PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 21 JUL 2020 8:04PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತು ಪರಿಷಕೃತ ಮಾಹಿತಿ:

ಒಟ್ಟು ಚೇತರಿಕೆ 7.2 ಲಕ್ಷದವರೆಗೆ ಏರಿದೆ; ರಾಷ್ಟ್ರೀಯ ಚೇತರಿಕೆ ದರ 62.72% ಕ್ಕೆ ತಲುಪಿದೆ; ಪ್ರಕರಣಗಳ ಮಾರಣಾಂತಿಕತೆ 2.43% ಕ್ಕೆ ಇಳಿದಿದೆ

ಕಳೆದ 24 ಗಂಟೆಗಳಲ್ಲಿ 24,491 ಕೋವಿಡ್ -19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಕೋವಿಡ್-19 ರೋಗಿಗಳಲ್ಲಿ ಚೇತರಿಸಿಕೊಂಡ ಪ್ರಕರಣಗಳ ಸಂಚಿತ ಸಂಖ್ಯೆಯನ್ನು 7,24,577 ಕ್ಕೆ ತಳ್ಳಿದೆ. ಚೇತರಿಕೆ ದರವು 62.72% ಕ್ಕೆ ಮತ್ತಷ್ಟು ಸುಧಾರಿಸಿದೆ. ಭಾರತವು ಅತ್ಯಂತ ಕಡಿಮೆ ಪ್ರಕರಣಗಳ ಸಾವಿನ ಪ್ರಮಾಣ 2.43% ವನ್ನು ಹೊಂದಿದೆ ಹಾಗೂ ಮುಂದುವರಿಸಿದೆ, ಇದು ನಿರಂತರವಾಗಿ ಕಡಿಮೆಯಾಗುತ್ತಿದೆ. ಚೇತರಿಸಿಕೊಂಡ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವು ಪ್ರಸ್ತುತ 3,22,048 ಕ್ಕೆ ಏರಿದೆ. ಪ್ರಸ್ತುತ, 4,02,529 ಸಕ್ರಿಯ ಪ್ರಕರಣಗಳಿವೆ ಮತ್ತು ಇವೆಲ್ಲಾ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ. ಕಳೆದ 24 ಗಂಟೆಗಳಲ್ಲಿ 3,33,395 ಮಾದರಿಗಳನ್ನು ಪರೀಕ್ಷಿಸಲಾಯಿತು. ದೇಶದಲ್ಲಿ ಒಟ್ಟು 1,43,81,303 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಲ್ಯಾಬ್ಗಳ ಡಯಗ್ನೊಸ್ಟಿಕ್ ಲ್ಯಾಬ್ ನೆಟ್ವರ್ಕ್ ಅನ್ನು 1274ಕ್ಕೆ ವಿಸ್ತರಿಸುವುದರ ಮೂಲಕ ಇದು ಸಾಧ್ಯವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ  ಸಲಹೆಯಂತೆ 19 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ದಿನಕ್ಕೆ/ ದಶಲಕ್ಷಕ್ಕೆ 140 ಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತವೆ; ಭಾರತವು ಪ್ರಸ್ತುತ 8.07% ಸಕಾರಾತ್ಮಕ ದರವನ್ನು ಹೊಂದಿದೆ; 30 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ಭಾರತದ ಸರಾಸರಿಗಿಂತ ಕಡಿಮೆ ಸಕಾರಾತ್ಮಕ ದರವನ್ನು ಹೊಂದಿವೆ

ರಾಷ್ಟ್ರೀಯ ಸರಾಸರಿ ಪರೀಕ್ಷೆಗಳು / ದಿನ / ದಶಲಕ್ಷ ದಿನಾಂಕದಂತೆ ಗಣನೀಯವಾಗಿ 180 ಕ್ಕೆ ಏರಿದೆ. ವಿಶ್ವ ಆರೋಗ್ಯ ಸಂಸ್ಥೆ  ತನ್ನ ಮಾರ್ಗದರ್ಶನ ಟಿಪ್ಪಣಿಯಲ್ಲಿ ಕೋವಿಡ್-19 ಸನ್ನಿವೇಶದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಹೊಂದಿಸಲು ಸಾರ್ವಜನಿಕ ಆರೋಗ್ಯ ಮಾನದಂಡಗಳುಶಂಕಿತ ಕೋವಿಡ್-19 ಪ್ರಕರಣಗಳಿಗೆ ಸಮಗ್ರ ಕಣ್ಗಾವಲು ಸೂಚಿಸಿದೆ. ಒಂದು ದೇಶಕ್ಕೆ 140 ಪರೀಕ್ಷೆಗಳು / ದಿನ / ದಶಲಕ್ಷ ಜನಸಂಖ್ಯೆ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ  ಸಲಹೆ ನೀಡಿದೆ. ಪ್ರಸ್ತುತ 19 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿವೆ, ಇದು ದಿನಕ್ಕೆ 140 ಕ್ಕೂ ಹೆಚ್ಚು ಪರೀಕ್ಷೆಗಳನ್ನು ಪ್ರತಿ ದಶಲಕ್ಷಕ್ಕೆ ನಡೆಸುತ್ತಿದೆ. ಗೋವಾ ರಾಜ್ಯವು ಪ್ರತಿ ದಶಲಕ್ಷಕ್ಕೆ ದಿನಕ್ಕೆ 1333 ಪರೀಕ್ಷೆಗಳನ್ನು ದಾಖಲಿಸುತ್ತಿದೆ.

Combined Final 21st July Press Brief.jpg

ಹೆಚ್ಚಿದ ಪರೀಕ್ಷೆಯೊಂದಿಗೆ, ಭಾರತಕ್ಕೆ ದೃಢೀಕರಣ ದರ ಅಥವಾ ಸಕಾರಾತ್ಮಕ ದರವು ನಿರಂತರವಾಗಿ ಕಡಿಮೆಯಾಗುತ್ತಿದೆ ಮತ್ತು ಪ್ರಸ್ತುತ 8.07% ರಷ್ಟಿದೆ. ಭಾರತದಲ್ಲಿ 30 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿವೆ, ಇದು ಭಾರತದ ಸರಾಸರಿಗಿಂತ ಕಡಿಮೆ ಸಕಾರಾತ್ಮಕ ದರವನ್ನು ಹೊಂದಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1640137

