ಎಂದು ತಿಳಿಸಿದರು.

ಜಾಗತಿಕ ಏಕಮತ್ಯಕ್ಕೆ ಒತ್ತು

ನೀತಿಯು ಸ್ಥಳೀಯತೆಗೆ ಗಮನ ಹರಿಸುವುದರ ಜೊತೆಗೆ ಜಾಗತಿಕ ಏಕಮತ್ಯಕ್ಕೂ ಒತ್ತು ನೀಡುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಜಾಗತಿಕ ಸಂಸ್ಥೆಗಳಿಗೆ ಪ್ರೋತ್ಸಾಹಿಸಲಾಗುತ್ತದೆ. ಇದು ಭಾರತೀಯ ಯುವಜನರಿಗೆ ವಿಶ್ವದರ್ಜೆಯ ಅವಕಾಶ ಮತ್ತು ಪ್ರಕಾಶಕ್ಕೆ ತೆರೆದುಕೊಳ್ಳುವ ಪ್ರಯೋಜನ ನೀಡುತ್ತದೆ ಮತ್ತು ಅವರನ್ನು ಜಾಗತಿಕ ಸ್ಪರ್ಧೆಗೆ ಅಣೀಯಾಗಲು ನೆರವಾಗುತ್ತದೆ ಎಂದರು. ಇದು ಭಾರತದಲ್ಲಿ ವಿಶ್ವದರ್ಜೆಯ ಸಂಸ್ಥೆಗಳನ್ನು ನಿರ್ಮಿಸಲು ಮತ್ತು ಭಾರತವನ್ನು ಜಾಗತಿಕ ಶೈಕ್ಷಣಿಕ ತಾಣವಾಗಿ ಮಾಡಲು ನೆರವಾಗುತ್ತದೆ ಎಂದು ಹೇಳಿದರು.

***



(Release ID: 1643088) Visitor Counter : 237