ಪ್ರಧಾನ ಮಂತ್ರಿಯವರ ಕಛೇರಿ

ಆತ್ಮನಿರ್ಭರ ಭಾರತ್ ಆಪ್ ಅನ್ವೇಷಣಾ ಸವಾಲಿನಲ್ಲಿ ಪಾಲ್ಗೊಳ್ಳಲು ತಂತ್ರಜ್ಞಾನ ಸಮುದಾಯಕ್ಕೆ ಪ್ರಧಾನ ಮಂತ್ರಿ ಮನವಿ

Posted On: 04 JUL 2020 5:20PM by PIB Bengaluru

ಆತ್ಮನಿರ್ಭರ ಭಾರತ್ ಆಪ್ ಅನ್ವೇಷಣಾ ಸವಾಲಿನಲ್ಲಿ ಪಾಲ್ಗೊಳ್ಳಲು ತಂತ್ರಜ್ಞಾನ ಸಮುದಾಯಕ್ಕೆ ಪ್ರಧಾನ ಮಂತ್ರಿ ಮನವಿ

 

ಆತ್ಮನಿರ್ಭರ ಭಾರತ್ ಆಪ್ ಅನ್ವೇಷಣಾ ಸವಾಲಿನಲ್ಲಿ ಪಾಲ್ಗೊಳ್ಳುವಂತೆ ತಂತ್ರಜ್ಞಾನ ಸಮುದಾಯಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಲಿಂಕ್ಡ್ ಇನ್ ನಲ್ಲಿ ಪ್ರಕಟವಾಗಿರುವ ಪೋಸ್ಟ್ ನಲ್ಲಿ ಪ್ರಧಾನ ಮಂತ್ರಿ ಅವರು ಭಾರತದಲ್ಲಿಯ ರೋಮಾಂಚಕಾರಿ ತಂತ್ರಜ್ಞಾನ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದಾರಲ್ಲದೆ , ವಲಯಗಳ ಮಿತಿಯನ್ನು ಮೀರಿ ಯುವ ಜನತೆ ತಾಂತ್ರಿಕ ಪರಿಹಾರಗಳನ್ನು ಒದಗಿಸುವಲ್ಲಿ ಹೇಗೆ ಪ್ರಾವೀಣ್ಯತೆ ಮೆರೆದಿದ್ದಾರೆ ಎಂಬುದನ್ನೂ ಉಲ್ಲೇಖಿಸಿದ್ದಾರೆ. ದೇಶವು ಆತ್ಮನಿರ್ಭರ ಭಾರತ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವಾಗ ನವೋದ್ಯಮಗಳಲ್ಲಿ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಅನ್ವೇಷಣೆ, ಅಭಿವೃದ್ದಿ, ಮತ್ತು ಸ್ಥಳೀಯವಾಗಿ ಅಭಿವೃದ್ದಿಪಡಿಸಿದ ಆಪ್ ಗಳ ಉತ್ತೇಜನಕ್ಕೆ ಭಾರೀ ಉತ್ಸಾಹ ಕಂಡು ಬರುತ್ತಿದೆ. ನಮ್ಮ ಮಾರುಕಟ್ಟೆಯನ್ನು ತೃಪ್ತಿಪಡಿಸಲು ಹಾಗು ಅದರ ಜೊತೆಯಲ್ಲಿ ಜಗತ್ತಿನ ಜೊತೆ ಸ್ಪರ್ಧಿಸಲು ಆಪ್ ಗಳನ್ನು ಅಭಿವೃದ್ದಿಪಡಿಸುವುದಕ್ಕೆ ದಿಕ್ಕು ದಿಶೆ ತೋರಿಸಲು ಮತ್ತು ಅದಕ್ಕೆ ವೇಗವನ್ನು ದೊರಕಿಸಿಕೊಡಲು ಇದು ಉತ್ತಮ ಅವಕಾಶ ಎಂದವರು ಹೇಳಿದ್ದಾರೆ. .

ಉದ್ದೇಶವನ್ನು ಮನದಲ್ಲಿಟ್ಟುಕೊಂಡು , ಇಲೆಕ್ತ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು , ಅಟಲ್ ಇನ್ನೋವೇಶನ್ ಮಿಶನ್ ನೊಂದಿಗೆ ಕೈಜೋಡಿಸಿ ಆತ್ಮನಿರ್ಭರ ಭಾರತ್ ಆಪ್ ಅನ್ವೇಷಣಾ ಸವಾಲನ್ನು ರೂಪಿಸಿದೆ. ಇದು ಎರಡು ಪಥಗಳಲ್ಲಿ ಸಾಗಲಿದೆ. ಒಂದನೆಯದಾಗಿ ಈಗಿರುವ ಆಪ್ ನ್ನು ಉತ್ತೇಜಿಸುವುದು ಮತ್ತು ಎರಡನೆಯದು ಹೊಸ ಆಪ್ ಅಭಿವೃದ್ದಿ. ಸವಾಲನ್ನು ಹೆಚ್ಚು ಸಮಗ್ರಗೊಳಿಸುವುದಕ್ಕಾಗಿ ಸರಕಾರ ಮತ್ತು ತಂತ್ರಜ್ಞಾನ ಸಚಿವಾಲಯ ಜಂಟಿಯಾಗಿ ಇದನ್ನು ಆಯೋಜಿಸಿವೆ.