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌.ಸಿ.ಡಿ.ಸಿ) ಸಂಸ್ಥೆ ದೆಹಲಿಯಲ್ಲಿ ಜೂನ್, 2020ರಲ್ಲಿ ನಡೆಸಿದ ಸಿರೊ-ಪ್ರಭುತ್ವ ಅಧ್ಯಯನ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೆಹಲಿಯಲ್ಲಿ ಸಿರೊ-ಕಣ್ಗಾವಲು ಅಧ್ಯಯನವನ್ನು ನಿಯೋಜಿಸಿತು. ಕಠಿಣ ಬಹು-ಹಂತದ ಮಾದರಿ ಅಧ್ಯಯನ ವಿನ್ಯಾಸವನ್ನು ಅನುಸರಿಸಿ ದೆಹಲಿ ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಅಧ್ಯಯನವನ್ನು ಮಾಡಿದೆ. ಜೂನ್ 27, 2020 ರಿಂದ ಜುಲೈ 10, 2020  ರವರೆಗೆ ಅಧ್ಯಯನವನ್ನು ನಡೆಸಲಾಯಿತು. ದೆಹಲಿಯ ಎಲ್ಲಾ 11 ಜಿಲ್ಲೆಗಳಿಗೆ ಸಮೀಕ್ಷಾ ತಂಡಗಳನ್ನು ರಚಿಸಲಾಯಿತು. ಲಿಖಿತ ತಿಳುವಳಿಕೆಯುಳ್ಳ ಒಪ್ಪಿಗೆಯನ್ನು ಪಡೆದ ನಂತರ ಆಯ್ದ ವ್ಯಕ್ತಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು ಮತ್ತು ನಂತರ ಅವರ ಸೆರಾವನ್ನು .ಜಿ.ಜಿ ಪ್ರತಿಕಾಯಗಳು ಮತ್ತು ಸೋಂಕಿ ಕುರಿತು ಪರೀಕ್ಷಿಸಲಾಯಿತು. ಎಲಿಸಾ ಪರೀಕ್ಷೆಯನ್ನು ಬಳಸಿಕೊಂಡು ದೇಶದಲ್ಲಿ ನಡೆಸಿದ ಅತಿದೊಡ್ಡ ಸಿರೊ-ಹರಡುವಿಕೆಯ ಅಧ್ಯಯನಗಳಲ್ಲಿ ಇದು ಒಂದು. ಲ್ಯಾಬ್ ಮಾನದಂಡಗಳ ಪ್ರಕಾರ 21,387 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು. ನಡೆಸಿದ ಪರೀಕ್ಷೆಯು ರೋಗನಿರ್ಣಯದ ಪರೀಕ್ಷೆಯಲ್ಲ, ಆದರೆ ಧನಾತ್ಮಕತೆಯನ್ನು ಪರೀಕ್ಷಿಸುವ ವ್ಯಕ್ತಿಗಳಲ್ಲಿ ಸಾರ್ಸ್ ಕೊವ್ -2 ನಿಂದಾಗಿ ಹಿಂದಿನ ಸೋಂಕಿನ ಬಗ್ಗೆ ಮಾತ್ರ ಮಾಹಿತಿಯನ್ನು ಒದಗಿಸುತ್ತದೆ. ಸಿರೊ-ಹರಡುವಿಕೆಯ ಅಧ್ಯಯನದ ಫಲಿತಾಂಶಗಳು ದೆಹಲಿಯಾದ್ಯಂತ ಸರಾಸರಿ, .ಜಿ.ಜಿ ಪ್ರತಿಕಾಯಗಳ ಹರಡುವಿಕೆ 23.48% ಎಂದು ತೋರಿಸುತ್ತದೆ. ಹೆಚ್ಚಿನ ಸಂಖ್ಯೆಯ ಸೋಂಕಿತ ವ್ಯಕ್ತಿಗಳು ಲಕ್ಷಣರಹಿತವಾಗಿ ಉಳಿದಿದ್ದಾರೆ ಎಂದು ಅಧ್ಯಯನವು ಸೂಚಿಸುತ್ತದೆ 

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮಾನಸಿಕ ಬೆಂಬಲವನ್ನು ಒದಗಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮನೋದರ್ಪಣ್ ಉಪಕ್ರಮವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಪ್ರಾರಂಭಿಸಿದರು

ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ಅವರು ಇಂದು ವಿದ್ಯಾರ್ಥಿಗಳಿಗೆ ಮಾನಸಿಕ ಸಾಮಾಜಿಕ ಬೆಂಬಲವನ್ನು ನೀಡಲು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮನೋದರ್ಪಣ್ ಉಪಕ್ರಮವನ್ನು ಪ್ರಾರಂಭಿಸಿದರು. ಸಂದರ್ಭದಲ್ಲಿ ಮಾತನಾಡಿದ ಶ್ರೀ ನಿಶಾಂಕ್ ಅವರು, ಕೋವಿಡ್ -19 ಪ್ರಪಂಚದಾದ್ಯಂತದ ಎಲ್ಲರಿಗೂ  ಸವಾಲಿನ ಸಮಯವಾಗಿದೆ. ಶೈಕ್ಷಣಿಕ ರಂಗದಲ್ಲಿ ಶಿಕ್ಷಣವನ್ನು ಮುಂದುವರೆಸುವತ್ತ ಗಮನಹರಿಸುವುದು ಮುಖ್ಯವಾದರೂ, ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯಕ್ಕೂ ಸಮಾನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಭಾವಿಸಿದೆ ಎಂದು ಸಚಿವರು ಮಾಹಿತಿ ನೀಡಿದರು. ಆದ್ದರಿಂದ, ಕೋವಿಡ್ ಏಕಾಏಕಿ ಮತ್ತು ಅದಕ್ಕೂ ಮೀರಿದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅವರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮಾನಸಿಕ ಸಾಮಾಜಿಕ ಬೆಂಬಲವನ್ನು ಒದಗಿಸಲು ವ್ಯಾಪಕವಾದ ಚಟುವಟಿಕೆಗಳನ್ನು ಒಳಗೊಂಡ ಮನೋದರ್ಪನ್ಎಂಬ ಹೆಸರಿನ ಉಪಕ್ರಮವನ್ನು ಸಚಿವಾಲಯ ಕೈಗೊಂಡಿದೆ. ಶಿಕ್ಷಣ, ಮಾನಸಿಕ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳ ಕ್ಷೇತ್ರಗಳ ತಜ್ಞರನ್ನು ಅದರ ಸದಸ್ಯರಾಗಿ ಹೊಂದಿರುವ ಕಾರ್ಯನಿರತ ಗುಂಪನ್ನು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಕಳವಳಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಉತ್ತೇಜಿಸಲು ಮತ್ತು ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಮತ್ತು ನಂತರದ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಅಂಶಗಳು, ಸಮಾಲೋಚನೆ ಸೇವೆಗಳು, ಆನ್ಲೈನ್ ಸಂಪನ್ಮೂಲಗಳು ಮತ್ತು ಸಹಾಯವಾಣಿ ಮೂಲಕ ಪರಿಹರಿಸಲು ಬೆಂಬಲವನ್ನು ಒದಗಿಸಲು ಅನುಕೂಲವಾಗುವಂತೆ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. .
ವಿವರಗಳಿಗಾಗಿ : https://pib.gov.in/PressReleseDetail.aspx?PRID=1640208    

