PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 11 JUL 2020 6:28PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image006A0HR.jpg

ಕೋವಿಡ್ -19  ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಪ್ಡೇಟ್:

ಗುಣಮುಖ ಪ್ರಕರಣಗಳ ಸಂಖ್ಯೆ ಸುಮಾರು 5 ಲಕ್ಷ; ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ 2.31 ಲಕ್ಷದಷ್ಟು ಅಧಿಕ; ಗುಣಮುಖ ದರ ಸುಮಾರು 63 %

ಕೋವಿಡ್ -19 ರೋಗಿಗಳಲ್ಲಿ  ಗುಣಮುಖರಾದವರ ಒಟ್ಟು ಸಂಖ್ಯೆ ಇಂದು 5 ಲಕ್ಷ  ದಾಟಿದೆ. ಇದುವರೆಗೆ 5,15,385 ಕೋವಿಡ್ -19 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಗುಣಮುಖರಾದವರ ಸಂಖ್ಯೆ, ಕೋವಿಡ್ -19 ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ 2,31,978 ರಷ್ಟು ಅಧಿಕ. ವೃದ್ದಿಸುತ್ತಿರುವ ಅಂತರದಿಂದಾಗಿ , ಗುಣಮುಖ ದರ ಇನ್ನಷ್ಟು ಸುಧಾರಿಸಿ 62.78 %ಆಗಿದೆ. ಕಳೆದ 24 ಗಂಟೆಗಳಲ್ಲಿ , 19,870 ಕೋವಿಡ್ -19 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆಪ್ರಸ್ತುತ 2,83,407 ಸಕ್ರಿಯ ಪ್ರಕರಣಗಳಿದ್ದು, ಗಂಭೀರ ಪ್ರಕರಣಗಳು  ಎಲ್ಲವೂ ಕೇಂದ್ರ ಅಥವಾ ರಾಜ್ಯ ಸರಕಾರಗಳ ಆಸ್ಪತ್ರೆಗಳಲ್ಲಿ   ವೈದ್ಯಕೀಯ ಮೇಲುಸ್ತುವಾರಿಯಲ್ಲಿವೆ ಮತ್ತು ಸೋಂಕು ಪ್ರಾಥಮಿಕ ಹಂತದಲ್ಲಿರುವ ಹಾಗು ಮಧ್ಯಮ ರೋಗಲಕ್ಷಣಗಳನ್ನು ತೋರ್ಪಡಿಸುತ್ತಿರುವವರು ಗೃಹ ಕ್ವಾರಂಟೈನ್ ನಲ್ಲಿದ್ದಾರೆ. ಇದುವರೆಗೆ 1,13,07,002 ಸ್ಯಾಂಪಲ್ ಗಳನ್ನು ದೇಶದಲ್ಲಿ ಸರಕಾರಿ ಮತ್ತು ಖಾಸಗಿ ವಲಯದಲ್ಲಿ  .ಸಿ.ಎಂ.ಆರ್. ಹೊಂದಿರುವ  ರೋಗಪತ್ತೆ ಪ್ರಯೋಗಾಲಯಗಳ ಜಾಲವಾದ 1180 ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲಾಗಿದೆ.

ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಿದ್ದತೆಗಳ ಪ್ರಗತಿ ಪರಿಶೀಲನಾ ಸಭೆ

ಪ್ರಧಾನ ಮಂತ್ರಿ ಅವರಿಂದು ದೇಶದಲ್ಲಿಯ ಕೋವಿಡ್ -19 ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ , ನೀತಿ ಆಯೋಗ ಸದಸ್ಯರು, ಸಂಪುಟ ಕಾರ್ಯದರ್ಶಿ, ಮತ್ತು ಭಾರತ ಸರಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ವೈಯಕ್ತಿಕ ಸ್ವಚ್ಚತೆ ಪಾಲಿಸುವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲಿಸುವ ಅವಶ್ಯಕತೆಯನ್ನು ಪುನರುಚ್ಚರಿಸುವ ಅಗತ್ಯವನ್ನು ಪ್ರಧಾನ ಮಂತ್ರಿ ಒತ್ತಿ ಹೇಳಿದರು. ಕೋವಿಡ್ ಕುರಿತಂತೆ ಜಾಗೃತಿಯನ್ನು ವ್ಯಾಪಕವಾಗಿ ಪ್ರಚುರಪಡಿಸಬೇಕು ಮತ್ತು ಸೋಂಕು ಹರಡುವಿಕೆ ತಡೆಯತ್ತ ಸತತ ಒತ್ತು ನೀಡಬೇಕು ಎಂದರು. ರಾಷ್ಟ್ರ ಮಟ್ಟದಲ್ಲಿ ತಕ್ಷಣದ ಮಾಹಿತಿ ಲಭ್ಯವಾಗುವಂತೆ ಸಕಾಲಿಕ ನಿಗಾ ವ್ಯವಸ್ಥೆ ರೂಪಿಸುವಂತೆ ಹಾಗು ಎಲ್ಲಾ ಸಂತ್ರಸ್ತ ರಾಜ್ಯಗಳಿಗೆ ಮತ್ತು ಪಾಸಿಟಿವ್ ದರ ಹೆಚ್ಚು ಇರುವ ಸ್ಥಳಗಳಿಗೆ ಮಾರ್ಗದರ್ಶನ ಒದಗಿಸುವಂತೆ ಪ್ರಧಾನ ಮಂತ್ರಿ ಅವರು ನಿರ್ದೇಶನ ನೀಡಿದರು.