ಈಗಿರುವ ಆಪ್ ಗಳ ಉತ್ತೇಜನಕ್ಕಾಗಿ ಮತ್ತು -ಕಲಿಕೆ, ಮನೆಯಿಂದಲೇ ಕೆಲಸ, ಗೇಮಿಂಗ್, ವ್ಯಾಪಾರೋದ್ಯಮ, ಮನೋರಂಜನೆ, ಕಚೇರಿ ಸೌಲಭ್ಯಗಳು ಮತ್ತು ಸಾಮಾಜಿಕ ಜಾಲವೂ ಸೇರಿದಂತೆ ವಿವಿಧ ವರ್ಗಗಳ ವೇದಿಕೆಗಳಿಗೆ ಸರಕಾರವು ಮೆಂಟರಿಂಗ್,(ಮಾರ್ಗದರ್ಶನ), ನಿರ್ವಹಣೆ ಮತ್ತು ಬೆಂಬಲವನ್ನು ನೀಡುತ್ತದೆ. ಟ್ರ್ಯಾಕ್ -01, ಆಂದೋಲನ ಮಾದರಿಯಲ್ಲಿ ಕಾರ್ಯಾಚರಿಸಿ ಉತ್ತಮ ಗುಣಮಟ್ಟದ ಆಪ್ ಗಳನ್ನು ಲೀಡರ್ ಬೋರ್ಡ್ ಗಾಗಿ ಗುರುತಿಸುತ್ತದೆ, ಮತ್ತು ಕೆಲಸ ತಿಂಗಳೊಳಗೆ ಪೂರ್ಣಗೊಳ್ಳುತ್ತದೆ. ಹೊಸ ವೇದಿಕೆಗಳನ್ನು ರೂಪಿಸಲು ಮತ್ತು ಆಪ್ ಗಳನ್ನು ರೂಪಿಸುವುದಕ್ಕೆ ಟ್ರ್ಯಾಕ್ -02 ಉಪಕ್ರಮವು ಕೆಲಸ ಮಾಡಲಿದೆ. ಅದು ಭಾರತದಲ್ಲಿ ಚಿಂತನೆ, ರೂಪಿಸುವಿಕೆ, ಮೂಲ ಮಾದರಿ ತಯಾರಿ ಮತ್ತು ಉತ್ಪನ್ನಕ್ಕೆ ಮಾರುಕಟ್ಟೆ ಲಭ್ಯವಾಗುವವರೆಗೆ ಬೆಂಬಲ ನೀಡಿ ಭಾರತದ ಹೊಸ ಚಾಂಪಿಯನ್ ಗಳನ್ನು ರೂಪಿಸಲು ಸಹಾಯ ಮಾಡಲಿದೆ.

ಸವಾಲಿನ ಪರಿಣಾಮವಾಗಿ ಬರುವ ಫಲಿತಾಂಶವು ಈಗಿರುವ ಆಪ್ ಗಳಿಗೆ ಸ್ಪಷ್ಟತೆಯನ್ನು ನೀಡಿ ಅವುಗಳು ಹೆಚ್ಚು ದೃಗ್ಗೋಚರವಾಗುವಂತೆ ಮಾಡಿ ಅವುಗಳ ಗುರಿ ಸಾಧನೆಗೆ ನೆರವಾಗಲಿದೆ. ಮತ್ತು ಇಂತಹ ಉತ್ಪನ್ನಗಳನ್ನು ತಯಾರಿಸಲು ಜಟಿಲ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಸಲಹೆ, ತಾಂತ್ರಿಕ ಬೆಂಬಲ ಮತ್ತು ಮಾರ್ಗದರ್ಶನದ ಮೂಲಕ ಅದರ ಇಡೀ ಜೀವನ ಚಕ್ರ ಪೂರ್ತಿ ಒದಗಿಸಲಾಗುವುದು ಎಂದೂ ಪ್ರಧಾನ ಮಂತ್ರಿ ಅವರು ಬರೆದಿದ್ದಾರೆ.

ಪ್ರಧಾನ ಮಂತ್ರಿ ಅವರು ತಮ್ಮ ಅಭಿಮತವನ್ನು ಹಂಚಿಕೊಂಡಿದ್ದಾರೆ ಮತ್ತು ಭಾರತೀಯ ಸಾಂಪ್ರದಾಯಿಕ ಆಟಗಳನ್ನು ಹೆಚ್ಚು ಜನಪ್ರಿಯಗೊಳಿಸಲು ತಂತ್ರಜ್ಞಾನವು ಸಹಾಯ ಮಾಡುವುದಾದಲ್ಲಿ , ಪುನರ್ವಸತಿಯಲ್ಲಿರುವ ಜನರಿಗೆ ಸಹಾಯ ಮಾಡಲು ಆಪ್ ಗಳನ್ನು ಅಭಿವೃದ್ದಿಪಡಿಸುವುದಾದಲ್ಲಿ ಅಥವಾ ಆಪ್ತ ಸಮಾಲೋಚನೆಗಾಗಿ ಅವುಗಳನ್ನು ರೂಪಿಸಬಹುದಾದಲ್ಲಿ , ಕಲಿಕೆ, ಆಟಗಳು ಇತ್ಯಾದಿಗಳಿಗೆ ಆಪ್ ಗಳು ಆಯಾ ವಯೋ ಗುಂಪಿನವರಿಗೆ ಲಭ್ಯವಾಗುವಂತೆ ಮಾಡಬಹುದಾದಲ್ಲಿ ಅವುಗಳನ್ನು ಅಭಿವೃದ್ದಿ ಪಡಿಸಬಹುದಾಗಿದೆ. ಹಾಗಿರುವಾಗ ತಂತ್ರಜ್ಞಾನ ಸಮುದಾಯವು ಆತ್ಮನಿರ್ಭರ ಆಪ್ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡಲು ಮುಂದೆ ಬರಬೇಕು ಎಂದವರು ಮನವಿ ಮಾಡಿದ್ದಾರೆ.

***



(Release ID: 1636711) Visitor Counter : 187