ಜುಲೈ 22,2020 ರಂದು ನಡೆಯಲಿರುವ ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ

ಜುಲೈ 22,2020 ರಂದು ನಡೆಯಲಿರುವ ಭಾರತ ಐಡಿಯಾಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರಧಾನ ಭಾಷಣ ಮಾಡಲಿದ್ದಾರೆ. ಶೃಂಗಸಭೆಯನ್ನು ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಆಯೋಜಿಸುತ್ತಿದೆ. ವರ್ಷ ಪರಿಷತ್ತಿನ ರಚನೆಯ 45 ನೇ ವರ್ಷಾಚರಣೆಯನ್ನು ಸೂಚಿಸುತ್ತದೆ. ವರ್ಷದ ಇಂಡಿಯಾ ಐಡಿಯಾಸ್ ಶೃಂಗಸಭೆಯ ವಿಷಯವೆಂದರೆ ಉತ್ತಮ ಭವಿಷ್ಯವನ್ನು ನಿರ್ಮಿಸುವುದು’. ವರ್ಚುವಲ್ ಶೃಂಗಸಭೆಯಲ್ಲಿ ಭಾರತೀಯ ಮತ್ತು ಯು.ಎಸ್ ಸರ್ಕಾರದ ನೀತಿ ನಿರೂಪಕರು, ರಾಜ್ಯಮಟ್ಟದ ಅಧಿಕಾರಿಗಳು ಮತ್ತು ವ್ಯಾಪಾರ ಮತ್ತು ಸಮಾಜದ ಚಿಂತನೆಯ ನಾಯಕರು ಉನ್ನತ ಮಟ್ಟದ ಉಪಸ್ಥಿತಿಯನ್ನು ಹೊಂದಿರುತ್ತಾರೆ. ಸಾಂಕ್ರಾಮಿಕ ಭಾರತ ಮತ್ತು ಯು.ಎಸ್ ಸಹಕಾರ ಮತ್ತು ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ಎರಡು ದೇಶಗಳ ನಡುವಿನ ಸಂಬಂಧದ ಭವಿಷ್ಯದ ಚರ್ಚೆಗಳಿಗೆ ಸಾಕ್ಷಿಯಾಗಲಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1640126

ಆತ್ಮಾನಿರ್ಭರ್ ಭಾರತ್ ಗುರಿಗಳನ್ನು ಸಾಧಿಸಲು 1 ಕೋಟಿ ಯುವ ಸ್ವಯಂಸೇವಕರನ್ನು ಸಜ್ಜುಗೊಳಿಸುವ ಸಂಕಲ್ಪದೊಂದಿಗೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಯುನಿಸೆಫ್ನೊಂದಿಗೆ  ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ

 

ಪ್ರಧಾನ ಮಂತ್ರಿಯ ಆತ್ಮಾನಿರ್ಭರ್‌  ಭಾರತ್ಗೆ ಕರೆಗೆ ಕೊಡುಗೆ ನೀಡುವ ಮತ್ತು ಭಾರತದಲ್ಲಿ 1 ಕೋಟಿ ಯುವ ಸ್ವಯಂಸೇವಕರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಹಾಗೂ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಕಿರೆನ್ ರಿಜಿಜು ಅವರ ದೂರದೃಷ್ಟಿಯನ್ನು ಸಾಕಾರಗೊಳಿಸುವ ಒಂದು ಹಂತದಲ್ಲಿ, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಯುವವಾಹ್ (ಯುನಿಸೆಫ್ ರಚಿಸಿದ ಬಹು-ಪಾಲುದಾರರ ವೇದಿಕೆ) ಅವರೊಂದಿಗೆ ಸದುದ್ದೇಶದ ಟಿಪ್ಪಣಿಗೆ ಸಹಿ ಹಾಕಿತು. ಭಾರತದ ಯುವಜನರಲ್ಲಿ ಸ್ವಯಂಸೇವಕತೆಯನ್ನು ಉತ್ತೇಜಿಸಲು ಸಹಭಾಗಿತ್ವದಲ್ಲಿ ಕೆಲಸ ಮಾಡಲು ಹಾಗೂ ಶಿಕ್ಷಣ ಮತ್ತು ಕಲಿಕೆಯಿಂದ ಉತ್ಪಾದಕ ಕೆಲಸಕ್ಕೆ ಪರಿವರ್ತನೆ, ಕೌಶಲ್ಯ ಮತ್ತು ಸಕ್ರಿಯ ನಾಗರಿಕರಾಗಿರಲು ಸಹಾಯ ಮಾಡುತ್ತದೆ. ಪಾಲುದಾರಿಕೆಯ ಮಹತ್ವದ ಬಗ್ಗೆ ಮಾತನಾಡಿದ ಸಚಿವ ಶ್ರೀ ಕಿರೆನ್ ರಿಜಿಜು ಅವರು, ಸವಾಲಿ ಕಾಲಘಟ್ಟದಲ್ಲಿ ನೂತನ ಸಹಭಾಗಿತ್ವವು ತುಂಬಾ ಸೂಕ್ತವಾಗಿದೆ ಮತ್ತು ನಮ್ಮ ಅಸ್ತಿತ್ವದಲ್ಲಿರುವ ನೀತಿಗಳಿಗೆ ಬಲವಾದ ಸಮಕಾಲೀನ ಗಮನವನ್ನು ನೀಡುತ್ತದೆ ಎಂದು ಹೇಳಿದರು. ಭಾರತವು ಭಾರಿ ಜನಸಂಖ್ಯೆ ಹೊಂದಿರುವ ಯುವ ದೇಶವಾಗಿರುವುದರಿಂದ, ಯಾವುದೇ ಕ್ಷೇತ್ರದಲ್ಲಿ ಯುವಕರ ಕೊಡುಗೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ವೇದಿಕೆಯಲ್ಲಿಯೂ ಭಾರಿ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಸಚಿವರು ಹೇಳಿದರು. ವಿವರಗಳಿಗಾಗಿ: https://pib.gov.in/PressReleseDetail.aspx?PRID=1639995

