PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 18 JUN 2020 6:20PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image004CVKS.jpg

https://static.pib.gov.in/WriteReadData/userfiles/image/image0052Z4S.jpg

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಅಪ್ಡೇಟ್: ಗುಣಮುಖರಾಗಿ ಚೇತರಿಸಿಕೊಂಡವರ ಪ್ರಮಾಣ 52.96% ಕ್ಕೆ ಸುಧಾರಣೆ; ಭಾರತದ ಮೊದಲ ಸಂಚಾರಿ ಸೋಂಕು ರೋಗಗಳ ಪತ್ತೆ ಪ್ರಯೋಗಾಲಯ -ಲ್ಯಾಬ್ ಗೆ ಡಾ. ಹರ್ಷವರ್ಧನ್ ಚಾಲನೆ

ಕಳೆದ 24 ಗಂಟೆಗಳ ಅವಧಿಯಲ್ಲಿ, 7390 ಮಂದಿ ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು 1,94,324 ರೋಗಿಗಳು ಇದುವರೆಗೆ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ. ಗುಣಮುಖ/ ಚೇತರಿಕೆ  ದರ 52.96 % ಗೆ ಏರಿಕೆಯಾಗಿದೆ. ಪ್ರಸ್ತುತ 1,60,384 ಸಕ್ರಿಯ ಪ್ರಕರಣಗಳು ವೈದ್ಯಕೀಯ ನಿಗಾದಲ್ಲಿವೆ. ಸರಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 699 ಕ್ಕೇರಿಸಲಾಗಿದೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆಯನ್ನು 254 ಕ್ಕೇರಿಸಲಾಗಿದೆ (ಒಟ್ಟು 953 ) . ಕಳೆದ 24 ಗಂಟೆಗಳ ಅವಧಿಯಲ್ಲಿ , 1,65,412 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ ಒಟ್ಟು ಪರೀಕ್ಷೆ  ಮಾಡಲಾದ ಮಾದರಿಗಳ ಸಂಖ್ಯೆ 62,49,668

ದೇಶದ ಕಟ್ಟ ಕಡೆಯ ಪ್ರದೇಶಗಳಿಗೂ ಪರೀಕ್ಷಾ ಸೌಲಭ್ಯವನ್ನು ಒದಗಿಸುವ ಕೋವಿಡ್ -19 ಪರೀಕ್ಷೆಗಾಗಿರುವ  ಭಾರತದ ಮೊದಲ ಸಂಚಾರಿ -ಲ್ಯಾಬ್ (ಸೋಂಕು ರೋಗಗಳ ಪತ್ತೆ ಪ್ರಯೋಗಾಲಯ) ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್  ಅವರು ಚಾಲನೆ ನೀಡಿದರು. ಇದು ದೇಶದ ಅತ್ಯಂತ ದುರ್ಗಮ, ತೀರಾ ಒಳಪ್ರದೇಶ, ಮತ್ತು ಸಂಪರ್ಕ ರಹಿತ ಪ್ರದೇಶಗಳಲ್ಲಿ ನಿಯೋಜಿಸಲ್ಪಡಲಿದೆ. ಇದು ದಿನಕ್ಕೆ 25 ಕೋವಿಡ್ -19 ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಳನ್ನು , ದಿನವೊಂದಕ್ಕೆ 300 ಎಲಿಸಾ ಪರೀಕ್ಷೆಗಳನ್ನು ಮತ್ತು ಹೆಚ್ಚುವರಿಯಾಗಿ ಕ್ಷಯ, ಎಚ್..ವಿ. ಇತ್ಯಾದಿ ಪರೀಕ್ಷೆಗಳನ್ನು ಸಿ.ಜಿ.ಎಚ್.ಎಸ್. ದರದಲ್ಲಿ ನಡೆಸುತ್ತದೆ.

ವಾಣಿಜ್ಯಿಕ ಗಣಿಗಾರಿಕೆಗಾಗಿ ಕಲ್ಲಿದ್ದಲು ಬ್ಲಾಕ್ ಗಳ ಹರಾಜು ಪ್ರಕ್ರಿಯೆಗೆ ಪ್ರಧಾನ ಮಂತ್ರಿ ಚಾಲನೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ 41 ಕಲ್ಲಿದ್ದಲು ಬ್ಲಾಕ್ ಗಳ ವಾಣಿಜ್ಯಿಕ ಗಣಿಗಾರಿಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಆತ್ಮ ನಿರ್ಭರ ಭಾರತ್ ಅಭಿಯಾನ ಅಡಿಯಲ್ಲಿ ಭಾರತ ಸರಕಾರ ಮಾಡಿದ ಸರಣಿ ಘೋಷಣೆಗಳಲ್ಲಿ ಇದೂ ಒಂದಾಗಿದೆಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿ ಎರಡು ಹಂತಗಳ ಎಲೆಕ್ಟ್ರಾನಿಕ್ ಹರಾಜು ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ. ಸಂದರ್ಭದಲ್ಲಿ  ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾರತವು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಜಯ ಸಾಧಿಸಲಿದೆ, ಮತ್ತು ರಾಷ್ಟ್ರವು ಬಿಕ್ಕಟ್ಟನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಳ್ಳಲಿದೆ ಎಂದರು. ಬಿಕ್ಕಟ್ಟು ಭಾರತಕ್ಕೆ ಆತ್ಮ ನಿರ್ಭರವಾಗುವ ಅಂದರೆ ಸ್ವಾವಲಂಬಿಯಾಗಬೇಕಾದ  ಪಾಠವನ್ನು ಕಲಿಸಿದೆ  ಎಂದರು. ಆತ್ಮನಿರ್ಭರ ಭಾರತವೆಂದರೆ ಆಮದಿನ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಆಮದಿನ ಮೇಲಣ ವಿದೇಶೀ ಕರೆನ್ಸಿಯನ್ನು ಉಳಿತಾಯ ಮಾಡುವುದಾಗಿದೆ. ಇದು ಭಾರತವು ದೇಶೀಯವಾಗಿ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ, ಇದರಿಂದ ದೇಶವು ಆಮದಿನ ಮೇಲೆ ಅವಲಂಬಿತವಾಗಬೇಕಾಗಿಲ್ಲದಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಎಂದವರು ಹೇಳಿದರು.

ಕಲ್ಲಿದ್ದಲು ಗಣಿಗಳ ವಾಣಿಜ್ಯಿಕ ಗಣಿಗಾರಿಕೆಯ ವರ್ಚುವಲ್ ಮೂಲಕದ ಹರಾಜು ಪ್ರಕ್ರಿಯೆ  ಕಾರ್ಯಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ

ಗ್ರಾಮೀಣ ಭಾರತದ ಜೀವನೋಪಾಯ ಅವಕಾಶಗಳಿಗೆ ಉತ್ತೇಜನ ನೀಡಲು ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನಕ್ಕೆ ಜೂನ್ 20  ರಂದು ಪ್ರಧಾನ ಮಂತ್ರಿ ಶ್ರೀ ಮೋದಿ ಅವರಿಂದ ಚಾಲನೆ