ಮಧ್ಯಮದಿಂದ ಗಂಭೀರ ಕೋವಿಡ್-19 ರೋಗಿಗಳ ಮೇಲೆ ನಿರ್ಬಂಧಿತ ತುರ್ತುಸ್ಥಿತಿಯಲ್ಲಿ ಇಟೊಲಿಜುಮಾಬ್ ಬಳಕೆಗೆ ಡಿ.ಸಿ.ಜಿ.. ಅನುಮತಿ

ಧೀರ್ಘಕಾಲದಿಂದ ಸೋರಿಯಾಸಿಸ್ ಚಿಕಿತ್ಸೆಗೆಂದು ಈಗಾಗಲೇ ಅನುಮೋದಿಸಲ್ಪಟ್ಟಿರುವ ಮೋನೋಕ್ಲೋನಲ್ ಪ್ರತಿಕಾಯ ಇಟೋಲಿಜುಮಾಬ್ (ಆರ್.ಡಿ.ಎನ್.. ಮೂಲ) ನ್ನು    ನಿರ್ಬಂಧಿತ ತುರ್ತು ಸ್ಥಿತಿಯಲ್ಲಿ ಕ್ಲಿನಿಕಲ್ ದತ್ತಾಂಶಗಳನ್ನು ಅವಲಂಬಿಸಿ ಬಳಸುವುದಕ್ಕೆ ಭಾರತೀಯ ಔಷಧ ನಿಯಂತ್ರಕರು (ಡಿ.ಸಿ.ಜಿ..) ಅನುಮತಿ ನೀಡಿದ್ದಾರೆ. ಮೆ. ಬಯೋಕಾನ್ ಸಂಸ್ಥೆಯು ಔಷಧಿಯನ್ನು ಮಧ್ಯಮದಿಂದ ಗಂಭೀರ ಪ್ರಮಾಣದ,  ಧೀರ್ಘಕಾಲದಿಂದ  ಕಾಡುತ್ತಿರುವ ಸೋರಿಯಾಸಿಸ್ ಚಿಕಿತ್ಸೆಗೆಂದು ಅಲ್ಜುಮಾಬ್  ಬ್ರಾಂಡ್ ಹೆಸರಿನಲ್ಲಿ ತಯಾರಿಸಿ ಮಾರುಕಟ್ತೆ ಮಾಡುತ್ತಿದೆ. ದೇಶೀಯ ಔಷಧಿಯನ್ನು ಈಗ ಕೋವಿಡ್ -19 ಉದ್ದೇಶಕ್ಕೆ  ಬಳಸಲಾಗುತ್ತಿದೆ. ಕೋವಿಡ್ -19 ರೋಗಿಗಳ ಮೇಲೆ ಕೈಗೊಂಡ ಎರಡನೆ ಹಂತದ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳನ್ನು ಮೆ. ಬಯೋಕಾನ್ ಸಂಸ್ಥೆಯು ಡಿ.ಸಿ.ಜಿ.. ಗೆ ನೀಡಿದೆ. ಕೋವಿಡ್ -19 ನಿಂದಾಗಿ ,  ಮಧ್ಯಮದಿಂದ ಗಂಭೀರ ಆಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ (.ಆರ್.ಡಿ.ಎಸ್.) ರೋಗಿಗಳಲ್ಲಿ ಕಂಡುಬರುವ ಸೈಟೋಕೈನ್ ರಿಲೀಸ್  ಸಿಂಡ್ರೋಮ್ (ಸಿ.ಆರ್.ಎಸ್.)  ಚಿಕಿತ್ಸೆಗಾಗಿ ನಿರ್ಬಂಧಿತ ತುರ್ತುಸ್ಥಿತಿಯಲ್ಲಿ ಇದನ್ನು ಬಳಸುವುದಕ್ಕೆ ಅನುಮತಿ ನೀಡಲು ಡಿ.ಸಿ.ಜಿ.. ನಿರ್ಧರಿಸಿದೆ.

ಕೋವಿಡ್ -೧೯ರ ಕ್ಲಿನಿಕಲ್ ನಿರ್ವಹಣೆ ವ್ಯೂಹಕ್ಕಾಗಿ ಆರೈಕೆಯ ಗುಣಮಟ್ಟ

ಕೋವಿಡ್ -19 ಚಿಕಿತ್ಸೆ ಕ್ರಮಗಳು ಇದುವರೆಗೆ ಯಾವುದೇ ಸಂಪೂರ್ಣ ಗುಣ ಮಾಡುವ ಔಷಧಿ ಲಭ್ಯ ಇಲ್ಲದೇ ಇರುವುದರಿಂದ ಬಹುಪಾಲು ಲಕ್ಷಣರಹಿತ ಮತ್ತು ಪೂರಕ ಆರೈಕೆಯನ್ನು ಆಧರಿಸಿರುತ್ತವೆ. ಉತ್ತಮ ಹೈಡ್ರೇಶನ್ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ರೋಗಲಕ್ಷಣಗಳ ಗಂಭೀರತೆ ಆಧಾರದಲ್ಲಿ , ಕೋವಿಡ್ -19  ನ್ನು ಮೂರು ಗುಂಪುಗಳಾಗಿ ಅಂದರೆ : ಲಘು, ಮಧ್ಯಮ, ಮತ್ತು ಗಂಭೀರ ಎಂದು ವರ್ಗೀಕರಿಸಬಹುದು. 10-07-2020ರಂದು ರಾಜ್ಯಗಳ ಜೊತೆ ನಡೆಸಲಾದ ವೀಡಿಯೋ ಕಾನ್ಫರೆನ್ಸ್ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣ ನಿಭಾವಣೆಯಲ್ಲಿ ಉತ್ಕೃಷ್ಟ ಕೇಂದ್ರಗಳುಕುರಿತ ವರ್ಚುವಲ್ ಸಭೆಯಲ್ಲಿ .ಸಿ.ಎಂ.ಆರ್. ಮತ್ತು ಹೊಸದಿಲ್ಲಿಯ ...ಎಂ.ಎಸ್. ಗಳು ಗುಣಪಡಿಸುವ ಔಷಧಿಯ ಗೈರುಹಾಜರಿಯಲ್ಲಿ ಲಘು, ಮಧ್ಯಮ ಮತ್ತು ಗಂಭೀರ ಪ್ರಕರಣಗಳ ಚಿಕಿತ್ಸಾ ಗುಣಮಟ್ಟವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ( ಎಂ..ಎಚ್.ಎಫ್.ಡಬ್ಲ್ಯು.) ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರದಲ್ಲಿ ವಿವರಿಸಿದ ಗುಣಮಟ್ಟದಲ್ಲಿ ಇದ್ದರೆ ಅದು ಬಹಳ ಪರಿಣಾಮಕಾರಿ ಎಂದು ಹೇಳಿವೆ. ಎಲ್ಲಾ ತನಿಖಾ /ಶೋಧ ಚಿಕಿತ್ಸಾ ಪ್ರಕ್ರಿಯೆಗಳನ್ನು ರೋಗಿಗಳ ಮೇಲೆ ನಿಕಟ ನಿಗಾ ಇಡಲು ಸಾಧ್ಯ ಇರುವ , ಸಂಭಾವ್ಯ ಸಂಕೀರ್ಣ ಪರಿಸ್ಥಿತಿಗಳನ್ನು  ನಿಭಾಯಿಸಲು ಸಾಧ್ಯ ಇರುವ ಸೂಕ್ತ ಆರೋಗ್ಯ ರಕ್ಷಣಾ  ಸೌಲಭ್ಯಗಳು ಇರುವಲ್ಲೇ ನಡೆಸಬೇಕು.