ಭಾರತದ ಮೊದಲ ಸಾರ್ವಜನಿಕ .ವಿ ಚಾರ್ಜಿಂಗ್ ಪ್ಲಾಜಾ ವನ್ನು ಕೇಂದ್ರ ವಿದ್ಯುತ್ ಸಚಿವರು ಉದ್ಘಾಟಿಸಿದರು

ಇಂಧನ ದಕ್ಷತೆಯನ್ನು ಹೆಚ್ಚಿಸುವ ಮತ್ತು -ಚಲನಶೀಲತೆಯನ್ನು ಉತ್ತೇಜಿಸುವತ್ತ ಗಮನಹರಿಸಿ, ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ಭಾರತದ ಮೊದಲ ಸಾರ್ವಜನಿಕ ಇವಿ (ಎಲೆಕ್ಟ್ರಿಕ್ ವೆಹಿಕಲ್) ಚಾರ್ಜಿಂಗ್ ಪ್ಲಾಜಾವನ್ನು ಚೆಲ್ಮ್ಸ್ಫೋರ್ಡ್ ಕ್ಲಬ್ನಲ್ಲಿ ನಿನ್ನೆ ಉದ್ಘಾಟಿಸಿದರು. ಸುರಕ್ಷತೆ ಮತ್ತು ದಕ್ಷತೆಗಾಗಿ ಒಳಾಂಗಣ ವಾಯು ಗುಣಮಟ್ಟವನ್ನು ಸುಧಾರಿಸಲು ಹವಾನಿಯಂತ್ರಣದ ರೆಟ್ರೊಫಿಟ್” (ರೈಸ್) ರಾಷ್ಟ್ರೀಯ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿದರು. ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀ ಸಿಂಗ್ ಅವರು, “ಇವಿ ಚಾರ್ಜಿಂಗ್ ಪ್ಲಾಜಾ ಭಾರತದಲ್ಲಿ -ಚಲನಶೀಲತೆಯನ್ನು ಸರ್ವತ್ರ ಮತ್ತು ಅನುಕೂಲಕರವಾಗಿಸಲು ಹೊಸ ಮಾರ್ಗವಾಗಿದೆ. ದೇಶದಲ್ಲಿ ದೃವಾದ -ಮೊಬಿಲಿಟಿ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಇಂತಹ ನವೀನ ಉಪಕ್ರಮಗಳು ಕಡ್ಡಾಯವಾಗಿದೆ.   ರೈಸ್ ಉಪಕ್ರಮವು ರಾಷ್ಟ್ರದಾದ್ಯಂತದ ಕೆಲಸದ ಸ್ಥಳಗಳಲ್ಲಿ ಕೆಟ್ಟ ಗಾಳಿಯ ಗುಣಮಟ್ಟವನ್ನು ನಿವಾರಿಸಬಲ್ಲದು ಮತ್ತು ಅವುಗಳನ್ನು ಆರೋಗ್ಯಕರ ಮತ್ತು ಹಸಿರನ್ನಾಗಿ ಮಾಡುವ ಪ್ರವರ್ತಕ ಮಾರ್ಗಗಳನ್ನು ಸಮರ್ಥಿಸುತ್ತದೆ.  ಕಳಪೆ ಗಾಳಿಯ ಗುಣಮಟ್ಟವು ಭಾರತದಲ್ಲಿ ಸ್ವಲ್ಪ ಸಮಯದವರೆಗೆ ಕಳವಳಕಾರಿಯಾಗಿದೆ ಮತ್ತು ಕೋವಿಡ್ ಸಾಂಕ್ರಾಮಿಕದ ಬೆಳಕಿನಲ್ಲಿ ಇದು ಹೆಚ್ಚು ಮಹತ್ವದ್ದಾಗಿದೆ. ಜನರು ತಮ್ಮ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಹಿಂದಿರುಗಿದಂತೆ, ನಿವಾಸಿಗಳ ಸೌಕರ್ಯ, ಯೋಗಕ್ಷೇಮ, ಉತ್ಪಾದಕತೆ ಮತ್ತು ಒಟ್ಟಾರೆ ಸಾರ್ವಜನಿಕ ಆರೋಗ್ಯಕ್ಕೆ ಉತ್ತಮ ಒಳಾಂಗಣ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯಎಂದು ಸಚಿವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1639976

