ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್‌ ಪ್ರಧಾನಿ ಶ್ರೀ ಪ್ರವೀಂದ್ ಜುಗ್ನಾಥ್  ಜಂಟಿಯಾಗಿ ಹೊಸ ಸುಪ್ರೀಂ ಕೋರ್ಟ್ ಕಟ್ಟಡ ಉದ್ಘಾಟಿಸಿದರು

Posted On: 30 JUL 2020 1:14PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಶ್ರೀ ಪ್ರವೀಂದ್ ಜುಗ್ನಾಥ್ ಅವರು ಜಂಟಿಯಾಗಿ ಮಾರಿಷಸ್ ಹೊಸ ಸುಪ್ರೀಂ ಕೋರ್ಟ್ ಕಟ್ಟಡವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಉದ್ಘಾಟನೆಯಾದ ಕಟ್ಟಡವು ರಾಜಧಾನಿ ಪೋರ್ಟ್ ಲೂಯಿಸ್ ನಲ್ಲಿ ಭಾರತದ ನೆರವಿನ ಮೊದಲ ಮೂಲಸೌಕರ್ಯ ಯೋಜನೆಯಾಗಿದೆ. ಭಾರತ ಸರ್ಕಾರದ 28.12 ಮಿಲಿಯನ್ ಡಾಲರ್ ನೆರವಿನಿಂದ ಹೆಗ್ಗುರುತು ಯೋಜನೆಯು ಪೂರ್ಣಗೊಂಡಿದೆ.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ತತ್ವವಾಗಿರುವ ಅಭಿವೃದ್ಧಿ ಸಹಕಾರದ ಮಾನವ ಕೇಂದ್ರಿತ ವಿಧಾನದ ಮಹತ್ವದ ಬಗ್ಗೆ ತಿಳಿಸಿದರು. ಭಾರತ ಮತ್ತು ಮಾರಿಷಸ್ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಜನ-ಆಧಾರಿತ ಮೂಲಸೌಕರ್ಯ ಯೋಜನೆಗಳ ಪಾತ್ರವನ್ನು ಅವರು ಶ್ಲಾಘಿಸಿದರು. ಆಧುನಿಕ ವಿನ್ಯಾಸ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಸುಪ್ರೀಂ ಕೋರ್ಟ್ ಕಟ್ಟಡವು ಮಾರಿಷಸ್ ನ್ಯಾಯಾಂಗಕ್ಕೆ ಸೂಕ್ತ ಸ್ಥಳವಾಗಲಿದೆ. ಭಾರತ ಮತ್ತು ಮಾರಿಷಸ್ ಹಂಚಿಕೆಯ ಮೌಲ್ಯಗಳು ಮತ್ತು ಸಹಕಾರದ ಸಂಕೇತವಾಗಲಿದೆ ಎಂದು ಪ್ರಧಾನಿ ಹೇಳಿದರು. ಯೋಜನೆಯು ನಿಗದಿತ ಸಮಯದಲ್ಲಿ ಮತ್ತು ಆರಂಭಿಕ ಅಂದಾಜುಗಳಿಗಿಂತ ಕಡಿಮೆ ವೆಚ್ಚದಲ್ಲಿ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.