ಗ್ರಾಮೀಣ ನಾಗರಿಕರಿಗೆ ಮತ್ತು ತಮ್ಮ ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಜೀವನೋಪಾಯ ಅವಕಾಶಗಳನ್ನು ಒದಗಿಸಲು ಮತ್ತು ಅವರನ್ನು ಸಶಕ್ತೀಕರಣಗೊಳಿಸಲು ಭಾರತ ಸರಕಾರವು ಬೃಹತ್ ಗ್ರಾಮೀಣ ಲೋಕೋಪಯೋಗಿ ಕಾಮಗಾರಿ ಯೋಜನಾ ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದೆ. ಅಭಿಯಾನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ಜೂನ್ 20 ರಂದು 11 ಗಂಟೆಗೆ ಬಿಹಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಅಭಿಯಾನವು ಬಿಹಾರದ ಖಗಾರಿಯಾದ ಬಿಲ್ದೌರ್ ಬ್ಲಾಕಿನ ತೆಲಿಹಾರ್ ಗ್ರಾಮದಿಂದ ಆರಂಭಗೊಳ್ಳಲಿದೆ . ವರ್ಚುವಲ್ ಕಾರ್ಯಾರಂಭದಲ್ಲಿ ಇತರ ಐದು ರಾಜ್ಯಗಳ ಮುಖ್ಯಮಂತ್ರಿಗಳು  ಮತ್ತು ಸಂಬಂಧಿತ ಸಚಿವಾಲಯಗಳ ಕೇಂದ್ರ ಸಚಿವರು ಭಾಗವಹಿಸುವರು. ಆಂದೋಲನ 125 ದಿನಗಳ ಅವಧಿಯದ್ದಾಗಿದ್ದು, 25 ವಿವಿಧ ಕಾಮಗಾರಿಗಳ ಅನುಷ್ಟಾನದ ಮೂಲಕ ಒಂದೆಡೆ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಿದರೆ,  ಇನ್ನೊಂದೆಡೆ ದೇಶದ ಗ್ರಾಮೀಣ ವಲಯಗಳಲ್ಲಿ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲಿದೆ. ಇದರ ಸಂಪನ್ಮೂಲ ಗಾತ್ರ 50,000 ಕೋ.ರೂ.ಗಳು. ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ, ಮತ್ತು ಒಡಿಶಾ ಆರು ರಾಜ್ಯಗಳ ವ್ಯಾಪ್ತಿಯ ಒಟ್ಟು 116  ಜಿಲ್ಲೆಗಳನ್ನು,  ಅಂದಾಜು 25,000 ಕ್ಕೂ ಅಧಿಕ ಮಂದಿ ಮರಳಿ ತಮ್ಮ ಊರುಗಳಿಗೆ ಬಂದ ವಲಸೆ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಲಾಗಿದೆ ಮತ್ತು ಇದು 27 ಆಶೋತ್ತರಗಳ ಜಿಲ್ಲೆಗಳನ್ನು ಒಳಗೊಂಡಿದೆ.

2020 ಜೂನ್ 20 ರಂದು ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ಯಾರಂಭ ಮಾಡಲಿರುವ ಗರೀಬ್ ಕಲ್ಯಾಣ ರೋಜಗಾರ್ ಯೋಜನಾದ ಪೂರ್ವಭಾವೀ ಪತ್ರಿಕಾಗೋಷ್ಟಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ಯಾರಂಭಗೊಳಿಸಲಿರುವ ಗರೀಬ್ ಕಲ್ಯಾಣ್ ರೋಜಗಾರ್ ಯೋಜನಾ ಕುರಿತ ಪೂರ್ವಭಾವೀ ಪತ್ರಿಕಾಗೋಷ್ಟಿ ಇಂದು ನಡೆಯಿತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ದೇಶಾದ್ಯಂತ ಕಾರ್ಮಿಕರು ಕೋವಿಡ್ ಲಾಕ್ ಡೌನ್ ಬಳಿಕ ತಮ್ಮ ಗ್ರಾಮಗಳಿಗೆ ಬೃಹತ್ ಸಂಖ್ಯೆಯಲ್ಲಿ ಮರಳಿ ಬಂದಿದ್ದಾರೆ. ಭಾರತ ಸರಕಾರವು , ರಾಜ್ಯ ಸರಕಾರಗಳ ಜೊತೆಗೂಡಿ ಬೃಹತ್ ಸಂಖ್ಯೆಯಲ್ಲಿ ಕಾರ್ಮಿಕರು  ಮರಳಿ ಬಂದಿರುವ ಜಿಲ್ಲೆಗಳ ನಕ್ಷೆಯನ್ನು ತಯಾರಿಸಿದೆ. ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಜಾರ್ಖಂಡ, ಮತ್ತು ಒಡಿಶಾ ಗಳ ವ್ಯಾಪ್ತಿಯಲ್ಲಿ ಹರಡಿರುವ ಸುಮಾರು 116 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ  ಕಾರ್ಮಿಕರು ಮರಳಿ ಬಂದಿರುವುದು ಗಮನಕ್ಕೆ ಬಂದಿದೆ ಎಂದರು . ಭಾರತ ಸರಕಾರವು ರಾಜ್ಯ ಸರಕಾರಗಳ ಜೊತೆಗೂಡಿ ವಲಸೆ ಕಾರ್ಮಿಕರ ಕೌಶಲ್ಯಗಳ ಮಾಹಿತಿಯನ್ನು ಕ್ರೋಢೀಕರಿಸಿದೆ. ಮತ್ತು ಅವರಲ್ಲಿ ಬಹುಪಾಲು ಜನರು ಯಾವುದಾದರೊಂದು ಕೆಲಸದಲ್ಲಿ ಕೌಶಲ್ಯ ಹೊಂದಿರುವುದು ಗಮನಕ್ಕೆ ಬಂದಿದೆ. ಇದರ ಆಧಾರದಲ್ಲಿ ಮತ್ತು ಮುಂದಿನ ನಾಲ್ಕು ತಿಂಗಳ ಕಾಲ ಅವರ ಕಷ್ಟಗಳನ್ನು ನಿವಾರಿಸಲು , ಭಾರತ ಸರಕಾರವು ಬೃಹತ್ ಗ್ರಾಮೀಣ ಲೋಕೋಪಯೋಗಿ ಕಾಮಗಾರಿಗಳ ಯೋಜನೆ ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನ ವನ್ನು ಗ್ರಾಮೀಣ ನಾಗರಿಕರು ಮತ್ತು ಮರಳಿ ಬಂದಿರುವ ವಲಸೆ ಕಾರ್ಮಿಕರಿಗಾಗಿ ಅವರಿಗೆ ಜೀವನೋಪಾಯ ಅವಕಾಶಗಳನ್ನು ಒದಗಿಸಲು ಮತ್ತು ಅವರನ್ನು ಸಶಕ್ತೀಕರಣಗೊಳಿಸುವುದಕ್ಕಾಗಿ  ಆರಂಭಿಸಲು ನಿರ್ಧರಿಸಿದೆ.

