ಪ್ರಧಾನ ಮಂತ್ರಿಯವರ ಕಛೇರಿ

ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣ

Posted On: 21 JUN 2020 7:48AM by PIB Bengaluru

ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣ

 

ನಮಸ್ಕಾರ,

ನಿಮ್ಮೆಲ್ಲರಿಗೂ ಆರನೇ ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳುಅಂತರರಾಷ್ಟ್ರೀಯ ಯೋಗ ದಿನವು ಒಗ್ಗಟ್ಟಿನ ದಿನವಾಗಿದೆ ದಿನವು ಸಾರ್ವತ್ರಿಕ ಭ್ರಾತೃತ್ವದ ಸಂದೇಶವನ್ನು ನೀಡುತ್ತದೆಇದು ಮನುಕುಲದ ಏಕತೆಯ ದಿನಅಂತರವನ್ನು ಕಡಿಮೆ ಮಾಡಿ  ನಮ್ಮನ್ನೆಲ್ಲಾ ಒಂದುಗೂಡಿಸುವುದು ಯೋಗ.

 ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ಪ್ರಪಂಚದಾದ್ಯಂತ 'ಮೈ ಲೈಫ್ - ಮೈ ಯೋಗವಿಡಿಯೋ ಬ್ಲಾಗಿಂಗ್ ಸ್ಪರ್ಧೆಯಲ್ಲಿ ಜನರು ಭಾಗವಹಿಸುತ್ತಿರುವುದು ಯೋಗದ ಬಗ್ಗೆ ಅವರಿಗಿರುವ ಉತ್ಸಾಹವನ್ನು ಮತ್ತು ಅದು ಎಷ್ಟು ವ್ಯಾಪಕವಾಗಿ ಹರಡಿದೆ ಎಂಬುದನ್ನುತೋರಿಸುತ್ತದೆ.

ಸ್ನೇಹಿತರೇ,

 ವರ್ಷದ ಅಂತರರಾಷ್ಟ್ರೀಯ ಯೋಗದ ದಿನದ ವಿಷಯವೆಂದರೆ 'ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ'. ಇಂದು ನಾವು ನಮ್ಮ ಕುಟುಂಬಗಳೊಂದಿಗೆ ನಮ್ಮ ಮನೆಗಳಲ್ಲಿ ಯೋಗಾಭ್ಯಾಸ ಮಾಡುತ್ತಿದ್ದೇವೆಸಾಮೂಹಿಕ ಕೂಟಗಳಿಂದ ದೂರವಿದ್ದೇವೆಮಕ್ಕಳುವಯಸ್ಕರುಯುವಕರು ಅಥವಾ ವೃದ್ಧರು ಎಲ್ಲರೂ ಯೋಗದ ಮೂಲಕ ಒಂದಾದಾಗಇಡೀ ಮನೆಯಲ್ಲಿ ಶಕ್ತಿಯ ಹರಿವು ಇರುತ್ತದೆಆದ್ದರಿಂದ ಬಾರಿ ಯೋಗ ದಿನವೂ ಭಾವನಾತ್ಮಕ ಯೋಗದ ದಿನವಾಗಿದೆಇದು ನಮ್ಮ ಕುಟುಂಬ ಸಂಬಂಧವನ್ನು ವೃದ್ಧಿಸುವ ದಿನವಾಗಿದೆ.

ಸ್ನೇಹಿತರೇ,

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಇಂದು ಯೋಗದ ಮಹತ್ವವನ್ನು ಜಗತ್ತು ಅರಿತುಕೊಂಡಿದೆನಮ್ಮ ರೋಗನಿರೋಧಕ ಶಕ್ತಿ ಪ್ರಬಲವಾಗಿದ್ದರೆ ನಾವು  ರೋಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಸೋಲಿಸಬಹುದುರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಲವಾರು ವಿಧದ ಯೋಗಾಸನಗಳು ಇವೆ ಭಂಗಿಗಳು ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಮ್ಮ ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತವೆ.

