ಪ್ರಧಾನ ಮಂತ್ರಿಯವರ ಕಛೇರಿ

ಧರ್ಮಚಕ್ರ ದಿನದ ಸಂದರ್ಭದಲ್ಲಿ ಪ್ರಧಾನಿ ಭಾಷಣ

Posted On: 04 JUL 2020 10:17AM by PIB Bengaluru

ಧರ್ಮಚಕ್ರ ದಿನದ ಸಂದರ್ಭದಲ್ಲಿ ಪ್ರಧಾನಿ ಭಾಷಣ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧರ್ಮಚಕ್ರ ದಿನದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಅಂತಾರಾಷ್ಟ್ರೀಯ ಬೌದ್ಧರ ಒಕ್ಕೂಟ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಆಷಾಡ ಪೂರ್ಣಿಮೆಯ ದಿನವಾದ 2020 ಜುಲೈ 4ಅನ್ನು ಧರ್ಮಚಕ್ರ ದಿನವನ್ನಾಗಿ ಆಚರಿಸಿತು. ಬುದ್ಧ ತನ್ನ ಜ್ಞಾನೋದಯದ ನಂತರ ಮೊದಲ ಉಪದೇಶವನ್ನು ಇದೇ ದಿನ ತನ್ನ ಐವರು ಶಿಷ್ಯರಿಗೆ ಸದ್ಯ ಉತ್ತರ ಪ್ರದೇಶದ ವಾರಾಣಸಿ ಬಳಿ ಇರುವ ರಸಿಪಟ್ಟಣದ ಜಿಂಕೆ ಪಾರ್ಕ್ ನಲ್ಲಿ ನೀಡಿದ್ದರೆನ್ನಲಾಗಿದೆ. ದಿನವನ್ನು ವಿಶ್ವದಾದ್ಯಂತ ಇರುವ ಎಲ್ಲ ಬೌದ್ಧರು, ಧರ್ಮ ಚಕ್ರ ಪರಿವರ್ತನ ಅಥವಾ ಧರ್ಮದ ಚಕ್ರ ಬದಲಾವಣೆ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪ್ರಧಾನಮಂತ್ರಿ ಅವರು, ಆಷಾಡ ಪೂರ್ಣಿಮೆಯ ಶುಭಾಶಯಗಳನ್ನು ತಿಳಿಸಿದರು. ದಿನವನ್ನು ಗುರು ಪೂರ್ಣಿಮೆ ಎಂದೂ ಸಹ ಕರೆಯಲಾಗುತ್ತಿದೆ ಮತ್ತು ಬುದ್ಧನಿಗೂ ಸಹ ಅವರು ಗೌರವ ನಮನ ಸಲ್ಲಿಸಿದರು. ಅವರು ಮಂಗೋಲಿಯಾದ ಕಂಜೂರ್ ಪ್ರತಿಗಳನ್ನು ಮಂಗೋಲಿಯಾ ಸರ್ಕಾರಕ್ಕೆ ನೀಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಗಳು ಬುದ್ಧನ ಬೋಧನೆಗಳ ಕುರಿತು ಮಾತನಾಡಿದರು ಮತ್ತು ಹಲವು ಸಮಾಜಗಳು ಹಾಗೂ ರಾಷ್ಟ್ರಗಳ ಕಲ್ಯಾಣಕ್ಕಾಗಿ ಬುದ್ಧ ತೋರಿದ ಎಂಟು ಪಥದ ಮಾರ್ಗಗಳ ಬಗ್ಗೆ ತಿಳಿಸಿದರು. ಅವರು ಬೌದ್ಧಧರ್ಮ ಎಲ್ಲಾ ಜನರು, ಮಹಿಳೆಯರು, ಬಡವರಿಗೆ ಗೌರವ ಸಲ್ಲಿಸುವುದನ್ನು ಕಲಿಸುತ್ತದೆ ಮತ್ತು ಅದು ಶಾಂತಿ ಮತ್ತು ಅಹಿಂಸೆಯನ್ನು ಕಲಿಸುತ್ತದೆ ಹಾಗೂ ಎಲ್ಲಾ ಬೋಧನೆಗಳು ಸುಸ್ಥಿರ ಭೂಮಿಗೆ ಅತ್ಯವಶ್ಯಕ ಎಂದು ಹೇಳಿದರು.

ಬುದ್ಧ ಭರವಸೆ ಮತ್ತು ಉದ್ದೇಶದ ಬಗ್ಗೆ ಮಾತನಾಡಿದ್ದರು ಎಂದ ಪ್ರಧಾನಿ ಅವರು, ಅವೆರಡರ ನಡುವೆ ಎಷ್ಟು ಬಲಿಷ್ಠ ಸಂಬಂಧ ಇರುವುದನ್ನು ಬುದ್ಧ ತೋರಿಸಿಕೊಟ್ಟಿದ್ದರು. ಬುದ್ಧ 21ನೇ ಶತಮಾನದ ಬಗ್ಗೆ ಭರವಸೆ ಹೊಂದಿದ್ದರು ಮತ್ತು ಭರವಸೆ ಯುವಕರಿಂದ ಬರಬೇಕು ಎಂದು ಹೇಳಿದ್ದರು. ಭಾರತ ಅತಿದೊಡ್ಡ ನವೋದ್ಯಮ ವ್ಯವಸ್ಥೆಯನ್ನು ಹೊಂದಿದೆ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ, ಯುವ ಕ್ರಿಯಾಶೀಲ ಮನಸ್ಸುಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುತ್ತಿವೆ ಎಂದರು.

ಇಂದು ವಿಶ್ವ ಅಸಮಾನ್ಯ ಸವಾಲುಗಳನ್ನು ಎದುರಿಸುತ್ತಿದೆ ಎಂದ ಪ್ರಧಾನಮಂತ್ರಿ ಅವರು, ಸಮಸ್ಯೆಗಳಿಗೆ ಬುದ್ಧನ ಆದರ್ಶಗಳಿಂದ ಪರಿಹಾರಗಳು ದೊರಕುತ್ತವೆ ಎಂದರು. ಬೌದ್ಧ ಧರ್ಮದ ಪಾರಂಪರಿಕ ತಾಣಗಳ ಜೊತೆ ಹೆಚ್ಚಿನ ಜನರಿಗೆ ಸಂಪರ್ಕ ಕಲ್ಪಿಸುವ ಅಗತ್ಯವಿದೆ ಎಂದ ಅವರು, ಅಂತಹ ತಾಣಗಳಿಗೆ ಇನ್ನೂ ಹೆಚ್ಚಿನ ಸಂಪರ್ಕ ಕಲ್ಪಿಸುವ ಅಗತ್ಯವಿದೆ ಎಂದರು. ಉತ್ತರಪ್ರದೇಶದ ಖುಷಿನಗರದಲ್ಲಿನ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಲು ಇತ್ತೀಚೆಗೆ ಸಂಪುಟದ ನಿರ್ಧಾರದ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಇದರಿಂದ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವುದಲ್ಲದೆ, ಪ್ರದೇಶದಲ್ಲಿ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ದೊರಕಲಿದೆ ಎಂದರು.

***



(Release ID: 1636721) Visitor Counter : 212