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರಣಿ ಪರಾಮರ್ಶಾ ಸಭೆಗಳನ್ನು ಅನುಸರಿಸಿ ದಿಲ್ಲಿಯಲ್ಲಿ ಕೋವಿಡ್ ಪರಿಸ್ಥಿತಿ ನಿಭಾಯಿಸಲು ಹಲವಾರು ಕ್ರಮಗಳು

ದಿಲ್ಲಿಯಲಿ ಕೋವಿಡ್ -19 ಪರಿಸ್ಥಿತಿಯನ್ನು ನಿಭಾಯಿಸಲು ಜೂನ್ 14-15 ರಂದು ನಡೆದ ಸರಣಿ ಸಭೆಗಳಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಕೈಗೊಂಡ ನಿರ್ಧಾರಗಳ ಅನುಸಾರ , ಸ್ಯಾಂಪಲ್ ಪರೀಕ್ಷೆಯನ್ನು ತಕ್ಷಣವೇ  ದುಪ್ಪಟ್ಟು ಮಾಡಲಾಗಿದೆಜೂನ್ 15 ಮತ್ತು 16 ರಂದು  ಒಟ್ಟು 16,618  ಪರೀಕ್ಷಾ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದೆ. ಜೂನ್ 14 ರವರೆಗೆ ದೈನಿಕ ಸ್ಯಾಂಪಲ್ ಸಂಗ್ರಹವು 4,000  ದಿಂದ 4,500 ರಷ್ಟಿತ್ತು. ದಿಲ್ಲಿಯ 242 ಕಂಟೈನ್ ಮೆಂಟ್ ವಲಯಗಳಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆ ಯನ್ನು ಕೈಗೆತ್ತಿಕೊಳ್ಳಲಾಗಿದೆ. ಪರೀಕ್ಷಾ ಪ್ರಯೋಗಾಲಯಗಳು ವಿಧಿಸಬಹುದಾದ ದರವನ್ನು ಕುರಿತ ಡಾ. ವಿ.ಕೆ. ಪೌಲ್ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿಯ ವರದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ  ಬಂದಿದ್ದು ,ಅದನ್ನು ಮುಂದಿನ ಅವಶ್ಯ ಕ್ರಮಗಳಿಗಾಗಿ ದಿಲ್ಲಿ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಸಮಿತಿಯು ಪರೀಕ್ಷೆಗೆ 2,400 ರೂ.ಗಳನ್ನು ನಿಗದಿ ಮಾಡಿದೆ. ದಿಲ್ಲಿಯಲ್ಲಿ ಸ್ಯಾಂಪಲ್ ಸಂಗ್ರಹ ಮತ್ತು ಪರೀಕ್ಷೆಗಾಗಿ  ಒಟ್ಟು 169 ಕೇಂದ್ರಗಳನ್ನು  ಸ್ಥಾಪಿಸಲಾಗಿದೆ.

ಸಿ.ಎಸ್..ಆರ್-ಸಿ.ಡಿ.ಆರ್.. ಕೋವಿಡ್ -19 ವಿರುದ್ದದ ಔಷಧಿ ಯುಮಿಫೆನೋವರ್ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಡಿ.ಸಿ.ಜಿ.. ಅನುಮೋದನೆ

ಸಿ.ಎಸ್..ಆರ್ . ಘಟಕ ಪ್ರಯೋಗಾಲಯವಾಗಿರುವ ಸಿ.ಎಸ್..ಆರ್.- ಕೇಂದ್ರೀಯ ಔಷಧಿ ಸಂಶೋಧನಾ ಸಂಸ್ಥೆ (ಸಿ.ಡಿ.ಆರ್..) ಲಕ್ನೋ ಗೆ ಯುಮಿಫೆನೋವರ್ ವೈರಲ್ ನಿರೋಧಿ ಔಷಧಿಯ ದಕ್ಷತೆ, ಸುರಕ್ಷೆ, ಮತ್ತು ತಾಳಿಕೊಳ್ಳುವಿಕೆ ಪ್ರಯೋಗವನ್ನು ಒಳಗೊಂಡ ಮೂರನೇ ಹಂತದ ಪರೀಕ್ಷೆಗೆ ಅನುಮೋದನೆ ದೊರೆತಿದೆ. ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಗಳನ್ನು  ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆ.ಜಿ. ಎಂ.ಯು.) , ಡಾ. ರಾಮ ಮನೋಹರ ಲೋಹಿಯಾ ವೈದ್ಯ ವಿಜ್ಞಾನಗಳ ಸಂಸ್ಥೆ (ಆರ್. ಎಂ.ಎಲ್..ಎಂ.ಎಸ್. ) ಮತ್ತು .ಆರ್.. ಲಕ್ನೋ ವೈದ್ಯಕೀಯ ಕಾಲೇಜು ಆಸ್ಪತ್ರೆ , ಲಕ್ನೋ ಗಳಲ್ಲಿ ನಡೆಸಲಾಗುತ್ತದೆ. ಔಷಧಿಯು ಉತ್ತಮ ಸುರಕ್ಷಾ ಗುಣವನ್ನು ಹೊಂದಿದೆ ಮತ್ತು ಮಾನವ ಕೋಶಗಳ ಒಳಗೆ ವೈರಸ್ಸಿನ ಪ್ರವೇಶವನ್ನು ತಡೆಗಟ್ಟುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಯುಮಿಫೆನೋವಿರ್ ನ್ನು ಇನ್ ಫ್ಲ್ಯುಯೆಂಜಾ ಚಿಕಿತ್ಸೆಗೆ ಬಳಸಲಾಗುತ್ತದೆ, ಮತ್ತು ಅದು ಚೀನಾ ಹಾಗು ರಶ್ಯಾದಲ್ಲಿ ಲಭ್ಯವಿದೆ. ಕೋವಿಡ್ -19 ರೋಗಿಗಳ ಮೇಲೆ ಇದರ ಬಳಕೆಯಿಂದಾಗಿ ಇದು ಇತ್ತೀಚೆಗೆ ಬಹಳ ಪ್ರಾಮುಖ್ಯತೆಯನ್ನು ಪಡೆಯಿತು.

.ಆರ್. ಅಸಾನ್ ಸೋಲ್ ವಿಭಾಗದಿಂದ ಸ್ವಯಂಚಾಲಿತ ಬ್ಯಾಗ್ ಸ್ಯಾನಿಟೈಸರ್ ಯಂತ್ರ ಅಭಿವೃದ್ದಿ

ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸುವ ಪೂರ್ವ ರೈಲ್ವೇಯ (.ಆರ್.) ಪ್ರಯತ್ನದ ಭಾಗವಾಗಿ, ಸ್ವಯಂ ಚಾಲಿತ ಬ್ಯಾಗ್ ಸ್ಯಾನಿಟೈಸರ್ ಯಂತ್ರವನ್ನು .ಆರ್. ಅಸಾನ್ ಸೋಲ್  ವಿಭಾಗವು ಅಭಿವೃದ್ದಿಪಡಿಸಿದೆ. ಸ್ವಯಂಚಾಲಿತ ಬ್ಯಾಗ್ ಸ್ಯಾನಿಟೈಸರ್ ಯಂತ್ರವು ಗಾಳಿ ಹಾಯಿಸುವ ಪಂಪ್ , ಸಿಂಪರಣಾ ಕಂಟೈನರ್, ಮತ್ತು ಕೊಳವೆ ಮೂತಿಯನ್ನು ಫಾಗ್ ಮಾದರಿಯ ಸ್ಯಾನಿಟೈಸಿಂಗ್ ಗಾಗಿ ಹೊಂದಿದೆ.

ಐದು ವರ್ಷಗಳಲ್ಲಿ ಭಾರತವು ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ತಾಣವಾಗಲಿದೆ ಎಂದಿದ್ದಾರೆ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ

ಮುಂದಿನ ಐದು ವರ್ಷಗಳಲ್ಲಿ ಭಾರತವು ವಿದ್ಯುತ್ ವಾಹನಗಳ ತಯಾರಿಕಾ ತಾಣವಾಗಲಿದೆ ಎಂಬ ಭರವಸೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಹಾಗು ಎಂ.ಎಸ್.ಎಂ.. ಗಳ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ವ್ಯಕ್ತಪಡಿಸಿದ್ದಾರೆ. ವಲಯಕ್ಕೆ ಸರಕಾರವು ಸಾಧ್ಯವಾದಷ್ಟು  ಅತ್ಯುತ್ತಮ ರಿಯಾಯತಿಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ , ಮತ್ತು ವಿದ್ಯುತ್ ವಾಹನಗಳಿಗೆ ಜಿ.ಎಸ್.ಟಿ.ಯನ್ನು  12 ಶೇಖಡಾಕ್ಕಿಳಿಸಿದೆ ಎಂದರು. ಇಂದು ಆಯೋಜನೆಯಾಗಿದ್ದ ಕೋವಿಡೋತ್ತರ ಕಾಲದಲ್ಲಿ ಭಾರತದ ವಿದ್ಯುತ್ ಚಾಲಿತ ವಾಹನಗಳ ಪಥಕುರಿತ ವೆಬಿನಾರಿನಲ್ಲಿ ಭಾಗವಹಿಸಿ ಮಾತನಾಡಿದ ಅವರು . ವಿ. ವಲಯ ಎದುರಿಸುತಿರುವ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ , ಮಾರಾಟ ಸಂಖ್ಯೆ ಹೆಚ್ಚಿದಂತೆ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗಲಿವೆ ಎಂಬ ಬಗ್ಗೆ ತಮಗೆ ಖಾತ್ರಿ ಇದೆ ಎಂದರು. ವಿಶ್ವವು ಚೀನಾದೊಂದಿಗೆ ವ್ಯಾಪಾರ ವಹಿವಾಟು ಮಾಡುವ ಆಸಕ್ತಿ ಹೊಂದಿಲ್ಲ, ಇದು ವ್ಯಾಪಾರೋದ್ಯಮದ ವರ್ಗಾವಣೆಯ ಪ್ರಯೋಜನವನ್ನು ಪಡೆದುಕೊಳ್ಳಲು ಭಾರತೀಯ ಉದ್ಯಮಕ್ಕೆ ಒಂದು ಒಳ್ಳೆಯ ಅವಕಾಶ ಎಂದೂ ಅವರು ಹೇಳಿದರು.

ಭಾರತೀಯ ನೌಕಾದಳ ಅಭಿವೃದ್ದಿಪಡಿಸಿದ ನವರಕ್ಷಕ್ ಪಿ.ಪಿ.. ಕವಚ ನಿರ್ಮಾಣ ತಾಂತ್ರಿಕ ಜ್ಞಾನವನ್ನು  ಐದು ಎಂ.ಎಸ್.ಎಂ.. ಗಳಿಗೆ ನೀಡಲು ಎನ್.ಆರ್.ಡಿ.ಸಿ. ಪರವಾನಗಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಡಿ.ಎಸ್..ಆರ್. ಉದ್ದಿಮೆಯಾಗಿರುವ ರಾಷ್ಟ್ರೀಯ ಸಂಶೋಧನಾ ಅಭಿವೃದ್ದಿ ನಿಗಮ (ಎನ್.ಆರ್.ಡಿ.ಸಿ.) ಗೆ ಪಿ.ಪಿ.. ಕಿಟ್ ಗಳನ್ನು ತಯಾರಿಸುವ ತಾಂತ್ರಿಕ ಜ್ಞಾನಕ್ಕೆ  ಪರವಾನಗಿ ನೀಡಿದೆ. ಇದಕ್ಕೆ ನವ್ ರಕ್ಷಕ್ ಎಂದು ಹೆಸರಿಡಲಾಗಿದ್ದು, ಐದು ಎಂ.ಎಸ್.ಎಂ.. ಗ್ರಾಹಕರಿಗೆ ದೇಶದಲ್ಲೀಗ ಇರುವ ಗುಣಮಟ್ಟದ ಪಿ.ಪಿ.. ಕಿಟ್ ಗಳ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ತಯಾರಿಕಾ ಅನುಮತಿ ನೀಡಲಾಗಿದೆ. ಉತ್ಪಾದಕರು ಒಟ್ಟು ವರ್ಷಕ್ಕೆ 10 ಮಿಲಿಯನ್ ಗೂ ಅಧಿಕ  ಪಿ.ಪಿ.. ಕಿಟ್ ಗಳನ್ನು ತಯಾರಿಸಲು ಯೋಜನೆ ಹಾಕಿಕೊಂಡಿದ್ದಾರೆ. ನವ್ ರಕ್ಷಕ್ ಪಿ.ಪಿ.. ಕಿಟ್ ಗಳ ತಯಾರಿಕಾ ತಾಂತ್ರಿಕ ಜ್ಞಾನವನ್ನು  ನೌಕಾ ವೈದ್ಯಕೀಯ ಸಂಸ್ಥೆಯ ಅನ್ವೇಷಣಾ ಘಟಕದಲ್ಲಿ ಅಭಿವೃದ್ದಿಪಡಿಸಲಾಗಿದೆ,.ಪಿ.ಪಿ..ಗಳನ್ನು ಡಿ.ಆರ್.ಡಿ.. .ಎನ್.ಎಂ..ಎಸ್.,ನಲ್ಲಿ ಪರೀಕ್ಷಿಸಿ ಪ್ರಮಾಣೀಕರಿಸಲಾಗಿದೆ. ಇದು  ಎನ್..ಬಿ.ಎಲ್ . ಮಾನ್ಯತೆ ಪಡೆದಿರುವ  ಒಂಭತ್ತು ಪ್ರಯೋಗಾಲಯಗಳಲ್ಲಿ ಒಂದಾಗಿದೆ . ಜವಳಿ ಸಚಿವಾಲಯವು ಭಾರತದಲ್ಲಿ ಪಿ.ಪಿ.. ಮೂಲ ಮಾದರಿಗಳ ಪರೀಕ್ಷೆಗಾಗಿ, ಹಾಲಿ ಇರುವ .ಎಸ್. . ಮಾನದಂಡಗಳ ಅನ್ವಯ ಮತ್ತು ಆರೋಗ್ಯ ಹಾಗು ಕುಟುಂಬ ಕಲ್ಯಾಣ ಸಚಿವಾಲಯ / ಜವಳಿ ಸಚಿವಾಲಯದ ಮಾರ್ಗದರ್ಶಿಗಳ ಅನ್ವಯ ಕೃತಕ ರಕ್ತ ಒಳಪ್ರವೇಶ ತಡೆ ವರ್ಗೀಕರಣದ ಅನ್ವಯ ಎನ್..ಬಿ.ಎಲ್. ಗೆ ಅಧಿಕೃತ ಮಾನ್ಯತೆಯನ್ನು ನೀಡಿದೆ. ಇದು ಕಡಿಮೆ ವೆಚ್ಚದಾಯಕ ಮತ್ತು ಪ್ರಮುಖ ದೊಡ್ದ ಮಟ್ಟದ ಹೂಡಿಕೆ ಬೇಕಾಗಿಲ್ಲದ ಕಾರಣಕ್ಕೆ ಗೌನ್ ತಯಾರಿಕಾ ಘಟಕಗಳು ಕೂಡಾ ತಳಮಟ್ಟದ  ಹೊಲಿಗೆ ತಜ್ಞತೆಯನ್ನು ಬಳಸಿಕೊಂಡು ಇವುಗಳನ್ನು  ತಯಾರಿಸಬಹುದು.

ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಅಂತಾರಾಷ್ಟ್ರೀಯ ನಾಗರಿಕ ಸೇವಾ ಸಿಬ್ಬಂದಿಗಳಿಗಾಗಿ ಉತ್ತಮ ಆಡಳಿತ ಪದ್ದತಿಗಳ ಕುರಿತ ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಡಾ. ಜಿತೇಂದ್ರ ಸಿಂಗ್ ಚಾಲನೆ

ಜಾಗತಿಕ ಸಾಂಕ್ರಾಮಿಕ ಕೋವಿಡ್ -19 ವಿರುದ್ದ ಹೋರಾಡಲು ಜಾಗೃತಿಯೇ  ಕೀಲಿಕೈ ಹೊರತು ಆತಂಕವಲ್ಲಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದು ಹೇಳಿದ್ದಾರೆ. ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಹಯೋಗ ಅತ್ಯಾವಶ್ಯ ಎಂದವರು ಪ್ರತಿಪಾದಿಸಿದ್ದಾರೆ. ವಿದೇಶಿ ವ್ಯವಹಾರಗಳ ಸಚಿವಾಲಯದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಹಾಗು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಯ ಉತ್ತಮ ಆಡಳಿತಕ್ಕಾಗಿರುವ ರಾಷ್ಟ್ರೀಯ ಕೇಂದ್ರಗಳು ಸಂಯುಕ್ತವಾಗಿ ವೆಬಿನಾರ್ ಮೂಲಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದದ ಹೋರಾಟವನ್ನು ಗೆಲ್ಲಲು ರಾಷ್ಟಗಳ ಎದುರು ಇರುವ ಹಾದಿ ಎಂದರೆ ಅದು ಆರ್ಥಿಕತೆಯನ್ನು ಮರು ಆರಂಭಿಸುವುದು ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ ಎಂಬುದನ್ನು ಅವರು ಪುನರುಚ್ಚರಿಸಿದರು. ಬಲಿಷ್ಟ ಸಂಸ್ಥೆಗಳು , ಬಲಿಷ್ಟ -ಆಡಳಿತ ಮಾದರಿಗಳು, ಡಿಜಿಟಲ್ ಸಶಕ್ತ ನಾಗರಿಕರು ಮತ್ತು ಸುಧಾರಿತ ಆರೋಗ್ಯ ರಕ್ಷಣೆಗಳಿಗೆ ಹೆಚ್ಚಿನ ಒತ್ತು ನೀಡುವ ಬಗ್ಗೆ ಅವರು ಹೇಳಿದರು.

ಮೆದುಳಿನ ಶ್ವಾಸೋಚ್ಚಾಸ ಕೇಂದ್ರದ ಕುಸಿತ ಕೋವಿಡ್ -19 ರೋಗಿಗಳ ಮೃತ್ಯುವಿಗೆ ಕಾರಣ ಎನ್ನುತ್ತದೆ  ಎಸ್..ಆರ್.ಬಿ. ಬೆಂಬಲಿತ ಅಧ್ಯಯನ

ಸಿ.ಎಸ್..ಆರ್. –ಭಾರತೀಯ ರಾಸಾಯನಿಕ ಜೀವಶಾಸ್ತ್ರ ಸಂಸ್ಥೆ (..ಸಿ.ಬಿ.) , ಕೋಲ್ಕೊತ್ತಾದ ಸಂಶೋಧಕರ ತಂಡವು ಸಾರ್ಸ್ ಸಿ..ವಿ.-2 ನರವ್ಯೂಹ ಮಧ್ಯಪ್ರವೇಶದ ಸಾಮರ್ಥ್ಯವನ್ನು ಅನ್ವೇಷಿಸಿದೆ, ಮತ್ತು ವೈರಸ್ ಮೆದುಳಿನ ಶ್ವಾಸೋಚ್ಚಾಸ ಕೇಂದ್ರಕ್ಕೆ ಸೋಂಕು ಹರಡುವ ಸಾಧ್ಯತೆ ಬಗ್ಗೆ ಎಚ್ಚರಿಸಿದೆ ಹಾಗು ಕೋವಿಡ್ -19 ರಿಂದುಂಟಾಗುವ ಸಾವುಗಳ ಬಗ್ಗೆ ಶೋಧನೆಗೆ ಕೇಂದ್ರೀಯ ನರವ್ಯೂಹದ ಶ್ವಾಸೋಚ್ಚಾಸ ಕೇಂದ್ರದತ್ತ ಗಮನ ಕೇಂದ್ರೀಕರಿಸುವಂತೆ ಸಲಹೆ ಮಾಡಿದೆ.