ಪಿ ಬಿ ಕ್ಷೇತ್ರ ಕಚೇರಿಗಳ ಮಾಹಿತಿ

  • ಚಂಡೀಗ: ಉದ್ಯಾನವನಗಳು, ಸುಖ್ನಾ ಸರೋವರ, ಮಾರುಕಟ್ಟೆಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಜನರಲ್ಲಿ ತಪಾಸಣೆ, ಮುಖಗವಸು ಧರಿಸುವುದು ಮತ್ತು ಸಾಮಾಜಿಕ ಅಂತರದಲ್ಲಿ ಹೆಚ್ಚು ಕಟ್ಟುನಿಟ್ಟಾಗಿರಬೇಕು ಎಂದು ಚಂಡೀಗ ಕೇಂದ್ರಾಡಳಿತ ಪ್ರದೇಶ ಆಡಳಿತಾಧಿಕಾರಿ ತಿಳಿಸಿದ್ದಾರೆ. ಅವರು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. ಕೋವಿಡ್ ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಜನವಸತಿ ಪ್ರದೇಶಗಳು ಮತ್ತು ಕ್ಷೇತ್ರಗಳಲ್ಲಿ ಹೆಚ್ಚಿನ ಪೊಲೀಸ್ ಧ್ವಜ ಮೆರವಣಿಗೆಗಳು. ಆರೋಗ್ಯ ಕಾರ್ಯಕರ್ತರು ಭಯ ಮುಕ್ತರಾಗಿದ್ದಾರೆಂದು ಭಾವಿಸುವ ಸಲುವಾಗಿ ವಿವಿಧ ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು ಎಂದೂ ಅವರು ನಿರ್ದೇಶನ ನೀಡಿದರು. ಕೋವಿಡ್ ತರಬಹುದಾದ ಅಪಾಯ ಮತ್ತು ಆರೋಗ್ಯಕರ ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಹಲವಾರು ಇಲಾಖೆಗಳು ಹಲವಾರು ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.  
  • ಪಂಜಾಬ್: ರಾಜ್ಯಾದ್ಯಂತ ಕಾರಾಗೃಹಗಳಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಕಾರಾಗೃಹ ಇಲಾಖೆ ಮೂರು ರೀತಿಯ ಕಾರ್ಯತಂತ್ರವನ್ನು ರೂಪಿಸಿದೆ. ತಂತ್ರವು ತಡೆಗಟ್ಟುವಿಕೆ, ಸ್ಕ್ರೀನಿಂಗ್ ಮತ್ತು ಗುರುತಿಸುವಿಕೆ ಮತ್ತು ಚಿಕಿತ್ಸೆ ಮತ್ತು ತಗ್ಗಿಸುವಿಕೆಯನ್ನು ಒಳಗೊಂಡಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನೆಲಮಟ್ಟದಲ್ಲಿ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಸಿಬ್ಬಂದಿ ಮತ್ತು ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಮಟ್ಟದ ಮೇಲ್ವಿಚಾರಣಾ ತಂಡ ಮತ್ತು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ತಂಡಗಳನ್ನು ಈಗಾಗಲೇ ರಚಿಸಲಾಗಿದೆ.  
  • ಹರಿಯಾಣ: ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಸುಮಾರು 75% ರಷ್ಟಿದೆ ಮತ್ತು ಪ್ರಕರಣಗಳು ದ್ವಿಗುಣಗೊಳ್ಳಲು 22-23 ದಿನಗಳು ಬೇಕಾಗುತ್ತದೆ ಎಂದು ಹರಿಯಾಣ ಆರೋಗ್ಯ ಸಚಿವ ಶ್ರೀ ಅನಿಲ್ ವಿಜ್ ಹೇಳಿದ್ದಾರೆ. ಅಂಕಿಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಸಮುದಾಯ ಪ್ರಸರಣದ ಯಾವುದೇ ಲಕ್ಷಣಗಳಿಲ್ಲ ಎಂದು ಸಚಿವರು ಹೇಳಿದರು. ಭಾರತ್ ಬಯೋಟೆಕ್ ತಯಾರಿಸಿದ ಲಸಿಕೆ ರೋಹ್ಟಕ್ನ ಪಂಡಿತ್ ಭಗವತ್ ದಯಾಲ್ ಶರ್ಮಾ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಾನವ ಪ್ರಯೋಗಗಳನ್ನು ನಡೆಸಿದೆ, ಇದು ಸಕಾರಾತ್ಮಕ ಫಲಿತಾಂಶವನ್ನು ನೀಡುವ ಸಾಧ್ಯತೆಯಿದೆ. ಸುಮಾರು 70 ಜನರು ತಮ್ಮ ಚ್ಛೆಯಂತೆ ಲಸಿಕೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಷಧಿ ಪ್ರಯೋಗದಿಂದಾಗಿ ಜನರಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ, ಇದು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಒಂದು ದೊಡ್ಡ ಸಾಧನೆಯಾಗಿದೆ ಎಂದು ಸಚಿವರು ಹೇಳಿದರು.
  • ಹಿಮಾಚಲ ಪ್ರದೇಶ: 108 ಆಂಬುಲೆನ್ಸ್ ಗಳು ಆರೋಗ್ಯ ವ್ಯವಸ್ಥೆಯ ಜೀವನಾಡಿಯಾಗಿರುವುದರಿಂದ ಸಾಮಾನ್ಯ ಆಂಬುಲೆನ್ಸ್ ಳಿಗೆ ಬದಲಾಗಿ ರಾಜ್ಯದಲ್ಲಿ ರಾಷ್ಟ್ರೀಯ ಆಂಬ್ಯುಲೆನ್ಸ್ ಸೇವೆ -108 ಅಡಿಯಲ್ಲಿ ನೂತನ 38 ಆಂಬ್ಯುಲೆನ್ಸ್ ಗಳನ್ನು ಬದಲಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ನಿಧಿಯ ಬಿಕ್ಕಟ್ಟನ್ನು ಇಟ್ಟುಕೊಂಡು ರಾಜ್ಯದಲ್ಲಿ ಬಸ್ ದರವನ್ನು ಹೆಚ್ಚಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಗುಡ್ಡಗಾಡು ಮತ್ತು ಬಯಲು ಪ್ರದೇಶಗಳಿಗೆ ಮೂರು ಕಿಲೋಮೀಟರ್ ಮೀರಿದ ಎಲ್ಲಾ ಪ್ರಯಾಣಗಳಿಗೆ ಪ್ರಸ್ತುತ ಪ್ರತಿ ಕಿಲೋಮೀಟರ್ ನಲ್ಲಿ 25% ಸುಂಕ ಹೆಚ್ಚಳವಾಗಲಿದೆ.  