ಕೋವಿಡ್ -19 ವೈರಸ್ ನಿರ್ದಿಷ್ಟವಾಗಿ ನಮ್ಮ ಉಸಿರಾಟದ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡುತ್ತದೆನಮ್ಮ ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುವ ಒಂದು ತಂತ್ರವೆಂದರೆ 'ಪ್ರಾಣಾಯಾಮ', ಅಂದರೆ ಉಸಿರಾಟದ ವ್ಯಾಯಾಮಸಾಮಾನ್ಯವಾಗಿ, 'ಅನುಲೋಮ ವಿಲೋಮ ಪ್ರಾಣಾಯಾಮಹೆಚ್ಚು ಜನಪ್ರಿಯವಾಗಿದೆಇದು ತುಂಬಾ ಪರಿಣಾಮಕಾರಿಆದರೆ ಪ್ರಾಣಾಯಾಮದಲ್ಲಿ ಹಲವು ವಿಧಗಳಿವೆಇದು ಶೀತಲಿಕಪಾಲ್ಬಾತಿಭ್ರಮರಿಭಸ್ತ್ರಿಕ ಹೀಗೆ ಇನ್ನೂಅನೇಕ ಇವೆ.

 ಎಲ್ಲಾ ತಂತ್ರಗಳು ಮತ್ತು ಯೋಗದ ರೂಪಗಳು ನಮ್ಮ ಉಸಿರಾಟ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸಲು ಬಹಳಷ್ಟು ಸಹಾಯ ಮಾಡುತ್ತವೆಆದ್ದರಿಂದನಿಮ್ಮ ದೈನಂದಿನ ಅಭ್ಯಾಸದಲ್ಲಿ ಪ್ರಾಣಾಯಾಮವನ್ನು ಸೇರಿಸಿಕೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆಅನುಲೋಮ-ವಿಲೋಮದ ಜೊತೆಗೆ ವಿವಿಧ ಪ್ರಾಣಾಯಾಮ ತಂತ್ರಗಳನ್ನು ಸಹ ಕಲಿಯಿರಿಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಕೋವಿಡ್ -19 ರೋಗಿಗಳು ಇಂದು  ಯೋಗ ತಂತ್ರಗಳ ಮೊರೆ ಹೋಗಿದ್ದಾರೆ ರೋಗವನ್ನು ಸೋಲಿಸಲು ಯೋಗದ ಶಕ್ತಿ ಅವರಿಗೆ ಸಹಾಯ ಮಾಡುತ್ತಿದೆ.

ಸ್ನೇಹಿತರೇ,

ನಮ್ಮ ಆತ್ಮವಿಶ್ವಾಸ ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸಲು ಯೋಗವು ಸಹಾಯ ಮಾಡುತ್ತದೆಇದರಿಂದ ನಾವು ಬಿಕ್ಕಟ್ಟುಗಳನ್ನು ಗೆಲ್ಲಬಹುದುಯೋಗವು  ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಶಿಸ್ತು ಬೆಳೆಸಿಕೊಳ್ಳಲು ಮತ್ತು ತ್ರಾಣವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು- "ಆದರ್ಶ ವ್ಯಕ್ತಿ ಎಂದರೆ ಸಂಪೂರ್ಣ ಶಾಂತತೆಯಲ್ಲೂ ಸಕ್ರಿಯನಾಗಿರುತ್ತಾನೆ ಮತ್ತು ತೀವ್ರ ಪ್ರಕ್ಷುಬ್ಧ ಸ್ಥಿತಿಯಲ್ಲಿಯೂ ಸಂಪೂರ್ಣ ಶಾಂತಿಯನ್ನು ಅನುಭವಿಸುತ್ತಾನೆಎಂದು.

ಇದು ಯಾವುದೇ ವ್ಯಕ್ತಿಗೆ ಉತ್ತಮ ಸಾಮರ್ಥ್ಯವಾಗಿದೆಅಂದರೆ ಪ್ರತಿಕೂಲ ಸಮಯದಲ್ಲಿ ಬಿಟ್ಟುಕೊಡದಿರುವುದು ಮತ್ತು ಸಮತೋಲಿತ ಮನಸ್ಥಿತಿಯಲ್ಲಿರುವುದು ಸಮಯದಲ್ಲಿ ಯೋಗವು ಶಕ್ತಿಯನ್ನು ನೀಡುತ್ತದೆಆದ್ದರಿಂದಯೋಗಾಭ್ಯಾಸ ಮಾಡುವವರು ಬಿಕ್ಕಟ್ಟಿನ ಸಂದರ್ಭದಲ್ಲಿ ಎಂದಿಗೂ ತಾಳ್ಮೆ ಕಳೆದುಕೊಳ್ಳುವುದಿಲ್ಲ ಎಂಬುದನ್ನು ನೀವು ನೋಡಿರಬೇಕು.