ಬೇಳೆ ಕಾಳುಗಳ ಬಿತ್ತನೆ ಪ್ರದೇಶ ಕಳೆದ ವರ್ಷದ ಖಾರೀಫ್ ಬೆಳೆಗಳಿಗೆ ಹೋಲಿಸಿದರೆ 2.5 ಪಟ್ಟು ಅಧಿಕ.; ತೈಲ ಬೀಜಗಳ ಬಿತ್ತನೆ ಪ್ರದೇಶವೂ ಗಮನಾರ್ಹವಾಗಿ ಹೆಚ್ಚಿದೆ ; ಅಕ್ಕಿ, ಸಿರಿ ಧಾನ್ಯಗಳು ಮತ್ತು ಹತ್ತಿ ಬಿತ್ತನೆ ಕೂಡಾ ಹೆಚ್ಚಳ

ಭಾರತ ಸರಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲತೆಗಳನ್ನು ಒದಗಿಸಿಕೊಡುವುದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಖಾರೀಫ್ ಬೆಳೆಗಳ ಬಿತ್ತನೆ ಪ್ರದೇಶ ವ್ಯಾಪ್ತಿಯಲ್ಲಿ ತೃಪ್ತಿಕರ ಪ್ರಗತಿ ದಾಖಾಲಾಗಿದೆ.

ಮೇಕ್ ಇನ್ ಇಂಡಿಯಾಕ್ಕಾಗಿ ಗಮನ ಕೇಂದ್ರಿತ ಮಧ್ಯಪ್ರವೇಶಗಳು: ಕೋವಿಡ್ -19 ಬಳಿಕ’-ಕುರಿತಂತೆ ಟಿ..ಎಫ್..ಸಿ. ಶ್ವೇತ ಪತ್ರ , ಡಾ. ಹರ್ಷವರ್ಧನ್ ಅವರಿಂದ ಬಿಡುಗಡೆ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ಭೂವಿಜ್ಞಾನ ಸಚಿವರಾದ ಡಾ. ಹರ್ಷವರ್ಧನ್ ಅವರು ಮೇಕ್ ಇನ್ ಇಂಡಿಯಾಕ್ಕಾಗಿ ಗಮನ ಕೇಂದ್ರಿತ ಮಧ್ಯಪ್ರವೇಶಗಳು : ಕೋವಿಡ್ -19 ಬಳಿಕಮತ್ತು ಸಕ್ರಿಯ ಔಷಧೀಯ ಘಟಕಾಂಶಗಳು: ಸ್ಥಿತಿಗಳು, ವಿಷಯಗಳು, ತಂತ್ರಜ್ಞಾನ ಸಿದ್ದತಾಸ್ಥಿತಿ ಮತ್ತು ಸವಾಲುಗಳುಕುರಿತಂತೆ  ತಂತ್ರಜ್ಞಾನ ಮಾಹಿತಿ, ಮುನ್ಸೂಚನೆ ಮತ್ತು  ಮೌಲ್ಯಮಾಪನ ಮಂಡಳಿ (ಟಿ..ಎಫ್..ಸಿ.) ತಯಾರಿಸಿದ ಶ್ವೇತಪತ್ರವನ್ನು ಬಿಡುಗಡೆ ಮಾಡಿದರು. ಇದು ವಲಯವಾರು ಶಕ್ತಿ/ಬಲ, ಮಾರುಕಟ್ಟೆ ಸ್ಥಿತಿ, ಮತ್ತು ಐದು ಕ್ಷೇತ್ರಗಳಲ್ಲಿ ಅವಕಾಶಗಳನ್ನು ಪಟ್ಟಿ ಮಾಡಿದೆ, ದೇಶದ ದೃಷ್ಟಿಯಿಂದ ಸಂಕೀರ್ಣವಾದ ಆರೋಗ್ಯರಕ್ಷಣೆ, ಯಾಂತ್ರಿಕ ವ್ಯವಸ್ಥೆ, .ಸಿ.ಟಿ., ಕೃಷಿ, ಉತ್ಪಾದನೆ, ಮತ್ತು ಇಲೆಕ್ಟ್ರಾನಿಕ್ಸ್ ಗಳ ಪೂರೈಕೆ ಮತ್ತು ಬೇಡಿಕೆಗೆ ಸಂಬಂಧಿಸಿದಂತೆ ವಿವರವನ್ನು ಒಳಗೊಂಡಿದೆ, ಸ್ವಾವಲಂಬನೆ ಮತ್ತು ದೊಡ್ಡ ಪ್ರಮಾಣದಲ್ಲಿ ಉತ್ಪಾದನಾ ಸಾಮರ್ಥ್ಯ. ಪ್ರಾಥಮಿಕವಾಗಿ ಸಾರ್ವಜನಿಕ ಆರೋಗ್ಯ  ವ್ಯವಸ್ಥೆ, ಎಂ.ಎಸ್.ಎಂ.. ವಲಯ, ಜಾಗತಿಕ ಸಂಬಂಧಗಳು: ಎಫ್.ಡಿ.., ಮರುರೂಪಿತ ವ್ಯಾಪಾರ ಹೊಂದಾಣಿಕೆಗಳು, ಹೊಸ ಕಾಲದ ತಂತ್ರಜ್ಞಾನಗಳು, ಇತ್ಯಾದಿಗಳನ್ನು ಅದು ಪ್ರಸ್ತಾಪಿಸಿದೆ. ಭಾರತವನ್ನು ಆತ್ಮನಿರ್ಭರ ವನ್ನಾಗಿಸಲು ತಕ್ಷಣದ ತಂತ್ರಜ್ಞಾನವನ್ನು ಒದಗಿಸಿ ನೀತಿ ವೇಗವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅದು ಶಿಫಾರಸುಗಳನ್ನು ಮಾಡಿದೆ. ವಿವಿಧ ವಲಯಗಳ ಅಂತರ್ ಅವಲಂಬನೆ ಮತ್ತು ಸಂಪರ್ಕಗಳನ್ನು ಆಧರಿಸಿ ವಿವಿಧ ವಲಯಗಳ ಉತ್ಪಾದನೆ ಮತ್ತು ಆದಾಯ ಹೆಚ್ಚಳ ವನ್ನು ಶ್ವೇತಪತ್ರವು ಒಳಗೊಂಡಿದೆ.

ಹಸಿರು ಮತ್ತು ಸುಸ್ಥಿರ ವಾಸ್ತುಶಿಲ್ಪ ಅಳವಡಿಸಿಕೊಳ್ಳಲು ಉಪ ರಾಷ್ಟ್ರಪತಿ ಕರೆ

ಭಾರತದ ಉಪರಾಷ್ಟ್ರಪತಿ ಶ್ರೀ ಎಂ.ವಿ. ವೆಂಕಯ್ಯ ನಾಯ್ಡು ಅವರಿಂದು ಹಸಿರು ವಾಸ್ತುಶಿಲ್ಪವನ್ನು ಅಳವಡಿಸಿಕೊಳ್ಳಬೇಕು ಮತ್ತು ಉತ್ತೇಜಿಸಬೇಕು ಎಂದು ದೇಶದ ವಾಸ್ತುಶಿಲ್ಪಿಗಳಿಗೆ ಕರೆ ನೀಡಿದ್ದಾರೆ. ಸೌರ ವಿದ್ಯುತ್ತಿನಂತಹ ಮರುನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಬರಲಿರುವ ಕಟ್ಟಡ ಯೋಜನೆಗಳಲ್ಲಿ ಉತ್ತೇಜಿಸಬೇಕು ಎಂದವರು ಹೇಳಿದರು. ಜನತೆಯ ಆರೋಗ್ಯ ಮತ್ತು ಜೀವನೋಪಾಯಗಳ ಮೇಲೆ ಕೋವಿಡ್ -19 ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗಳು ಕಾಮಗಾರಿ ಸ್ಥಳದಲ್ಲಿ ಕೆಲಸದ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿತವಾಗಿದೆ, ಇದರಿಂದ ನಿರ್ಮಾಣ ವಲಯದ ಮೇಲೆ  ಗಂಭೀರವಾದ ಪರಿಣಾಮಗಳಾಗಿವೆ ಎಂದರಲ್ಲದೆ , ಜಾಗತಿಕ ಸಾಂಕ್ರಾಮಿಕ ತಂದಿಟ್ಟಿರುವ ಸವಾಲುಗಳಿಗೆ ವಾಸ್ತುಶಿಲ್ಪಿಗಳು ಮತ್ತು  ವಿನ್ಯಾಸಕಾರರು ಉತ್ತರ ಕಂಡುಹುಡುಕಬೇಕು ಎಂದೂ ಕರೆ ನೀಡಿದರು. “ ವಾಸ್ತುಶಿಲ್ಪಿಗಳು ಜಾಗತಿಕ ಸಾಂಕ್ರಾಮಿಕ ಮತ್ತು ಅದರ ಬಳಿಕದ ಪರಿಸ್ಥಿತಿಯಲ್ಲಿ ಅದರ ಪರಿಣಾಮಗಳನ್ನು ನಿವಾರಿಸಬಹುದಾದಂತಹ  ಪರಿಹಾರಗಳನ್ನು ಹುಡುಕಲು ಸಹಾಯ ಮಾಡುವುದಕ್ಕಾಗಿ ಹೊಸ ಚಿಂತನೆಗಳನ್ನು ಅನ್ವೇಷಿಸಬೇಕು ಮತ್ತು ವಿನ್ಯಾಸ ಗಡಿಗಳ ಜೊತೆ ಸಂವಾದ ನಡೆಸುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕು ಎಂದೂ ಅವರು ಹೇಳಿದರು.

