PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 09 JUL 2020 6:30PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002NZFB.png

https://static.pib.gov.in/WriteReadData/userfiles/image/image001L7XC.jpg

https://static.pib.gov.in/WriteReadData/userfiles/image/image005GOD5.jpg https://static.pib.gov.in/WriteReadData/userfiles/image/image006N1S9.jpg

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್-19 ತಾಜಾ ಮಾಹಿತಿ: ಸಕ್ರಿಯ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖವಾದ ಪ್ರಕರಣಗಳು 1.75 ಪಟ್ಟು ಅಧಿಕ; ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದವರ ನಡುವಿನ ಪ್ರಮಾಣ 2 ಲಕ್ಷಕ್ಕೂ ಅಧಿಕ; ಗುಣಮುಖರಾದವರ ಪ್ರಮಾಣ ರಾಷ್ಟ್ರೀಯ ಸರಾಸರಿ ಮತ್ತಷ್ಟು ಸುಧಾರಣೆಗೊಂಡು ಶೇ.62.09ಕ್ಕೆ ಏರಿಕೆ

ಮಹತ್ವದ ಸಾಧನೆಯಲ್ಲಿ ಕೋವಿಡ್-19 ಸೋಂಕು ಸಕ್ರಿಯವಾಗಿರುವವರ ಸಂಖ್ಯೆಗಿಂತ ಗುಣಮುಖರಾಗಿರುವವರ ಸಂಖ್ಯೆ  2,06,588ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖರಾದವರ ಪ್ರಕರಣಗಳು 1.75 ಪಟ್ಟು ಅಧಿಕ. ಕಳೆದ 24 ಗಂಟೆಗಳಿಂದೀಚೆಗೆ ಒಟ್ಟು 19,547 ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,76,377ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ, ಪರಿಣಾಮಕಾರಿ ಕಣ್ಗಾವಲು ಮತ್ತು ಮನೆ ಮನೆ ಸಮೀಕ್ಷೆ, ಕೋವಿಡ್-19 ಸೋಂಕಿತರ ತ್ವರಿತ ಪತ್ತೆ ಮತ್ತು ಐಸೋಲೇಷನ್, ಸಕಾಲದಲ್ಲಿ ಪರಿಣಾಮಕಾರಿ ಚಿಕಿತ್ಸೆ ಹಾಗೂ ನಿರ್ವಹಣೆ ಎಲ್ಲ ಕಾರಣಗಳಿಂದಾಗಿ ಉತ್ತಮ ಫಲಿತಾಂಶ ಸಾಧ್ಯವಾಗಿದೆ. ಪ್ರಸ್ತುತ 2,69,789 ಸಕ್ರಿಯ ಪ್ರಕರಣಗಳು ಇವೆ ಮತ್ತು ಅವೆಲ್ಲಾ ತೀವ್ರ ವೈದ್ಯಕೀಯ ನಿಗಾದಲ್ಲಿವೆ. ಭಾರತದಲ್ಲಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ಕೋವಿಡ್-19 ರೋಗಿಗಳಲ್ಲಿ ಗುಣಮುಖರಾಗಿರುವವರ ಪ್ರಮಾಣ ಇಂದು ಶೇ.62.09ಕ್ಕೆ ಏರಿಕೆಯಾಗಿದೆ.