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಚಂಡೀಗಢ: ಸಮಾಜ ಕಲ್ಯಾಣ ಇಲಾಖೆ, ಚಂಡೀಗಢ ಆಡಳಿತ ಪೋಷಕಾಂಶಯುಕ್ತ ಹಾಲಿನಂಶದ ಆಹಾರವನ್ನು ಮತ್ತು ಬೇಸನ್ ಪಂಜಿರಿಯನ್ನು ಸುಮಾರು 22,586 ಫಲಾನುಭವಿಗಳ ಮನೆ ಬಾಗಿಲಿಗೆ ಕೊಂಡೊಯ್ದು ವಿತರಿಸಿದೆ. ಅಂದರೆ 6 ತಿಂಗಳಿನಿಂದ 6 ವರ್ಷದ ಮಕ್ಕಳು, ಗರ್ಭಿಣಿ ಮಹಿಳೆಯರು, ಶುಶ್ರೂಶೆಯಲ್ಲಿರುವ ತಾಯಂದಿರು , ಹದಿ ಹರೆಯದ ಹೆಣ್ಣು ಮಕ್ಕಳು ಇದರ ಫಲಾನುಭವಿಗಳು. ಪೋಷಕಾಂಶಯುಕ್ತ ಪಡಿತರವಲ್ಲದೆ, ಮೊಟ್ಟೆ, ಬಾಳೆಹಣ್ಣು, ಮತ್ತು ಹಾಲನ್ನು 53 ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ವಿತರಿಸಲಾಗಿದೆ. ಮನೆಗೆ  ಕೊಂಡೊಯ್ಯುವ  ಪಡಿತರವನ್ನು ಕೂಡಾ ನಗರದ ವಿವಿಧ ಪ್ರದೇಶಗಳಲ್ಲಿಯ ಕೊಳಚೆ ಪ್ರದೇಶ ಮತ್ತು ನಿರ್ಮಾಣ ನಿವೇಶನಗಳ ಸುಮಾರು 350 ಫಲಾನುಭವಿಗಳಿಗೆ ವಿತರಿಸಿದೆ.
  • ಪಂಜಾಬ್: ಕೊರೊನಾವೈರಸ್ ಇನ್ನಷ್ಟು ಹರಡುವುದನ್ನು ತಡೆಗಟ್ಟಲು , ಪಂಜಾಬ್ ಸರಕಾರದ ಕಂದಾಯ ಇಲಾಖೆಯು ವಿವಿಧ ಇಲಾಖೆಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ 300 ಕೋ.ರೂ. ಗಳನ್ನು ಒದಗಿಸಿದೆ. ಇದರಲ್ಲಿ 100 ಕೋ.ರೂ.ಗಳನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಿದ್ದರೆ, ಅದರಲ್ಲಿ 98 ಕೋ.ರೂ. ಗಳನ್ನು ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸುವುದಕ್ಕಾಗಿ, ಪಡಿತರ  ಒದಗಿಸುವುದಕ್ಕಾಗಿ, ಕ್ವಾರಂಟೈನ್ ಸೌಲಭ್ಯಗಳಿಗಾಗಿ  ಖರ್ಚು ಮಾಡಲಾಗಿದೆ.  
  • ಹಿಮಾಚಲ ಪ್ರದೇಶ: ರಾಜ್ಯವು ಕೊರೊನಾ ಜಾಗತಿಕ ಸಾಂಕ್ರಾಮಿಕದ ವಿರುದ್ದ ಸಮರ್ಪಕವಾಗಿ ಹೋರಾಡುತ್ತಿದೆ ಎಂದು ಹೇಳಿರುವ ರಾಜ್ಯದ ಮುಖ್ಯಮಂತ್ರಿಗಳು ಕಾರಣದಿಂದಾಗಿ ರಾಜ್ಯದ ಸ್ಥಿತಿ ಇತರ ನೆರೆಯ ರಾಜ್ಯಗಳಿಗಿಂತ ಉತ್ತಮವಾಗಿದೆ ಎಂದಿದ್ದಾರೆ. ಕೋವಿಡ್ ಪ್ರಕರಣಗಳಲ್ಲಿ ಭಾರೀ ಹೆಚ್ಚಳಕ್ಕೆ ದೇಶದ ವಿವಿಧ ಕಡೆಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ ಎರಡು ಲಕ್ಷದಷ್ಟು ಜನರು ರಾಜ್ಯಕ್ಕೆ ಮರಳಿ ಬಂದಿರುವುದು ಕಾರಣ ಎಂದಿರುವ ಅವರು ಇವರನ್ನು ಕ್ವಾರಂಟೈನ್ ನಲ್ಲಿಡಲಾಗುತ್ತಿರುವುದರಿಂದ ಜನತೆ ಭಯ ಪಡಬೇಕಾದ ಅಗತ್ಯ ಇಲ್ಲ ಎಂದರು. ಪ್ರಧಾನ ಮಂತ್ರಿ ಜನ್ ಧನ್ ಯೋಜನಾ ಅಡಿಯಲ್ಲಿ ರಾಜ್ಯದ 5.90  ಲಕ್ಷ ಅರ್ಹ ಮಹಿಳೆಯರ ಖಾತೆಗಳಿಗೆ ವರ್ಷದ ಏಪ್ರಿಲ್, ಮೇ, ಮತ್ತು ಜೂನ್ ತಿಂಗಳಿಗೆ ತಲಾ 500 ರೂ. ಗಳನ್ನು ವರ್ಗಾಯಿಸಲಾಗಿದೆ ಎಂದವರು ವಿವರಿಸಿದರು. 1.37  ಲಕ್ಷ ಕಾರ್ಮಿಕರಿಗೆ ಎರಡು ತಿಂಗಳ ಅವಧಿಗೆ ತಿಂಗಳೊಂದಕ್ಕೆ ತಲಾ 2,000 ರೂಪಾಯಿಗಳ ನೆರವನ್ನು  ಒದಗಿಸಲಾಗಿದೆ ಮತ್ತು ಸರಕಾರವೀಗ  ಎಚ್.ಪಿ. ಕಟ್ಟಡಗಳು ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಖಾತೆಗಳಿಗೆ ಮತ್ತೆ 2,000 ರೂಪಾಯಿಗಳ ನೆರವನ್ನು ಜಮಾ ಮಾಡಲು ನಿರ್ಧರಿಸಿದೆ ಎಂದೂ ಅವರು ಹೇಳಿದ್ದಾರೆ.
  • ಮಹಾರಾಷ್ಟ್ರ: ಬುಧವಾರದಂದು 3307 ಹೊಸ ರೋಗಿಗಳಲ್ಲಿ ಕೋವಿಡ್ -19 ಗುರುತಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,16,752 ಕ್ಕೇರಿದೆ, ಇದರಲ್ಲಿ 51,921 ಸಕ್ರಿಯ ಪ್ರಕರಣಗಳು. 114 ಮಂದಿ ಕೊರೊನಾಗೆ ಬಲಿಯಾಗಿದ್ದು, ರಾಜ್ಯದಲ್ಲಿ ಕೋವಿಡ್ -19 ಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 5651 ಕ್ಕೇರಿದೆ.ರಾಜ್ಯದಲ್ಲಿ ಇದುವರೆಗೆ ಒಟ್ಟು  59,166 ರೋಗಿಗಳು ಗುಣಮುಖರಾಗಿದ್ದು ಚೇತರಿಸಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳಿವೆ.
  • ಗುಜರಾತ್: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 520 ಕೋವಿಡ್-19  ಪಾಸಿಟಿವ್ ಪ್ರಕರಣಗಳು ಮತ್ತು 27 ಸಾವುಗಳು ವರದಿಯಾಗಿವೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ  ಒಟ್ಟು ಸಂಖ್ಯೆ 25,148 ಕ್ಕೇರಿದೆ , ಇವರಲ್ಲಿ 17,438 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಮತ್ತು 1561 ಮಂದಿ ಮೃತಪಟ್ಟಿದ್ದಾರೆ.