  • ಕೇರಳ: 75 ವರ್ಷದ ಇಡುಕ್ಕಿ ಸ್ಥಳೀಯರು ಕೋವಿಡ್ -19 ಕ್ಕೆ ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 44 ತಲುಪಿದೆ. ಏತನ್ಮಧ್ಯೆ, ಆಗಸ್ಟ್ ಲ್ಲಿ ಕೋವಿಡ್ ಪರಿಸ್ಥಿತಿ ಮೌಲ್ಯಮಾಪನ ಮಾಡಿದ ನಂತರ ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ತಿಳಿಸಿದೆ. ಅಲುವಾದಲ್ಲಿನ ಕ್ರೈಸ್ತ ಸ್ಯಾಸಿನಿಯರ ಪ್ರಾಂತೀಯ ಮನೆಯ 18 ಸನ್ಯಾಸಿಗಳು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ದಾಖಲಿಸಿದ್ದಾರೆ. ವರು ಇತ್ತೀಚೆಗೆ ಕೋವಿಡ್ನಿಂದ ಮೃತಪಟ್ಟ ಸನ್ಯಾಸಿಗಳ ಸಂಪರ್ಕ ಪಟ್ಟಿಯಲ್ಲಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಯ ಬಗ್ಗೆ ಅನಿಶ್ಚಿತತೆ ಮುಂದುವರಿದಂತೆ, ಒಂದೆರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಆರೋಗ್ಯ ಸಚಿವೆ ಶ್ರೀಮತಿ ಕೆ.ಕೆ. ಶೈಲಜಾ ಹೇಳಿದರು. ನಿನ್ನೆ ಕೋವಿಡ್ -19 794 ಹೊಸ ಪ್ರಕರಣಗಳು ದೃಪಟ್ಟಿದ್ದು, ಇದರಲ್ಲಿ 519 ಜನರು ಸಂಪರ್ಕ ಪ್ರಕರಣಗಳಾಗಿದ್ದು, 24 ಪ್ರಕರಣಗಳು ಅಪರಿಚಿತ ಮೂಲಗಳೊಂದಿಗೆ ಪಸರಿಸಿವೆ. ಪ್ರಸ್ತುತ 7,611 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 1.65 ಲಕ್ಷ ಜನರು ವಿವಿಧ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಆರೋಗ್ಯ ವ್ಯವಸ್ಥೆಯ ಕಣ್ಗಾವಲಿನಲ್ಲಿದ್ದಾರೆ.
  • ತಮಿಳುನಾಡು: ಪುದುಚೇರಿಯಲ್ಲಿ ಸಾವಿನ ಸಂಖ್ಯೆ 30 ಕ್ಕೆ ಏರಿದೆ. ಒಬ್ಬ ಹಿರಿಯ 68 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ; ಮಂಗಳವಾರ, 91 ಹೊಸ ಪ್ರಕರಣಗಳ ಮೂಲಕ ಕೇಂದ್ರಾಡಳಿತ ಪ್ರದೇಶಲ್ಲಿ ಸಂಖ್ಯೆಯನ್ನು ಒಟ್ಟು 2179 ಕ್ಕೆ ಏರಿಸಿದೆ ಎಂದು ವರದಿಯಾಗಿದೆ. 2020-21 ಶೈಕ್ಷಣಿಕ ವರ್ಷದಲ್ಲಿ ಶೇಕಡಾ 75 ರಷ್ಟು ಶುಲ್ಕವನ್ನು ಸಂಗ್ರಹಿಸಲು ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಶಾಲಾ ಆಡಳಿತ ಮಂಡಳಿಗಳು ಸ್ವಾಗತಿಸಿವೆ. ಚೇತರಿಕೆ ಸಂಖ್ಯೆಗಳು 70,000 ದಾಟಿದೆ. ಚೆನ್ನೈನ ಕೋವಿಡ್ -19 ವಲಯದಿಂದ 81% ರೋಗಿಗಳು ಚೇತರಿಸಿಕೊಂಡಿದ್ದಾರೆ. ನಿನ್ನೆ 1298 ಹೊಸ ಪ್ರಕರಣಗಳೊಂದಿಗೆ, ಚೆನ್ನೈ ನಗರದ ಒಟ್ಟು ಸಕ್ರಿಯ ಪ್ರಕರಣಗಳು ಈಗ 15,127 ಆಗಿದ್ದು, ಇದು ನಗರದ ಒಟ್ಟು 87,235 ಸಕಾರಾತ್ಮಕ ಪ್ರಕರಣಗಳಲ್ಲಿ 17% ರಷ್ಟು ಆಗಿದೆ. 4985 ಹೊಸ ಪ್ರಕರಣಗಳು ಮತ್ತು 70 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಪ್ರಕರಣಗಳು: 1,75,678; ಸಕ್ರಿಯ ಪ್ರಕರಣಗಳು: 51,348; ಸಾವುಗಳು: 2551; ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 15,127.
  • ಕರ್ನಾಟಕ: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿ ಒಂದು ವಾರದ ಲಾಕ್ಡೌನ್ ನಾಳೆ ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ಕೊನೆಗೊಳ್ಳಲಿದೆ. ಏತನ್ಮಧ್ಯೆ ಲಾಕ್ ಡೌನ್ ವಿಸ್ತರಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಯೋಗಾಲಯದ ವರದಿ ಪಡೆಯುವ ಸಮಯ ಮತ್ತು ವೈರಸ್ ಹರಡುವಿಕೆ ನೇರವಾಗಿ ಸಂಪರ್ಕಗೊಂಡಿರುವುದರಿಂದ ಸ್ವ್ಯಾಬ್ ಪರೀಕ್ಷಾ ಫಲಿತಾಂಶಗಳ ವಿಳಂಬವನ್ನು ಕಡಿಮೆ ಮಾಡಲು ಕರ್ನಾಟಕದ ಹೈಕೋರ್ಟ್ ರಾಜ್ಯಕ್ಕೆ ನಿರ್ದೇಶನ ನೀಡಿತು. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಬಿಬಿಎಂಪಿ ಹೊಸ ಕಾರ್ಯಪಡೆ ರಚಿಸಿದೆ. ಕೋವಿಡ್ ಅನ್ನು ಹೊಂದಲು ವೈದ್ಯಕೀಯ ಉಪಕರಣಗಳನ್ನು ಖರೀದಿಸುವಲ್ಲಿನ ಅಕ್ರಮಗಳ ಬಗ್ಗೆ ಪ್ರತಿಪಕ್ಷಗಳ ಆರೋಪಗಳು ಮತ್ತು ಆಡಳಿತ ಪಕ್ಷಗಳ ಪ್ರತಿ ಆರೋಪಗಳು ಮುಂದುವರಿಯುತ್ತವೆ. 3648 ಹೊಸ ಪ್ರಕರಣಗಳು ಮತ್ತು 72 ಸಾವುಗಳು ನಿನ್ನೆ ವರದಿಯಾಗಿವೆ; ಬೆಂಗಳೂರು ನಗರದಲ್ಲಿ 1452 ಪ್ರಕರಣಗಳು. ಒಟ್ಟು ವರದಿಯಾದ ಪ್ರಕರಣಗಳು: 67,420; ಸಕ್ರಿಯ ಪ್ರಕರಣಗಳು: 42,216; ಸಾವುಗಳು: 1403.
  • ಆಂಧ್ರಪ್ರದೇಶ: ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮತ್ತು ತುರ್ತು ಷಧಿಗಳ ಬಳಕೆಗಾಗಿ ವಿಧಿಸುವ ದುಬಾರಿ ಶುಲ್ಕಗಳಿಗೆ ರಾಜ್ಯವು ನಿರ್ಬಂಧಗಳನ್ನು ವಿಧಿಸಿದೆ. ಗುಂಟೂರು ಜಿಲ್ಲೆಯ ವೇಲಗಪುಡಿಯಲ್ಲಿ ರಾಜ್ಯ ವಿಧಾನಸಭೆಯಿಂದ ಒಂಬತ್ತು ಕೊರೊನವೈರಸ್ ಪ್ರಕರಣಗಳು ವರದಿಯಾಗಿವೆ. ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಗುಂಟೂರು ಗ್ರಾಮೀಣ ಎಸ್ಪಿ ಎಚ್ಚರಿಸಿದ್ದಾರೆ. ಕೊರೊನವೈರಸ್ ಪ್ರಕರಣಗಳ ಮಧ್ಯೆ ಟಿಟಿಡಿ ಇಂದಿನಿಂದ ದರ್ಶನಗಳಿಗಾಗಿ ಮುಂಗಡ ಸಮಯ ನೀಡುವ ಚೀಟಿಗಳನ್ನು ನಿಲ್ಲಿಸಿದೆ. ಆಗಸ್ಟ್ 5,2020 ರವರೆಗೆ ಸಂಪೂರ್ಣ ತಿರುಪತಿ ಪಟ್ಟಣವನ್ನು ಧಾರಕ ವಲಯವೆಂದು ಘೋಷಿಸಲಾಗಿದೆ. 4074 ಹೊಸ ಪ್ರಕರಣಗಳು ಮತ್ತು 54 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಪ್ರಕರಣಗಳು: 53,724; ಸಕ್ರಿಯ ಪ್ರಕರಣಗಳು: 28,800; ಸಾವುಗಳು: 696.  