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: 12 ನೇ ತರಗತಿಯ ಬಾಕಿ ಇರುವ ಪರೀಕ್ಷೆಗಳನ್ನು ರದ್ದು ಮಾಡಲು ಪಂಜಾಬ್ ಸರಕಾರ ನಿರ್ಧರಿಸಿದೆ. ಮರು ಹಾಜರಾಗಬೇಕಾದ ಇತರ ವರ್ಗಗಳ  ಪರೀಕ್ಷೆಗಳನ್ನೂ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಈಗ ಪಂಜಾಬ್ ಶಾಲಾ ಶಿಕ್ಷಣ ಮಂಡಳಿ( ಪಿ.ಎಸ್..ಬಿ.) ಯು ಕೋವಿಡ್ ಸ್ಪೋಟಕ್ಕೆ ಮೊದಲು ನಡೆಸಿದ ಕೆಲವು ವಿಷಯಗಳ ಪರೀಕ್ಷೆಗಳ ಸಾಧನೆಗಳ ಆಧಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲಿದೆ
  • ಹರ್ಯಾಣಾ: ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅವರು ಕೋವಿಡ್ -19  ಜಾಗತಿಕ ಸಾಂಕ್ರಾಮಿಕದಿಂದಾಗಿ ಅಸ್ತವ್ಯಸ್ತಗೊಂಡಿರುವ ಕಾರ್ಯಚಟುವಟಿಕೆಗಳು ಈಗ ನಿಧಾನವಾಗಿ ಹಳಿಗೆ ಬರುತ್ತಿವೆ. ಕೋವಿಡ್ -19 ನಿಭಾಯಿಸಲು ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ. ಅನ್ ಲಾಕ್ -2 ರಲ್ಲಿ ಎಲ್ಲಾ ಕಾರ್ಯಚಟುವಟಿಕೆಗಳೂ ವೇಗ ಪಡೆದಿವೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ರಾಜ್ಯ ಸರಕಾರವು 3,000 ಕೋ.ರೂ.ಗಳನ್ನು ಖರ್ಚು ಮಾಡಿದೆ ಎಂದೂ ಅವರು ಹೇಳಿದರು.
  • ಕೇರಳ: ಕೋವಿಡ್ -19 ಪ್ರಕರಣಗಳ ಹರಡುವಿಕೆಗೆ ಸ್ಥಳೀಯ ಕೇಂದ್ರವಾಗಿ ಮಾರ್ಪಟ್ಟಿರುವ  ಪೂಂಥುರಾದಲ್ಲಿ ತ್ವರಿತ ಪ್ರತಿಕ್ರಿಯಾ ತಂಡವನ್ನು ರೂಪಿಸಲಾಗಿದೆ. ಕಂದಾಯ, ಪೊಲೀಸ್, ಮತ್ತು ಆರೋಗ್ಯ ಇಲಾಖಾ ಅಧಿಕಾರಿಗಳು ತಂಡದಲ್ಲಿದ್ದು, ರೋಗ ತಡೆ ಕಾರ್ಯಚಟುವಟಿಕೆಗಳನ್ನು ಬಲಪಡಿಸಲಿದ್ದಾರೆ. ರಾಜ್ಯದಲ್ಲಿ ಕೋವಿಡ್ -19 ಸಮುದಾಯ ಪ್ರಸರಣದ ಹಂತಕ್ಕೆ ತಲುಪಿದೆ ಎಂಬುದನ್ನು ಪುನರುಚ್ಚರಿಸಿರುವ .ಎಂ.. ಯು ರೋಗ ಲಕ್ಷಣ ತೋರ್ಪಡಿಸದ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಎಂದೂ ಹೇಳಿದೆ. ನಡುವೆ ಶುಕ್ರವಾರದಂದು ಹೃದಯಾಘಾತದಿಂದ ಮೃತಪಟ್ಟ ಎರ್ನಾಕುಲಂ ನಿವಾಸಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಚೆರ್ತಾಲಾ ತಾಲೂಕು ಆಸ್ಪತ್ರೆಯಲ್ಲಿ ಓರ್ವ ಹೆರಿಗೆ ಶಾಸ್ತ್ರಜ್ಞೆ ಸಹಿತ ಎಂಟು ಮಂದಿ ಪಾಸಿಟಿವ್ ಆಗಿದ್ದಾರೆ. ರಾಜ್ಯದಲ್ಲಿ ನಿನ್ನೆ 416 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇವುಗಳಲ್ಲಿ 204 ಸ್ಥಳೀಯವಾಗಿ ಪ್ರಸರಣಗೊಂಡ ಪ್ರಕರಣಗಳಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,84,112 ಜನರು ನಿಗಾದಲ್ಲಿದ್ದಾರೆ. .
  • ತಮಿಳು ನಾಡು : 64 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಪುದುಚೇರಿಯಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 1337 ಕ್ಕೇರಿದೆ. ಮತೋರ್ವರು ರೋಗಕ್ಕೆ ಬಲಿಯಾಗುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 18 ಕ್ಕೇರಿದೆ. ಡಿಜಿಟಲ್ ಸಂಪರ್ಕ ಸಮಸ್ಯೆಗಳು ಇರುವುದರಿಂದ ಆನ್ ಲೈನ್ ಪರೀಕ್ಷೆ ನಡೆಸುವುದು ಕಾರ್ಯ ಸಾಧ್ಯವಲ್ಲದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಪರ್ಯಾಯ ಮೌಲ್ಯಮಾಪನ ವಿಧಾನಗಳ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿಗಳು ಕೇಂದ್ರವನ್ನು ಕೋರಿದ್ದಾರೆ. ಇರಾನಿನಿಂದ ಇಲ್ಲಿಗೆ ಬಂದು ಬಾಕಿಯಾಗಿರುವ 40 ಮೀನುಗಾರರನ್ನು ಹಿಂದಕ್ಕೆ ಕಳುಹಿಸಿಕೊಡುವಂತೆ   ಮುಖ್ಯಮಂತ್ರಿಗಳು ಕೇಂದ್ರವನ್ನು ಕೋರಿದ್ದಾರೆ. 