ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಾಸ್ತವವಾಗಿ ದೇಶದಲ್ಲಿ ಕೇವಲ 3.42 ಲಕ್ಷ ಕೋವಿಡ್-19 ರೋಗಿಗಳು
Posted On:
17 JUL 2020 2:34PM by PIB Bengaluru
ವಾಸ್ತವವಾಗಿ ದೇಶದಲ್ಲಿ ಕೇವಲ 3.42 ಲಕ್ಷ ಕೋವಿಡ್-19 ರೋಗಿಗಳು
ಚೇತರಿಕೆ ಪ್ರಮಾಣ ಹೆಚ್ಚಿದ್ದು, 6.35 ಲಕ್ಷ ರೋಗಿಗಳು ಗುಣಮುಖರಾಗಿದ್ದಾರೆ
ವೆಂಟಿಲೇಟರ್ಗಳಲ್ಲಿ 1% ಕ್ಕಿಂತ ಕಡಿಮೆ ಪ್ರಕರಣಗಳು, ಐಸಿಯುಗಳಲ್ಲಿ 2% ಕ್ಕಿಂತ ಕಡಿಮೆ ಮತ್ತು ಆಕ್ಸಿಜನ್ ಬೆಡ್ಗಳಲ್ಲಿ 3% ಕ್ಕಿಂತ ಕಡಿಮೆ ಪ್ರಕರಣಗಳು
ವಾಸ್ತವವಾಗಿ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯು ಕೇವಲ 3,42,756 ಆಗಿದೆ. ಒಟ್ಟು ಪ್ರಕರಣಗಳಲ್ಲಿ 6.35 ಲಕ್ಷಕ್ಕೂ ಹೆಚ್ಚು (63.33%) ರೋಗಿಗಳು ಚೇತರಿಸಿಕೊಂಡಿರುವರು.
1.35 ಶತಕೋಟಿ ಜನರಿರುವ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಪ್ರತಿ ದಶಲಕ್ಷಕ್ಕೆ 727.4 ಪ್ರಕರಣಗಳನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ, ಭಾರತದಲ್ಲಿ ಇರುವ ಜನಸಂಖ್ಯೆಯ ಪ್ರತಿ ದಶಲಕ್ಷಕ್ಕೆ ಇರುವ ಪ್ರಕರಣಗಳು ಕೆಲವು ಯುರೋಪಿಯನ್ ರಾಷ್ಟ್ರಗಳಿಗಿಂತ 4 ರಿಂದ 8 ಪಟ್ಟು ಕಡಿಮೆ ಇದೆ.
ದೇಶದ 18.6 ಸಾವುಗಳು/ ಪ್ರತಿ ದಶಲಕ್ಷಕ್ಕೆ ಪ್ರಕರಣಗಳ ಸಾವಿನ ಪ್ರಮಾಣವು ವಿಶ್ವದ ಅತ್ಯಂತ ಕಡಿಮೆ ಪ್ರಮಾಣಗಳಲ್ಲಿ ಒಂದಾಗಿದೆ. ಮನೆ ಮನೆ ಸಮೀಕ್ಷೆಗಳು, ಸಂಪರ್ಕ ಪತ್ತೆಹಚ್ಚುವಿಕೆ, ನಿಯಂತ್ರಣ ಮತ್ತು ಬಫರ್ ವಲಯಗಳ ಕಣ್ಗಾವಲು, ಪರಿಧಿಯ ನಿಯಂತ್ರಣ ಚಟುವಟಿಕೆಗಳು, ಸತತ ಪರೀಕ್ಷೆ ಮತ್ತು ಸಮಯೋಚಿತ ರೋಗನಿರ್ಣಯಕ್ಕಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದ ಪ್ರಯತ್ನಗಳು ಸೋಂಕಿತ ವ್ಯಕ್ತಿಗಳ ಆರಂಭಿಕ ಗುರುತಿಸುವಿಕೆಗೆ ಕಾರಣವಾಗಿದೆ. ಇದು ಆರಂಭಿಕ ಚಿಕಿತ್ಸೆಯಲ್ಲಿಯೂ ಸಹಾಯ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಎಮ್ ಹೆಚ್ಎಫ್ಡಬ್ಲ್ಯು) ಕ್ಲಿನಿಕಲ್ ಮ್ಯಾನೇಜ್ಮೆಂಟ್ ಶಿಷ್ಠಚಾರದಲ್ಲಿ ಸ್ಪಷ್ಟವಾಗಿ ರೂಪಿಸಿರುವಂತೆ ಕೋವಿಡ್-19 ರೋಗಿಗಳ ವಿಭಿನ್ನ ವರ್ಗೀಕರಣಕ್ಕಾಗಿ ಭಾರತವು ಗುಣಮಟ್ಟದ ಆರೈಕೆಯ ಶಿಷ್ಠಚಾರವನ್ನು ಅನುಸರಿಸಿದೆ. ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣಾ ತಂತ್ರಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ರೋಗಲಕ್ಷಣವಿಲ್ಲದ ಮತ್ತು ಸೌಮ್ಯವಾದ ಪ್ರಕರಣಗಳಲ್ಲಿ ಸುಮಾರು 80% ರಷ್ಟು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮನೆ ಪ್ರತ್ಯೇಕತೆಗೆ (ಹೋಂ ಕ್ವಾರಂಟೈನ್ ಗೆ) ಸೂಚಿಸಲಾಗಿದೆ. ಮಧ್ಯಮ ಮತ್ತು ತೀವ್ರ ರೋಗಿಗಳಿಗೆ ಮೀಸಲಾದ ಕೋವಿಡ್ ಆಸ್ಪತ್ರೆಗಳು ಅಥವಾ ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೌಮ್ಯ ಮತ್ತು ಲಕ್ಷಣರಹಿತ ರೋಗಿಗಳಿಗೆ ಮನೆ ಪ್ರತ್ಯೇಕತೆಯ ಕಾರ್ಯತಂತ್ರವು ಆಸ್ಪತ್ರೆಗಳಿಗೆ ಹೊರೆಯಾಗದಂತೆ ನೋಡಿಕೊಳ್ಳುವುದನ್ನು ಖಚಿತಪಡಿಸಿದೆ, ಅಲ್ಲಿ ತೀವ್ರವಾದ ಪ್ರಕರಣಗಳ ಚಿಕಿತ್ಸೆ ಮತ್ತು ಮಾರಣಾಂತಿಕತೆಯನ್ನು ಕಡಿಮೆ ಮಾಡುವುದರತ್ತ ಗಮನ ಹರಿಸಲಾಗಿದೆ. 1.94%ಕ್ಕಿಂತ ಕಡಿಮೆ ಪ್ರಕರಣಗಳು ತೀವ್ರ ನಿಗಾ ಘಟಕಗಳಲ್ಲಿವೆ (ಐಸಿಯು), 0.35% ಪ್ರಕರಣಗಳು ವೆಂಟಿಲೇಟರ್ಗಳಲ್ಲಿ ಮತ್ತು 2.81% ಪ್ರಕರಣಗಳು ಆಕ್ಸಿಜನ್ ಹಾಸಿಗೆಗಳಲ್ಲಿವೆ ಎಂಬುದು ಗಮನಾರ್ಹವಾಗಿದೆ.
ದಾಖಲಾದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಮೂಲಸೌಕರ್ಯಗಳನ್ನು ದೇಶಾದ್ಯಂತ ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಸಂಘಟಿತ ಪ್ರಯತ್ನಗಳ ಫಲವಾಗಿ, ಕೋವಿಡ್-19ಕ್ಕೆ ಚಿಕಿತ್ಸೆ ನೀಡಲು ಕೋವಿಡ್-19 ಆಸ್ಪತ್ರೆಗಳ ಮೂಲಸೌಕರ್ಯವು ಇಂದು ಪ್ರಬಲವಾಗಿದೆ. ಇದು 1383 ಮೀಸಲಾದ ಕೋವಿಡ್ ಆಸ್ಪತ್ರೆಗಳು, 3107 ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು ಮತ್ತು 10,382 ಕೋವಿಡ್ ಆರೈಕೆ ಕೇಂದ್ರಗಳನ್ನು ಹೊಂದಿದೆ. ಒಟ್ಟಾಗಿ 46,673 ಐಸಿಯು ಹಾಸಿಗೆಗಳನ್ನು ಹೊಂದಿದೆ. ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆಸ್ಪತ್ರೆಗಳಲ್ಲಿ 21,848 ವೆಂಟಿಲೇಟರ್ಗಳನ್ನು ಇಡಲಾಗಿದೆ. ಎನ್ 95 ಮುಖಗವಸುಗಳು ಮತ್ತು ಪಿಪಿಇ ಕಿಟ್ಗಳ ಕೊರತೆಯಿಲ್ಲ. ಕೇಂದ್ರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಸ್ಥೆಗಳಿಗೆ 235.58 ಲಕ್ಷ ಎನ್ 95 ಮುಖವಾಡಗಳು ಮತ್ತು 124.26 ಲಕ್ಷ ಪಿಪಿಇ ಕಿಟ್ಗಳನ್ನು ಪೂರೈಸಿದೆ.
ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಈ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in ಮತ್ತು @MoHFW_INDIA .
ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1639512)
Visitor Counter : 232
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam