ಪ್ರಧಾನ ಮಂತ್ರಿಯವರ ಕಛೇರಿ

ಅಂತಾರಾಷ್ಟ್ರೀಯ ಯೋಗ ದಿನಂದು ರಾಷ್ಟ್ರವನ್ನೇದ್ದೇಶಿಸಿ ಪ್ರಧಾನಿ ಭಾಷಣ

Posted On: 21 JUN 2020 9:43AM by PIB Bengaluru

ಅಂತಾರಾಷ್ಟ್ರೀಯ ಯೋಗ ದಿನಂದು ರಾಷ್ಟ್ರವನ್ನೇದ್ದೇಶಿಸಿ ಪ್ರಧಾನಿ ಭಾಷಣ

ಯೋಗ ದಿನ ಐಕ್ಯತೆ ಮತ್ತು ಸಹೋದರತ್ವದ ದಿನ ಎಂದ ಪ್ರಧಾನಿಯೋಗದಿಂದ ಕೌಟುಂಬಿಕ ಸಂಬಂಧ ಬೆಸೆಯಲಿದೆಪ್ರಧಾನಿ

ಯೋಗ ಕೋವಿಡ್-19 ವಿರುದ್ಧ ನಮ್ಮ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರುಅಂತಾರಾಷ್ಟ್ರೀಯ ಯೋಗ ದಿನ ಐಕ್ಯತೆ ಅಥವಾ ಒಗ್ಗಟ್ಟಿನ ದಿನ ಎಂದು ಪ್ರಧಾನಮಂತ್ರಿ ಹೇಳಿದರು.  ಇದು ಸೋದರತ್ವದ ದಿನವೂ ಆಗಿದೆಕೋವಿಡ್ -19 ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ವರ್ಷ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿದ್ಯುನ್ಮಾನ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಆಚರಿಸಲಾಗುತ್ತಿದೆ ಎಂದರು

ಜನರು ತಮ್ಮ ಮನೆಗಳಲ್ಲಿಯೇಕುಟುಂಬದೊಂದಿಗೆ ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ಯೋಗ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ ಎಂದರು.

ನನ್ನ ಜೀವನನನ್ನ ಯೋಗ” ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯಲ್ಲಿ ಅತಿ ಹೆಚ್ಚಿನ ಜನರು ಭಾಗವಹಿಸಿದ್ದಾರೆಇದು ಜಗತ್ತಿನಾದ್ಯಂತ ಯೋಗಕ್ಕೆ ಇರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ’’ ಎಂದು ಅವರು ಹೇಳಿದರು.

ಇಂದುನಾವೆಲ್ಲಾ ಸಾಮೂಹಿಕವಾಗಿ ದೊಡ್ಡ ಪ್ರಮಾಣದಲ್ಲಿ ಒಂದೆಡೆ ಸೇರುವುದರಿಂದ ದೂರ ಉಳಿದುನಾವು ಮನೆಗಳಲ್ಲಿಯೇ ನಮ್ಮ ಕುಟುಂಬದೊಂದಿಗೆ ಯೋಗಾಭ್ಯಾಸ ಮಾಡುತ್ತಿದ್ದೇವೆ ವರ್ಷದ ಘೋಷ ವಾಕ್ಯ ಮನೆಯಲ್ಲೇ ಯೋಗ ಮತ್ತು ಕುಟುಂಬದೊಂದಿಗೆ ಯೋಗ” ಎಂಬುದಾಗಿದೆಯೋಗದಿಂದ ಕೌಟುಂಬಿಕ ಸಂಬಂಧ ಬೆಸೆಯುತ್ತದೆಅಂದರೆ ಮಕ್ಕಳುವಯಸ್ಕರುವೃದ್ಧರು ಸೇರಿ ಇಡೀ ಕುಟುಂಬ ಒಟ್ಟಿಗೆ ಯೋಗಾಭ್ಯಾಸ ಮಾಡುವುದರಿಂದ ಅವರ ನಡುವೆ ಸಂಬಂಧಗಳು ಬೆಸೆಯುತ್ತವೆ ಮತ್ತು ಅದರಿಂದ ಮನೆಯಲ್ಲಿ ಸಾಕಾರಾತ್ಮಕ ಶಕ್ತಿ ಹರಿಯುತ್ತದೆಯೋಗ ಭಾವನಾತ್ಮಕ ಸ್ಥಿರತೆಯನ್ನು ಉತ್ತೇಜಿಸಲಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು.

ಯೋಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆನಾವು ನಮ್ಮ ದಿನನಿತ್ಯದ ಜೀವನದಲ್ಲಿ ಪ್ರಾಣಾಯಾಮವನ್ನು ಅಳವಡಿಸಿಕೊಳ್ಳಬೇಕುಪ್ರಾಣಾಯಾಮ ಯೋಗ ಅಥವಾ ಉಸಿರಾಟದ ಅಭ್ಯಾಸ ನಮ್ಮ ಉಸಿರಾಟದ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುತ್ತದೆಕೋವಿಡ್ -19 ಸೋಂಕಿನಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತಿರುವ  ಸಂದರ್ಭದಲ್ಲಿ ಪ್ರಾಣಾಯಾಮ ಅತ್ಯಂತ ಉಪಯುಕ್ತ’’ಎಂದು ಪ್ರಧಾನಮಂತ್ರಿ ಹೇಳಿದರು.

ಯೋಗ ಒಂದು ಐಕ್ಯತೆಯ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆಇದು ಮಾನವೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆಇದು ಯಾರೊಬ್ಬರನ್ನೂ ತಾರತಮ್ಯದಿಂದ ನೋಡುವುದಿಲ್ಲವರ್ಣಬಣ್ಣಲಿಂಗಬೇಧನಂಬಿಕೆ ಮತ್ತು ರಾಷ್ಟ್ರಗಳ ನಡುವೆ ತಾರತಮ್ಯ ಎಸಗುವುದಿಲ್ಲಯಾರು ಬೇಕಿದ್ದರೂ ಯೋಗ ಮಾಡಬಹುದುನಾವು ನಮ್ಮ ಆರೋಗ್ಯ ಮತ್ತು ಭರವಸೆಯನ್ನು ಉತ್ತಮಗೊಳಿಸಿಕೊಂಡರೆಇಡೀ ವಿಶ್ವ ಆರೋಗ್ಯಕರದಿಂದ ಮತ್ತು ಮನುಕುಲ ಸಂತೋಷದಿಂದ ಇರುವ ದಿನಗಳು ದೂರವಿಲ್ಲಯೋಗದ ಸಹಾಯದಿಂದ ಖಂಡಿತಾ ಇದನ್ನು ನಾವು ಸಾಧಿಸಬಹುದು’’ಎಂದು ಪ್ರಧಾನಿ ಹೇಳಿದರು.

ಪ್ರಜ್ಞಾವಂತ ನಾಗರಿಕರಾದ ನಾವುಒಂದು ಕುಟುಂಬವಾಗಿ ಮತ್ತು ಸಮಾಜವಾಗಿ ಒಟ್ಟಾಗಿ ಮುಂದುವರಿಯಬೇಕಿದೆನಾವು ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ’ ಅನ್ನು ನಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬೇಕುಆಗ ನಾವು ಖಂಡಿತಾ ಯಶಸ್ವಿಯಾಗುತ್ತೇವೆನಾವು ಖಂಡಿತಾ ವಿಜಯಿಯಾಗುತ್ತೇವೆ’’ಎಂದು ಪ್ರಧಾನಮಂತ್ರಿ ಹೇಳಿದರು.

***(Release ID: 1633485) Visitor Counter : 188