681 ಮಂದಿ ಇತರ ಮೀನುಗಾರರು ಅವರ ದೇಶಗಳಿಗೆ ಮರಳಿದ್ದರೂ , ಹಡಗಿನಲ್ಲಿ ಸ್ಥಳವಿಲ್ಲದ ಕಾರಣಕ್ಕೆ ಇವರನ್ನು ಇಲ್ಲಿಯೇ ಬಿಟ್ಟು ಹೋಗಲಾಗಿದೆ. ನಿನ್ನೆ 3680 ಹೊಸ ಪ್ರಕರಣಗಳು ವರದಿಯಾಗಿವೆ, 4163 ಮಂದಿ ಗುಣಮುಖರಾಗಿದ್ದಾರೆ, ಮತ್ತು 64 ಮಂದಿ  ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ : 1,30,261, ಸಕ್ರಿಯ ಪ್ರಕರಣಗಳ ಸಂಖ್ಯೆ: 46,105, ಸಾವಿನ ಸಂಖ್ಯೆ: 1829. ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು: 18,616. 
  • ಕರ್ನಾಟಕ: ಬೆಂಗಳೂರಿನಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಭಾರೀ ಏರಿಕೆಯಾಗುತ್ತಿರುವುದರಿಂದ ಕಂಗೆಟ್ಟಿರುವ ರಾಜ್ಯ ಸರಕಾರ ಇಂದಿನಿಂದ ನಗರದಲ್ಲಿ ತ್ವರಿತ ಆಂಟಿಜೆನ್ ಪರೀಕ್ಷೆ ಅರಂಭಿಸಿದೆ. ಇದು 30 ನಿಮಿಷದಲ್ಲಿ ಫಲಿತಾಂಶ ಕೊಡುತ್ತದೆ. ಮತ್ತು ಇದರಿಂದ ಪರೀಕ್ಷೆಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಕೋವಿಡ್ ರೋಗಿಗಳಿಗಾಗಿ ಲಭ್ಯ ಇರುವ ಹಾಸಿಗೆಗಳನ್ನು ತೋರಿಸುವ ಸಕಾಲಿಕ ಡಿಜಿಟಲ್  ಮಾಹಿತಿ ವ್ಯವಸ್ಥೆಯನ್ನು ಸ್ಥಾಪಿಸುವ ಅವಶ್ಯಕತೆಯನ್ನು ಪರಿಶೀಲಿಸುವಂತೆ ಹೈಕೋರ್ಟು ರಾಜ್ಯ ಸರಕಾರಕ್ಕೆ ಸೂಚಿಸಿದೆ. ವಾರಾಂತ್ಯದ ಲಾಕ್ ಡೌನ್ ಜಾರಿಯ ಅವಶ್ಯಕತೆ ಇಲ್ಲ ಎಂದಿರುವ ಕಂದಾಯ ಸಚಿವರು ತಜ್ಞರ ಜೊತೆ ಸಮಾಲೋಚಿಸಿದ ಬಳಿಕ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ. ನಡುವೆ ರಾಜ್ಯದಲ್ಲಿ ಮೃತರ ಸಂಖ್ಯೆ 500 ಗಡಿ ದಾಟಿದೆ. 2313 ಹೊಸ ಪ್ರಕರಣಗಳು, 1003 ಗುಣಮುಖರಾಗಿ ಬಿಡುಗಡೆ , ಮತ್ತು 57 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ : 33,418. ಸಕ್ರಿಯ ಪ್ರಕರಣಗಳು: 19,035, ಸಾವುಗಳ ಸಂಖ್ಯೆ: 543.
  • ಆಂಧ್ರ ಪ್ರದೇಶ: ಲಕ್ಷಣ ರಹಿತ ಮತ್ತು ಲಘು ಕೋವಿಡ್ -19 ಪ್ರಕರಣಗಳನ್ನು ನಿಭಾಯಿಸಲು ಪ್ರತೀ ಜಿಲ್ಲೆಯಲ್ಲೂ ತಲಾ ಕನಿಷ್ಟ 3,000 ಹಾಸಿಗೆಗಳು ಲಭ್ಯವಾಗಿರುವಂತೆ ಖಾತ್ರಿಪಡಿಸಲು ಎಲ್ಲಾ 13 ಜಿಲ್ಲೆಗಳಲ್ಲೂ ಒಟ್ಟು 45,240 ಹಾಸಿಗೆ ಸಾಮರ್ಥ್ಯದ 76 ಕೋವಿಡ್ ಆರೈಕೆ ಕೇಂದ್ರಗಳನ್ನು ರಾಜ್ಯ ಸರಕಾರ ಗುರುತಿಸಿದೆ. ಆಸ್ಪತ್ರೆ ವಠಾರಗಳನ್ನು ಅದರಲ್ಲೂ ವಿಶೇಷವಾಗಿ ಶೌಚಾಲಯ ಸುಧಾರಣೆಗಳಿಗಾಗಿ  , ವೈದ್ಯಕೀಯ ಸಲಕರಣೆಗಳಾದ ಮೊಬೈಲ್ ಎಕ್ಸ್-ರೇ, .ಸಿ.ಜಿ., ಮತ್ತು ಇತರ ಪ್ರಯೋಗಾಲಯ ಸಲಕರಣೆಗಳು , ರೋಗಿಗಳ ಮೇಲೆ ಸತತ ನಿಗಾ ಇಡುವ ಪಮುಖ ಸಲಕರಣೆಗಳಿಗಾಗಿ ಒಂದು ಕೋ.ರೂ.ಗಳನ್ನು ಮಂಜೂರು ಮಾಡಲಾಗಿದೆ. ಕೋವಿಡ್ -19  ಕ್ಕೆ ಬಲಿಯಾದ ಮೂರು ರೋಗಿಗಳ ಮೃತದೇಹಗಳ  ಅಂತ್ಯ ಸಂಸ್ಕಾರವನ್ನು ಆರ್ಥ್ ಮೂವರ್ ಯಂತ್ರ ಬಳಸಿ ಅಮಾನವೀಯ ಮಾದರಿಯಲ್ಲಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಆರ್.ಡಿ.. ಅವರನ್ನು ವಿಶೇಷಾಧಿಕಾರಿಯನ್ನಾಗಿ ನೆಲ್ಲೂರು ಜಿಲ್ಲಾಧಿಕಾರಿ ನೇಮಿಸಿದ್ದಾರೆ. ನಿನ್ನೆ 1608 ಹೊಸ ಪ್ರಕರಣಗಳು ಮತ್ತು 15 ಸಾವುಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು : 25,422. ಸಕ್ರಿಯ ಪ್ರಕರಣಗಳು: 11,936, ಸಾವುಗಳು: 292