https://static.pib.gov.in/WriteReadData/userfiles/image/image0078Q69.jpg

ಕೋವಿಡ್-19 ಕುರಿತ ಸಚಿವರ ಉನ್ನತ ಮಟ್ಟದ 18ನೇ ಸಭೆಯ ಅಧ್ಯಕ್ಷತೆ ವಹಿಸಿದ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್-19 ಕುರಿತಂತೆ ರಚಿಸಲಾಗಿರುವ ಉನ್ನತ ಮಟ್ಟದ ಸಚಿವರ ಸಮಿತಿಯ 18ನೇ ಸಭೆ ನಡೆಯಿತು. ಸಭೆಯಲ್ಲಿ ದೇಶದಲ್ಲಿ ಈವರೆಗೆ 3914 ಸೌಕರ್ಯಗಳನ್ನು ಸೃಷ್ಟಿಸಲಾಗಿದ್ದು, ಅವುಗಳಲ್ಲಿ 3,77,737 ಐಸೋಲೇಷನ್ ಹಾಸಿಗೆಗಳು(ಐಸಿಯು ಇಲ್ಲದಿರುವುದು), 39,820 ಐಸಿಯು ಹಾಸಿಗೆಗಳು ಮತ್ತು 1,42,415 ಆಕ್ಸಿಜನ್ ಸೌಕರ್ಯವಿರುವ ಹಾಗೂ 20,047 ವೆಂಟಿಲೇಶನ್ ಸೌಕರ್ಯವಿರುವ ಹಾಸಿಗೆಗಳಿವೆ ಎಂದು ಮಾಹಿತಿ ನೀಡಲಾಯಿತು. ಆರೋಗ್ಯ ರಕ್ಷಣಾ ಸೌಕರ್ಯಗಳಿಗೆ ಸಂಬಂಧಿಸಿದಂತೆ 213.55 ಲಕ್ಷ ಎನ್ 95  ಮಾಸ್ಕ್ ಗಳು, 120.94 ಲಕ್ಷ ಪಿಪಿಇಗಳು ಮತ್ತು 612.57 ಲಕ್ಷ ಹೆಚ್ ಸಿಕ್ಯೂ ಮಾತ್ರೆಗಳನ್ನು ವಿತರಿಸಲಾಗಿದೆ. ಜಾಗತಿಕವಾಗಿ ತೀವ್ರ ಸೋಂಕಿನಿಂದ ಬಾಧಿತವಾಗಿರುವ 5 ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ. ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಜನರಿಗೆ ಸೋಂಕು(538) ಇದ್ದು, ಪ್ರತಿ ಮಿಲಿಯನ್ ಜನಸಂಖ್ಯೆಗೆ ಸಾವಿನ ಪ್ರಮಾಣ(15) ಇದೆ. ಜಾಗತಿಕ ಸರಾಸರಿ ಕ್ರಮವಾಗಿ 1453 ಮತ್ತು 68.7ರಷ್ಟಿದೆ. ದೇಶದ ಒಳಗೆ 8 ರಾಜ್ಯಗಳು(ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್) ಇವು ಶೇ.90ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. 49 ಜಿಲ್ಲೆಗಳಲ್ಲಿ ಶೇ.890ರಷ್ಟು ಸಕ್ರಿಯ ಪ್ರಕರಣಗಳಿವೆ. ಅಲ್ಲದೆ 6 ರಾಜ್ಯಗಳು(ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ) ಇಲ್ಲಿ ಒಟ್ಟಾರೆ ಸಾವಿನ ಸಂಖ್ಯೆಯಲ್ಲಿ ಶೇ.86ರಷ್ಟು ಸಂಭವಿಸಿವೆ ಮತ್ತು 32 ಜಿಲ್ಲೆಗಳಲ್ಲಿ ಶೇ.80ರಷ್ಟು ಸಾವು ಸಂಭವಿಸಿವೆ.

ಭಾರತೀಯ ಜಾಗತಿಕ ಸಪ್ತಾಹ ಉದ್ಘಾಟನಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ; ಜಾಗತಿಕ ಪುನಶ್ಚೇತನದಲ್ಲಿ ಭಾರತ ಮುಂಚೂಣಿ ಪಾತ್ರವಹಿಸಲಿದೆ: ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಜಾಗತಿಕ ಸಪ್ತಾಹ ಉದ್ಘಾಟನಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪ್ರಸಕ್ತ ಸಂಕಷ್ಟದ ಸಮಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಜಾಗತಿಕ ಪುನಶ್ಚೇತನ ಕಾರ್ಯದಲ್ಲಿ ಭಾರತ ಮುಂಚೂಣಿ ಪಾತ್ರವಹಿಸಲಿದೆ ಎಂದರು. ಇದಕ್ಕೆ ಎರಡು ಅಂಶಗಳು ಪ್ರಮುಖ ಕಾರಣವಾಗಿವೆ. ಮೊದಲನೆಯದು ಭಾರತದ ಪ್ರತಿಭೆ ಮತ್ತು ಎರಡನೆಯದು ಸುಧಾರಣೆ ಮತ್ತು ಪುನರುಜ್ಜೀವನದಲ್ಲಿ ಭಾರತದ ಸಾಮರ್ಥ್ಯ. ಅವರು ಭಾರತದ ಪ್ರತಿಭೆಯ ಶಕ್ತಿಗೆ ವಿಶ್ವದಾದ್ಯಂತ ಹೆಚ್ಚಿನ ಮನ್ನಣೆ ಇದೆ ಎಂದರು. ವಿಶೇಷವಾಗಿ ಭಾರತೀಯ ತಂತ್ರಜ್ಞಾನ ಉದ್ಯಮ ಮತ್ತು ತಂತ್ರಜ್ಞಾನದ ವೃತ್ತಿಪರರ ಕೊಡುಗೆಯನ್ನು ಅವರು ಪ್ರಶಂಸಿಸಿದರು. ಭಾರತವನ್ನು ಪ್ರತಿಭೆಯ ಶಕ್ತಿ ಕೇಂದ್ರ ಎಂದು ಬಣ್ಣಿಸಿದ ಅವರು ಅದರ ಕೊಡುಗೆಯನ್ನು ನೋಡಲು ಕಾತುರದಿಂದಿರುವುದಾಗಿ ಹೇಳಿದರು. ಭಾರತೀಯರು ಸ್ವಾಭಾವಿಕ ಸುಧಾರಣಾಕಾರರು ಮತ್ತು ಭಾರತ ಪ್ರತಿಯೊಂದು ಸವಾಲುಗಳನ್ನು ಅದು ಸಾಮಾಜಿಕ ಅಥವಾ ಆರ್ಥಿಕದ್ದಾಗಿರಬಹುದು, ಎಲ್ಲವನ್ನು ಸಮರ್ಥವಾಗಿ ಎದುರಿಸಿ ಹೊರಬಂದಿರುವ ಇತಿಹಾಸವಿದೆ ಎಂದರು. ಭಾರತ ಪುನಶ್ಚೇತನದ ಬಗ್ಗೆ ಮಾತನಾಡಿದರೆ ಅದು ಎಚ್ಚರಿಕೆಯ ಪುನಶ್ಚೇತನ, ಅನುಕಂಪ ಹೊಂದಿದ ಪುನಶ್ವೇತನ, ಸುಸ್ಥಿರವಾದ ಪರಿಸರ ಮತ್ತು ಆರ್ಥಿಕ ಎರಡೂ ದೃಷ್ಟಿಯಲ್ಲೂ ಪರಿಗಣಿಸಬಹುದಾದ ಪುನಶ್ಚೇತನವಾಗಲಿದೆ ಎಂದರು.