  • ರಾಜಸ್ಥಾನ : ಇಂದು ಬೆಳಿಗ್ಗೆ 84 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ, ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 13,626ಕ್ಕೇರಿದೆ. ಜೊತೆಗೆ 326 ಹೊಸ ಪ್ರಕರಣಗಳು ಬುಧವಾರ ರಾತ್ರಿವರೆಗೆ ವರದಿಯಾಗಿವೆ. ಆದಾಗ್ಯೂ ಇಂದಿನವರೆಗೆ 10,582 ರೋಗಿಗಳು ಗುಣಮುಖರಾಗಿದ್ದು, ರಾಜ್ಯವು  ಗರಿಷ್ಟ ಚೇತರಿಕೆ ದರವನ್ನು ದಾಖಲಿಸಿದೆ. ಇಂದು ವರದಿಯಾದ ಬಹುತೇಕ ಪ್ರಕರಣಗಳು ಭರತ್ಪುರ ಜಿಲ್ಲೆ ಮತ್ತು ಜೈಪುರ ಜಿಲ್ಲೆಗಳವು.
  • ಮಧ್ಯಪ್ರದೇಶ: ಬುಧವಾರದಂದು ಸಂಜೆ ರಾಜ್ಯದಲ್ಲಿ 161 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 11,244 ಕ್ಕೇರಿದೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಭೋಪಾಲ್ (49) ಮತ್ತು ಕೋವಿಡ್ ಹಾಟ್ ಸ್ಪಾಟ್ ಇಂದೋರ್( 44) ನಿಂದ ವರದಿಯಾಗಿವೆ.
  • ಛತ್ತೀಸ್ ಗಢ: ಬುಧವಾರದಂದು ರಾಜ್ಯದಲ್ಲಿ 71 ಹೊಸ ಕೊರೊನಾವೈರಸ್ ಪ್ರಕರಣಗಳು ಗುರುತಿಸಲ್ಪಟ್ಟಿವೆ. ಇದರಿಂದ ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 1864 ಕ್ಕೇರಿದೆ. ಇದರಲ್ಲಿ 756 ಸಕ್ರಿಯ ಪ್ರಕರಣಗಳು.
  • ಗೋವಾ: ರಾಜ್ಯದಲ್ಲಿ ಬುಧವಾರದಂದು 27 ಹೊಸ ಪ್ರಕರಣಗಳು ಗುರುತಿಸಲ್ಪಟ್ಟಿವೆ ಮತ್ತು 11 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ ಈಗ 656 ಕ್ಕೇರಿದೆ, ಇದರಲ್ಲಿ 560 ಸಕ್ರಿಯ ಪ್ರಕರಣಗಳು. ಗಡಿ ಭಾಗಗಳಲ್ಲಿ ಮತ್ತು ಎಲ್ಲಾ ಕಂಟೈನ್ ಮೆಂಟ್ ವಲಯಗಳಲ್ಲಿ  ವ್ಯಾಪಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಆದರೆ ಬರೇ 8-10 ರೋಗಿಗಳು ರೋಗ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದಾರೆ. ಗೋವಾ ರಾಜ್ಯವು ರೋಗಿಗಳನ್ನು ಕೋವಿಡ್ -19 ಆಸ್ಪತ್ರೆಗಳಿಗೆ ಹೋಗಬೇಕಾದ  ರೋಗಿಗಳು ಮತ್ತು ಕೋವಿಡ್ ನಿಗಾ ಕೇಂದ್ರಗಳಿಗೆ ಹೋಗಬೇಕಾದ ರೋಗಿಗಳು ಎಂದು ವರ್ಗೀಕರಣವನ್ನು ಮಾಡಿದೆ.
  • ಕೇರಳ: ಇಂದು ರಾಜ್ಯದಲ್ಲಿ  ಮತ್ತೊಂದು ಕೋವಿಡ್ ಸಾವಿನ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ 21 ಕ್ಕೇರಿದೆ. ಮೃತಪಟ್ಟವರು ಅಬಕಾರಿ ಇಲ್ಲಾಖೆಯ 28 ವರ್ಷದ  ಚಾಲಕ , ಅವರು ಕಣ್ಣೂರಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸೋಂಕಿನ ಮೂಲವನ್ನು ಹುಡುಕಲು ಪ್ರಯತ್ನಗಳು ನಡೆದಿವೆ. ಕೊಚ್ಚಿಯಲ್ಲಿಯ ನಾಗರಿಕ ಪೊಲೀಸ್ ಅಧಿಕಾರಿಯೊಬ್ಬರು ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಅಧಿಕಾರಿಯನ್ನು ಗೃಹ ಕ್ವಾರಂಟೈನ್ ನಲ್ಲಿದ್ದ ಜನರ ಮನೆಗಳಿಗೆ ಭೇಟಿ ನೀಡಿ ಅವರು ಕ್ವಾರಂಟೈನ್ ಶಿಷ್ಟಾಚಾರವನ್ನು ಪಾಲಿಸುವುದನ್ನು ಖಾತ್ರಿಪಡಿಸುವ  ಕೆಲಸಕ್ಕೆ ನಿಯೋಜಿಸಲಾಗಿತ್ತು. ವಂದೇ ಭಾರತ್ ನಡಿ ವಿದೇಶಗಳಿಂದ ಭಾರತಕ್ಕೆ ಮರಳುವವರು  ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕೆಂಬ ರಾಜ್ಯ ಸರಕಾರದ ನಿಯಮ ವಿದೇಶಗಳಿಂದ ಮರಳುವವರನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂದು  ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಾಲ ಹೇಳಿದ್ದಾರೆ. ನಡುವೆ ಮತ್ತಿಬ್ಬರು ಕೇರಳೀಯನ್ನರು ರಾಜ್ಯದ ಹೊರಗೆ ಕೋವಿಡ್ -19 ಕ್ಕೆ ಬಲಿಯಾಗಿದ್ದಾರೆ. ನಿನ್ನೆ 90 ಮಂದಿ ಗುಣಮುಖರಾಗಿದ್ದಾರೆ ಮತ್ತು 75 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 1,351 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.   
  • ತಮಿಳುನಾಡು: ಕೋವಿಡ್ -19 ಹರಡುವಿಕೆಯನ್ನು ತಡೆಯಲು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಕರೈಕಲ್ ನಲ್ಲಿ ತಮಿಳುನಾಡಿನಿಂದ ಬರುವವರ ಮೇಲೆ ನಿಗಾ ಇಡಲು ಗಡಿ ನಿಗಾವನ್ನು ಹೆಚ್ಚಿಸಲಾಗಿದೆ. ರಾಜ್ಯವು ಮಾರ್ಚ್ 25 ರಿಂದ ಮೇ 7 ನಡುವೆ ತಮಿಳುನಾಡು ಸರಕಾರಿ ಸಿಬ್ಬಂದಿಗಳ ಗೈರುಹಾಜರಿಯನ್ನು ಕರ್ತವ್ಯಕ್ಕೆ ಹಾಜರಾಗಿರುವುದಾಗಿ ಪರಿಗಣಿಸಲಿದೆ. ಚೆನ್ನೈಯಲ್ಲಿ ಮತ್ತು ನೆರೆಯ ಜಿಲ್ಲೆಗಳ ಭಾಗಗಳಲ್ಲಿ 12 ದಿನಗಳ ಕಠಿಣ ಲಾಕ್ ಡೌನ್ ನಾಳೆಯಿಂದ ಜಾರಿಗೆ ಬರಲಿದೆ. ನಿನ್ನೆ 2174 ಹೊಸ ಪ್ರಕರಣಗಳು, 842 ಚೇತರಿಕೆಗಳು ಮತ್ತು 48 ಸಾವುಗಳು ವರದಿಯಾಗಿವೆ. 1276 ಪ್ರಕರಣಗಳು ಚೆನ್ನೈಯಿಂದಲೇ ವರದಿಯಾಗಿವೆ. ಒಟ್ಟು ಪ್ರಕರಣಗಳು: 50193, ಸಕ್ರಿಯ ಪ್ರಕರಣಗಳು: 21990 ಸಾವುಗಳು :576, ಚೇತರಿಸಿಕೊಂಡು ಬಿಡುಗಡೆಯಾದವರು : 27,624, ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು: 16,067.
  • ಕರ್ನಾಟಕ: ಕೋವಿಡ್ -19 ಕುರಿತಂತೆ ಜಾಗೃತಿಗಾಗಿ ರಾಜ್ಯವು ಇಂದು ಮುಖಗವಸುದಿನವನ್ನು ಆಚರಿಸಿತು. ಇದುವರೆಗೆ 267 ಶ್ರಮಿಕ ರೈಲುಗಳು 3,79,195 ವಲಸೆ ಕಾರ್ಮಿಕರನ್ನು ಅವರ ತವರು ಸ್ಥಳಗಳಿಗೆ ಮರಳಿ ಕರೆದೊಯ್ದಿವೆ ಎಂದು ರಾಜ್ಯ ಸರಕಾರವು ಹೈಕೋರ್ಟಿಗೆ ತಿಳಿಸಿದೆ. 204 ಹೊಸ ಪ್ರಕರಣಗಳು, 348 ಚೇತರಿಕೆ ಪ್ರಕರಣಗಳು ಮತ್ತು 8 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 7734, ಸಕ್ರಿಯ ಪ್ರಕರಣಗಳು : 2842, ಸಾವುಗಳು: 102, ಬಿಡುಗಡೆಯಾದವರು: 4804.
  • ಆಂಧ್ರಪ್ರದೇಶ: ಕಳೆದ 24 ಗಂಟೆಗಳಲ್ಲಿ 13,923 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, 299 ಹೊಸ ಪ್ರಕರಣಗಳು  ಪತ್ತೆಯಾಗಿವೆ, 77 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ :5854. ಸಕ್ರಿಯ ಪ್ರಕರಣಗಳ ಸಂಖ್ಯೆ :2779, ಗುಣಮುಖರಾದವರು: 2983. ಸಾವುಗಳು: 92. ಒಟ್ಟು  ಅಂತಾರಾಜ್ಯ ಪ್ರಕರಣಗಳು 1353, ಅವರಲ್ಲಿ 611 ಸಕ್ರಿಯ ಮತ್ತು 51 ಮಂದಿ ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ವಿದೇಶಗಳಿಂದ ಬಂದ 289 ಪ್ರಕರಣಗಳಲ್ಲಿ 242 ಸಕ್ರಿಯವಾಗಿವೆ.
  • ತೆಲಂಗಾಣ: ತಮ್ಮ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿ ಗರಿಷ್ಟ ಮಿತಿಯನ್ನು ನಿಗದಿ ಮಾಡಿರುವ ರಾಜ್ಯ ಸರಕಾರದ ಕ್ರಮದ ವಿರುದ್ದ ನ್ಯಾಯಾಲಯಕ್ಕೆ ಹೋಗುವುದಾಗಿ ತೆಲಂಗಾಣದಲ್ಲಿಯ ಖಾಸಗಿ ಆಸ್ಪತ್ರೆಗಳು ಹೇಳಿವೆ. ಗಾಂಧಿ ಆಸ್ಪತ್ರೆಯ ಶವಾಗಾರದ ಹೊರಭಾಗದಲ್ಲಿ  ಗೊಂದಲ, ಗದ್ದಲಗಳು ನಡೆಯುತ್ತಿರುವಂತೆಯೇ , ಗುರುವಾರದಂದು ಶವಾಗಾರದ ಸಿಬ್ಬಂದಿ ಕೋವಿಡ್ -19 ರೋಗಿಯ ಮೃತದೇಹವನ್ನು ಬೇರೆ ಯಾರದೋ ಕುಟುಂಬಕ್ಕೆ ನೀಡಿದ ಪ್ರಕರಣದಿಂದ ಉಂಟಾಗಿರುವ ಗೊಂದಲವನ್ನು ತಪ್ಪಿಸಲು  ಆಸ್ಪತ್ರೆ ಆಡಳಿತವು ವ್ಯವಸ್ಥೆಯನ್ನು ಸರಿಪಡಿಸಲು ಹೆಣಗಾಡುತ್ತಿದೆ. ಕೋವಿಡ್ -19  ರೋಗಿಯ ಮೃತದೇಹವನ್ನು ವ್ಯಕ್ತಿಯ ಕುಟುಂಬಕ್ಕೆ ನೀಡದೆ ಬೇರೊಂದು ಕುಟುಂಬಕ್ಕೆ ನೀಡಲಾದ ಇತ್ತೀಚಿನ ಪ್ರಕರಣಗಳಲ್ಲಿ ಇದು ಎರಡನೆಯದಾಗಿದೆ. ಇದುವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 5675, ಸಕ್ರಿಯ ಪ್ರಕರಣಗಳು 2,412, ಗುಣಮುಖರಾದವರು 3071.
  • ಅಸ್ಸಾಂ: ಅಸ್ಸಾಂನಲ್ಲಿ 82 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 4777 ಕ್ಕೇರಿದೆ , ಸಕ್ರಿಯ ಪ್ರಕರಣಗಳು 2,111 ಗುಣಮುಖರಾದವರು 2658 ಮತ್ತು ಸಾವಿನ ಸಂಖ್ಯೆ 9.
  • ಮಣಿಪುರ: ಮಣಿಪುರ ರಾಜ್ಯವು 5 ಆರ್.ಟಿ. ಪಿ.ಸಿ.ಆರ್ ಯಂತ್ರಗಳೊಂದಿಗೆ ಮತ್ತು 3 ಟ್ರೂನಾಟ್ ಯಂತ್ರಗಳೊಂದಿಗೆ ಕೋವಿಡ್ -19 ಸ್ಯಾಂಪಲ್ ಗಳ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಿದೆ. ಇದುವರೆಗೆ ರಾಜ್ಯದಲ್ಲಿ ಮಾಡಲಾದ ಒಟ್ಟು ಪರೀಕ್ಷೆಗಳ ಸಂಖ್ಯೆ 29,865.
  • ಮಿಜೋರಾಂ: ಮಿಜೋರಾಂನ ಕೊಲಾಸಿಬ್ ಜಿಲ್ಲೆಯ 9 ಮಂದಿ ಕೋವಿಡ್ -19 ರೋಗಿಗಳು ಎರಡು ಬಾರಿ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದಾರೆ. ಅವರು ನಾಳೆ ಜೋರಂ ವೈದ್ಯಕೀಯ ಕಾಲೇಜಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ರಾಜ್ಯದ ಆರೋಗ್ಯ ಸಚಿವರು ಹೇಳಿದ್ದಾರೆ.
  • ನಾಗಾಲ್ಯಾಂಡ್ : ನಾಗಾಲ್ಯಾಂಡಿನಲ್ಲಿ ದಿಮಾಪುರ-ಕೊಹಿಮಾ ಟ್ಯಾಕ್ಸಿ ಸೇವೆ ಬೆಸ ಮತ್ತು ಸಮ ಸಂಖ್ಯೆಯ ನಿಯಮದಡಿಯಲ್ಲಿ ಆರಂಭಗೊಂಡಿದೆ. ಸಣ್ಣ ಕಾರುಗಳು ಗರಿಷ್ಟ 3 ಮಂದಿ ಪ್ರಯಾಣಿಕರನ್ನು ಮತ್ತು ದೊಡ್ದ ಕಾರುಗಳು ಗರಿಷ್ಟ 5 ಮಂದಿಯವರೆಗೆ ಪ್ರಯಾಣಿಕರನ್ನು ಕರೆದೊಯ್ಯಬಹುದು ಅಸ್ಸಾಂನಲ್ಲಿಯ ಜೋರ್ಹಟ್ ಜಿಲ್ಲೆಯಿಂದ ವಿಜ್ಞಾನಿಗಳು ಆಗಮಿಸಿದ್ದು, ಅವರು ದಿಮಾಪುರದ ಬಿ.ಎಸ್.ಎಲ್. -2 ಪ್ರಯೋಗಾಲಯಗಳ ತಾಂತ್ರಿಕ ತಂಡಕ್ಕೆ ತರಬೇತಿ ನೀಡುವರುಲಾಂಗ್ಲೆಂಗ್ ಹಾಗು ಟ್ಯುಯೆನ್ಸಾಂಗ್ ನಲ್ಲಿ ಟ್ರೂನಾಟ್ ಯಂತ್ರಗಳನ್ನು ಅಳವಡಿಸಲಾಗಿದೆ

https://static.pib.gov.in/WriteReadData/userfiles/image/image008QA4Z.jpg

http://static.pib.gov.in/WriteReadData/userfiles/image/image013L87U.jpg

***



(Release ID: 1633329) Visitor Counter : 173