ಯೋಗ ಎಂದರೆ - ‘समत्वम् योग उच्यते ಅಂದರೆಯಾವುದೇ ಪರಿಸ್ಥಿತಿಯಲ್ಲೂ ಅನುಕೂಲಕ-ಪ್ರತಿಕೂಲಯಶಸ್ಸು-ವೈಫಲ್ಯಸಂತೋಷ-ದುಃಖಒಂದೇ ತೆರನಾಗರುವುದು ಹಾಗೂ ಸ್ಥಿರವಾಗಿರುವುದು

ಸ್ನೇಹಿತರೇ,

ಯೋಗವು ಆರೋಗ್ಯಕರ ಗ್ರಹಕ್ಕಾಗಿ ನಮ್ಮನ್ನು ಉದ್ದೀಪಿಸುತ್ತದೆಇದು ಐಕ್ಯತೆಯ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ಮಾನವೀಯತೆಯ ಬಂಧಗಳನ್ನು ಗಾಢವಾಗಿಸುತ್ತದೆಇದು ತಾರತಮ್ಯ ಮಾಡುವುದಿಲ್ಲಇದು ಜನಾಂಗಬಣ್ಣಲಿಂಗನಂಬಿಕೆ ಮತ್ತು ರಾಷ್ಟ್ರಗಳನ್ನು ಮೀರಿದ್ದು.

ಯಾರು ಬೇಕಾದರೂ ಯೋಗವನ್ನು ಮಾಡಬಹುದುನಿಮಗೆ ಬೇಕಾಗಿರುವುದು ಸಮಯ ಮತ್ತು ಸ್ವಲ್ಪ ಖಾಲಿ ಜಾಗಯೋಗವು ನಮಗೆ ದೈಹಿಕ ಶಕ್ತಿಯನ್ನು ಮಾತ್ರವಲ್ಲನಮ್ಮ ಮುಂದೆ ಇರುವ ಸವಾಲುಗಳನ್ನು ವಿಶ್ವಾಸದಿಂದ ಎದುರಿಸಲು ಮಾನಸಿಕ ಸಮತೋಲನ ಮತ್ತು ಭಾವನಾತ್ಮಕ ಸ್ಥಿರತೆಯನ್ನು ನೀಡುತ್ತದೆ.

ಸ್ನೇಹಿತರೇ,

ನಮ್ಮ ಆರೋಗ್ಯ ಮತ್ತು ಭರವಸೆಯನ್ನು ನಾವು ಉತ್ತಮವಾಗಿ ಸಂಯೋಜಿಸಲು ಸಾಧ್ಯವಾದರೆಜಗತ್ತು ಆರೋಗ್ಯಕರ ಮತ್ತು ಸಂತೋಷಮಯ ಮನುಕುಲಕ್ಕೆ ಸಾಕ್ಷಿಯಾಗುವ ದಿನ ದೂರವಿಲ್ಲಇದನ್ನು ಮಾಡಲು ಯೋಗ ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ.

ಸ್ನೇಹಿತರೇ,

ನಾವು ಯೋಗದ ಮೂಲಕ ವಿಶ್ವ ಕಲ್ಯಾಣದ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಮಾತನಾಡುತ್ತಿರುವಾಗನಾನು ನಿಮಗೆ ಯೋಗೇಶ್ವರನಾದ ಕೃಷ್ಣನ ಕರ್ಮಯೋಗವನ್ನು ನೆನಪಿಸಲು ಬಯಸುತ್ತೇನೆಗೀತೆಯಲ್ಲಿಶ್ರೀಕೃಷ್ಣನು ಯೋಗವನ್ನು ವಿವರಿಸುವಾಗ ಹೇಳಿದ್ದು- ‘योगः कर्मसु कौशलम् 'ಅಂದರೆ ಕೆಲಸದಲ್ಲಿನ ದಕ್ಷತೆಯೇ ಯೋಗ ಎಂದು ಮಂತ್ರವು ಯಾವಾಗಲೂ ಯೋಗವು ಜೀವನದಲ್ಲಿ ಹೆಚ್ಚು ಅರ್ಹತೆ ಪಡೆಯುವ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ ಎಂದು ನಮಗೆ ಕಲಿಸುತ್ತದೆನಾವು ನಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿದರೆ ಮತ್ತು ನಮ್ಮ ಜವಾಬ್ದಾರಿಗಳನ್ನು ಪೂರೈಸಿದರೆಅದು ಯೋಗದ ಒಂದು ರೂಪವೇ ಆಗಿರುತ್ತದೆ.