ವಾರಣಾಸಿ ಮೂಲದ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಪ್ರಧಾನಮಂತ್ರಿ ಸಂವಾದ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಸಕ್ತ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ವಾರಾಣಸಿಯ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದರು. ಕೊರೊನಾ ಸಾಂಕ್ರಾಮಿಕ ಎದುರಿಸುತ್ತಾ ಭರವಸೆ ಮತ್ತು ಉತ್ಸಾಹದಿಂದ ವಾರಾಣಸಿಯ ಜನರು ಇದ್ದು, ಅಲ್ಲಿನ ಜನರಿಗೆ ಆಶೀರ್ವಾದವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಸ್ವೀಕರಿಸುತ್ತಿದ್ದೆ, ಆಸ್ಪತ್ರೆಗಳ ಸ್ಥಿತಿಗತಿ, ಕ್ವಾರಂಟೈನ್ ವ್ಯವಸ್ಥೆ ಮತ್ತು ವಲಸೆ ಕಾರ್ಮಿಕರ ಕಲ್ಯಾಣ ಕುರಿತಂತೆಯೂ ಮಾಹಿತಿಗಳನ್ನು ಪಡೆಯುತ್ತಿದ್ದುದಾಗಿ ಅವರು ಹೇಳಿದರು. ಪವಿತ್ರ ನಗರಿಯಲ್ಲಿ ಸಾಕಷ್ಟು ಧಾರ್ಮಿಕ ಕಾರ್ಯಗಳು ಸ್ಥಗಿತಗೊಂಡಿರುವುದರ ನಡುವೆಯೂ ವಾರಾಣಸಿಯ ಜನರು ಕೊರೊನಾ ವಿರುದ್ಧದ ಹೋರಾಟದಲ್ಲಿ ತಾವೂ ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಮತ್ತು ಬಡವರು ಹಾಗೂ ಅಗತ್ಯವಿರುವವರಿಗೆ ನಿರಂತರ ಆಹಾರ ಮತ್ತು ವೈದ್ಯಕೀಯ ಪೂರೈಕೆ ಬೆಂಬಲವನ್ನು ನೀಡಿದ್ದಾರೆ. ಸ್ಥಳೀಯ ಆಡಳಿತಗಳು ಮತ್ತು ಸರ್ಕಾರಗಳ ಜೊತೆ ನಿರಂತರವಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗಳ ಕಾರ್ಯವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಆಹಾರ ಸಹಾಯವಾಣಿ, ಸಂಪರ್ಕಜಾಲ ವಿಸ್ತರಣೆ ಮತ್ತು ಅತ್ಯಲ್ಪ ಅವಧಿಯಲ್ಲಿಯೇ ಸಮುದಾಯ ಅಡುಗೆ ಕೋಣೆಗಳನ್ನು ಆರಂಭಿಸಿದ್ದು, ಸಹಾಯವಾಣಿಗಳ ಸ್ಥಾಪನೆ, ದತ್ತಾಂಶ ವಿಜ್ಞಾನದ ಸಹಾಯ ಪಡೆದಿರುವುದು, ವಾರಾಣಸಿ ಸ್ಮಾರ್ಟ್ ಸಿಟಿ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಸಂಪೂರ್ಣ ಬಳಕೆ, ಪ್ರತಿಯೊಂದು ಹಂತದಲ್ಲೂ ಬಡವರಿಗೆ ಸಂಪೂರ್ಣ ಸಹಾಯ ನೀಡಿದ್ದು, ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಕೇಂದ್ರ ಸಂಪುಟದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಕ್ಕೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಶ್ಲಾಘನೆ; ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊರೊನಾ ವಿಪತ್ತಿನ ಸಂದರ್ಭದಲ್ಲಿ