  • ತೆಲಂಗಾಣ: ರಾಜ್ಯದಲ್ಲಿ ಕೋವಿಡ್ -19 ನಿರ್ವಹಣೆಯ ಮೇಲೆ ನಿಗಾ ಇಡಲು 11 ಸದಸ್ಯರ ವೈದ್ಯಕೀಯ ತಂಡವನ್ನು ರಾಜ್ಯ ಸರಕಾರ ನೇಮಿಸಿದೆ. ಉನ್ನತ ವೈದ್ಯರನ್ನು ಒಳಗೊಂಡ ಹೊಸ ತಂಡ ವೈದ್ಯಕೀಯ ಶಿಕ್ಷಣ ನಿರ್ದೇಶಕರ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಯಮಿತವಾಗಿ ವರದಿಗಳನ್ನು ಸಲ್ಲಿಸುತ್ತದೆ. ನಿನ್ನೆಯವರೆಗೆ ಒಟ್ಟು ವರದಿಯಾದ ಪ್ರಕರಣಗಳು: 32,224, ಸಕ್ರಿಯ ಪ್ರಕರಣಗಳು: 12,680, ಸಾವಿನ ಸಂಖ್ಯೆ: 339, ಗುಣಮುಖರಾಗಿ ಬಿಡುಗಡೆಯಾದವರು: 19,205
  • ಅಸ್ಸಾಂ: ಲಾಕ್ ಡೌನ್ ನಿಂದಾಗಿ ದುರ್ಬಲ ವರ್ಗದವರು ಅನುಭವಿಸುತ್ತಿರುವ ಕಷ್ಟಗಳನ್ನು ಗಮನಕ್ಕೆ ತೆಗೆದುಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೋವಾಲ್ ಅವರು ನಿರ್ಗತಿಕರಿಗೆ, ದಿನಗೂಲಿಗಳಿಗೆ ಮತ್ತು ಸಮಾಜದ ಬಡವರ್ಗದವರಿಗೆ ಆಹಾರ ಒದಗಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.
  • ಮಣಿಪುರ: ಮಣಿಪುರದ ಥಂಗಾಲ್ ಕೀಥೆಲ್ ನಲ್ಲಿ ಅಂಗಡಿಗಳ ತೆರೆಯುವಿಕೆಗೆ ಸಂಬಂಧಿಸಿ ಮಾರ್ಗದರ್ಶಿಗಳನ್ನು ಹೊರಡಿಸಲಾಗಿದೆ.
  • ಮೇಘಾಲಯ: ಮೇಘಾಲಯದಲ್ಲಿಂದು ಮತ್ತೆ 76 ಮಂದಿ ಕೋವಿಡ್ -19 ಪರೀಕ್ಶೆಯಲ್ಲಿ ಪಾಸಿಟಿವ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ :215 , ಇದುವರೆಗೆ 45 ಮಂದಿ ಗುಣಮುಖರಾಗಿದ್ದಾರೆ.
  • ಮಿಜೋರಾಂ: ಮಿಜೋರಾಂನಲ್ಲಿ ಕೋವಿಡ್ -19 ರಿಂದ ಗುಣಮುಖರಾದ ಏಳು ಮಂದಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 76. ಇದುವರೆಗೆ ಗುಣಮುಖರಾದವರ ಸಂಖ್ಯೆ 150 .
  • ನಾಗಾಲ್ಯಾಂಡ್ : ಕೋವಿಡ್ -19 ಕ್ಕೆ ಸಂಬಂಧಿಸಿದ ನಾಗಾಲ್ಯಾಂಡಿನ ಉನ್ನತಾಧಿಕಾರದ ಸಮಿತಿಯು ರಾಜ್ಯಾದ್ಯಂತ ಆರೋಗ್ಯ ರಕ್ಷಣ ವ್ಯವಸ್ಥೆಯನ್ನು ಬಲಪಡಿಸಲು  ಹೆಚ್ಚುವರಿ ವೈದ್ಯರನ್ನು ಮತ್ತು ದಾದಿಯರನ್ನು  ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದೆ.
  • ಸಿಕ್ಕಿಂ: ಎಸ್.ಟಿ.ಎನ್.ಎಂ. ಅಸ್ಪತ್ರೆಯ ಕೋವಿಡ್ -19 ಕ್ಕಾಗಿಯೇ ಇರುವ ಕೇಂದ್ರದಲ್ಲಿ ಅತ್ಯಂತ ಹಿರಿಯ ರೋಗಿ (65  ವರ್ಷಮತ್ತು ಅತ್ಯಂತ ಕಿರಿಯ ರೋಗಿ ( 2 ವರ್ಷ) ಗಳಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಸಿಕ್ಕಿಂನ ಎಸ್.ಟಿ.ಎನ್.ಎಂ. ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಮತ್ತೆ ಹೊಸದಾಗಿ 7,862 ರೋಗಿಗಳು ಪಾಸಿಟಿವ್ ಎಂದು ಗುರುತಿಸಲ್ಪಡುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 2,38,461 ಕ್ಕೇರಿದೆ. ಗುಣಮುಖರಾದ ಒಟ್ಟು ರೋಗಿಗಳ ಸಂಖ್ಯೆ 1,32,625 ಕ್ಕೇರಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಪ್ರಸ್ತುತ 95,647  ಸಕ್ರಿಯ ಪ್ರಕರಣಗಳಿವೆ. ಮುಂಬಯಿಯಲ್ಲಿ ವರದಿಯಾಗುವ ಪ್ರಕರಣಗಳಲ್ಲಿ ಸ್ಥಿರತೆ ಕಂಡುಬಂದಿದೆ, ಪುಣೆ, ಥಾಣೆ, ಕಲ್ಯಾಣ್ ಮತ್ತು ಮಿರಾಭಾಯಿಂದರ್ ನಗರಗಳಲ್ಲಿ ಕೋವಿಡ್ -19 ರೋಗಿಗಳ ಸಂಖ್ಯೆಯಲ್ಲಿ ಸತತ ಏರಿಕೆ ಕಂಡುಬರುತ್ತಿದೆ.