ಸ್ನೇಹಿತರೇ,

ಕರ್ಮಯೋಗವನ್ನು ಮತ್ತಷ್ಟು ವಿವರಿಸಲಾಗಿದೆ. - युक्त आहार विहारस्ययुक्त चेष्टस्य कर्मसु। युक्त स्वप्ना--बोधस्ययोगो भवति दु:खहा।। ಎಂದು ಹೇಳಲಾಗುತ್ತದೆ.

ಅಂದರೆಯೋಗ ಎಂದರೆಸರಿಯಾದ ಆಹಾರವನ್ನು ಸೇವಿಸುವುದುಸರಿಯಾದ ಆಟವನ್ನು ಆಡುವುದುಸರಿಯಾದ ಸಮಯದಲ್ಲಿ ನಿದ್ರೆಮಾಡುವ ಮತ್ತು ಎಚ್ಚರವಾಗುವ ಅಭ್ಯಾಸವನ್ನು ಹೊಂದಿರುವುದು ಮತ್ತು ನಮ್ಮ ಕೆಲಸ ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವುದು ಕರ್ಮಯೋಗದಿಂದನಾವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುತ್ತೇವೆಇದಲ್ಲದೆನಿಸ್ವಾರ್ಥ ಕೆಲಸಯಾವುದೇ ಸ್ವಾರ್ಥವಿಲ್ಲದೆ ಎಲ್ಲರಿಗೂ ಸೇವೆ ಮಾಡುವ ಮನೋಭಾವವನ್ನು ಕರ್ಮಯೋಗ ಎಂದು ಕರೆಯಲಾಗುತ್ತದೆಕರ್ಮಯೋಗದ  ಮನೋಭಾವವು ಭಾರತದ ಮೂಲತತ್ವದಲ್ಲಿಯೇ ಹುದುಗಿದೆಭಾರತದ ನಿಸ್ವಾರ್ಥತೆಯ  ಮನೋಭಾವವನ್ನು ಇಡೀ ಜಗತ್ತು ಅನುಭವಿಸಿದೆ.

ಸ್ನೇಹಿತರೇ,

ನಾವು ಯೋಗ ಮತ್ತು ಕರ್ಮಯೋಗದ ಚೈತನ್ಯದೊಂದಿಗೆ ಮುಂದುವರಿಯುವಾಗಒಬ್ಬ ವ್ಯಕ್ತಿಯಾಗಿಒಂದು ಸಮಾಜವಾಗಿ ಮತ್ತು ಒಂದು ದೇಶವಾಗಿ ನಮ್ಮ ಶಕ್ತಿಯು ಅನೇಕ ಪಟ್ಟು ಹೆಚ್ಚಾಗುತ್ತದೆಇಂದುನಾವು  ಉತ್ಸಾಹದಲ್ಲಿ ಪ್ರತಿಜ್ಞೆಯನ್ನು ಮಾಡಬೇಕಾಗಿದೆ - ನಮ್ಮ ಆರೋಗ್ಯಕ್ಕಾಗಿ ಮತ್ತು ನಮ್ಮ ಪ್ರೀತಿಪಾತ್ರರ ಆರೋಗ್ಯಕ್ಕಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆಒಬ್ಬ ಪ್ರಜ್ಞಾಪೂರ್ವಕ ಪ್ರಜೆಯಾಗಿ ನಾವು ಒಂದು ಕುಟುಂಬವಾಗಿ ಮತ್ತು ಒಂದು ಸಮಾಜವಾಗಿ ಒಟ್ಟಾಗಿ ಮುಂದುವರಿಯುತ್ತೇವೆ.

'ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಲು ನಾವು ಪ್ರಯತ್ನಿಸುತ್ತೇವೆನಾವು ಇದನ್ನು ಮಾಡಿದರೆನಾವು ಖಂಡಿತವಾಗಿಯೂ ಯಶಸ್ವಿಯಾಗುತ್ತೇವೆ ಮತ್ತು ವಿಜಯಶಾಲಿಗಳಾಗಿ ಹೊರಹೊಮ್ಮುತ್ತೇವೆ ನಂಬಿಕೆಯೊಂದಿಗೆನಿಮ್ಮೆಲ್ಲರಿಗೂ ಮತ್ತೆ ಯೋಗ ದಿನದ ಶುಭಾಶಯಗಳು.

समस्ताः सुखिनो भवन्तु

ಓಂ!

***



(Release ID: 1633484) Visitor Counter : 203