ಮಾರಿಷಸ್ನೊಂದಿಗಿನ ಅಭಿವೃದ್ಧಿ ಸಹಕಾರವು ಭಾರತದ ಅಭಿವೃದ್ಧಿ ಸಹಭಾಗಿತ್ವ ವಿಧಾನದ ಹೃದಯದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದ ಅಭಿವೃದ್ಧಿ ಸಹಕಾರಕ್ಕೆ ಯಾವುದೇ ಷರತ್ತುಗಳಿರುವುದಿಲ್ಲ ಅಥವಾ ಯಾವುದೇ ರಾಜಕೀಯ ಅಥವಾ ವಾಣಿಜ್ಯ ಪರಿಗಣನೆಗಳಿಂದ ಪ್ರಭಾವಿತವಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಅಭಿವೃದ್ಧಿ ಸಹಕಾರಕ್ಕೆ ಭಾರತದ ಪ್ರಮುಖ ತತ್ವವೆಂದರೆ ನಮ್ಮ ಪಾಲುದಾರರಿಗೆ ಗೌರವ ನೀಡುವುದು ಮತ್ತು ಮುಖ್ಯ ಪ್ರೇರಣೆಯೆಂದರೆ ನಮ್ಮ ಅಭಿವೃದ್ಧಿಯ ಪಾಠಗಳನ್ನು ಹಂಚಿಕೊಳ್ಳುವುದು. ಭಾರತದ ಅಭಿವೃದ್ಧಿ ಸಹಕಾರವುಗೌರವ’, ‘ವೈವಿಧ್ಯತೆ’, ‘ಭವಿಷ್ಯದ ಆರೈಕೆಮತ್ತುಸುಸ್ಥಿರ ಅಭಿವೃದ್ಧಿಎಂಬ ಪ್ರಮುಖ ಮೌಲ್ಯಗಳಿಂದ ಗುರುತಿಸಲ್ಪಟ್ಟಿದೆ ಎಂದು ಅವರು ಒತ್ತಿ ಹೇಳಿದರು.

ಮಾರಿಷಸ್ಜನರ ಸಾಧನೆಗಳಲ್ಲಿ ಭಾರತ ಹೆಮ್ಮೆ ಪಡುತ್ತದೆ ಎಂದ ಪ್ರಧಾನಿ ಮೋದಿ, ಮುಂಬರುವ ವರ್ಷಗಳಲ್ಲಿ ಭಾರತ-ಮಾರಿಷಸ್ ಸಹಭಾಗಿತ್ವವು ಇನ್ನೂ ಹೆಚ್ಚಿನ ಎತ್ತರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ನಿಕಟ ಸಂಬಂಧಗಳ ಪ್ರತಿಬಿಂಬವಾಗಿರುವ ಯೋಜನೆಗೆ ಭಾರತದ ನೆರವಿನ ಬಗ್ಗೆ ಪ್ರಧಾನಿ ಜುಗ್ನಾಥ್ ಪ್ರಶಂಸಿಸಿದರು. ಭಾರತದ ನೆರವಿನೊಂದಿಗೆ ಸುಪ್ರೀಂ ಕೋರ್ಟ್ ಕಟ್ಟಡದ ನಿರ್ಮಾಣವು ಮಾರಿಷಸ್ನಲ್ಲಿ ಮೂಲಸೌಕರ್ಯಗಳ ಆಧುನೀಕರಣದ ಹೊಸ ಮೈಲಿಗಲ್ಲು ಮತ್ತು ಮಾರಿಷಸ್ ನ್ಯಾಯ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ, ಲಭ್ಯವನ್ನಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

'ಸಾಗರ್ - ಪ್ರದೇಶದಲ್ಲಿನ ಎಲ್ಲರ ಭದ್ರತೆ ಮತ್ತು ಬೆಳವಣಿಗೆ' ಎಂಬ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಹೊಸ ಸುಪ್ರೀಂ ಕೋರ್ಟ್ ಕಟ್ಟಡವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮಾರಿಷಸ್ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಪಾತ್ರವನ್ನು ತೋರಿಸುತ್ತದೆ. ಎರಡು ದೇಶಗಳ ನಡುವೆ ಭವಿಷ್ಯದಲ್ಲಿ ಪಾಲುದಾರಿಕೆಯನ್ನು ಬಲಪಡಿಸುವ ಭಾರತದ ಬದ್ಧತೆಯನ್ನೂ ಸಹ ಇದು ತೋರಿಸುತ್ತದೆ.

***



(Release ID: 1642334) Visitor Counter : 209