  • ತೆಲಂಗಾಣ: ರಾಜ್ಯದ ಚೇತರಿಕೆ ಪ್ರಮಾಣವು ಶೇಕಡಾ 72 ಕ್ಕೆ ಸುಧಾರಿಸಿದೆ, ಆದರೆ ಸಾವಿನ ಪ್ರಮಾಣವು ಶೇಕಡಾಕ್ಕಿಂತ ಕಡಿಮೆಯಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತವೆ. ತೆಲಂಗಾಣ ಜಿಲ್ಲೆಗಳಲ್ಲಿ ವೈರಸ್ ಹರಡುವಿಕೆಯ ದೃಷ್ಟಿಯಿಂದ ಅಂಗಡಿಯವರು ಕೆಲವು ಸ್ವಯಂಪ್ರೇರಿತ ಲಾಕ್ ಡೌನ್ ಘೋಷಿಸಿದರು. 1198 ಹೊಸ ಪ್ರಕರಣಗಳು & 07 ಸಾವುಗಳು ನಿನ್ನೆ ವರದಿಯಾಗಿವೆ; 1198 ಪ್ರಕರಣಗಳಲ್ಲಿ 510 ಪ್ರಕರಣಗಳು ಜಿಎಚ್ಎಂಸಿಯಿಂದ ವರದಿಯಾಗಿವೆ. ಒಟ್ಟು ಪ್ರಕರಣಗಳು: 46,274; ಸಕ್ರಿಯ ಪ್ರಕರಣಗಳು: 11,530; ಸಾವುಗಳು: 422
  • ಮಹಾರಾಷ್ಟ್ರ: ಮುಂಬೈ ಮೆಟ್ರೋಪಾಲಿಟನ್ ರೀಜನ್ (ಎಂಎಂಆರ್) ನಲ್ಲಿ ಸೋಮವಾರ,  ಕೋವಿಡ್ -19 ಪ್ರಕರಣಗಳ ಸಂಖ್ಯೆ 2 ಲಕ್ಷ  ದಾಟಿದ್ದು, ರಾಜ್ಯಕ್ಕೆ ಮತ್ತೊಂದು ಕಠೋರ ಮೈಲಿಗಲ್ಲಾಗಿದೆ ಹಾಗೂ ಇದೀಗ ಒಟ್ಟಾರೆ 3,18,695 ಪ್ರಕರಣಗಳು ಇದೆ. ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳಿಗೆ ಮುಂಬೈ ಸಾಕ್ಷಿಯಾದರೆ, ಇನ್ನೊಂದು ಒಂದು ಲಕ್ಷ ಥಾಣೆ, ನವೀ ಮುಂಬೈ, ಪಾಲ್ಘರ್ ಮತ್ತು ರಾಯಗಡ್ ಗಳಿಂದ ಬಂದಿದೆ. ಪ್ರಕರಣವು ಗಮನಾರ್ಹ ಸಂಖ್ಯೆಯಲ್ಲಿ ರಿಕೆ ಕಂಡಿದೆ. ಭಾರತದಲ್ಲಿ ಕ್ಸ್ ಫರ್ಡ್ ಲಸಿಕೆ ಅಭ್ಯರ್ಥಿಗೆ ಮಾನವ ಪ್ರಯೋಗಗಳು ವರ್ಷದ ಆಗಸ್ಟ್ ನಲ್ಲಿ ಪ್ರಾರಂಭವಾಗದೆ. ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನಾ ಸಹಭಾಗಿತ್ವದಲ್ಲಿ ಕ್ಸ ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್ಸ್ಟಿಟ್ಯೂಟ್ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಸಾಮೂಹಿಕವಾಗಿ ಉತ್ಪಾದಿಸಲಿದೆ.
  • ಗುಜರಾತ್: ಕಳೆದ ವಾರ ನವದೆಹಲಿಯ ಕೇಂದ್ರ ತಂಡ ರಾಜ್ಯಕ್ಕೆ ಸಹಾಯ ಮಾಡಲು ಆಗಮಿಸಿದಾಗಿನಿಂದ ಗುಜರಾತ್ ಸರ್ಕಾರ ನಡೆಸುತ್ತಿರುವ ಕೋವಿಡ್ -19 ಪರೀಕ್ಷೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಗುಜರಾತ್ ಮರಣ ಪ್ರಮಾಣವು ಶೇಕಡಾ 4.5 ರಷ್ಟಿದ್ದು, ರಾಷ್ಟ್ರೀಯ ಸರಾಸರಿ ಶೇಕಡಾ 2.5 ರಷ್ಟನ್ನು ಗ್ರಹಣ ಮಾಡುತ್ತದೆ, ಆದರೆ ರಾಜ್ಯವು ಒಟ್ಟು 49,353 ಪ್ರಕರಣಗಳನ್ನು ದಾಖಲಿಸಿದೆ, ಅದರಲ್ಲಿ 11,513 ಸಕ್ರಿಯ ಪ್ರಕರಣಗಳಾಗಿವೆ.
  • ರಾಜಸ್ಥಾನ: ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಮನೆಗೆ ಮರಳಿದ ಹೊರ ರಾಜ್ಯದ ವಲಸೆ ಕಾರ್ಮಿಕರಿಗಾಗಿ ಕೇಂದ್ರದ ಪಿಎಂ ಗರಿಬ್ ಕಲ್ಯಾಣ್ ರೊಜ್ಗರ್ ಯೋಜನೆಯ ಆಡಿಯಲ್ಲಿ ಮೊದಲ ತಿಂಗಳಲ್ಲಿ ರಾಜಸ್ಥಾನವು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ರಾಜ್ಯವು 4.1 ಕೋಟಿ ವ್ಯಕ್ತಿ ದಿನಗಳ ಉದ್ಯೋಗವನ್ನು ಗಳಿಸಿದೆ.  
  • ತೀಸ್ಗಡ: ಕಳೆದ ಒಂದು ತಿಂಗಳಿನಿಂದ ಕೊರೊನಾವೈರಸ್ ಕಾಯಿಲೆ (ಕೋವಿಡ್ -19) ಸಕಾರಾತ್ಮಕ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ರಾಯ್ಪುರ ಮತ್ತು ಬಿರ್ಗಾಂವ್ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶಗಳಲ್ಲಿ ಏಳು ದಿನಗಳ ಹೊಸ ಲಾಕ್ಡೌನ್ ನಿರ್ಬಂಧಗಳನ್ನು ವಿಧಿಸಲಾಗಿದೆ. ಲಾಕ್ಡೌನ್ ನಿರ್ಬಂಧಗಳನ್ನು ಮರು ಹೇರುವ ಸಮಯದಲ್ಲಿ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಮುಚ್ಚಲ್ಪಡುತ್ತವೆ. ಸಾರ್ವಜನಿಕ ಸಾರಿಗೆ ಸೇವೆಯು ರಸ್ತೆಗಿಳಿಯುವುದು ನಿಷೇಧಿಸಿದೆ. ಬಿಲಾಸ್ಪುರ್, ಕೊರ್ಬಾ ಮತ್ತು ದುರ್ಗ್ನಲ್ಲಿ ಗುರುವಾರದಿಂದ ಲಾಕ್ಡೌನ್ ಜಾರಿಗೆ ಬರಲಿದೆ.    
  • ಅರುಣಾಚಲ ಪ್ರದೇಶ: ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳಿಗೆ 1.5 ಲಕ್ಷ ರಾಪಿಡ್ ಡಯಾಗ್ನೋಸ್ಟಿಕ್ ಟೆಸ್ಟ್ (ಆರ್ಡಿಟಿ) -ಕೋವಿಡ್ 19 ಆಂಟಿಜೆನ್ ಕಿಟ್ಗಳು ಲಭ್ಯವಿದೆ . ಒಂದು ಲಕ್ಷ ಪರೀಕ್ಷಾ ಕಿಟ್ಗಳು ತಲುಪಿವೆ. ಇವುಗಳನ್ನು ಶೀಘ್ರದಲ್ಲೇ ಎಲ್ಲಾ ಜಿಲ್ಲೆಗಳಿಗೆ ವಿತರಿಸಲಾಗುವುದು ಎಂದು ರಾಜ್ಯ ಕೋವಿಡ್ ನೋಡಲ್ ಅಧಿಕಾರಿ ಡಾ. ಜಂಪಾ ಅವರು ತಿಳಿಸಿದ್ದಾರೆ.
  • ಅಸ್ಸಾಂ: ಅಸ್ಸಾಂನ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೊವಾಲ್ ಅವರು ಬೊಂಗೈಗಾಂವ್ ಜಿಲ್ಲೆಯ ಪ್ರವಾಹದ ಸನ್ನಿವೇಶವನ್ನು ಪರಿಶೀಲಿಸಿದರು ಮತ್ತು ಪ್ರವಾಹ ಪೀಡಿತ ಜನರನ್ನು ಭೇಟಿಯಾದರು.