  • ಗುಜರಾತ್: ಗುಜರಾತಿನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 40 ಸಾವಿರ ದಾಟಿದೆ. ಈಗ ಅದು 40,155 ರಲ್ಲಿದೆ. ಕಳೆದ 24 ಗಂಟೆಗಳಲ್ಲಿ 875 ಹೊಸ ಪ್ರಕರಣಗಳು ವರದಿಯಾಗಿವೆ. 14 ರೋಗಿಗಳು ಜೀವಕಳೆದುಕೊಂಡಿದ್ದು, ಕೋವಿಡ್ -19 ರಿಂದಾಗಿ ಒಟ್ಟು ಸಾವಿನ ಸಂಖ್ಯೆ 2,024 ಕ್ಕೇರಿದೆ. ಸೂರತ್ತಿನಿಂದ ಗರಿಷ್ಟ ಸಂಖ್ಯೆಯಲ್ಲಿ ಅಂದರೆ 202 ಪ್ರಕರಣಗಳು ಹಾಗು ಬಳಿಕ ಅಹ್ಮದಾಬಾದಿನಿಂದ 165 ಹೊಸ ಪ್ರಕರಣಗಳು ವರದಿಯಾಗಿವೆ.
  • ರಾಜಸ್ಥಾನ : ಇಂದು ಬೆಳಿಗ್ಗೆ 170 ಹೊಸ ಪಾಸಿಟಿವ್ ಪ್ರಕರಣಗಳು ಮತ್ತು 2 ಸಾವುಗಳು ಸಂಭವಿಸುವುದರೊಂದಿಗೆ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಒಟ್ಟು ಸಂಖ್ಯೆ 23,344 ಕ್ಕೇರಿದೆ. ಅಲ್ವಾರ್ ಜಿಲ್ಲೆಯಲ್ಲಿ  ಇಂದು 40 ಹೊಸ ಪ್ರಕರಣಗಳು ಕಂಡುಬಂದಿವೆ. ಜೈಪುರದಲ್ಲಿ -33 ಪ್ರಕರಣಗಳು, ಮತ್ತು ಉದಯಪುರದಲ್ಲಿ 31 ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ 5211 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 17,634 ಕ್ಕೇರಿದೆ ಮತ್ತು ಮೃತಪಟ್ಟವರ ಸಂಖ್ಯೆ 499 ಕ್ಕೇರಿದೆ.
  • ಮಧ್ಯಪ್ರದೇಶ: 316 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗುವುದರೊಂದಿಗೆ ಮಧ್ಯಪ್ರದೇಶದಲ್ಲಿ ಒಟ್ಟು ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 16,657 ಕ್ಕೇರಿದೆ. ಗ್ವಾಲಿಯರ್ ನಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಅಂದರೆ 60 ಪ್ರಕರಣಗಳು ವರದಿಯಾಗಿವೆ. ಭೋಪಾಲಿನಲ್ಲಿ 57 ಮತ್ತು ಇಂಧೋರಿನಲ್ಲಿ 44 ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ ಮಧ್ಯ ಪ್ರದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 3538, ಗುಣಮುಖರಾದವರ ಸಂಖ್ಯೆ 12,481 ಕ್ಕೆ ತಲುಪಿದೆ. ನಡುವೆ ರಾಜ್ಯ ಸರಕಾರದ ಕೊರೋನಾ ಕೊಲ್ಲಿ ಆಂದೋಲನ” (ಕಿಲ್ ಕೊರೊನಾ ಕ್ಯಾಂಪೇನ್) ಅಡಿಯಲ್ಲಿ 66% ಜನಸಂಖ್ಯಾ ಸಮೀಕ್ಷೆ ಕೆಲಸ ಪೂರ್ಣಗೊಂಡಿದೆ.
  • ಛತ್ತೀಸ್ ಗಢ: ಶುಕ್ರವಾರದಂದು 166 ಕೋವಿಡ್ -19 ಪಾಸಿಟಿವ್ ರೋಗಿಗಳು ಗುರುತಿಸಲ್ಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಕೊರೊನಾವೈರಸ್ ಬಾಧಿತರ ಒಟ್ಟು ಸಂಖ್ಯೆ 3,832 ಕ್ಕೇರಿದೆ. ರಾಯಪುರ ಮತ್ತು ಬಲೋಡಾಬಜಾರ್ ಜಿಲ್ಲೆಗಳಲ್ಲಿ ಒಂದೇ ದಿನದಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಅಂದರೆ ತಲಾ 34 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳು 787. 
  • ಗೋವಾ: ಶುಕ್ರವಾರದಂದು 100 ಮಂದಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 2,251 ಕ್ಕೇರಿದೆ. ಗುಣಮುಖರಾದವರ ಸಂಖ್ಯೆ 1347 ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 895

ವಾಸ್ತವ ಪರಿಶೀಲನೆ

Image

***



(Release ID: 1638284) Visitor Counter : 247