 

  • ಮಣಿಪುರ: ಕೋವಿಡ್ -19 ರೋಗಿಗಳ 100% ಚೇತರಿಕೆ ಪ್ರಮಾಣವನ್ನು ಇಂದು ಸಾಧಿಸಿದ ಮಣಿಪುರದ ನೋನಿ, ಫೆರ್ಜಾಲ್ ಮತ್ತು ಟೆಂಗ್ನೌಪಾಲ್ ಜಿಲ್ಲೆಯ ಮುಂಚೂಣಿ ಯೋಧರನ್ನು ಮುಖ್ಯಮಂತ್ರಿ ಶ್ರೀ ಎನ್ ಬಿರೆನ್ ಸಿಂಗ್ ಅವರು ಅಭಿನಂದಿಸಿದರು. ಮಣಿಪುರದ ತೌಬಲ್ ಜಿಲ್ಲೆಯ ಎಲ್ಲಾ ಪ್ರಮುಖ ಮಾರುಕಟ್ಟೆಗಳು ಮತ್ತು ಧಾರ್ಮಿಕ ಸ್ಥಳಗಳು ಇಂದಿನಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗಿದೆ  
  • ಮಿಜೋರಾಂ: ರಾಜ್ಯದ 10 (ಹತ್ತು) ಜಿಲ್ಲಾ ಆಸ್ಪತ್ರೆಗಳಿಗೆ ಟ್ರೂಲಾಬ್ ಕ್ವಾಟ್ರೊ ರಿಯಲ್ಟೈಮ್ ಕ್ವಾಂಟಿಟೇಟಿವ್ ಮೈಕ್ರೋ ಪಿಸಿಆರ್ ಯಂತ್ರ (ಟ್ರುಯೆನಾಟ್) ಖರೀದಿಸಲು ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ರೂ. 1.18 ಕೋಟಿ ಬಿಡುಗಡೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡ್ನಲ್ಲಿ, ಕೋವಿಡ್-19 9 ಹೊಸ ಸಕಾರಾತ್ಮಕ ಪ್ರಕರಣಗಳನ್ನು ದೃಢಪಡಿಸಲಾಗಿದೆ. ಡಿಮಾಪುರದಲ್ಲಿ 6, ಸೋಮದಲ್ಲಿ 2 ಮತ್ತು ಪೆರೆನ್ನಲ್ಲಿ 1. ನಾಗಾಲ್ಯಾಂಡ್ನಲ್ಲಿ ಒಟ್ಟು ಕೋವಿಡ್ -19 ಸಕಾರಾತ್ಮಕ ಪ್ರಕರಣಗಳು 1030 ರಷ್ಟಿದ್ದು, 546 ಸಕ್ರಿಯ ಪ್ರಕರಣಗಳು ಮತ್ತು 484 ಚೇತರಿಕೆ ಪ್ರಕರಣಗಳಿವೆ.  

 

***



(Release ID: 1640511) Visitor Counter : 598